ಭಾರತದಲ್ಲಿ ಕಾರಿನ ವೇಟಿಂಗ್‌ ಪಿರಿಯಡ್‌ ಹೆಚ್ಚಾಗಲು ಕಾರಣವೇನು?: ಮಾರ್ಕೆಟಿಂಗ್‌ ಗಿಮಿಕ್ಕಾ?

ಭಾರತದಲ್ಲಿ ಆಗಾಗ ಕೇಳಿ ಬರುತ್ತಿರುವ ಸುದ್ದಿಯೆಂದರೆ ಅದು ಕೆಲವು ಕಾರಿನ ವೈಟಿಂಗ್‌ ಪರಿಯಡ್‌ ಅಥವಾ ಕಾಯುವಿಕೆಯ ಕಾಲಾವಧಿ ಹೆಚ್ಚಾಗಿದೆ ಎಂಬುದು. ಹೌದು, ಇತ್ತೀಚಿನ ದಿನಗಳಲ್ಲಿ ಹಲವು ಕಾರುಗಳ ಕಾಯುವಿಕೆಯ ಕಾಲಾವಧಿ ಭಾರತದಲ್ಲಿ ಹೆಚ್ಚಾಗಿದೆ. ಇಂದಿನ ಈ ಲೇಖನದಲ್ಲಿ ಯಾಕೆ ಭಾರತದಲ್ಲಿ ಕಾರುಗಳ ಕಾಯುವಿಕೆಯ ಅವಧಿ ಹೆಚ್ಚಾಗಿದೆ ಎಂಬುದನ್ನು ನೋಡೋಣ.

ಈಗಂತೂ ಭಾರತದಲ್ಲಿ ಕೆಲವು ಕಾರು ಮಾದರಿಗಳಿಗೆ ಮೂರರಿಂದ ಆರು ತಿಂಗಳವರೆಗಿನ ಕಾಯುವಿಕೆಯ ಕಾಲಾವಧಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಟೊಯೋಟಾ ಮತ್ತು ಮಹೀಂದ್ರಾದ ಕೆಲವು ಕಾರುಗಳಿಗಂತೂ ವೇಟಿಂಗ್‌ ಪಿರಿಯಡ್‌ ಎಂಬುದು ಒಂದು ವರ್ಷಕ್ಕೂ ಅಧಿಕವಾಗಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಎಲ್ಲರಿಗೂ ಮನದಲ್ಲಿ ಮೂಡುವ ಪ್ರಶ್ನೆ ಎಂದರೆ ಇದಕ್ಕೆ ಕಾರಣ ಏನು ಎಂಬುದು. ಇದಕ್ಕೆ ಇರುವ ಸಾಧಾರಣ ಕಾರಣಗಳು ಈ ಕೆಳಗಿನಂತಿವೆ.

Why Waiting Period On Cars Is Increasing In India Including Toyota, Mahindra and More

1. ಹೆಚ್ಚು ಬೇಡಿಕೆ: ಹೌದು, ವಾಹನವಾಗಲಿ ಅಥವಾ ವಸ್ತುವಾಗಲಿ, ಪೂರೈಕೆಗಿಂತ ವಸ್ತುವಿನ ಬೇಡಿಕೆ ಹೆಚ್ಚಿದ್ದಾಗ ಮತ್ತು ಬೇಡಿಕೆಗೆ ಅನುಸಾರವಾಗಿ ವಸ್ತುವಿನ ಉತ್ಪಾದನೆಯನ್ನು ಮಾಡಲು ಸಾಧ್ಯವಾಗದೇ ಇದ್ದಾಗ ಪೂರೈಕೆಯ ಸಮಯ ಹೆಚ್ಚಾಗುತ್ತದೆ. ಅದೇ ವಿಷಯವು ಭಾರತದಲ್ಲಿ ಕೆಲವು ಕಾರು ಮಾದರಿಗಳ ವಿಷಯದಲ್ಲೂ ನಡೆದಿರುವುದು. ಭಾರತದಲ್ಲಿ ಬಹುತೇಕ ಜನರು ಇದೀಗ ವಾಹನಗಳನ್ನು ಖರೀದಿಸಲು ತಾ ಮುಂದು ನಾ ಮುಂದು ಎಂಬಂತೆ ಹೋಗುತ್ತಿದ್ದಾರೆ.

2. ಚಿಪ್‌ಗಳ ದಾಸ್ತಾನು ಕೊರತೆ: ಕೋವಿಡ್‌ ಬಂದಾಗಿನಿಂದ ಭಾರತದಲ್ಲಿ ಚಿಪ್‌ಗಳ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಚಿಪ್‌ಗಳನ್ನು ಹೈಯರ್‌ ಎಂಡ್‌ ಕಾರುಗಳಲ್ಲಿ ಬಳಸಲಾಗುತ್ತಿದ್ದು, ಇವುಗಳ ಬಳಕೆಯನ್ನು ಮಾಡುವ ಕಾರಿನ ಕಾಲಾವಧಿ ಈ ಕಾರಣದಿಂದ ಹೆಚ್ಚಾಗಿರುತ್ತದೆ. ಬಹುತೇಕ ಎಲ್ಲಾ ಕಾರು ನಿರ್ಮಾಣ ಕಂಪನಿಗಳು ಸಹ ಈ ಚಿಪ್‌, ಸೆಮಿ ಕಂಡಕ್ಟರ್‌ಗಳ ಕೊರತೆಯಿಂದ ಬಳಲುತ್ತಿದೆ.

Why Waiting Period On Cars Is Increasing In India Including Toyota, Mahindra and More

3. ಮಾರ್ಕೆಟಿಂಗ್‌ ಗಿಮಿಕ್: ಭಾರದಲ್ಲಿ ಕಾರುಗಳ ವೇಟಿಂಗ್‌ ಪಿರಿಯಡ್‌ ಹೆಚ್ಚಾಗಲು ಇದೂ ಸಹ ಒಂದು ಕಾರಣ. ಕೆಲವೊಂದು ಕಾರು ನಿರ್ಮಾಣ ಕಂಪನಿಗಳು ತಮ್ಮ ಕಾರಿಗೆ ಹೆಚ್ಚು ಬೇಡಿಕೆ ಇದೆ ಎಂದು ತೋರಿಸಿಕೊಳ್ಳುವುದಕ್ಕಾಗಿ ಈ ರೀತಿಯ ಚೀಪ್‌ ಮಾರ್ಕೆಟಿಂಗ್‌ ಗಿಮಿಕ್‌ಗಳನ್ನು ಮಾಡುತ್ತಾರೆ. ಇದರಿಂದ ಗ್ರಾಹಕರು ಆ ಕಾರಿನ ಬಗ್ಗೆ ಹೆಚ್ಚು ಆಸಕ್ತಿ ತೋರಿ ಕಾರಿನ ಮಾರಾಟ ಹೆಚ್ಚಾಗಲಿ ಎಂಬುದು ಅವರ ಲೆಕ್ಕಾಚಾರ ಆಗಿರುತ್ತದೆ.

ಈ ಮೇಲಿನವು ಭಾರತದಲ್ಲಿ ಕಾರುಗಳ ವೇಟಿಂಗ್‌ ಪಿರಿಯಡ್ ಹೆಚ್ಚಾಗಲು ಪ್ರಮುಖ ಕಾರಣ. ಇತ್ತೀಚಿನ ದಿನಗಳಲ್ಲಿ ಕೆಲವು ಬ್ರಾಂಡ್‌ಗಳ ಕಾರುಗಳ ಕಾಯುವಿಕೆಯ ಅವಧೀಯಂತೂ ಗಗನ ಮುಟ್ಟಿದೆ. ಅದರಲ್ಲೂ ಟೋಯೋಟಾ ಕಂಪನಿಯ ಇನ್ನೋವಾ ಹೈಕ್ರಾಸ್‌ ಅಂತೂ 1.5 ವರ್ಷಗಳ ಕಾಯುವಿಕೆಯ ಅವಧಿಯನ್ನು ತಲುಪಿರುವುದಂತೂ ನಂಬಲೂ ಸಹ ಸಾಧ್ಯವಿಲ್ಲ.

Why Waiting Period On Cars Is Increasing In India Including Toyota, Mahindra and More

ಅತ್ಯಾಧುನಿಕ ಫೀಚರ್‌ಗಳ ಜೊತೆ ಬಂದಿರುವ ಟೋಯೋಟಾ (Toyota) ಹೈಕ್ರಾಸ್ ಬಗ್ಗೆ ನೊಡುವುದಾದರೆ, ದರ ಎಂಟ್ರಿ ಲೆವೆಲ್ 'G' ರೂಪಾಂತರದ (ಪೆಟ್ರೋಲ್) ಬೆಲೆ ರೂ.18.55 ಲಕ್ಷ (ಎಕ್ಸ್ ಶೋರೂಂ) ಇದ್ದು, ಟಾಪ್ ಎಂಡ್ ಮಾದರಿ ಹೈಬ್ರಿಡ್ ಎಂಜಿನ್ ಪಡೆದಿರುವ ZX (O) ರೂ.29.99 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, ಡೀಸೆಲ್ ಎಂಜಿನ್ ಹೊಂದಿಲ್ಲ. ಇದರ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 172 bhp ಗರಿಷ್ಠ ಪವರ್ ಹಾಗೂ 205 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. CVT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಮತ್ತೊಂದು, ಹೈಬ್ರಿಡ್ ಪವರ್‌ಟ್ರೇನ್ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ Atkinson ಸೈಕಲ್ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 184.8 bhp ಗರಿಷ್ಠ ಪವರ್ ಮತ್ತು 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 21 kmpl ಮೈಲೇಜ್ ಇಂಧನ ದಕ್ಷತೆ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, February 17, 2024, 14:48 [IST]
English summary
Why waiting period on cars is increasing in india including toyota mahindra and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+