ಯುವತಿಯ Mahindra Thar ವಶಕ್ಕೆ... ನಿಮ್ಮ 1 ಮಿಲಿಯನ್ ಫಾಲೋವರ್ಸ್ ತರುವರೇ ಕಾರು?
ಸುಲಭವಾಗಿ ಹಣ ಗಳಿಸುವುದರ ಜೊತೆಗೆ ಫೇಮಸ್ ಆಗುವುದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆ ಸೋಷಿಯಲ್ ಮೀಡಿಯಾ. ಆದ್ರೆ ವೈರಲ್ ಆಗಲು ಇವರು ಮಾಡುವ ಕೆಲಸಗಳು ಒಮ್ಮೊಮ್ಮೆ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತವೆ. ಯುವತಿಯೊಬ್ಬರು ಇದೇ ಕಾರಣಕ್ಕೆ ಪೊಲೀಸರಿಂದ ಸರಿಯಾಗಿ ದಂಡ ಹಾಕಿಸಿಕೊಂಡು ಮನೆಗೆ ಮರಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆಗಿರುವ ಖುಷಿಯಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಪೊಲೀಸರು ಯುವತಿಯ ಕಾರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಇನ್‌ಸ್ಟಾಗ್ರಾಮರ್ ಗೌರಿ ವಿರ್ದಿ ಎಂಬ ಯುವತಿಗೆ ಸದ್ಯ ಪಂಜಾಬ್ ಪೊಲೀಸರು ವಾಹನ ವಶಕ್ಕೆ ಪಡೆದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಮಹೀಂದ್ರಾ ಥಾರ್‌ನ ಬಾನೆಟ್ ಮೇಲೆ ಗೌರಿ ವಿರ್ದಿ ಕುಳಿತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದಾಗ ಆಕೆ ಬಾನೆಟ್ ಮೇಲೆ ಕುಳಿತಿರುವುದು ದೃಶ್ಯಾವಳಿಯಲ್ಲಿದೆ. ವಿಡಿಯೋ ವ್ಯಾಪಕವಾಗಿ ಗಮನ ಸೆಳೆದ ನಂತರ, ಹೋಶಿಯಾರ್‌ಪುರದ ದಸುಯಾ ಪೊಲೀಸರು ತ್ವರಿತ ಕ್ರಮ ಕೈಗೊಂಡು ಚಲನ್ ಜಾರಿ ಮಾಡಿದ್ದಾರೆ.
ವಾಹನದ ನೋಂದಣಿ ಸಂಖ್ಯೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ವಾಹನದ ಮಾಲೀಕರನ್ನು ಪತ್ತೆಹಚ್ಚಲು ಪೊಲೀಸರಿಗೆ ಸುಲಭವಾಯಿತು. ಯುವತಿ ಮತ್ತು ಮಹೀಂದ್ರಾ ಥಾರ್ ಚಾಲಕ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿ ದಾಸುಯಾ ಪೊಲೀಸರು ತಿಳಿಸಿದ್ದಾರೆ. ಘಟನೆಯ ವೇಳೆ ವಾಹನದಲ್ಲಿ ಇನ್ನು ಹಲವರು ಇದ್ದರು ಎಂಬುದು ತಿಳಿದುಬಂದಿದೆ.
ಹೆಚ್ಚಾಯ್ತು ಸೊಷಿಯಲ್ ಮೀಡಿಯಾ ಹುಚ್ಚು: ಮತ್ತೊಂದು ವೈರಲ್ ವೀಡಿಯೊದಲ್ಲಿ, ಮದುವೆಗೆ ರೆಡಿಯಾಗಿದ್ದ ವಧು ಚಲಿಸುವ ಟಾಟಾ ಸಫಾರಿ ಸ್ಟ್ರೋಮ್‌ನ ಬಾನೆಟ್ ಮೇಲೆ ಕುಳಿತು ಬಿಟ್ಟಿ ಶೋ ಕೊಡುವುದನ್ನು ಕ್ಯಾಮರಾಮೆನ್ ರೆಕಾರ್ಡ್ ಮಾಡುತ್ತಾ ಮುಂದೆ ಸಾಗುತ್ತಾರೆ. ಆದರೆ ಸಾರ್ವಜನಿಕ ರಸ್ತೆಯಲ್ಲಿ ಇತರ ವಾಹನ ಸಂಚಾರಕ್ಕೆ ಇದು ಅಡ್ಡಿಯುಂಟು ಮಾಡಿತ್ತು.
ದಾರಿಹೋಕರು ಈ ದೃಶ್ಯವನ್ನು ವೀಕ್ಷಿಸಲು ವಾಹನಗಳನ್ನು ನಿಧಾನಗೊಳಿಸಿದ್ದರು, ಇದು ಸಂಚಾರ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ವಿಡಿಯೋ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡು ವಿವಿಧ ಉಲ್ಲಂಘನೆಗಳಿಂದಾಗಿ ಕಾರು ಮಾಲೀಕನಿಗೆ ಬರೋಬ್ಬರಿ 15,500 ರೂ. ದಂಡ ವಿಧಿಸಿ ಎಚ್ಚರಿಸಿ ಕಳುಹಿಸಿದ್ದರು. ಇಷ್ಟಾದರೂ ಪದೇ ಪದೇ ಇಂತಹ ಕೃತ್ಯಗಳು ಹೆಚ್ಚಾಗುತ್ತಲೇ ಇವೆ.
ಮತ್ತೊಂದು ಘಟನೆಯಲ್ಲಿ, ಅಯೋಧ್ಯೆಯ ಮತ್ತೊಬ್ಬ ಮಹಿಳೆ ಮಾರುತಿ ಸುಜುಕಿ ಡಿಜೈರ್‌ನಲ್ಲಿ ಇದೇ ರೀತಿಯ ವಿಡಿಯೋ ಮಾಡಿ ಪೊಲೀಸರ ಅಥಿತಿಯಾಗಿದ್ದರು. ಏಕ ಪಥದ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಕಾರಿನ ಬಾನೆಟ್ ಮೇಲೆ ಕುಳಿತಿದ್ದರೇ, ಅದೇ ಕಾರಿನಲ್ಲಿದ್ದ ಮತ್ತೊಂದು ಯುವತಿ ಕಾರಿನ ಕಿಟಕಿಯಿಂದ ಇಣುಕಿ ನೋಡುತ್ತಿದ್ದಳು. ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳಿಗೆ 18,000 ರೂ. ದಂಡ ವಿಧಿಸಲಾಗಿತ್ತು.
ಸೋಷಿಯಲ್ ಮೀಡಿಯಾ ಪ್ರಭಾವಿಗಳು (ಇನ್‌ಫ್ಲೂಯೆನ್ಸರ್‌ಗಳು) ತಮ್ಮನ್ನು ತಾವು ಫೇಮಸ್ ಮಾಡಿಕೊಳ್ಳಲು ಹೊಸ ವಿಧಾನಗಳನ್ನು ಹುಡುಕುವ ನಿಟ್ಟಿನಲ್ಲಿ ಇಂತಹ ಕೃತ್ಯಗಳಿಗೆ ಕಾರಣವಾಗುತ್ತಿದ್ದಾರೆ. ಪೊಲೀಸರು ಕೂಡ ವಿಷಯ ಬೆಳಕಿಗೆ ಬರುತ್ತಿದ್ದಂತೆ ಕರೆತಂದು ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. ಒಮ್ಮೆ ಎಚ್ಚರಿಕೆ ಪಡೆದವರು ಮತ್ತೊಮ್ಮೆ ಮಾಡುತ್ತಿಲ್ಲ. ಆದ್ರೆ ನಮ್ಮ ದೇಶದಲ್ಲಿ ಇಂತಹ ಸೋಷಿಯಲ್ ಮೀಡಿಯಾ ಹುಚ್ಚರು ಎಷ್ಟು ಮಂದಿಯಿದ್ದಾರೆ ಎಂದು ನಿಮಗೆ ಹೇಳಬೇಕಿಲ್ಲ.

ಸಿಸಿ ಟಿವಿಗಳಿಂದ ಸಿಕ್ಕಿಬೀಳ್ತಾರೆ: ಹೆಚ್ಚಿನ ನಗರಗಳಲ್ಲಿ ಸಿಸಿಟಿವಿ ನೆಟ್‌ವರ್ಕ್ ಈಗ ಜಾರಿಯಲ್ಲಿದೆ, ಇದರಿಂದ ಪೊಲೀಸರು ಶ್ರದ್ಧೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ತಪ್ಪಿಸಿಕೊಳ್ಳುವವರ ವಾಹನ ನೋಂದಣಿ ಸಂಖ್ಯೆಗಳನ್ನು ಸೆರೆಹಿಡಿಯುವ ಮೂಲಕ ಸಂಚಾರ ಉಲ್ಲಂಘನೆಗಳನ್ನು ಗುರುತಿಸುವಲ್ಲಿ ಈ ಕ್ಯಾಮೆರಾಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications