ಕಾರು ಕಲರ್ ನೋಡಿಯೇ ನಿಮ್ಮ ವ್ಯಕ್ತಿತ್ವ ಗುರುತಿಸಿರಿ

ಪ್ರತಿಯೊಬ್ಬರಲ್ಲೂ ತಮ್ಮ ಆತ್ಮೀಯರ ಸ್ವಭಾವ ಗುಣ ಲಕ್ಷ್ಮಣಗಳನ್ನು ತಿಳಿಯಬೇಕೆಂಬ ಹಂಬಲವಿರುತ್ತದೆ. ಹಾಗೆಯೇ ಕೇವಲ ಕಾರು ಕಲರ್ ನೋಡಿಯೇ ಆತನ ವ್ಯಕ್ತಿತ್ವವನ್ನು ಗುರುತಿಸುವ ವಿದ್ಯೆಯನ್ನು ನಾವಿಂದು ಹೇಳಿಕೊಡಲಿದ್ದೇವೆ.

ಹ್ಹಾಂ ಅದೇಗೆ ಅಂತೀರಾ? ಸದಾ ನವ ನವೀನ ಲೇಖನಗಳನ್ನು ಪ್ರಸ್ತುತಪಡಿಸುತ್ತಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಇದೀಗ ಬರಿ ಕಾರು ಕಲರ್‌ನೊಂದಿಗೆ ಮಾತ್ರ ಆ ನಿರ್ದಿಷ್ಟ ಕಾರು ಹೊಂದಿರುವ ಮಾಲಿಕನ ವ್ಯಕ್ತಿತ್ವವನ್ನು ಪತ್ತೆ ಹಚ್ಚಲಿದೆ. ಹಾಗೆಯೇ ನಿಮ್ಮ ನೆಚ್ಚಿನ ಕಾರು ಕಲರ್‌ನೊಂದಿಗೆ ವ್ಯಕ್ತಿತ್ವವನ್ನು ಹೇಳಿಕೊಡಲಿದೆ.

ಇದು ತುಂಬಾನೇ ಸಿಂಪಲ್. ಜ್ಯೋತಿಷ್ಯರು ಜಾತಕ ಫಲ ನೋಡಿ ಭವಿಷ್ಯವನ್ನು ನುಡಿಯುತ್ತಾರೆ. ಆದರೆ ನಾವು ಕಾರು ಕಲರ್‌‍ನಿಂದ ವ್ಯಕ್ತಿತ್ವವನ್ನು ಅಳೆಯುವುದು ಹೇಗೆ ಎಂಬುದನ್ನು ತಿಳಿಸಲಿದ್ದೇವೆ. ಇದಕ್ಕಾಗಿ ಫೋಟೊ ಫೀಚರ್ ಮುಂದಕ್ಕೆ ತಿರುವಿದರೆ ಸಾಕು ಮಾಹಿತಿ ಪುಟ ನಿಮ್ಮ ಮುಂದೆ ತೆರೆಯಲಿದೆ.

What's Your Car Colour?

What's Your Car Colour?

ಹಲವಾರು ವರ್ಷಗಳಲ್ಲಿ ನಡೆಸಿರುವ ಅಧ್ಯಯನದ ಬಳಿಕ ಈ ನಿರ್ಣಯಕ್ಕೆ ಬರಲಾಗಿದೆ. ಈ ಮೂಲಕ ಕಾರು ಖರೀದಿಗಾರರ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ.

ಕಪ್ಪು (Black)

ಕಪ್ಪು (Black)

ಕಪ್ಪು ಬಣ್ಣದ ಕಾರು ಹೊಂದಿರುವವರು ಸದೃಢ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಯಾರು ಕೂಡಾ ತಮ್ಮ ಮೇಲೆ ಅಧಿಪತ್ಯ ಸ್ಥಾಪಿಸಲು ಬಿಡುವುದಿಲ್ಲ. ಅಂದರೆ ಅಷ್ಟು ಬೇಗ ಸೋಲೊಪ್ಪಿಕೊಳ್ಳುವುದಿಲ್ಲ. ಹಾಗೆಯೇ ಇತಿಹಾಸವನ್ನು ಇಷ್ಟಪಡುವವರಾಗಿರುತ್ತಾರೆ.

ಬಿಳಿ (White)

ಬಿಳಿ (White)

ಭಾರತೀಯ ಕಾರು ಮಾಲಿಕರು ಅತಿ ಹೆಚ್ಚು ಇಷ್ಟ ಪಡುವ ಕಲರ್ ಶ್ವೇತ ವರ್ಣವಾಗಿದೆ. ಇದು ಯಾಕೆಂದರೆ ಕಾರು ಮರು ಮಾರಾಟ ಸಂದರ್ಭದಲ್ಲಿ ಅತಿ ಹೆಚ್ಚು ಪಾವತಿ ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ಸಂಶೋಧಕರ ಪ್ರಕಾರ ಬಿಳಿ ಕಾರು ಹೊಂದಿರುವವರು ಯಾವುದೇ ವಿಚಾರವಾದರೂ ಸೂಕ್ಷ್ಮ ವಿವರಣೆ ಪಡೆಯಲು ಬಯಸುವವರಾಗಿದ್ದು, ಪರಿಶುದ್ಧತೆಯ ವ್ಯಕ್ತಿತ್ವ ಹೊಂದಿರುತ್ತಾರೆ.

ಬೆಳ್ಳಿಯ ಬಣ್ಣ (Silver)

ಬೆಳ್ಳಿಯ ಬಣ್ಣ (Silver)

ಬೆಳ್ಳಿ ಬಣ್ಣದ ಕಾರು ಹೊಂದಿರುವವರು ಭವಿಷ್ಯದತ್ತ ದೀರ್ಘ ದೃಷ್ಟಿ ಹೊಂದಿರುತ್ತಾರೆ ಎಂದು ಅಧ್ಯಯನ ವರದಿ ತಿಳಿಸುತ್ತದೆ. ಹಾಗೆಯೇ ಇದು ಬ್ಲ್ಯಾಕ್ ಹಾಗೂ ಬಿಳಿ ಬಣ್ಣದ ಮಿಶ್ರಣವಾಗಿರುತ್ತದೆ.

ಕೆಂಪು (Red)

ಕೆಂಪು (Red)

ಕೆಂಪು ಬಣ್ಣವು ಕ್ರಿಯಾತ್ಮಕ ವಕ್ತಿಯ ಸಂಕೇತವಾಗಿದ್ದು, ಅಧಿಕಾರ ಪಡೆಯಲು ಹಂಬಲಿಸುತ್ತಾರೆ. ಮತ್ತೊಂದು ವರದಿ ಪ್ರಕಾರ ಕೆಂಪು ವರ್ಣ ಶಕ್ತಿಶಾಲಿ ಹಾಗೂ ಹೆಚ್ಚು ವೇಗತೆಯ ಸಂಕೇತವಾಗಿದೆ. ಇದೇ ಕಾರಣಕ್ಕಾಗಿ ಫೆರಾರಿಯ ಹೆಚ್ಚಿನ ಕಾರುಗಳು ಕೆಂಪು ಬಣ್ಣಗಳಲ್ಲೇ ಮಾರಾಟವಾಗುತ್ತಿವೆ.

ಹಳದಿ (Yellow)

ಹಳದಿ (Yellow)

ಹಳದಿ ಬಣ್ಣದ ಕಾರು ಹೊಂದಿರುವವರು ಇಡೀ ವಿಶ್ವದಲ್ಲೇ ತಾವು ಖ್ಯಾತಿ ಗಿಟ್ಟಿಸಿಕೊಳ್ಳಲು ಬಯಸುತ್ತಾರೆ. ಅಂತವರು ತುಂಬಾನೇ ಆಕ್ಟಿವ್ ಆಗಿರುತ್ತಾರೆ.

ಕಿತ್ತಳೆ ಬಣ್ಣ (Orange)

ಕಿತ್ತಳೆ ಬಣ್ಣ (Orange)

ಕಿತ್ತಳೆ ಬಣ್ಣ ಕಾರುಗಳು ಭಾರತೀಯ ರಸ್ತೆಗಳಲ್ಲಿ ಕಾಣಸಿಗುವುದು ಅತಿ ವಿರಳ. ಸಂಶೋಧಕರ ಪ್ರಕಾರ ಕಿತ್ತಳೆ ಬಣ್ಣದ ಕಾರನ್ನು ಹೊಂದಿರುವವರು ಮೋಜು, ಮಸ್ತಿ, ಪ್ರೀತಿ ಇಷ್ಟಪಡುವುದಾದರೂ ಚಂಚಲ ಮನಸ್ಸನ್ನು ಹೊಂದಿರುತ್ತಾರೆ.

ಕಂದು ಬಣ್ಣ (Brown)

ಕಂದು ಬಣ್ಣ (Brown)

ಸಹಜವಾಗಿಯೇ ಕಂದು ಬಣ್ಣ ಮಂಕಾಗಿ ಕಾಣಿಸುತ್ತದೆ. ಆದರೆ ಈ ಕಾರನ್ನು ಹೊಂದಿರುವವರು ಸರಳತೆ ಹಾಗೂ 'ಡೌನ್ ಟು ಅರ್ಥ್' ಸ್ವಭಾವವನ್ನು ಹೊಂದಿರುತ್ತಾರೆ.

ಬೂದು ಬಣ್ಣ (Grey)

ಬೂದು ಬಣ್ಣ (Grey)

ಸಾಮಾನ್ಯವಾಗಿ ಗ್ರೇ ಬಣ್ಣ ಕಾರ್ಪೋರೇಟ್ ಕಲರ್ ಆಗಿದ್ದು, ವ್ಯಕ್ತಿಯು ಹೆಚ್ಚು ಪ್ರಾಯೋಗಿಕ ಗುಣ ಲಕ್ಷ್ಮಣ ಹೊಂದಿರುತ್ತಾನೆ. ಹಾಗಿದ್ದರೂ ಬೂದು ಬಣ್ಣದ ಇನ್ನು ಕೆಲವು ಕಾರುಗಳು ತುಂಬಾನೇ ಆಕರ್ಷಣೆಯಾಗಿರುತ್ತದೆ.

ಹಸಿರು (Green)

ಹಸಿರು (Green)

ಸಮತೋಲಿತ ವ್ಯಕ್ತಿತ್ವದೊಂದಿಗೆ ಸಾಂಪ್ರದಾಯಿಕ ಮನೋಸ್ಥಿತಿಗೆ ಬಾಗಿದ ಸ್ವಭಾವವನ್ನು ಹಸಿರು ಬಣ್ಣವು ಪ್ರತಿಪಾದಿಸುತ್ತದೆ.

ನಸುಗೆಂಪು (Pink)

ನಸುಗೆಂಪು (Pink)

ಪಿಂಕ್ ಬಣ್ಣವನ್ನು ಹೆಣ್ಮಕ್ಕಳು ಅತಿ ಹೆಚ್ಚು ಇಷ್ಟಪಡುತ್ತಾರೆ. ಇದು ಹೆಣ್ಣಿನ ತಾರುಣ್ಯದ ಮುಗ್ಧತೆಯನ್ನು ಪ್ರತಿಪಾದಿಸುತ್ತದೆ. ಅಷ್ಟೇ ಯಾಕೆ ಹಾಲಿವುಡ್‌ನ ಹೆಸರಾಂತ ನಟಿ ಪ್ಯಾರಿಸ್ ಹಿಲ್ಟನ್ ಕೂಡಾ ನಸುಗೆಂಪು ಬಣ್ಣದ ಕಾಂಟಿನೆಂಟಲ್ ಬೆಂಟ್ಲಿ ಕಾರನ್ನು ಹೊಂದಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ನೇರಳೆ ಬಣ್ಣ (Purple)

ನೇರಳೆ ಬಣ್ಣ (Purple)

ನೇರಳೆ ಬಣ್ಣ ಅತಿ ವಿರಳವಾಗಿ ಕಾಣಸಿಗುವ ಕಾರಾಗಿದೆ. ಇದು ಸೃಜನಶೀಲ ವ್ಯಕ್ತಿತ್ವದ ಸಂಕೇತವಾಗಿದ್ದು ತಮ್ಮ ಸ್ವಾತಂತ್ರ್ಯವನ್ನು ಸಾದರಪಡಿಸಲು ಬಯಸುತ್ತಾರೆ.

ಚಿನ್ನ (Gold)

ಚಿನ್ನ (Gold)

ಶತಮಾನದಿಂದಲೂ ಚಿನ್ನದ ಬಣ್ಣ ಎಲ್ಲರಿಗೂ ಅತ್ಯಂತ ಪ್ರಿಯವಾಗಿದೆ. ಹಾಗಿದ್ದರೂ ಚಿನ್ನದ ಬಣ್ಣ ಹೊಂದಿರುವ ಕಾರು ಅತಿ ವಿರಳವಾಗಿ ಕಾಣಸಿಗುತ್ತದೆ. ಇದರಿಂದಲೇ ನೀವು ಐಷಾರಾಮಿ ಜೀವನವನ್ನು ಇಷ್ಟಪಡುವವರಾಗಿದ್ದು, ಇದಕ್ಕೆ ದೊಡ್ಡ ಮೊತ್ತವನ್ನೇ ಪಾವತಿಸಲು ರೆಡಿಯಾಗಿರುತ್ತಾರೆ.

Your Take

Your Take

ನಿಮ್ಮ ಆಯ್ಕೆ ಯಾವುದು?

ಮೇಲೆ ಹೇಳಿದ ಎಲ್ಲ ವಿಚಾರಗಳನ್ನು ಹಲವಾರು ವರ್ಷಗಳ ಅಧ್ಯಯನದ ಬಳಿಕ ಬಿಡುಗಡೆ ಮಾಡಲಾಗಿದೆ. ಹಾಗಿದ್ದರೆ ನಿಮ್ಮ ಪ್ರೀತಿಯ ಕಾರು ಬಣ್ಣ ಯಾವುದು ಎಂಬುದನ್ನು ಅರಿತುಕೊಂಡು ವ್ಯಕಿತ್ವವನ್ನು ತಿಳಿದುಕೊಳ್ಳಿರಿ. ಹಾಗೆಯೇ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿರಿ.

Most Read Articles

Kannada
English summary
Do you know our choice of colours is an indicator of our personality traits. In fact the colour of your car can say a lot of things about you. Research over several years has indicated that the connection between the personality of car buyers and their car colours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X