ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಕುಡಿತದ ಚಟ ಇರುವವರು ಆಗಾಗ ಕುಡಿದು ರಸ್ತೆಯಲ್ಲಿ ತೇಲಾಡುತ್ತಾ ಸಾಗುವುದನ್ನು ಗಮನಿಸಬಹುದು. ಇನ್ನೂ ಕೆಲವರು ಕುಡಿತದ ಅಮಲಿನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ರಂಪಾಟ ಮಾಡುತ್ತಾರೆ. ಬಹುತೇಕ ಬಾರಿ ಪುರುಷರೇ ಕುಡಿದು ಆವಾಂತರ ಸೃಷ್ಟಿಸುತ್ತಾರೆ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಆದರೆ ಪುಣೆಯಲ್ಲಿ ಇದಕ್ಕೆ ವಿರುದ್ಧವಾದ ಘಟನೆಯೊಂದು ನಡೆದಿದೆ. ಈ ಘಟನೆಯಲ್ಲಿ ಮಹಿಳೆಯೊಬ್ಬರು ಕುಡಿದು ಆವಾಂತರ ಸೃಷ್ಟಿಸಿದ್ದಾರೆ. ಪುಣೆಯ ತಿಲಕ್ ರಸ್ತೆಯಲ್ಲಿ ನಡೆದ ಈ ಘಟನೆಯಲ್ಲಿ ಮಹಿಳೆಯೊಬ್ಬರು ರಸ್ತೆಯ ಮೇಲೆ ಕುಳಿತು ವಾಹನಗಳಿಗೆ ಅಡ್ಡಿಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಈ ಮಹಿಳೆ ಮದ್ಯ ಸೇವಿಸಿ ರಸ್ತೆಯ ಮಧ್ಯ ಭಾಗದಲ್ಲಿ ಕುಳಿತು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾಳೆ. ಮಹಿಳೆ ರಸ್ತೆ ಮಧ್ಯೆ ಕುಳಿತಿರುವುದರಿಂದ ವಾಹನಗಳು ಆಕೆಯ ಪಕ್ಕದಲ್ಲಿ ಸಾಗುತ್ತಿರುವುದನ್ನು ವೀಡಿಯೊದಲ್ಲಿ ಗಮನಿಸಬಹುದು.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಈ ವೀಡಿಯೊದಲ್ಲಿ ಯಾವುದೇ ಆಡಿಯೋ ಇಲ್ಲ. ಇದರಿಂದ ಆ ಪ್ರದೇಶದಲ್ಲಿ ನಿಜವಾಗಿಯೂ ಏನು ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಮಹಿಳೆಯ ವರ್ತನೆಯನ್ನು ಗಮನಿಸಿದರೆ ಆಕೆ ಮದ್ಯ ಸೇವಿಸಿರುವುದು ಸ್ಪಷ್ಟವಾಗುತ್ತದೆ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಇಲ್ಲದಿದ್ದರೆ ರಾತ್ರಿ 10.30 ಗೆ ಈ ರೀತಿ ರಸ್ತೆ ಮಧ್ಯೆ ಕುಳಿತು ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸುತ್ತಿರಲಿಲ್ಲ. ಕುಡಿದು ರಸ್ತೆಯ ಯಾವುದಾದರೂ ಒಂದು ಮೂಲೆಯಲ್ಲಿ ಬಿದ್ದಿದ್ದರೆ ಯಾರಿಗೂ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಆದರೆ ಈ ಮಹಿಳೆ ರಸ್ತೆ ಮಧ್ಯದಲ್ಲಿ ಕುಳಿತು ವಾಹನಗಳನ್ನು ಅಡ್ಡ ಗಟ್ಟಲು ಪ್ರಯತ್ನಿಸಿದ್ದಾಳೆ. ಇದರಿಂದ ವಾಹನ ಸವಾರರು ಕೆಲ ಕಾಲ ಆತಂಕಕ್ಕೊಳಗಾಗಿದ್ದರು. ಇದು ಪುಣೆಯ ಅತ್ಯಂತ ಜನನಿಬಿಡ ರಸ್ತೆಯಾಗಿರುವುದರಿಂದ ಕೆಲವೇ ನಿಮಿಷಗಳಲ್ಲಿ ಭಾರೀ ಪ್ರಮಾಣದ ಟ್ರಾಫಿಕ್ ದಟ್ಟಣೆ ಉಂಟಾಗಿದೆ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಅಲ್ಲಿದ್ದವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರೊಳಗೆ ಆ ಮಹಿಳೆ ಸ್ಥಳದಿಂದ ಜಾಗ ಖಾಲಿ ಮಾಡಿದ್ದಳು. ಪೊಲೀಸರು ಸಾರ್ವಜನಿಕ ರಸ್ತೆಯಲ್ಲಿ ಅನುಚಿತವಾಗಿ ವರ್ತಿಸಿದ ಮಹಿಳೆಯನ್ನು ಪತ್ತೆ ಹಚ್ಚಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಈ ವೀಡಿಯೊ ನೋಡಿರುವ ಹಲವರು ಆ ಮಹಿಳೆಯ ಬಗ್ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮಹಿಳೆ ಹಾಗೂ ಘಟನೆ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಪುಣೆಯ ಸ್ವರ್ಗೇಟ್ ಪೊಲೀಸ್ ಠಾಣೆಯ ಮುಖ್ಯ ಅಧಿಕಾರಿಯವರ ಪ್ರಕಾರ, ಆ ಮಹಿಳೆ ಗದಗಿನಿಂದ ಹೀರಾಬಾಕಿಗೆ ಬಂದಿದ್ದಳು. ಕೆಲವು ನಿಮಿಷಗಳ ಕಾಲ ರಸ್ತೆ ಮಧ್ಯೆ ಕುಳಿತು ಸಂಚಾರಕ್ಕೆ ಅಡ್ಡಿಪಡಿಸಿದ್ದಾಳೆ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಕೆಲವು ವಾಹನ ಸವಾರರು ನಮಗೆ ಕರೆ ಮಾಡಿ ದೂರು ನೀಡಿದ್ದರು. ಆ ಕರೆಯ ಆಧಾರದ ಮೇಲೆ ನಮ್ಮ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ತೆರಳಿತು. ನಾವು ಸ್ಥಳಕ್ಕೆ ತೆರಳುವಷ್ಟರಲ್ಲಿ ಮಹಿಳೆ ಸ್ಥಳದಲ್ಲಿ ಇರಲಿಲ್ಲವೆಂದು ಹೇಳಿದ್ದಾರೆ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಇದರಿಂದ ಈ ಘಟನೆ ಹೇಗಾಯಿತೆಂದು ಪೊಲೀಸರಿಗೂ ತಿಳಿದಿಲ್ಲ. ಬಹುಶಃ ಆಕೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆಕೆ ಮದ್ಯಪಾನ ಮಾಡಿದ್ದಾಳೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚುತ್ತಿದ್ದರು.

ವೀಡಿಯೊ ಆಧಾರದ ಮೇಲೆ ಪೊಲೀಸರು ಆಕೆಯ ಪತ್ತೆಗೆ ಬಲೆ ಬೀಸಿದ್ದಾರೆ. ಆಕೆ ಸೆರೆ ಸಿಕ್ಕ ನಂತರ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ. ಸೂಕ್ತ ಕಾರಣ ನೀಡಿದರೆ ಆಕೆಗೆ ಎಚ್ಚರಿಕೆ ನೀಡಿ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕುಡಿತದ ಅಮಲಿನಲ್ಲಿ ರಸ್ತೆ ಮಧ್ಯೆ ಕುಳಿತು ವಾಹನಗಳಿಗೆ ಅಡ್ಡಿ ಪಡಿಸಿದ ಮಹಿಳೆ

ಇದೇ ವೇಳೆ ಮಹಿಳೆ ರಸ್ತೆ ಮಧ್ಯೆ ಕುಳಿತಿದ್ದಾಗ ಕೆಲವು ಜನರು ಚಪ್ಪಾಳೆ ತಟ್ಟಿ, ವಾಹನಗಳನ್ನು ನಿಲ್ಲಿಸಲು ಪ್ರೋತ್ಸಾಹ ನೀಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಹೀಗೆ ಮಾಡುತ್ತಿದ್ದವರು ಆ ಮಹಿಳೆಗೆ ಸಂಬಂಧಿಸಿದವರೇ ಅಥವಾ ಸಾರ್ವಜನಿಕರೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಒಂದು ವೀಡಿಯೊ ಆಧಾರದ ಮೇಲೆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಆಕೆ ನೀಡುವ ಹೇಳಿಕೆಯನ್ನು ಆಧರಿಸಿ ಘಟನೆಯ ಬಗ್ಗೆ ತನಿಖೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Woman sits on mid road and tries to block vehicles video details
Story first published: Saturday, August 7, 2021, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X