ಬಾಲ್ಯದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ಬಡ ಆಟೋ ಚಾಲಕನಿಗೆ ಗಿಫ್ಟ್ ಕೊಟ್ಟ ಯುವತಿ: ಭಾರೀ ಮೆಚ್ಚುಗೆ

ಹುಟ್ಟುಹಬ್ಬದ ದಿನ ಗಿಫ್ಟ್ ಸಿಗೋದು ಮಾಮೂಲು. ಆದರೆ ಅದನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ನಾವು ಗಿಫ್ಟ್ ನೀಡುವುದು ಅಪರೂಪ. ಆದರೆ ಯುವತಿಯೊಬ್ಬಳು ಆಟೋ ಚಾಲಕರೊಬ್ಬರಿಗೆ (Auto Rickshaw Driver) ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಈ ಗಿಫ್ಟ್ ಕಂಡು ಆಟೋ ಚಾಲಕ ಭಾವುಕರಾಗಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಗಿಫ್ಟ್ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಗಿಫ್ಟ್ ಸ್ವೀಕರಿಸಲು ಇಷ್ಟ ಪಡುತ್ತಾರೆ. ಆದರಲ್ಲೂ ನಾವು ನಿರೀಕ್ಷಿಸದೇ ಸರ್ಪ್ರೈಸ್ ಗಿಫ್ಟ್ ಸಿಕ್ಕಾಗ ಹೆಚ್ಚು ಇಷ್ಟವಾಗುತ್ತದೆ. ಯುವತಿ ದಿನವಿಡೀ ಕಷ್ಟ ಪಟ್ಟು ಆಟೋ ಓಡಿಸಿ ಜೀವನ ಸಾಗಿಸುವ ಬಡ ಆಟೋ ಚಾಲಕರೊಬ್ಬರಿಗೆ ನೀರಿನ ಬಾಟಲಿ ಅನ್ನು ಗಿಫ್ತ್ ಆಗಿ ನೀಡಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Auto Rickshaw Driver

ಈ ವೈರಲ್ ವಿಡಿಯೋದಲ್ಲಿ ಯುವತಿಯು ತನ್ನನ್ನು ಬಾಲ್ಯದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋ ಡ್ರೈವರ್ ಒಬ್ಬರಿಗೆ ನೀರಿನ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಟೋ ಡ್ರೈವರ್ ನೀರನ್ನು ಕುಡಿಯಲು ಹಳೆಯ, ಸವೆದ ಪ್ಲಾಸ್ಟಿಕ್ ಬಾಟಲಿಯನ್ನು ಬಳಸುತ್ತಿರುವುದನ್ನು ಗಮನಿಸಿದಳು. ಈ ಪ್ಲಾಸ್ಟಿಕ್ ಬಾಟಲ್ ಬಿಸಿಲಿನ ಶಾಖದಲ್ಲಿ ನೀರನ್ನು ತಂಪಾಗಿಡುವುದಿಲ್ಲ. ಇದನ್ನು ಅರಿತುಕೊಂಡ ನಂತರ, ಅವಳು ನೀರನ್ನು ಹೆಚ್ಚು ಕಾಲ ತಣ್ಣಗಾಗಲು ಹೊಸ ಗುಣಮಟ್ಟದ ನೀರಿನ ಬಾಟಲಿಯನ್ನು ಖರೀದಿಸಲು ನಿರ್ಧರಿಸಿದಳು.

ಈ ಸರ್ಪ್ರೈಸ್ ಉಡುಗೊರೆಯನ್ನು ಕಂಡು ಆಟೋಚಾಲಕ ಭಾವುಕರಾಗಿದ್ದಾರೆ.ಒಂದು ವಾರದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆಟೋ ಚಾಲಕನ ಮುಖದಲ್ಲಿ ನಗು ತರಿಸಿದಕ್ಕೆ ನಿಮಗೆ ಧನ್ಯವಾದಗಳು ಎಂದು ನೆಟ್ಟಿಗರು ಯುವತಿಹೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋಗೆ ಒಬ್ಬರು "ನಾನು ನಿಮಗೆ ಮತ್ತು ನಿಮ್ಮ ಚಾಲಕನಿಗೆ ನಿಮ್ಮ ಜೀವನದುದ್ದಕ್ಕೂ ಒಳ್ಳೆಯದನ್ನು ಬಯಸುತ್ತೇನೆ, ನಿಮ್ಮ ದಯೆಗಾಗಿ ನಿಮ್ಮನ್ನು ಆಶೀರ್ವದಿಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಇತ್ತೀಚೆಗೆ ಗೂಗಲ್ ಇಂಜಿನಿಯರ್ ತಮ್ಮ ಪೋಷಕರಿಗೆ ಹೊಸ ಎಂಜಿ ಹೆಕ್ಟರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ತಮ್ಮ ಮಗಳಿಂದ ಈ ಉಡುಗೊರೆಯನ್ನು ಸ್ವೀಕರಿಸಿದ ನಂತರ ಇಬ್ಬರೂ ಪೋಷಕರು ಸಂತೋಷದ ನಗುವನ್ನು ನೋಡಬಹುದು. ಗೂಗಲ್ ಇಂಜಿನಿಯರ್ ತಮ್ಮ ಪೋಷಕರಿಗೆ ಎಂಜಿ ಹೆಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ ವೀಡಿಯೊವನ್ನು ಸ್ಟೋರೀಸ್ ಬೈ ಶೈಲೀ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ.

ಮಹಿಳೆಯು ತನ್ನ ಹೆತ್ತವರನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು MG ಡೀಲರ್‌ಶಿಪ್‌ಗೆ ಕರೆತರುವುದರೊಂದಿಗೆ ವೀಡಿಯೋ ಪ್ರಾರಂಭವಾಗುತ್ತದೆ. ಅವರ ಆಗಮನದ ನಂತರ, ಮಹಿಳೆ ತನ್ನ ತಂದೆಯ ಕಣ್ಣುಮುಚ್ಚಿ ತೆಗೆಯುತ್ತಾಳೆ. ಮುಂದೆ, ಆಕೆ ತನ್ನ ಪತಿ ಮತ್ತು ಪೋಷಕರೊಂದಿಗೆ ಹೊಸದಾಗಿ ಉಡುಗೊರೆಯಾಗಿ ನೀಡಿದ ಹೆಕ್ಟರ್ ಎಸ್‍ಯುವಿಯ ಕೆಂಪು ಕವರ್ ಅನ್ನು ತೆಗೆದುಕೊಳ್ಳುತ್ತಾಳೆ. ನಂತರ ಅವರು ಕೀಲಿಯನ್ನು ತನ್ನ ಹೆತ್ತವರಿಗೆ ಹಸ್ತಾಂತರಿಸುತ್ತಾರೆ ಮತ್ತು ನಂತರ ಅವರು ಪರಸ್ಪರ ತಬ್ಬಿಕೊಳ್ಳುತ್ತಾರೆ.

Auto Rickshaw Driver

ವೀಡಿಯೋದಿಂದ, ಮಹಿಳೆ ತನ್ನ ಪೋಷಕರಿಗೆ ಉಡುಗೊರೆಯಾಗಿ ನೀಡಿರುವುದು ಎಂಜಿ ಹೆಕ್ಟರ್ (MG Hector) ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಂಪನಿಯು ದೇಶದಲ್ಲಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ. ಆದರೆ ಈ ನಿರ್ದಿಷ್ಟ ಕಾರು ಕಪ್ಪು ಬಣ್ಣವನ್ನು ಹೊಂದಿದ್ದು, ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಮಾದರಿ ಆಗಿರುವ ಸಾಧ್ಯತೆ ಇದೆ. ಆದರೆ ಇದರ ಬಗ್ಗೆ ಖಚಿತ ಮಾಹಿತಿ ಇಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, May 8, 2024, 19:33 [IST]
English summary
Woman surprise gift brings smiles to autorickshaw driver viral video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+