ದುಡ್ಡಿನ ದರ್ಪ: ನಿಯಮ ಉಲ್ಲಂಘನೆ ಪ್ರಶ್ನಿಸಿದ ಹೋಂ ಗಾರ್ಡ್‌ಗೆ ಅವಮಾನಿಸಿದ ಯುವತಿ

ಐಷಾರಾಮಿ ಜಾಗ್ವಾರ್ ಕಾರನ್ನು ವಿರುದ್ಧ ದಿಕ್ಕಿನಲ್ಲಿ ಚಲಾಯಿಸುತ್ತಿದ್ದ ಯುವತಿಯನ್ನು ಹೋಮ್ ಗಾರ್ಡ್ ಪ್ರಶ್ನಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿ ಫೋನ್ ನೆಲಕ್ಕೆ ಎಸೆದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಕುರಿತ ವೀಡಿಯೊ ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಮಹಿಳೆಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ವೀಡಿಯೊದಲ್ಲಿ ಕಂಡುಬರುವ ಮಹಿಳೆಯನ್ನು ಶ್ರೀಲತಾ ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಅವರು ಜಾಗ್ವಾರ್ ಐಷಾರಾಮಿ ಸೆಡಾನ್ ಅನ್ನು ಓಡಿಸುತ್ತಿದ್ದರು. ಕರ್ತವ್ಯದಲ್ಲಿದ್ದ ಹೋಂಗಾರ್ಡ್ ಜಿ.ವಿಘ್ನೇಶ್ ಕಳೆದ ವಾರಾಂತ್ಯದಲ್ಲಿ ಹೈದರಾಬಾದ್‌ನ ಅಗ್ರಸೇನ್ ಬಳಿ ಯು-ಟರ್ನ್ ತೆಗೆದುಕೊಳ್ಳದಂತೆ ತಡೆದಿದ್ದರು. ಜೊತೆಗೆ ಆಕೆಗೆ ಪರ್ಯಾಯ ಮಾರ್ಗವನ್ನು ಸಹ ನೀಡಿದರು.

woman-broke-the-mobile-of-the-home-guard-who-questioned-traffic-rules

ಇಲ್ಲಿ ಯು - ಟರ್ನ್ ತೆಗೆದುಕೊಳ್ಳುವುದರಿಂದ ಟ್ರಾಫಿಕ್ ಜಾಮ್ ಆಗುತ್ತದೆ ಎಂದು ಯುವತಿಗೆ ಹೇಳಿರುವುದಾಗಿ ವರದಿಯಲ್ಲಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಾಫಿಕ್ ಎಸ್ಐ ರಾಕೇಶ್ ರೆಡ್ಡಿ, "ಅರ್ಧ ಗಂಟೆ ಕಾಲ ಆಕೆ ಕಾರನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಇತರರಿಗೆ ಅನಾನುಕೂಲತೆಯನ್ನುಂಟು ಮಾಡಿದರು. ಹೋಮ್ ಗಾರ್ಡ್ನೊಂದಿಗೆ ವಾಗ್ವಾದ ನಡೆಸಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

ವೈರಲ್ ವೀಡಿಯೊದಲ್ಲಿ, ಮಹಿಳೆ ತನ್ನ ಸುತ್ತ ನೆರೆದ ಜನರೊಂದಿಗೆ ಮಾತನಾಡುವುದನ್ನು ನಾವು ಕೇಳಬಹುದು. ವೀಡಿಯೋದಲ್ಲಿ ಆಕೆ ಗೃಹರಕ್ಷಕ ದಳದ ಮೇಲೆ ದೌರ್ಜನ್ಯ ಎಸಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಆನ್‌ಲೈನ್‌ನಲ್ಲಿ ಹೊರಹೊಮ್ಮಿದ ವರದಿಗಳ ಪ್ರಕಾರ, ವಿಘ್ನೇಶ್ ತನ್ನ ರಕ್ಷಣೆಗಾಗಿ ಯುವತಿಯನ್ನು ವೀಡಿಯೊ ಮಾಡಲು ಪ್ರಾರಂಭಿಸಿದ್ದರು. ಇದನ್ನು ಕಂಡು ಸಿಟ್ಟಿಗೆದ್ದು ಆತನ ಫೋನ್ ಕಸಿದುಕೊಂಡು ನೆಲಕ್ಕೆ ಬಡೆದಿದ್ದಾರೆ.

woman-broke-the-mobile-of-the-home-guard-who-questioned-traffic-rules

ಇದಾದ ಬಳಿಕ ಗೃಹರಕ್ಷಕ ದಳದ ಸಿಬ್ಬಂದಿ ಧರಿಸಿದ್ದ ರಿಫ್ಲೆಕ್ಟಿವ್ ವೆಸ್ಟ್ ಅನ್ನು ಕಿತ್ತುಕೊಂಡು ಹಾನಿ ಮಾಡಿದ್ದಾರೆ. ಇಲ್ಲಿ ನೀಡಿರುವ ವೀಡಿಯೋವನ್ನು ಹೋಮ್ ಗಾರ್ಡ್ ಅವರು ಹಲ್ಲೆ ಮಾಡುವ ಮೊದಲು ರೆಕಾರ್ಡ್ ಮಾಡಿದಂತೆ ತೋರುತ್ತಿದೆ. ಸಮಸ್ಯೆ ಸೃಷ್ಟಿಸಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಳಿಕ ಯುವತಿ ತನ್ನ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ.

ಈ ವಿಚಾರವಾಗಿ ಗೃಹರಕ್ಷಕ ದಳದ ಸಿಬ್ಬಂದಿ ಯುವತಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಬಂಜಾರ ಹಿಲ್ಸ್ ಪೊಲೀಸರು ಶ್ರೀ ಲತಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಆಕೆಯ ಮೇಲೆ ಸೆಕ್ಷನ್ 332, 353, 427, 279 PDPP, ಸೆಕ್ಷನ್ 3 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 ಮತ್ತು 177 ಪ್ರಕರಣಗಳನ್ನು ದಾಖಲಿಸಲಾಗಿದೆ.

woman-broke-the-mobile-of-the-home-guard-who-questioned-traffic-rules

ಪೊಲೀಸರ ವಿರುದ್ಧ ಇಂತಹ ವರ್ತನೆಯನ್ನು ಸಹಿಸಬಾರದು, ಯುವತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕರ್ತವ್ಯ ನಿರತ ಪೊಲೀಸರ ಮೇಲೆ ಹೀಗೆ ದೌರ್ಜನ್ಯ ನಡೆಸಿರುವ ಘಟನೆಗೆ ಶ್ರೀಲತಾ ಅವರನ್ನು ಇನ್ನೂ ವಿಚಾರಣೆಗೆ ಕರೆಸಿಕೊಳ್ಳಬೇಕಿದೆ ಎಂದು ಬಂಜಾರಾ ಹಿಲ್ಸ್ ಇನ್ಸ್‌ಪೆಕ್ಟರ್ ಕೆ.ಎಂ. ರಾಘವೇಂದ್ರ ತಿಳಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 28, 2024, 17:42 [IST]
English summary
Woman broke the mobile of the home guard who questioned traffic rules
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+