ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಹೆಂಡತಿಗೆ ಗಂಡ, ಗಂಡನಿಗೆ ಹೆಂಡತಿ ಗಿಫ್ಟ್ ನೀಡುವುದು ವಾಡಿಕೆ. ಮದುವೆ ವಾರ್ಷಿಕೋತ್ಸವ ಅಥವಾ ಬೇರೆ ವಿಶೇಷ ಸಂದರ್ಭಗಳಲ್ಲಿ ಈ ರೀತಿಯ ಗಿಫ್ಟ್ ಗಳನ್ನು ನೀಡಲಾಗುತ್ತದೆ. ಈಗ ಹೆಂಡತಿಯೊಬ್ಬರು ತಮ್ಮ ಪತಿಗೆ ಗಿಫ್ಟ್ ನೀಡುತ್ತಿರುವ ವೀಡಿಯೊ ಇಂಟರ್‍‍ನೆಟ್‍‍ನಲ್ಲಿ ವೈರಲ್ ಆಗಿದೆ.

ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಈ ವೀಡಿಯೊದಲ್ಲಿ ಮಹಿಳೆಯೊಬ್ಬರು ತಮ್ಮ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಸರ್‍‍ಪ್ರೈಸ್ ಗಿಫ್ಟ್ ನೀಡುತ್ತಿರುವುದನ್ನು ಕಾಣಬಹುದು. ಈ ಘಟನೆ ನಡೆದಿರುವ ನಿಜವಾದ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ವಾಹನದ ರಿಜಿಸ್ಟ್ರೇಷನ್ ನಂಬರ್‍‍ನಿಂದ ಗೋವಾ ಎಂಬುದು ತಿಳಿಯುತ್ತದೆ.

ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಅಂದ ಹಾಗೆ ಹೆಂಡತಿ ತಮ್ಮ ಗಂಡನಿಗೆ ಜಾವಾ ಕಂಪನಿಯ ಕ್ಲಾಸಿಕ್ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಕಳೆದ ವರ್ಷ ಜಾವಾ ಕಂಪನಿಯು ಮಹೀಂದ್ರಾ ಕಂಪನಿಯ ಜೊತೆಗೂಡಿ ಜಾವಾ ಕ್ಲಾಸಿಕ್ ಹೆಸರಿನಲ್ಲಿ ದೇಶಿಯ ಮಾರುಕಟ್ಟೆಗೆ ಮರಳಿತ್ತು.

ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಈ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಜಾವಾ ಕಂಪನಿಯು ಮರಳಿ ಬಂದ ನಂತರ ಭಾರತದ ಯುವ ಜನತೆಯನ್ನು ಹೆಚ್ಚು ಆಕರ್ಷಿಸುತ್ತಿದೆ. ಈ ವೀಡಿಯೊದಲ್ಲಿರುವ ಮಹಿಳೆಯು ತಮ್ಮ ಪತಿಗಾಗಿ ಜಾವಾ ಕ್ಲಾಸಿಕ್ ಬೈಕ್ ಅನ್ನು ಬುಕ್ಕಿಂಗ್ ಮಾಡಿದ್ದರು.

ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಬೈಕಿನ ವಿತರಣೆಯನ್ನು ಪಡೆದ ನಂತರ ಅದನ್ನು ತಮ್ಮ ಪತಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ್ದಾರೆ. ಇದಕ್ಕಾಗಿ ತಮ್ಮ ಪತಿಯನ್ನು ಅವರ ಊರಿನಿಂದ ಕರೆಯಿಸಿ, ಗೋವಾದ ಲಾಡ್ಜ್ ನಲ್ಲಿ ತಂಗಿದ್ದಾರೆ. ಆ ಲಾಡ್ಜ್ ಗೆ ಜಾವಾ ಕ್ಲಾಸಿಕ್ ಬೈಕ್ ಅನ್ನು ತಂದಿದ್ದಾರೆ.

ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಬೈಕ್ ಅನ್ನು ಪೂರ್ತಿಯಾಗಿ ಮುಚ್ಚಿ ಲಾಡ್ಜ್ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದಾರೆ. ನಂತರ ತಮ್ಮ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಪಾರ್ಕಿಂಗ್ ಏರಿಯಾಗೆ ಕರೆದುಕೊಂಡು ಹೋಗಿ, ತಮ್ಮ ಪತಿಯ ನೆಚ್ಚಿನ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಈ ಮೊದಲು ಸಹ ಈ ರೀತಿಯ ಹಲವಾರು ಸರ್‍‍ಪ್ರೈಸ್ ಗಿಫ್ಟ್ ಗಳನ್ನು ನೋಡಲಾಗಿತ್ತು. ಆದರೆ ಈ ಗಿಫ್ಟ್ ಅವುಗಳಿಗಿಂತ ವಿಭಿನ್ನವಾಗಿದೆ. ಮಹಿಳೆಯು ತನ್ನ ಗಂಡನ ನೆಚ್ಚಿನ ಬೈಕ್ ಅನ್ನು ಬುಕ್ ಮಾಡಿ ಹಲವು ದಿನಗಳವರೆಗೂ ಕಾದು, ಬೈಕಿನ ವಿತರಣೆಯನ್ನು ಪಡೆದು ಸರ್‍‍ಪ್ರೈಸ್ ಗಿಫ್ಟ್ ಆಗಿ ನೀಡಿರುವುದು ವಿಶೇಷ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ತನ್ನ ಗಂಡನಿಗೆ ಮಹಿಳೆಯು ಸರ್‍‍ಪ್ರೈಸ್ ಗಿಫ್ಟ್ ನೀಡುತ್ತಿರುವ ವೀಡಿಯೊವನ್ನು ಯೂಟ್ಯೂಬ್‍ ಚಾನೆಲ್ ಆದ ಲಿವ್ ವಿಲೇಜ್ ಲೈಫ್ ವಿಥ್ ಓಂ ಅಂಡ್ ಫ್ಯಾಮಿಲಿ ಅಪ್‍‍ಲೋಡ್ ಮಾಡಿದೆ. ವೀಡಿಯೊದಲ್ಲಿರುವ ಗಂಡನು ತನ್ನ ಹೆಂಡತಿ ತನ್ನ ಕಣ್ಣಿಗೆ ಬಟ್ಟೆ ಕಟ್ಟಿ ಕರೆದುಕೊಂಡು ಹೋಗುವಾಗ ಯಾವುದೋ ಸಣ್ಣ ಗಿಫ್ಟ್ ನೀಡಬಹುದೆಂದು ನಿರೀಕ್ಷಿಸಿದ್ದರು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಆದರೆ ಅವರಿಗೆ ತಮ್ಮ ನೆಚ್ಚಿನ ಬೈಕ್ ಗಿಫ್ಟ್ ಆಗಿ ದೊರೆತಿದೆ. ಈ ವೀಡಿಯೊದಲ್ಲಿರುವ ಜಾವಾ ಕ್ಲಾಸಿಕ್ ಬೈಕ್ ಕಪ್ಪು ಬಣ್ಣದಲ್ಲಿದ್ದು, ಡ್ಯುಯಲ್ ಚಾನೆಲ್ ಎ‍‍ಬಿಎಸ್ ಅನ್ನು ಹೊಂದಿದೆ. ಈ ಬೈಕಿನಲ್ಲಿ 293 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಈ ಎಂಜಿನ್ 27 ಬಿ‍‍ಹೆಚ್‍‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಜಾವಾ ಕಂಪನಿಯು ಕಳೆದ ತಿಂಗಳು ಬಾಬರ್ ಶೈಲಿಯ ಪೆರಾಕ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

Source: Live Village Life With Om & Family/YouTube

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಸಾಮಾನ್ಯವಾಗಿ ಚಲನಚಿತ್ರಗಳು ಗೆದ್ದಾಗ ನಟ-ನಟಿಯರಿಗೆ ಕೆಲವು ಬಾರಿ ಐಷಾರಾಮಿ ಕಾರು, ಬಂಗಲೆ ಉಡುಗೊರೆಯಾಗಿ ಸಿಗುವುದು ಕಾಮನ್. ಆದ್ರೆ ಇಲ್ಲೊಬ್ಬ ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಫ್ಯಾಂಟಮ್ ಉಡುಗೊರೆಯಾಗಿ ಸಿಕ್ಕಿದೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಹೌದು, ಅದು ಬೇರೆ ಯಾರು ಅಲ್ಲಾ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿಗೆ ಅವರ ತಾಯಿ ಮೋನಾ ಮೋಟ್ವಾನಿಯವರು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಭಾರತದಲ್ಲಿ ಫ್ಯಾಂಟಮ್ 8 ಸೀರಿಸ್ ಐಷಾರಾಮಿ ಕಾರನ್ನು ಖರೀದಿ ಮಾಡಿದ ಕೆಲವೇ ಕೆಲವು ಕಾರು ಮಾಲೀಕರ ಪೈಕಿ ಇದೀಗ ನಟಿ ಹನ್ಸಿಕಾ ಮೋಟ್ವಾನಿ ಕೂಡಾ ಒಬ್ಬರಾಗಿದ್ದಾರೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ನಿಮ್ಮ ಬಳಿ ದುಡ್ಡು ಇದ್ದರೂ ಸಹ ಕಾರು ಖರೀದಿ ಮಾಡಲು ಹತ್ತಾರು ಷರತ್ತುಗಳನ್ನು ವಿಧಿಸುವ ರೋಲ್ಸ್ ರಾಯ್ಸ್ ಸಂಸ್ಥೆಯು ಉತ್ತಮ ಹಿನ್ನಲೆಯುಳ್ಳ ಗ್ರಾಹಕರಿಗೆ ಮಾತ್ರವೇ ತನ್ನ ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತದೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಇದೀಗ ಮೋನಾ ಮೋಟ್ವಾನಿಯವರು ಕೂಡಾ ತಮ್ಮ ಮಗಳಿಗಾಗಿ ಹತ್ತಾರು ಬಗೆಯ ಷರತ್ತುಗಳಿಗೆ ಬದ್ಧರಾಗಿ ಫ್ಯಾಂಟಮ್ 8 ಸೀರಿಸ್ ಕಾರು ಖರೀದಿಸಿ ತಮ್ಮ ಮಗಳಿಗೆ ಉಡುಗೊರೆಯಾಗಿ ನೀಡಿದ್ದು, ಹೊಸ ಕಾರು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.11.50 ಕೋಟಿ ಬೆಲೆ ಪಡೆದುಕೊಂಡಿದೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಖ್ಯಾತ ಚರ್ಮರೋಗ ವೈದ್ಯೆಯಾಗಿರುವ ಡಾ. ಮೋನಾ ಮೋಟ್ವಾನಿಯವರು ಹನ್ಸಿಕಾ ಕನಸಿನ ಕಾರು ಖರೀದಿಯ ಮಾಹಾದಾಸೆಯನ್ನು ನೆರವೇರಿಸಿದ್ದು, ಅಮ್ಮನ ದುಬಾರಿ ಬೆಲೆಯ ಕಾರ್ ಗಿಫ್ಟ್ ನೋಡಿ ಹನ್ಸಿಕಾ ಮೋಟ್ವಾನಿ ಸಖತ್ ಖುಷಿಯಲ್ಲಿದ್ದಾರೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಇನ್ನು ಐಷಾರಾಮಿಯ ವಾಸ್ತುಶಿಲ್ಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಬೆಲೆಗೆ ತಕ್ಕಂತೆ ನೂರಾರು ಸುಧಾರಿತ ತಂತ್ರಜ್ಞಾನ ಸೌಲಭ್ಯ ಪ್ರೇರಿತ ಫೀಚರ್ಸ್‌ಗಳನ್ನು ಈ ಕಾರಿನಲ್ಲಿ ಜೋಡಣೆ ಮಾಡಲಾಗಿದೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಸುಮಾರು 90 ವರ್ಷಗಳಿಂದ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಫ್ಯಾಂಟಮ್ ಸೀರಿಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ 8ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಹಳೆಯ ಮಾದರಿಗಳಿಂತ ಶೇ.30ರಷ್ಟು ಸುಧಾರಿತ ತಂತ್ರಜ್ಞಾನ ಮತ್ತು ಹೊರ ಮತ್ತು ಒಳ ವಿನ್ಯಾಸಗಳು ಬದಲಾವಣೆಗೊಳಿಸಿರುವುದೇ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರಿನ ಇನ್ನೊಂದು ವಿಶೇಷ ಅಂದ್ರೆ ಕಾರಿನ ಪ್ರತಿಯೊಬ್ಬ ಭಾಗವು ಕೂಡಾ ಹ್ಯಾಂಡ್ ಮೆಡ್ ಕೌಶಲ್ಯತೆಗಳೊಂದಿಗೆ ಸಿದ್ಧಗೊಂಡಿದ್ದು, ಈ ಮೂಲಕ ಸುಪ್ರಸಿದ್ಧ ವಿನ್ಯಾಸ ಪರಂಪರೆಯನ್ನು ಮುಂದುವರಿಸಲಾಗಿದೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಫ್ಯಾಂಟಮ್ 8ರ ಆವೃತ್ತಿಯಲ್ಲಿ ಪ್ಯಾಂಥಿಯಾನಾ ಗ್ರಿಲ್ ಮರು ನಿರ್ಮಾಣ ಮಾಡಲಾಗಿದ್ದು, ಸ್ಪಿರಿಟ್ ಆಫ್ ಎಕ್ಸ್ಟ್ಯಾಸಿಯ ಸ್ಥಾನವನ್ನು ಅರ್ಧ ಇಂಚು ಎತ್ತರಿಸಲಾಗಿದೆ. ಜೊತೆಗೆ ಹೊಸ ಹೆಡ್‌ಲ್ಯಾಂಡ್ ಗ್ರಾಫಿಕ್ ಕೂಡಾ ಅದ್ಭುತವಾಗಿದೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಎಂಜಿನ್ ಸಾಮರ್ಥ್ಯ

ಫ್ಯಾಂಟಮ್ 8ನೇ ತಲೆಮಾರಿನ ಕಾರುಗಳು ಟ್ವಿನ್ ಟರ್ಬೋಚಾರ್ಜ್ಡ್ 6.75-ಲೀಟರ್ ವಿ12 ಎಂಜಿನ್ ಹೊಂದಿದ್ದು, 563-ಬಿಎಚ್‌ಪಿ ಮತ್ತು 900-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಈ ಮೂಲಕ 5.3 ಸೇಕೆಂಡುಗಳಲ್ಲಿ 100 ಕಿಮಿ ವೇಗದಲ್ಲಿ ಚಲಿಸಬಲ್ಲ ಗುಣಹೊಂದಿದ್ದು, ಪ್ರತಿ ಗಂಟೆಗೆ 250 ಕಿಮಿ ಚಾಲನಾ ಮಿತಿ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ಇದಲ್ಲದೇ ಫ್ರಾಸ್ಟೆಡ್ ಮತ್ತು ಹಗಲಿನ ಚಾಲನೆಯ ದೀಪಗಳು ಲೇಸರ್ ಬೆಳಕಿನ ವ್ಯವಸ್ಥೆಯೊಂದಿಗೆ ಉರಿಯುವ ಸೌಲಭ್ಯ ಹೊಂದಿದ್ದು, ಇವುಗಳು ರಾತ್ರಿ ವೇಳೆಯಲ್ಲಿ ಬರೋಬ್ಬರಿ 600 ಮೀಟರ್‌ಗಳಷ್ಟು ಬೆಳಕನ್ನು ಹೊರಸೂಸಬಲ್ಲವು.

ಸ್ಟಾರ್ ನಟಿಗೆ ಸಿಕ್ತು 11 ಕೋಟಿ ಮೌಲ್ಯದ ಕಾರ್ ಗಿಫ್ಟ್

ರೋಲ್ಸ್ ರಾಯ್ಸ್ ಹೊಸ ಆವೃತ್ತಿಯು ಫ್ಯಾಂಟಮ್‌ನಲ್ಲಿ 22 ಇಂಚಿನ ಅಲಾಯ್ ಚಕ್ರಗಳೊಂದಿಗೆ ಮಿಶ್ರಲೋಹಗಳನ್ನು ಬಳಸಿಕೊಂಡಿದ್ದು, ಸುರಕ್ಷತೆಗಾಗಿ ಪನೋರಮಿಕ್ ವೀಕ್ಷಣೆಯ 4 ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿಯೇ ಹೊಸ ಕಾರಿನ ಐಷಾರಾಮಿ ವೈಶಿಷ್ಟ್ಯತೆಗಳನ್ನು "ದ ಗ್ಯಾಲರಿ" ಎಂದು ಉಲ್ಲೇಖಿಸಲಾಗಿದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಸತತ ಒಂಬತ್ತನೇ ವರ್ಷವೂ ಕಾರಿನ ಬಣ್ಣವನ್ನು ಆಯ್ಕೆ ಮಾಡಲು ಗ್ರಾಹಕರ ಆದ್ಯತೆಯಲ್ಲಿ ಬಿಳಿ ಬಣ್ಣವು ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಗ್ಲೋಬಲ್ ಆಟೋಮೋಟಿವ್ ಕೋಟಿಂಗ್‍‍ನ ಪ್ರಮುಖ ಕಂಪನಿಯಾದ ಆಕ್ಸಲ್ಟಾ ತನ್ನ ವರದಿಯನ್ನು ಬಿಡುಗಡೆಗೊಳಿಸಿದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಗ್ಲೋಬಲ್ ಆಟೋಮೋಟಿವ್ ಕಲರ್ ಪಾಪ್ಯುಲಾರಿಟಿ ವರದಿಯ ಪ್ರಕಾರ 2019ರಲ್ಲಿ ಬಿಳಿ (38%), ಕಪ್ಪು (19%) ಹಾಗೂ ಗ್ರೇ (13%) ಬಣ್ಣಗಳು ಮೊದಲ ಮೂರು ಸ್ಥಾನವನ್ನು ಪಡೆದಿವೆ. 2011ರಿಂದ ಬಿಳಿ ಬಣ್ಣವು ವಿಶ್ವದಾದ್ಯಂತವಿರುವ ಕಾರುಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಈ ವರ್ಷ, ಸಿಲ್ವರ್ ಬಣ್ಣವು ಟಾಪ್ 3 ಸ್ಥಾನದಿಂದ ಹೊರಬಿದ್ದಿದ್ದು, ಅಗ್ರ ಮೂರು ಬಣ್ಣಗಳಿಂದ ಹೊರಗುಳಿದಿದೆ. ಸಿಲ್ವರ್ ಒಂದು ದಶಕಕ್ಕೂ ಹೆಚ್ಚು ಕಾಲ ಟಾಪ್ 3 ಸ್ಥಾನದಲ್ಲಿತ್ತು. ಇದೇ ಮೊದಲ ಬಾರಿಗೆ 10%ನಷ್ಟು ಕಡಿಮೆ ಜನಪ್ರಿಯತೆಯನ್ನು ಹೊಂದಿದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಈ ಸಮೀಕ್ಷೆಯ ಪ್ರಕಾರ ಗ್ರೇ ಬಣ್ಣವು ವಿಶ್ವದ ಎಲ್ಲ ಭಾಗಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಬಿಳಿ, ಕಪ್ಪು, ಗ್ರೇ ಹಾಗೂ ಸಿಲ್ವರ್ ಬಣ್ಣಗಳು ಟಾಪ್ 4 ಸ್ಥಾನಗಳಲ್ಲಿವೆ. ಇದರಿಂದಾಗಿ ಜಾಗತಿಕವಾಗಿ 80% ಮಾರುಕಟ್ಟೆ ಪಾಲನ್ನು ಹೊಂದಿವೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಬಣ್ಣಗಳ ಆದ್ಯತೆಯು ಕಳೆದ ವರ್ಷ ಸ್ವಲ್ಪ ಬದಲಾಗಿದೆ. ಯುರೋಪ್‍‍ನಲ್ಲಿ ಬಿಳಿ ಬಣ್ಣವು 1% ನಷ್ಟು ಕಡಿಮೆಯಾಗಿದ್ದು, ಗ್ರೇ ಬಣ್ಣವು 2%ನಷ್ಟು ಹೆಚ್ಚಾಗಿದೆ. ಇದರಿಂದಾಗಿ ಗ್ರೇ ಬಣ್ಣವು ಮೊದಲ ಬಾರಿಗೆ ಯುರೋಪಿನಲ್ಲಿ ಅಗ್ರಸ್ಥಾನವನ್ನು ಪಡೆದಿದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಕಳೆದ ವರ್ಷ ಯುರೋಪ್‍‍ನ ಎಸ್‍‍ಯುವಿ ವಲಯದಲ್ಲಿ ಗ್ರೇ ಬಣ್ಣಕ್ಕೆ ಬೇಡಿಕೆ ಹೆಚ್ಚಿದ ನಂತರ, ಈ ವರ್ಷ ಕಾಂಪ್ಯಾಕ್ಟ್ / ಸ್ಪೋರ್ಟ್ ಸೆಗ್‍‍ಮೆಂಟಿನಲ್ಲಿ 5%ನಷ್ಟು ಬೆಳವಣಿಗೆಯಾಗಿದೆ. ಯುರೋಪಿನಲ್ಲಿ ಇದೇ ಮೊದಲ ಬಾರಿಗೆ, ಗ್ರೇ ಬಣ್ಣವು ದೀರ್ಘಕಾಲದಿಂದ ನೆಚ್ಚಿನ ಬಣ್ಣವಾಗಿರುವ ಬಿಳಿ ಬಣ್ಣವನ್ನು ಹಿಂದಿಕ್ಕಿದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಯುರೋಪಿಯನ್ನರು ಗ್ರೇ ಬಣ್ಣವನ್ನು ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಬಳಸುತ್ತಾರೆ ಎಂದು ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದ ಕಲರ್ ಡಿಸೈನರ್ ಆದ ಎಲ್ಕೆ ಡಿರ್ಕ್ಸ್ ಹೇಳಿದ್ದಾರೆ. ಬೇರೆ ಕಡೆಗಳಲ್ಲಿ ಬಿಳಿ ಬಣ್ಣವು ಅಗ್ರಸ್ಥಾನದಲ್ಲಿದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಏಷ್ಯಾದಲ್ಲಿ ಬಿಳಿ ಬಣ್ಣದ ಜನಪ್ರಿಯತೆಯು 1%ನಷ್ಟು ಹೆಚ್ಚಾಗಿದ್ದು, ಒಟ್ಟಾರೆಯಾಗಿ 49%ನಷ್ಟು ಜನಪ್ರಿಯತೆಯನ್ನು ಹೊಂದಿದೆ. ಚೀನಾದವರ ಆದ್ಯತೆಗಳು ಆಧುನಿಕ ಹಾಗೂ ಸ್ವಚ್ಛವಾಗಿರುವ ಕಾರಣಕ್ಕೆ ಬಿಳಿ ಬಣ್ಣವನ್ನು ಹೆಚ್ಚು ಬಯಸುತ್ತಾರೆ ಎಂದು ಚೀನಾದ ಕಲರ್ ಡಿಸೈನರ್ ಅನ್ನಿ ಯು ಹೇಳುತ್ತಾರೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಭಾರತದಲ್ಲಿರುವ 33% ಜನರು ಬಿಳಿ ಬಣ್ಣವನ್ನು ಬಯಸುತ್ತಾರೆ. ಇದರಲ್ಲಿ 26% ಸಾಲಿಡ್ ವೈಟ್ ಆದರೆ 7% ಪರ್ಲ್ ವೈಟ್ ಆಗಿದೆ. ಸಿಲ್ವರ್ ಬಣ್ಣವನ್ನು 31% ಜನರು ಬಯಸುತ್ತಾರೆ. ಗ್ರೇ ಬಣ್ಣವನ್ನು 12%ನಷ್ಟು ಜನರು ಇಷ್ಟ ಪಡುತ್ತಾರೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಉತ್ತರ ಅಮೇರಿಕಾ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಬಿಳಿಯ ಬಣ್ಣವು ಅಗ್ರ ಸ್ಥಾನದಲ್ಲಿಯೇ ಮುಂದುವರೆದಿದೆ. ಇದರ ಜೊತೆಗೆ ಗ್ರೇ ಬಣ್ಣದ ವಾಹನಗಳನ್ನು ಹೊಂದುವವರ ಸಂಖ್ಯೆಯೂ ಸಹ ಹೆಚ್ಚಿನ ಪ್ರಮಾಣದಲ್ಲಿದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಅಗ್ರ ನಾಲ್ಕು ಬಣ್ಣಗಳಾದ ಬಿಳಿ, ಕಪ್ಪು, ಗ್ರೇ ಹಾಗೂ ಸಿಲ್ವರ್ ಪ್ರಪಂಚಾದ್ಯಂತ ಇನ್ನು ಹೆಚ್ಚಿನ ಜನಪ್ರಿಯತೆಯನ್ನು ಹೊಂದಿವೆ ಎಂದು ಲಾಕ್ಹಾರ್ಟ್‍‍ರವರು ಹೇಳಿದರು. ಇತರ ಬಣ್ಣಗಳು ಸಹ ಹೆಚ್ಚಿನ ಜನಪ್ರಿಯತೆಯನ್ನು ಹೊಂದುತ್ತಿವೆ. ಕಳೆದ ವರ್ಷದವರೆಗೂ ಈ ಬಣ್ಣಗಳ ಬಗ್ಗೆ ಯಾರೂ ಯೋಚಿಸಿರಲಿಲ್ಲ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಇದರಿಂದಾಗಿ ಗ್ರಾಹಕರು ತಮ್ಮ ವಾಹನದ ಬಣ್ಣವನ್ನು ಬದಲಾಯಿಸಲು ಆರಂಭಿಸಿರುವುದು ಕಂಡು ಬರುತ್ತದೆ. ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ನಮ್ಮ ವಾಹನಗಳ ಗ್ರಾಹಕರೊಂದಿಗೆ ಪಾಲುದಾರರಾಗಲು ಆಕ್ಸಲ್ಟಾ ಸಿದ್ಧವಾಗಿದೆ ಎಂದು ಹೇಳಿದರು.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಉತ್ತರ ಅಮೆರಿಕಾದಲ್ಲಿ ಕೆಂಪು ಬಣ್ಣವು 9%ನಷ್ಟು ಜನಪ್ರಿಯವಾಗಿದ್ದರೆ, ಬ್ರೌನ್ / ಬೀಜ್ ಬಣ್ಣಗಳು ರಷ್ಯಾದಲ್ಲಿ 12%ನಷ್ಟು ಜನಪ್ರಿಯತೆಯನ್ನು ಹೊಂದಿವೆ. ಗ್ರಾಹಕರ ಆಯ್ಕೆ ಹಾಗೂ ಪ್ರಾಡಕ್ಟ್ ಬ್ರ್ಯಾಂಡಿಂಗ್‌ನಲ್ಲಿ ಬಣ್ಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ಇಂದಿನ ರಸ್ತೆಗಳಲ್ಲಿ ನೀಲಿ, ಕೆಂಪು ಮತ್ತು ಬ್ರೌನ್ / ಬೀಜ್ ಬಣ್ಣಗಳಲ್ಲಿರುವ ವಾಹನಗಳು ಎದ್ದು ಕಾಣುತ್ತವೆ ಎಂದು ಲಾಕ್ಹಾರ್ಟ್ ಹೇಳಿದರು. ಉತ್ತರ ಅಮೆರಿಕಾ ಹಾಗೂ ಯುರೋಪ್‍‍ನಲ್ಲಿ 10% ವಾಹನಗಳನ್ನು ಹೊಂದಿರುವ ನೀಲಿ ಬಣ್ಣವು ಹೆಚ್ಚು ಜನಪ್ರಿಯವಾಗಿದೆ.

