ಪ್ರಾಣಕ್ಕಿಂತ ಸೀರಿಯಲ್ ಹೆಚ್ಚಾ? ಸೀರಿಯಲ್ ನೋಡ್ಕೊಂಡು ಕಾರ್ ಓಡಿಸಿದ ಮಹಿಳೆ
ವಾಹನ ಚಲಾಯಿಸುವುದು ಕೆಲವರಿಗೆ ಬೇಸರದ ಕೆಲಸವಾಗಿರಬಹುದು, ಅದರಲ್ಲೂ ದಿನನಿತ್ಯದ ಪ್ರಯಾಣದಲ್ಲಿ ಬೆಂಗಳೂರಿನಂತಹ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವರು ಮ್ಯೂಸಿಕ್ ಕೇಳುತ್ತಾರೆ. ಇನ್ನು ಕೆಳವರು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುತ್ತಾರೆ ಅಥಾವ ಸಿನಿಮಾ, ಸೀರಿಯಲ್ ನೋಡ್ತ್ತಾರೆ. ಆದ್ರೆ ಡ್ರೈವಿಂಗ್ ಮಾಡುವ ಮ್ಯೂಸಿಕ್ ಹಾಕುತ್ತಾರೆ ಹೊರತು ಸಿನಿಮಾಗಳನ್ನು ವೀಕ್ಷಿಸುವುದಿಲ್ಲ.
ಆದರೆ ಮಹಿಳೆಯೊಬ್ಬಳು (Woman) ಟಿವಿ ಸೀರಿಯಲ್ ನೋಡ್ಕೊಂಡು ಕಾರ್ ಡ್ರೈವ್ ಮಾಡುತ್ತಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದೆ. ಬೈಕ್ ಸವಾರರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಮಹಿಳೆಯು ಇನ್ಫೋಟೈನ್‌ಮೆಂಟ್ ಸಿಸ್ಟಂನಲ್ಲಿ ಅಲ್ಲ ಮೊಬೈಲ್ ಹಿಡಿದುಕೊಂಡು ಸೀರಿಯಲ್ ನೋಡುತ್ತಿರುವಂತೆ ವೀಡಿಯೋದಲ್ಲಿ ಕಾಣುತ್ತಿದೆ.

ವಾಹನದ ECU ಅಥವಾ ಹ್ಯಾಂಡ್‌ಬ್ರೇಕ್‌ಗೆ ಸಂಪರ್ಕಗೊಂಡಿರುವ ಮೂಲ ಸಲಕರಣೆ ತಯಾರಕ (OEM) ಸಾಧನಗಳನ್ನು ವಾಹನವು ಚಲನೆಯಲ್ಲಿರುವಾಗ ವೀಡಿಯೊಗಳನ್ನು ಪ್ಲೇ ಮಾಡದಂತೆ ವಿನ್ಯಾಸಗೊಳಿಸಲಾಗಿದೆ. ಫೋನ್‌ನಲ್ಲಿ ಮಾತನಾಡುವುದು ಅಥವಾ ಮೇಸೆಜ್ ಕಳುಹಿಸುವುದು, ತಿನ್ನುವುದು ಮತ್ತು ಕುಡಿಯುವುದು, ಪ್ರಯಾಣಿಕರೊಂದಿಗೆ ಸಂಭಾಷಣೆ ಮಾಡುವುದು, ಸ್ಟಿರಿಯೊವನ್ನು ಸರಿಹೊಂದಿಸುವುದು ಅಥವಾ ಇತರ ಚಟುವಟಿಕೆ ನಡೆಸಿ ವಾಹನ ಚಲಾಯಿಸಿದಿರಿ.
ಚಾಲನೆ ಮಾಡುವಾಗ ಮೇಸೇಜ್ ಕಳುಹಿಸುವುದು ವಿಶೇಷವಾಗಿ ಅಪಾಯಕಾರಿ. ನೀವು ಮೇಸೇಜ್ ಕಳುಹಿಸಿದಾಗ ಅಥವಾ ಓದಿದಾಗ ಅಥವಾ ವೀಡಿಯೊವನ್ನು ವೀಕ್ಷಿಸಿದಾಗ, ನಿಮ್ಮ ಕಣ್ಣುಗಳು ಸುಮಾರು 5 ಸೆಕೆಂಡುಗಳ ಕಾಲ ರಸ್ತೆಯ ಮೇಲೆ ಇರುತ್ತವೆ. ಈ ಐದು ಸೆಕೆಂಡುಗಳಲ್ಲಿ ನೀವು ಸಾಕಷ್ಟು ದೂರವನ್ನು ಕ್ರಮಿಸಬಹುದು ಮತ್ತು ನಿಮ್ಮ ಮುಂದೆ ಯಾರಾದರೂ ಬ್ರೇಕ್ ಮಾಡಬಹುದು ಅಥವಾ ದಿಕ್ಕುಗಳನ್ನು ಬದಲಾಯಿಸಬಹುದು. ಇದು ಡಿಕ್ಕಿ ಹೊಡೆಯಕ್ಕೆ ಕಾರಣವಾಗಬಹುದು.

