ವಿಮಾನದೊಳಗೆ ಸೆಖೆಯೆಂದು ವಿಮಾನದ ರೆಕ್ಕೆ ಮೇಲೆ ಕುಳಿತ ಮಹಿಳೆ

ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಅಕ್ರಮ ಸರಕುಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ. ಇನ್ನು ಕೆಲವೊಮ್ಮೆ ವಿಮಾನ ನಿಲ್ದಾಣಗಳಲ್ಲಿ ವಿಚಿತ್ರವಾಗಿ ವರ್ತಿಸುವ ಪ್ರಯಾಣಿಕರನ್ನು ನಿಷೇಧಿಸಲಾಗುತ್ತದೆ. ಇದೇ ರೀತಿಯ ಘಟನೆಯೊಂದು ಉಕ್ರೇನ್‌ನ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಿಮಾನದೊಳಗೆ ಸೆಖೆಯೆಂದು ವಿಮಾನದ ರೆಕ್ಕೆ ಮೇಲೆ ಕುಳಿತ ಮಹಿಳೆ

ಮಹಿಳೆಯೊಬ್ಬರು ವಿಚಿತ್ರವಾಗಿ ವರ್ತಿಸಿದ ಕಾರಣಕ್ಕೆ ನಿಷೇಧಕ್ಕೆ ಒಳಗಾಗಿದ್ದಾರೆ. ಟರ್ಕಿಯ ಅಂಟಲ್ಯ ನಗರದಿಂದ ಉಕ್ರೇನ್‌ಗೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ವಿಮಾನದ ಎಮರ್ಜೆನ್ಸಿ ಗೇಟ್ ತೆರೆದು ವಿಮಾನದ ರೆಕ್ಕೆಯ ಮೇಲೆ ಕುಳಿತಿದ್ದಾರೆ. ಉಕ್ರೇನ್‌ನ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 737 ವಿಮಾನ ಲ್ಯಾಂಡಿಂಗ್ ಆಗಿದ್ದ ವೇಳೆ ಈ ಘಟನೆ ನಡೆದಿದೆ.

ವಿಮಾನದೊಳಗೆ ಸೆಖೆಯೆಂದು ವಿಮಾನದ ರೆಕ್ಕೆ ಮೇಲೆ ಕುಳಿತ ಮಹಿಳೆ

ವಿಮಾನವನ್ನು ರನ್ ವೇಯಲ್ಲಿ ನಿಲ್ಲಿಸಿದ್ದ ವೇಳೆ ಮಹಿಳೆಯೊಬ್ಬರು ವಿಮಾನದ ರೆಕ್ಕೆಗಳ ಮೇಲಿರುವ ಎಮರ್ಜೆನ್ಸಿ ಗೇಟ್ ತೆರೆದು ರೆಕ್ಕೆಗಳ ಮೇಲೆ ನಡೆದು ಅದರ ಮೇಲೆ ಕುಳಿತಿದ್ದಾರೆ. ಮಹಿಳೆಯ ಈ ನಡೆಯನ್ನು ಕಂಡ ವಿಮಾನ ನಿಲ್ದಾಣದ ಸಿಬ್ಬಂದಿ ಗಾಬರಿಯಾಗಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಿಮಾನದೊಳಗೆ ಸೆಖೆಯೆಂದು ವಿಮಾನದ ರೆಕ್ಕೆ ಮೇಲೆ ಕುಳಿತ ಮಹಿಳೆ

ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣವೇ ಮಹಿಳೆಗೆ ಎಚ್ಚರಿಕೆ ನೀಡಿದ್ದಾರೆ. ಕೆಲವು ಸೆಕೆಂಡುಗಳ ನಂತರ ಮಹಿಳೆ ಸ್ವತಃ ಎಮರ್ಜೆನ್ಸಿ ಗೇಟ್ ಮೂಲಕ ವಿಮಾನದ ಒಳಕ್ಕೆ ಪ್ರವೇಶಿಸಿದ್ದಾರೆ. ವಿಮಾನ ನಿಲ್ದಾಣದ ಸಿಬ್ಬಂದಿ ಈ ಬಗ್ಗೆ ವಿಚಾರಿಸಿದಾಗ ವಿಮಾನದೊಳಗೆ ಸೆಖೆಯಾದ ಕಾರಣ ತಂಪಾದ ಗಾಳಿ ಪಡೆಯಲು ಎಮರ್ಜೆನ್ಸಿ ಗೇಟ್ ತೆರೆದು ಹೊರ ಹೋಗಿದ್ದಾಗಿ ತಿಳಿಸಿದ್ದಾರೆ.

ವಿಮಾನದೊಳಗೆ ಸೆಖೆಯೆಂದು ವಿಮಾನದ ರೆಕ್ಕೆ ಮೇಲೆ ಕುಳಿತ ಮಹಿಳೆ

ಇಬ್ಬರು ಮಕ್ಕಳ ತಾಯಿಯಾಗಿರುವ ಆ ಮಹಿಳೆ, ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ವಿಮಾನವು ರನ್ ವೇಯಲ್ಲಿ ನಿಂತಿದ್ದ ಸಮಯದಲ್ಲಿ ವಿಮಾನದೊಳಗಿದ್ದ ಬಹುತೇಕ ಎಲ್ಲಾ ಪ್ರಯಾಣಿಕರು ಇಳಿದಿದ್ದರು. ವಿಮಾನದ ಹಿಂಭಾಗದ ಬಳಿ ತೆರಳಿದ ಮಹಿಳೆ ಎಮರ್ಜೆನ್ಸಿ ಗೇಟ್ ತೆರೆದು ಹೊರಕ್ಕೆ ಹೋಗಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ತಮ್ಮ ತಾಯಿ ವಿಮಾನದ ರೆಕ್ಕೆ ಮೇಲೆ ಕುಳಿತಿರುವುದನ್ನು ನೋಡಿದ ಅವರ ಮಕ್ಕಳು ಎಮರ್ಜೆನ್ಸಿ ಗೇಟ್ ಬಳಿ ಬಂದು ತಾಯಿಯನ್ನು ಕರೆದಿದ್ದಾರೆ. ಮಹಿಳೆ ಯಾವುದೇ ಡ್ರಗ್ಸ್ ಅಥವಾ ಮಾದಕವಸ್ತು ಸೇವಿಸಿರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.

ವಿಮಾನದೊಳಗೆ ಸೆಖೆಯೆಂದು ವಿಮಾನದ ರೆಕ್ಕೆ ಮೇಲೆ ಕುಳಿತ ಮಹಿಳೆ

ಈ ಮಹಿಳೆಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ ಎಂದು ಉಕ್ರೇನ್‌ನ ವಿಮಾನಯಾನ ಸಂಸ್ಥೆ ತಿಳಿಸಿದೆ. ಇದರಿಂದಾಗಿ ಆ ಮಹಿಳೆಗೆ ಕೆಲವು ದಿನಗಳವರೆಗೆ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ.

Most Read Articles

Kannada
English summary
Woman opens emergency gate and sits on the wing of Aeroplane. Read in Kannada.
Story first published: Saturday, September 5, 2020, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X