ಕಾರು ಖರೀದಿದಾರರ ಆಯ್ಕೆಯಲ್ಲಿ ಬಿಳಿ ಬಣ್ಣವೇ ಮತ್ತೆ ನಂ.1

ವಿವಿಧ ಭಾಗಗಳಲ್ಲಿ ಜನಪ್ರಿಯವಾಗಿರುವ ಬಣ್ಣಗಳು

*ಆಫ್ರಿಕಾ - ಸಿಲ್ವರ್ ಹಾಗೂ ಬಿಳಿ ಬಣ್ಣಗಳು ಜೊತೆಯಾಗಿ 58%ನಷ್ಟು ಜನಪ್ರಿಯತೆಯನ್ನು ಹೊಂದಿವೆ.

*ಏಷ್ಯಾ - ಪರ್ಲ್ ವೈಟ್ ಬಣ್ಣಗಳು ಈ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿವೆ.

*ಯುರೋಪ್ - ಗ್ರೇ ಅತ್ಯಂತ ಜನಪ್ರಿಯ ಬಣ್ಣವಾಗಿದ್ದು, ಹೆಚ್ಚಿನ ಅವಧಿಯಿಂದ ಜನಪ್ರಿಯವಾಗಿದ್ದ ಬಿಳಿ ಬಣ್ಣವನ್ನು ಹಿಂದಿಕ್ಕಿದೆ.

*ಉತ್ತರ ಅಮೆರಿಕಾ - ನೀಲಿ ಬಣ್ಣವು 2%ನಷ್ಟು ಹೆಚ್ಚಾಗಿದ್ದು, ಒಟ್ಟು ವಾಹನಗಳ ಪೈಕಿ 10% ವಾಹನಗಳು ನೀಲಿ ಬಣ್ಣವನ್ನು ಹೊಂದಿವೆ.

*ರಷ್ಯಾ - 12%ನಷ್ಟು ವಾಹನಗಳು ಬೀಜ್ / ಬ್ರೌನ್ ಬಣ್ಣಗಳನ್ನು ಹೊಂದಿವೆ.

*ದಕ್ಷಿಣ ಅಮೆರಿಕಾ - ಸಿಲ್ವರ್ ಬಣ್ಣವು ಹೆಚ್ಚಾಗುತ್ತಿರುವ ಏಕೈಕ ಪ್ರದೇಶವಿದು.

Most Read Articles

Kannada
English summary
Wife surprises husband with a Jawa Classic bike gift - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X