ರೈಲು ಎಂಜಿನ್ vs ಏರೋಪ್ಲೇನ್ ಎಂಜಿನ್- ಎರಡರಲ್ಲಿ ಯಾವುದು ಬಲಶಾಲಿ?
ರೈಲು ಹಾಗೂ ವಿಮಾನಗಳು ಆಧುನಿಕ ಯುಗದ ಎರಡು ಪ್ರಮುಖ ಸಂಚಾರ ಸಾಧನಗಳಾಗಿವೆ. ರೈಲುಗಳು ಒಂದೇ ಬಾರಿಗೆ ಸಾವಿರಾರು ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಿದರೆ, ವಿಮಾನಗಳು ನೂರಾರು ಜನರನ್ನು ಮಾತ್ರ ಸಾಗಿಸಬಲ್ಲವು.

ರೈಲಿನಲ್ಲಿ ಪ್ರಯಾಣಿಸಲು ಕಡಿಮೆ ಶುಲ್ಕವನ್ನು ಪಾವತಿಸಿದರೆ, ವಿಮಾನದಲ್ಲಿ ಪ್ರಯಾಣಿಸಲು ಹೆಚ್ಚು ಖರ್ಚಾಗುತ್ತದೆ. ಆದರೆ ವಿಮಾನಗಳಿಗಿಂತ ರೈಲಿನ ಪ್ರಯಾಣವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಗಮನಿಸಬೇಕು.

ದುಬಾರಿಯಾದರೂ ಸಹ ವಿಮಾನದಲ್ಲಿನ ಪ್ರಯಾಣವು ಸಮಯವನ್ನು ಉಳಿಸುತ್ತದೆ. ಈ ಲೇಖನದಲ್ಲಿ ರೈಲು ಎಂಜಿನ್ ಹಾಗೂ ಏರ್‌ಪ್ಲೇನ್ ಎಂಜಿನ್‌ಗಳಲ್ಲಿ ಯಾವುದು ಹೆಚ್ಚು ಬಲಶಾಲಿ ಎಂಬುದನ್ನು ನೋಡೋಣ.

ರೈಲುಗಳು ಏಕಕಾಲದಲ್ಲಿ ಕೆಲವು ಸಾವಿರ ಜನರನ್ನು ಸಾಗಿಸಬಹುದೆಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ, ಆದರೆ ವಿಮಾನಗಳ ವಿಷಯ ಹೀಗಿಲ್ಲ. ರೈಲುಗಳ ಎಂಜಿನ್ ಬಲಶಾಲಿಯಾಗಿರಬಹುದೆಂಬುದು ಹಲವರ ಅಭಿಪ್ರಾಯವಾಗಿದೆ.

ಆದರೆ ಇದು ಸತ್ಯಕ್ಕೆ ದೂರವಾದ ಮಾತು. ನೂರು ಜನರು ಪ್ರಯಾಣ ಬೆಳೆಸಲಿ, ಇಲ್ಲ ಸಾವಿರಾರು ಜನರು ಪ್ರಯಾಣಿಸಲಿ, ವಿಮಾನದ ಎಂಜಿನ್‍ಗಳು ರೈಲು ಎಂಜಿನ್‍ಗಳಿಗಿಂತ ಅತ್ಯಂತ ಬಲಶಾಲಿಯಾಗಿರುತ್ತವೆ.

ವಿಮಾನದ ಎಂಜಿನ್ ರೈಲಿನ ಎಂಜಿನ್‌ಗಿಂತ ಹೆಚ್ಚು ಬಲಶಾಲಿಯಾಗಿರುತ್ತದೆ. ಪ್ಯಾಸೆಂಜರ್ ರೈಲುಗಳ ಎಂಜಿನ್ 4,000 ರಿಂದ 6,000 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ರೈಲು ಎಂಜಿನ್ ಪ್ರತಿ ಗಂಟೆಗೆ 90 ರಿಂದ 110 ಕಿ.ಮೀ ವೇಗದಲ್ಲಿ ಸುಮಾರು 1,000 ಟನ್‍ಗಳಷ್ಟು ತೂಕದ ಬಾಕ್ಸ್ ಗಳನ್ನು ಒಂದೇ ಬಾರಿ ಎಳೆಯಬಲ್ಲದು. ಇನ್ನು ವಿಮಾನಗಳ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಎಂಜಿನ್ ರೈಲು ಎಂಜಿನ್‍ಗಳಿಗಿಂತ 10 ಪಟ್ಟು ಹೆಚ್ಚು ಬಲಶಾಲಿಯಾಗಿರುತ್ತದೆ.

ಏರ್‍ಬಸ್ ಎ -320ಯ ಎಂಜಿನ್ ಸುಮಾರು 40,000 ರಿಂದ 50,000 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಅಂದರೆ, ಎರಡು ಎಂಜಿನ್ ಹೊಂದಿರುವ ಏರ್‍ಬಸ್ ಒಟ್ಟಾರೆಯಾಗಿ 80,000 ರಿಂದ 1,00,000ದಷ್ಟು ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹಲವು ವಿಮಾನಗಳಲ್ಲಿ ಏರ್‍ಬಸ್‍ಗಿಂತ ಹೆಚ್ಚಿನ ಸಾಮರ್ಥ್ಯದ ಎಂಜಿನ್‍ಗಳನ್ನು ಅಳವಡಿಸಲಾಗಿದೆ. ಈ ಎಂಜಿನ್‍ಗಳು 3,00,000 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಯಾವಾಗಲೂ ರೈಲು ಎಂಜಿನ್‍ಗಳಿಗಿಂತ ವಿಮಾನಗಳ ಎಂಜಿನ್‍ಗಳು ಬಲಶಾಲಿಯಾಗಿರುತ್ತವೆ.


Click it and Unblock the Notifications