ಸುರಕ್ಷಿತವಾಗಿ ಚಾಲನೆ ಮಾಡಲು ಸಂಪೂರ್ಣ ಗಮನವನ್ನು ನೀಡುವುದು ಮುಖ್ಯವಾಗಿದೆ. ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಗೊಂದಲಕ್ಕೆ ಕಾರಣವಾಗಬಹುದು ಮತ್ತು ಅಪಘಾತಗಳ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ವಿಶೇಷವಾಗಿ ಭಾರತದ ಹೆಚ್ಚು ಜನಸಂದಣಿ ಇರುವ ರಸ್ತೆಗಳಲ್ಲಿ ಚಾಲನೆ ಮಾಡುವಾಗ ರಸ್ತೆಯ ಮೇಲೆ ಕೇಂದ್ರೀಕರಿಸಬೇಕು. ಟ್ರಾಫಿಕ್ ಪೋಲೀಸ್ ಡ್ರೈವಿಂಗ್ ಮಾಡುವಾಗ ವೀಡಿಯೊಗಳನ್ನು ನೋಡುತ್ತಿರುವ ಚಾಲಕನನ್ನು ಗುರುತಿಸಿದರೆ, ಅಪಾಯಕಾರಿ ಚಾಲನೆಗಾಗಿ ಚಲನ್ ನೀಡಬಹುದು.
ಭಾರತದಲ್ಲಿ ವಾಹನ ಓಡಿಸುವುಸುದು ಅಷ್ಟು ಸುಲಭವಲ್ಲ. ಸದಾ ಎಚ್ಚರವಹಿಸಿ ಡ್ರೈವ್ (Driving) ಮಾಡಬೇಲು. ಒಂದು ಕಡೆ ಅಡ್ಡಾದಿಡ್ಡಿ ಬರುವ ಇತರ ವಾಹನ ಸಾವರರು ಇನ್ನೋಂದು ಕಡೆ ಪ್ರಾಣಿಗಳು ಬಂದರೆ, ಮತ್ತೊಂದಡೆ ಜನರು ಆಗಾಗ ಅಡ್ಡ ಬರುತ್ತಿರುತ್ತಾರೆ. ಆ ಸಮಯದಲ್ಲಿ ಕೆಲವು ಜನರ ಬಿಪಿ ರೈಸ್ ಆಗುತ್ತದೆ. ಡ್ರೈವ್ ಮಾಡುವಾಗ ಹಲವರಿಗೆ ಹೆಚ್ಚು ಒತ್ತಡದ ಅನುಭವವಾಗುತ್ತದೆ.

ದೇಹ ಫಿಟ್ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಹೀಗಿದ್ದಾಗ ಅದೇ ರೀತಿಯ ವ್ಯಾಯಾಮ ಆಹಾರ ಶೈಲಿಯನ್ನು ಪಾಲಿಸಬೇಕು. ಆದರೆ ನೀವು ಒತ್ತಡದಿಂದ ಡ್ರೈವಿಂಗ್ ಮಾಡುವಾಗ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ದಿನನಿತ್ಯದ ದಿನಚರಿಯ ಮೇಲೆ ನೇರ ಪರಿಣಾಮ ಬೀರಬಹುದು. ನೀವು ಒಂದು ವೇಲೆ ಲಾಂಗ್ ಡ್ರೈವ್ ಹೋಗುವ ಮುನ್ನ ಕೆಲವು ನಿಮಿಷಗಳ ಕಾಲ ಧ್ಯಾನ ಮಾಡುವುದು ನಿಮಗೆ ಶಾಂತವಾಗಲು ಮತ್ತು ಚಾಲನೆಯಲ್ಲಿ ನಿಮ್ಮ ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಈ ಶಾಂತತೆಯು ಚಾಲಕನ ಆಯಾಸ ಸಹ ಕಡಿಮೆ ಮಾಡುತ್ತದೆ. ಅಲ್ಲದೇ ರಸ್ತೆಯಲ್ಲಿ ಇತರ ವಾಹನ ಅಥವಾ ಪ್ರಾಣಿಗಳು ಅಡ್ಡ ಬಂದರೆ ಕೋಪ ನಿಯಂತ್ರಿಸಲು ಸಹಾಯ ಮಾಡುತ್ತದೆ. ಉಸಿರಾಟದ ವ್ಯಾಯಾಮಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಅತ್ಯುತ್ತಮ ತಂತ್ರಗಳಲ್ಲಿ ಒಂದಾಗಿದೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಈ ವ್ಯಾಯಾಮವು ತುಂಬಾ ಉಪಯುಕ್ತವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications