ಚೆನ್ನೈನ ಈ ಮಹಿಳಾ ಬೈಕರ್ ಭಾರತದಲ್ಲಿ 9000 ಕಿ.ಮೀ ಪ್ರಯಾಣಿಸಿ, ಈಗ ಸೌದಿ ಪ್ರವಾಸಕ್ಕೆ ಪ್ಲಾನ್!
ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದ ಯಾವುದೇ ದೇಶವಾಗಲಿ ಬೈಕ್ ರೈಡ್ ಎಂದಾಕ್ಷಣ ನಮಗೆ ಯುವಕರೇ ನೆನಪಾಗುತ್ತಾರೆ. ಯುವತಿಯರು ಬೈಕ್ ರೈಡ್ ಮಾಡುವುದು ತೀರಾ ಕಡಿಮೆಯಾದ್ದರಿಂದ ಆ ಕೆಲವರೇ ಹೆಚ್ಚು ಜನಪ್ರಿಯವಾಗುತ್ತಾರೆ. ಇದೇ ಸಾಲಿಗೆ ಇದೀಗ ಮತ್ತೊಬ್ಬ ಯುವತಿ ಎಂಟ್ರಿ ಕೊಟ್ಟಿದ್ದಾರೆ. ಬೈಕ್‌ನಲ್ಲಿ ಸೌದಿ ಹೊರಡಲು ಸಜ್ಜಾಗಿಬಿಟ್ಟಿದ್ದಾರೆ.
ಚೆನ್ನೈನ ರೇಷ್ಮಾ ಕಾಸಿಮ್ ನೂರ್ ಅಲೆಮಾರಿ ಹಿಜಾಬಿ ರೈಡರ್ (Nomadic Hijabi Rider) ಎಂದೇ ಫೇಮಸ್ ಆಗಿದ್ದಾರೆ. ರೇಷ್ಮಾ ಈಗಾಗಲೇ ಭಾರತದಾದ್ಯಂತ 9000 ಕಿ.ಮೀ ಪ್ರಯಾಣಿಸಿದ್ದು, ಇದೀಗ ತಮ್ಮ ಬೈಕ್ ನಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ. ಈ ಹಿಂದೆ ಒಬ್ಬಂಟಿಯಾಗಿ ತಮ್ಮ ಬೈಕ್‌ನಲ್ಲಿ ಅದ್ಬುತ ಪ್ರವಾಸಗಳನ್ನು ಮಾಡಿ ಮುಗಿಸಿದ್ದಾರೆ.

ರೇಷ್ಮಾ ಅವರ ಉತ್ಸಾಹ, ಧೈರ್ಯವು ಇಡೀ ಭಾರತದ ಉದ್ದ ಮತ್ತು ಅಗಲವನ್ನು ಪತ್ತೆಹಚ್ಚುವುದಾಗಿದೆ. ಅವರ ಸೋಲೋ ರೈಡ್ ಕನಸು ಬೆಂಗಳೂರಿನಲ್ಲಿ ಪ್ರಾರಂಭವಾಗಿ, ಮಹಾರಾಷ್ಟ್ರದ ಸೌಂದರ್ಯವನ್ನು ವೀಕ್ಷಿಸಿ ಅಲ್ಲಿನ ಪುಣೆಯ ಜನನಿಬಿಡ ಬೀದಿಗಳಲ್ಲಿ ಸಂಚರಿಸಿದ್ದರು. ನಂತರ ದಮನ್ ಮತ್ತು ದಿಯುವಿನ ರಮಣೀಯ ತೀರವನ್ನು ಮುಟ್ಟಿದ್ದರು.
ನಂತರ ರೇಷ್ಮಾ ಗುಜರಾತ್‌ಗೆ ಕಾಲಿಟ್ಟರು, ಅಲ್ಲಿಂದ ಬಿಹಾರದ ಐತಿಹಾಸಿಕ ಬೀದಿಗಳಲ್ಲಿ ಸಂಚರಿಸಿ ಅಸ್ತವ್ಯಸ್ತವಾಗಿರುವ ತನ್ನ ಬೈಕನ್ನು ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋದರು. ಅಲ್ಲಿಗೆ ನಿಲ್ಲಲಿಲ್ಲ ಮತ್ತೆ ನೇಪಾಳದ ಮೋಡಿಮಾಡುವ ಭೂದೃಶ್ಯಗಳನ್ನು ಅನ್ವೇಷಿಸುತ್ತಾ ಹೋರಟರು. ಇದು ಕೇವಲ ಪ್ರಯಾಣವಲ್ಲ ರೇಷ್ಮಾ ಅವರ ಪ್ರಯಾಣವನ್ನು ಪ್ರತ್ಯೇಕಿಸುವ ಅನುಭವ ಎಂದು ಹೇಳಿಕೊಂಡಿದ್ದಾರೆ.

ಪ್ರಯಾಣದ ಉದ್ದಕ್ಕೂ ಅವರು ಡೀಲಕ್ಸ್ ಹೋಟೆಲ್‌ಗಳು ಅಥವಾ ರೆಸಾರ್ಟ್‌ಗಳಲ್ಲಿ ಉಳಿಯಲಿಲ್ಲ, ಡೇರೆಗಳು ಮತ್ತು ಸ್ಥಳೀಯರ ಮನೆಗಳಲ್ಲಿ ಆಶ್ರಯವನ್ನು ಪಡೆಯಲು ಪ್ರಯತ್ನಿಸಿದ್ದರಂತೆ. ಕೆಲವೊಮ್ಮೆ ಅವರು ಗುರುದ್ವಾರಗಳು ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ವಿಶ್ರಾಂತಿ ಪಡೆದ ಉದಾಹರಣೆಗಳು ಕೂಡ ಇವೆ. ಏನೇ ಹೇಳಿ ಒಬ್ಬಂಟಿಯಾಗಿ ಪ್ರಯಾಣಿಸುವ ಈಕೆಯ ಧೈರ್ಯವನ್ನು ಮೆಚ್ಚಲೇಬೇಕು.
ನನ್ನ ಪ್ರಯಾಣವು ಇತರ ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರವಾಗಿರಲು ಪ್ರೋತ್ಸಾಹಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿರುವ ಅವರು, ಇದೀಗ ಚೆನ್ನೈನಿಂದ ಸೌದಿ ಬೈಕ್ ರೈಡ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇಂತಹ ಸುಧೀರ್ಘ ರೈಡ್‌ಗಳನ್ನು ಕೈಗೊಳ್ಳಲು ಅತಿ ಕಡಿಮೆ ಯುವಕರು ಮುಂದಾಗುತ್ತಾರೆ. ಅಂತಹದರಲ್ಲಿ ಯುವತಿ ಸೌದಿ ರೈಡ್ ಕೈಗೊಂಡಿರುವುದು ಶ್ಲಾಘನೀಯ ಈಕೆಗೆ ಡ್ರೈವ್‌ಸ್ಪಾರ್ಕ್ ತಂಡದಿಂದ ಶುಭ ಹಾರೈಸುತ್ತಿದ್ದೇವೆ.

30 ದಿನಗಳು ಪ್ರಯಾಣಿಸಿ ಕತಾರ್ ತಲುಪಿದ್ದ ಕುಟುಂಬ: ನಮ್ಮ ಭಾರತದಲ್ಲೂ ಇತ್ತೀಚೆಗೆ ಫುಟ್‌ಬಾಲ್‌ಗೆ ಕ್ರೇಜ್ ಹೆಚ್ಚಾಗಿದೆ. ಅದರಲ್ಲೂ ಕೇರಳದಲ್ಲಿ ಅತಿಹೆಚ್ಚು ಫುಟ್‌ಬಾಲ್ ಅಭಿಮಾನಿಗಳಿದ್ದಾರೆ. ಯಾವ ಮಟ್ಟಿಗೆ ಕ್ರೇಜ್ ಇದೆ ಅಂದ್ರೆ, ಕಳೆದ ಫಿಫಾ ಫುಟ್‌ಬಾಲ್ ವಿಶ್ವಕಪ್ ಅನ್ನು ವೀಕ್ಷಿಸಲು ಭಾರತೀಯ ಕುಟುಂಬವೊಂದು ತಮ್ಮ ಟೊಯೊಟಾ ಇನ್ನೋವಾ ಕಾರಿನಲ್ಲಿ ಕೇರಳದಿಂದ ಸುಮಾರು 30 ದಿನಗಳ ಕಾಲ ಪ್ರಯಾಣಿಸಿ ಕತಾರ್‌ಗೆ ತಲುಪಿದ್ದರು.
ಹೀಗೆ ಭಾರತದಲ್ಲಿ ರೊಡ್ ಟ್ರಿಪ್‌ಗಳನ್ನು ಮಾಡುವವರು ಹಲವರಿದ್ದಾರೆ. ನಮ್ಮದು ಆಟೋಮೊಬೈಲ್ ಕೇಂದ್ರಿತ ವೆಬ್ ತಾಣವಾದ್ದರಿಂದ ಇಂತವರನ್ನು ಗುರ್ತಿಸಿ ಪ್ರೋತ್ಸಾಹಿಸಲಾಗುತ್ತದೆ. ನಿಮ್ಮಲ್ಲೂ ಇಂತಹ ಸುಧೀರ್ಘ ರೋಡ್ ಟ್ರಿಪ್‌ಗಳನ್ನು ಹೊರಡುವ ಹವ್ಯಾಸಿಗಳು ಇದ್ದರೆ ನಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬಹುದು. ನಿಮಗೂ ನಮ್ಮಿಂದ ಪ್ರೋತ್ಸಾಹ ದೊರೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Image Courtesy: reshunoor/Instagram


Click it and Unblock the Notifications