ನಿರ್ಭಯ ಸ್ಟಂಟ್ ಚಾಲಕನಿಂದ ಸೆಮಿ ಟ್ರಕ್ ಗಿನ್ನೆಸ್ ದಾಖಲೆಯ ಜಿಗಿತ
ದಾಖಲೆಗಳು ಸೃಷ್ಟಿಯಾಗುವುದೇ ಮುರಿಯಲು, ಯಾವ ದಾಖಲೆಗಳು ಶಾಶ್ವತವಲ್ಲ. ಬರೋಬ್ಬರಿ ಏಳು ವರ್ಷಗಳ ಹಿಂದೆ ಸೃಷ್ಟಿಯಾಗಿದ್ದ ಹಾಗೂ ವಾಹನೋದ್ಯಮದಲ್ಲಿ ಬಾರಿ ಸಂಚಲನವನ್ನುಂಟು ಮಾಡಿದ್ದ ಸೆಮಿ ಟ್ರಕ್ ದಾಖಲೆಯೊಂದು ಮುರಿದು ಬಿದ್ದಿದೆ.
ಕಳೆದ ಶುಕ್ರವಾರ 2015 ಜುಲೈ 24ರಂದು ಈ ಐತಿಹಾಸಿಕ ಕ್ಷಣಕ್ಕೆ ಅಮೆರಿಕದ ಮೊಂಟಾನಾ ಸಾಕ್ಷಿಯಾಗಿತ್ತು. ಅಷ್ಟಕ್ಕೂ ಏನಿದು ದಾಖಲೆ ? ಗಿನ್ನೆಸ್ ದಾಖಲೆ ಬಗೆಗಿನ ಆಸಕ್ತಿದಾಯಕ ಮಾಹಿತಿ ಹಾಗೂ ರೋಚಕ ವೀಡಿಯೋಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಹಿನ್ನೆಲೆ
2008ರಲ್ಲಿ ಅಮೆರಿಕದ ಗ್ರೇ ಗಾಡ್ ಫ್ರೆ ಎಂಬ ನಿರ್ಭಯ ಸ್ಟಂಟ್ ಚಾಲಕರೊಬ್ಬರು ಎಂಟಿವಿಯ 'ನಿಟ್ರೊ ಸರ್ಕಸ್' ಶೋದಲ್ಲಿ ಟ್ರಕ್ ಕ್ಯಾಬ್ ಅಥವಾ ಮಿನಿ ಟ್ರಕ್ ನಲ್ಲಿ ಅತಿ ದೂರದ ರಾಂಪ್ ಜಂಪ್ ಪ್ರಯತ್ನ ಮಾಡಿದ್ದರು.

ತಮ್ಮ ಮೊದಲ ಪ್ರಯತ್ನದಲ್ಲೇ 50 ಅಡಿ 6 ಇಂಚು (15.39 ಮೀಟರ್) ದೂರದ ವರೆಗೆ ಟ್ರಕ್ ಹಾರಿಸಿದ್ದ ಗ್ರೇ ಗಾಡ್ ಫ್ರೇ ಗಿನ್ನಿಸ್ ದಾಖಲೆ ಪುಟವನ್ನು ಸೇರಿಕೊಂಡಿದ್ದರು.

ಆದರೆ ಈ ದಾಖಲೆಯು ಕಳೆದ ಶುಕ್ರವಾರ (2015 ಜುಲೈ 24ರಂದು) ಇತಿಹಾಸವಾಗಿದೆ. ಅಮೆರಿಕದ ಮೊಂಟಾನಾದ ಬುಟ್ಟೆನಲ್ಲಿ ನಡೆದ ಈವಿಲ್ ನೆವಿಲ್ ಡೇಯ್ಸ್ ಈವೆಂಟ್ ನಲ್ಲಿ (Evil Knievel Days event) ಮತ್ತದೇ ಚಾಲಕ ತಮ್ಮದೇ ಹಳೆಯ ದಾಖಲೆಯನ್ನು ತಿರುಚಿ ಬರೆದಿದ್ದಾರೆ.

ಬರೋಬ್ಬರಿ 45,000 ಕೆ.ಜಿ ತೂಕದ ಸೆಮಿ ಟ್ರಕ್ ನಲ್ಲಿ ತಮ್ಮ ಸಾಧನೆ ಬರೆದಿರುವ ಗಾಡ್ ಫ್ರೆ ಅವರು ಈ ಬಾರಿ 160 ಅಡಿ ದೂರವನ್ನು ಜಿಗಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸ್ತುತ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಈ ದಾಖಲೆಗೆ ಮಾನ್ಯತೆ ನೀಡುವುದು ಬಹುತೇಕ ಖಚಿತವೆನಿಸಿದೆ. ಈ ಸಂಬಂಧ ನಿಖರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿರುವ ಚಾಲಕ ಗಾಡ್ ಫ್ರೆ, 140 ಅಡಿ ದೂರವನ್ನು ಹಾರುವುದು ನನ್ನ ಉದ್ದೇಶವಾಗಿತ್ತು. ಆದರೆ ಕೊನೆಯ 20 ಅಡಿಗಳು ನಿಜಕ್ಕೂ ಅನಿರೀಕ್ಷಿತವಾಗಿತ್ತು ಎಂದಿದ್ದಾರೆ.

ಒಟ್ಟಿನಲ್ಲಿ ಇಷ್ಟೊಂದು ದೊಡ್ಡ ವಾಹನ ಪ್ರೇಮಿಗಳ ಮುಂದೆ ಗಾಡ್ ಫ್ರೇ ಸಾಧನೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಈ ನೂತನ ದಾಖಲೆಯ ರೋಮಾಂಚಕ ವೀಡಿಯೋ ದರ್ಶನಕ್ಕಾಗಿ ಮುಂದುವರಿಯಿರಿ.
160 ಅಡಿ ಜಿಗಿದ ಸೆಮಿ ಟ್ರಕ್ ರೋಚಕ ವೀಡಿಯೋ ವೀಕ್ಷಿಸಿ


Click it and Unblock the Notifications








