ವೈರಲ್ ಆಗಲು ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಯುವತಿ: ಬಡವರ ಜೀವದ ಜೊತೆ ಚೆಲ್ಲಾಟ!
ರ್‍ಯಾಶ್ ಡ್ರೈವಿಂಗ್ ಎಂದಾಗ ಮುಖ್ಯವಾಗಿ ಪುರುಷರ ಕಡೆ ಬುಟ್ಟು ಮಾಡುತ್ತಾರೆ. ಆದರೆ ಮಹಿಳೆಯರು ಕೂಡ ರ್‍ಯಾಶ್ ಡ್ರೈವಿಂಗ್ ಮಾಡುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ, ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ಆಗಿದೆ. ಯುವತಿಯೊಬ್ಬಳು ಹೆದ್ದಾರಿಯಲ್ಲಿ ರಾಂಗ್ ಸೈಡ್‌ನಲ್ಲಿ ಅಡ್ಡಾದಿಡ್ಡಿ ಕಾರು ಕಾರ್ ಚಾಲನೆ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಯುವತಿ ಟಾಟಾ ಹೆಕ್ಸಾ (Tata Hexa) ಎಂಪಿವಿ ಕಾರನ್ನು ಗಂಟೆಗೆ 80 ಕಿ.ಮೀ ವೇಗದಲ್ಲಿ ಓಡಿಸುತ್ತಿರುವುದು ನೋಡಬಹುದು. ಇದರಲ್ಲಿ ಅಪಾಯಕಾರಿ ವಿಷಯವೆಂದರೆ, ರಾಂಗ್ ಸೈಡ್‌ನಲ್ಲಿ ಕಾರ್ ಚಾಲನೆ ಮಾಡುವುದಾಗಿದೆ. ಮಹಿಳೆಯೊಬ್ಬರು ಟಾಟಾ ಹೆಕ್ಸಾವನ್ನು ರಸ್ತೆಯ ತಪ್ಪು ಬದಿಯಲ್ಲಿ ಓಡಿಸುವ ಈ ವೀಡಿಯೊ ಯೂಟ್ಯೂಬ್‌ನಿಂದ ಪ್ರತೀಕ್ ಸಿಂಗ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಯುವತಿ ಹೆದ್ದಾರಿಯಲ್ಲಿ ಟಾಟಾ ಹೆಕ್ಸಾ ಕಾರನ್ನು ಚಾಲನೆ ಮಾಡುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ಸದ್ಯಕ್ಕೆ, ಈ ವೀಡಿಯೊವನ್ನು ಚಿತ್ರೀಕರಿಸಿದ ನಿಖರವಾದ ಸ್ಥಳವನ್ನು ವರದಿ ಮಾಡಲಾಗಿಲ್ಲ ಆದರೆ, ಈ ಯುವತಿ ತಮ್ಮ ಲೇನ್‌ನಲ್ಲಿ ವಾಹನ ಚಲಾಯಿಸುತ್ತಿಲ್ಲ. ಬದಲಾಗಿ, ಈ ಸಂಪೂರ್ಣ ವೀಡಿಯೊವನ್ನು ಅವಳು ಹೇಗೆ ರಾಂಗ್ ಸೈಡ್ನಲ್ಲಿ ಓಡಿಸಬಹುದು ಎಂಬುದನ್ನು ತೋರಿಸಲು ಚಿತ್ರೀಕರಿಸಲಾಗಿದೆ.
ಈ ಯುವತಿಯು ಗಂಟೆಗೆ 80 ಕಿಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ರಾಂಗ್ ಸೈಡ್ ನಲ್ಲಿ ಕಾರು ಚಾಲನೆ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಘಾತ ಸಂಭವಿಸಿಲ್ಲ. ಈ ಬೃಹತ್ ಟಾಟಾ ಹೆಕ್ಸಾ ಎಂಪಿವಿ ಕಾರು ರಾಂಗ್ ಸೈಡ್ ನಿಂದ ಬರುವಾಗ ಮುಂಭಾಗದಿಂದ ಬರುವ ವಾಹನ ಸವಾರರು ಒಂದು ಕ್ಷಣಕ್ಕೆ ವಿಚಲಿತರಾಗಿದ್ದಾರೆ. ಈ ರೀತಿ ವಾಹನ ಚಾಲನೆಯು ಕಾನೂನಿನ ಉಲ್ಲಂಘನೆಯಾಗಿದೆ.

ಇದಲ್ಲದೆ, ಈ ಘಟನೆಯ ಅಪಾಯವನ್ನು ಹೆಚ್ಚಿಸುವ ಸಲುವಾಗಿ, ರಸ್ತೆಯ ಮೇಲೆ ದಟ್ಟವಾದ ಹೊಗೆಯನ್ನು ನಾವು ಗಮನಿಸಬಹುದು. ಈ ಕಾರಣದಿಂದಾಗಿ, ಗೋಚರತೆ ಈಗಾಗಲೇ ತುಂಬಾ ಕೆಟ್ಟದಾಗಿದೆ ಮತ್ತು ಈ ಮಹಿಳೆ ಅಜಾಗರೂಕತೆಯಿಂದ ಚಾಲನೆ ಮಾಡುವುದನ್ನು ಮುಂದುವರೆಸಿದಳು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮಾಯಕರ ಪ್ರಾಣವನ್ನೂ ಬಲಿತೆಗೆದುಕೊಳ್ಳುವ ದೊಡ್ಡ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆಗಳಿತ್ತು.
ಈ ಸಮಯದಲ್ಲಿ, ಈ ಯುವತಿಯು ಪೊಲೀಸರು ಬಂಧಿಸಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ವರದಿಗಳಿಲ್ಲ. ಹೆಚ್ಚಾಗಿ, ಈ ಮಹಿಳೆ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಇನ್ನಾದರೂ ಅಧಿಕಾರಿಗಳು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಈ ಯುವತಿಗೆ ಶಿಕ್ಷೆಯಾಗಲಿ. ಈ ಮೂಲಕ ಈ ರೀತಿ ಮಾಡುವರಿಗೆ ಎಚ್ಚರಿಕೆ ಸಂದೇಶ ಹೋಗಲಿ.

ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾಗಳಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ. ದುರದೃಷ್ಟವಶಾತ್ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿ ವೈರಲ್ ಆಗಿ ಸೋಷಿಯಲ್ ಮೀಡಿಯಾಗಳಲ್ಲಿ ಸ್ಟಾರ್ ಆಗುವುದು ಒಂದು ಟ್ರೆಂಡ್ ಆಗಿದೆ. ಅಂತಹ ವೀಡಿಯೊಗಳು 100 ಅಥವಾ ಸಾವಿರಾರು ಲೈಕ್‌ಗಳು ಮತ್ತು ಶೇರ್‌ಗಳನ್ನು ಪಡೆಯುವುದನ್ನು ನೋಡುವುದು ಸಾಮಾನ್ಯವಾಗಿದೆ, ಹೆಚ್ಚಿನ ಕಾಮೆಂಟ್‌ಗಳು ಸಾಹಸಗಳನ್ನು ಶ್ಲಾಘಿಸುತ್ತಿದ್ದಾರೆ. ಇದು ಅಪಯಕಾರಿ ವಿಷಯವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications