ವಿಶ್ವ ದಾಖಲೆ ಮಾಡಿದ ಅಮೆರಿಕನ್ ಡ್ರೀಮ್ ಕಾರು: 30ಮೀ. ಉದ್ದ, ಹೆಲಿಪ್ಯಾಡ್ ಇದರ ವಿಶೇಷತೆ

ವಿಶ್ವದ ಅತಿ ಉದ್ದದ ಕಾರು ಎಂದು 1986ರಲ್ಲಿ ಗಿನ್ನೆಸ್ ವಿಶ್ವದಾಖಲೆ ಮಾಡಿ ಗಮನ ಸೆಳೆದಿದ್ದ "ದಿ ಅಮೇರಿಕನ್ ಡ್ರೀಮ್" ಕಾರನ್ನು ಇದೀಗ ಹೆಚ್ಚು ಪರಿಣಾಮಕಾರಿಯಾಗಿ ಕಾಣುವಂತೆ ಮರುವಿನ್ಯಾಸಗೊಳಿಸಿದ್ದು, ಕಾರಿನ ಉದ್ದ, ಐಷಾರಾಮಿ ವ್ಯವಸ್ಥೆ ಹಾಗೂ ಹಲವು ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಮತ್ತೊಮ್ಮೆ ವಿಶ್ವದಾಖಲೆ ಮಾಡಿದೆ.

ವಿಶ್ವ ದಾಖಲೆ ಮಾಡಿದ ಅಮೆರಿಕನ್ ಡ್ರೀಮ್ ಕಾರು: 30ಮೀ. ಉದ್ದ, ಹೆಲಿಪ್ಯಾಡ್ ಇದರ ವಿಶೇಷತೆ

ಮುