Metro Train ನಲ್ಲಿ ಎಲ್ಲರೆದುರು 2 ಯುವತಿಯರು ಮಾಡುವ ಕೆಲಸವೇ! ಸ್ವಲ್ಪವೂ ಕಂಟ್ರೋಲ್ ಇಲ್ಲವೇ?

ದೆಹಲಿ Metro Train ಗಳು ಪ್ರಯಾಣ ಸೌಕರ್ಯವೊಂದನ್ನು ಬಿಟ್ಟು ಬೇರೆಲ್ಲದ್ದಕ್ಕೂ ಫೆಮಸ್ ಆಗ್ತಿವೆ. ಮೊನ್ನೆಯಷ್ಟೇ ಪ್ರೇಮಿಗಳು ಮೆಟ್ರೋದಲ್ಲಿ ರೊಮ್ಯಾನ್ಸ್ ಮಾಡಿದ ವಿಡಿಯೋಗಳು ದೇಶಾದ್ಯಂತ ವೈರಲ್ ಆಗಿದ್ದವು. ಇವರು ಮಾಡುವ ಕೆಲಸಕ್ಕೆ ಸಾರ್ವಜನಿಕರಿಗೆ ನಾವು ಎಲ್ಲಿದ್ದೇವೆ ಎಂಬ ಪ್ರಶ್ನೆಯನ್ನು ಮೂಡಿಸುತ್ತಿದ್ದಾರೆ.

ಇಂತಹ ಕೃತ್ಯಗಳು ಹೆಚ್ಚಾಗುತ್ತಿದ್ದಂತೆ ದೆಹಲಿ ಸರ್ಕಾರ ಒಂದೆರಡು ದಿನಗಳಿಗೆ ಪೊಲೀಸರನ್ನು ರೈಲಿನ ಒಳಗೂ ನಿಯೋಜಿಸಲಾಗಿತ್ತು. ಅದಾದ ಬಳಿಕ ಪೊಲೀಸರು ಪತ್ತೆಯಿಲ್ಲ, ಮತ್ತೆ ಎಂದಿನಂತೆ ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಪ್ರಣಯ ಜೋಡಿಗಳು ದೆಹಲಿ ಮೆಟ್ರೋ ರೈಲುಗಳನ್ನು ಬೆಡ್ ರೂಮ್‌ಗಳನ್ನಾಗಿ ಮಾಡಿಕೊಂಡು ಮನಬಂದಂತೆ ವರ್ತಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Metro Train

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ತೀವ್ರವಾಗಿ ಹೊಡೆದಾಡಿದ ದೃಶ್ಯಗಳನ್ನು ನೋಡಬಹುದು. ಈ ಹಿಂದಿನ ಜೋಡಿ ದೆಹಲಿ ಮೆಟ್ರೋ ರೈಲುಗಳನ್ನು ಬೆಡ್‌ರೂಂ ಆಗಿ ಪರಿವರ್ತಿಸಿದರೆ, ಈ ಇಬ್ಬರು ರೈಲನ್ನು ಯುದ್ಧಭೂಮಿಯನ್ನಾಗಿ ಮಾಡಿದ್ದಾರೆ. ಈ ಇಬ್ಬರ ನಡುವಿನ ಗಲಾಟೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದ್ರೆ ಇಬ್ಬರೂ ತೀವ್ರ ವಾಗ್ವಾದಕ್ಕಿಳಿದಿರುವುದು ಕಂಡರೆ ಏನೋ ಗಟ್ಟಿ ಕಾರಣವಿದ್ದಂತೆ ಕಾಣುತ್ತದೆ.

ವಿಡಿಯೋದಲ್ಲಿನ ದೃಶ್ಯಗಳನ್ನು ಕಂಡರೆ ಇಬ್ಬರು ಯುವತಿಯರ ಮುಂದೆ ಯುವಕರ ಜಗಳ ಕೂಡ ಕಳಪೆ ಎನ್ನಿಸಿಬಿಡುತ್ತದೆ. ಪಕ್ಕಾ ಗಲ್ಲಿ ರೌಡಿಗಳಂತೆ ವರ್ತಿಸಿದ್ದು, ಒಬ್ಬಾಕೆ ಬಾಟಲಿ ಹಿಡಿದು ಬಂದರೆ ಮತ್ತೊಬ್ಬಾಕೆ ತನ್ನ ಶೂ ಕೈಗೆತ್ತಿಕೊಂಡು ಜಗಳಕ್ಕೆ ನಿಂತಿದ್ದಳು. ಇನ್ನು ವಿಡಿಯೋ ಮಾಡುತ್ತಿದ್ದ ಯುವತಿಯು ಜಗಳ ನಿಲ್ಲಿಸಲು ಕೇಳಿಕೊಳ್ಳುತ್ತಿದ್ದರೂ, ಇಬ್ಬರು ಮಾತ್ರ ಇದ್ಯಾವುದನ್ನೂ ಲೆಕ್ಕಿಸಿದೆ ಜಗಳಕ್ಕೆ ನಿಂತಿದ್ದರು.

ವಿಡಿಯೋದಲ್ಲಿ ಕಂಡುಬರುವ ಭೋಗಿಯಲ್ಲಿ ಸಂಪೂರ್ಣ ಮಹಿಳೆಯರೇ ಇದ್ದು, ಇಬ್ಬರ ಜಗಳವನ್ನು ನೋಡುತ್ತಾ ಕುಳಿತಿದ್ದರು. ಕೊನೆಗೆ ಒಬ್ಬ ಯುವತಿಯು ಮತ್ತೊಬ್ಬಾಕೆಗೆ ನೀರನ್ನು ಎರಚಿ ಜಗಳವನ್ನು ಮತ್ತಷ್ಟು ದೊಡ್ಡದಾಗಿಸಿದ್ದಾಳೆ. ಇಲ್ಲಿಗೆ ವಿಡಿಯೋ ಮುಕ್ತಾಯಗೊಂಡಿದೆ. ನಮಗೆ ತಿಳಿದಿರುವಂತೆ ವಿಡಿಯೋ ಮುಗಿದ ಬಳಿಕ ರೈಲಿನಲ್ಲಿ ದೊಡ್ಡ ಜಗಳ ಆಗಿರಬಹುದು ಎಂದೆನಿಸಿದೆ. ಹಾಗಾಗಿಯೇ ವಿಡಿಯೋ ಮುಕ್ತಾಯಗೊಂಡಿರಬಹುದು.

ಆದರು ಸಾರ್ವಜನಿಕ ರೈಲಿನಲ್ಲಿ ಸ್ವಲ್ಪವೂ ಕಂಟ್ರೋಲ್ ಇಲ್ಲದೇ ಹೀಗೆ ವ್ಯವಹರಿಸಿದರುವುದರ ಕುರಿತು ಕ್ರಮ ಕೈಗೊಳ್ಳಬೇಕಿದೆ. ದೇಶದಲ್ಲಿ ದೆಹಲಿ ಮೆಟ್ರೋ ಮಾತ್ರ ಹೀಗೆ ಯಾವುದೋ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇಂತಹ ಮುಜುಗರದ ಘಟನೆಗಳು ನಡೆಯುತ್ತಲೇ ಇದ್ದರೇ ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೂಡ ಅನೇಕ ಜನರು ಹಿಂದೇಟು ಹಾಕುವುದು ಖಚಿತ.

ಈ ಮೆಟ್ರೋ ರೈಲುಗಳ ಬದಲಿಗೆ ಸಾರ್ವಜನಿಕರು ತಮ್ಮ ಸ್ವಂತ ವಾಹನಗಳನ್ನು ಬಳಸುವ ಸಾಧ್ಯತೆ ಹೆಚ್ಚು. ಮೊನ್ನೆಯಷ್ಟೇ ವಿಶ್ವದ ಟಾಪ್ 10 ಕೆಟ್ಟ ಟ್ರಾಫಿಕ್ ನಗರಗಳಲ್ಲಿ ದೆಹಲಿ ಕೂಡ ಸ್ಥಾನ ಧಕ್ಕಿಸಿಕೊಂಡಿದೆ. ಇಂತಹ ಕೃತ್ಯಗಳು ಹೆಚ್ಚಾದರೆ ಸಾರ್ವಜನಿಕರು ತಮ್ಮ ವಾಹನಗಳೊಂದಿಗೆ ರಸ್ತೆಗಳಿಯುತ್ತಾರೆ. ಆಗ ದೆಹಲಿ ವಿಶ್ವದ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ಅಗ್ರ ನಗರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Tuesday, June 6, 2023, 15:58 [IST]
English summary
Women fight in delhi metro train abuses each other
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+