'ನಾರಿ ಮುನಿದರೆ ಮಾರಿ': ಬೈಕ್‌ ಸವಾರ ಗುದ್ದಲು ಬಂದ ಎಂದು ಮಹಿಳೆ ಹಿಂಗಾ ಮಾಡೋದು?

"ನಾರಿ ಮುನಿದರೆ ಮಾರಿ' ಎಂಬ ಗಾದೆ ಮಾತನ್ನು ನಾವೆಲ್ಲಾ ಕೇಳಿದ್ದೇವೆ. ಈ ಗಾದೆ ಮಾತು ಪ್ರಸಿದ್ಧಿ ಪಡೆಯಲು ಕಾರಣ ಮಹಿಳೆಯ ಕೋಪ. ಹೆಣ್ಣು ಎಷ್ಟು ಸಹನಾ ಮೂರ್ತಿಯೋ ಅಷ್ಟೇ ಉಗ್ರ ರೂಪಿಯೂ ಹೌದು. ಈ ಮಾತನ್ನು ಸತ್ಯ ಎಂದು ಮತ್ತೊಮ್ಮೆ ಒಪ್ಪಿಕೊಳ್ಳುವ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಹೌದು, ಬೈಕ್‌ ಸವಾರನೊಬ್ಬ ತನ್ನನ್ನು ಗುದ್ದಲು ಬಂದ ಎಂಬ ಕಾರಣ ನೀಡಿದ ಮಹಿಳೆಯೋರ್ವಳು ಆತನ ಬೈಕನ್ನು (KTM RC 390) ಹೊಡೆದು ಚಿಂದಿ ಮಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಹೌದು, ಬೈಕ್‌ ಸವಾರ ಅತಿ ವೇಗದಲ್ಲಿ ರಸ್ತೆಯಲ್ಲಿ ಬೈಕ್‌ ಚಲಾಯಿಸುತ್ತಿದ್ದಾಗ ಈ ಘಟನೆ ನಡೆದಿದೆ.

Women Breaks KTM RC 390 Bike

ನಾವೀಗಾಗಲೇ ಈ ರೀತಿಯ ಹಲವಾರು ಘಟನೆಗಳನ್ನು ನೊಡಿದ್ದೇವೆ. ಯುವ ಜನತೆ ತಮ್ಮ ಕೈಗೆ ಬೈಕ್ ಸಿಕ್ಕ ಕೂಡಲೇ ಎಗ್ಗಿಲ್ಲದಂತೆ ಓಡಿಸಿ ನಾಗರೀಕರಿಗೆ ಅಪಘಾತ ಮಾಡಿದ ಅಪಾಯಕಾರಿ ಘಟನೆಗಳು ನಡೆದಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಇಲ್ಲಿಯೂ ಸಹ ಇದೇ ರೀತಿಯ ಘಟನೆ ನಡೆದಿರುವುದಾಗಿ ನಾವು ವಿಡಿಯೋ ನೊಡಿ ಗ್ರಹಿಸಬಹುದಾಗಿದೆ.

ಘಟನೆಯು ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ತಿಳಿದು ಬಂದಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಮಹಿಳೆ ಬೈಕ್‌ ಅನ್ನು ಧ್ವಂಸ ಮಾಡಿದ್ದಾಳೆ. ವಿಡಿಯೋದಲ್ಲಿ ಕಾಣುವಂತೆ ಮಹಿಳೆಯೊಬ್ಬಳು ಕೆಟಿಎಂ ಆರ್‌ಸಿ ಬೈಕ್‌ನ ಸೈಡ್‌ ಫೇರಿಂಗನ್ನು ಕಿತ್ತೆಸೆಯುತ್ತಾ ತನ್ನ ಆಕ್ರೋಶವನ್ನು ಹೊರ ಹಾಕುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಮಹಿಳೆಯ ಪ್ರಕಾರ ಆಕೆಯು ಜಾಗರೂಕತೆಯಿಂದ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ದನವೊಂದು ಅಡ್ಡಲಾಗಿ ನಿಂತುಕೊಂಡಿತ್ತು. ಈ ಸಂಧರ್ಭದಲ್ಲಿ ಜೋರಾಗಿ ಬರುತ್ತಿದ್ದ ಕೆಟಿಎಂ ಆರ್‌ಸಿ 390 ಬೈಕ್‌ ಸವಾರ ಕೊಂಚದರಲ್ಲೇ ಆಕೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದ್ದಾನೆ. ನಂತರದಲ್ಲಿ ಬೈಕ್‌ ನಿಲ್ಲಿಸಿದ ಸವಾರ ಮಹಿಳೆ ಸುರಕ್ಷಿತವಾಗಿದ್ದಾಳೆಯೇ ಎಂದು ತಿಳಿಯಲು ಮರಳಿ ಬಂದಿದ್ದಾನೆ.

ಈ ಸಂಧರ್ಭದಲ್ಲಿ ಮಹಿಳೆಯು ಆತನ ಬೈಕ್‌ನ ಸೈಡ್‌ ಫೇರಿಂಗ್‌ ಅನ್ನು ಕಿತ್ತೆಸೆದು ಬೈಕ್‌ ಸವಾರನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಂತರ ವಿಡಿಯೋದಲ್ಲಿ ಆಕೆಯು ಆತನಿಗೆ ಬೈಯುತ್ತಾ ಇರುವುದನ್ನು ಕಾಣಬಹುದಾಗಿದೆ. ಬೈಕ್‌ ಸವಾರನ ಪ್ರಕಾರ ಮಹಿಳೆಯು ಹಿಂದೆ ಮುಂದೆ ನೋಡದೆ ರಸ್ತೆ ದಾಟುತ್ತಿದ್ದು ಆಕೆಯದ್ದೇ ತಪ್ಪು ಎಂದು ಹೇಳುತ್ತಿದ್ದಾನೆ.

ಏನೇ ಆದರೂ ಬೈಕ್‌ ಸವಾರನ ಬಳಿ ಶಾಂತಿಯಿಂದ ಮಾತನಾಡುವ ಬದಲು ಮಹಿಳೆಯು ಹಿಂಸಾತ್ಮಕ ರೀತಿಯಲ್ಲಿ ವರ್ತಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಇದೇ ಸಂಧರ್ಭದಲ್ಲಿ ಅದೇ ದಾರಿಯಲ್ಲಿ ಸಾಗುತ್ತಿರುವ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಧಾವಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 26, 2023, 13:15 [IST]
English summary
Women breaks ktm rc 390 bike with anger
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+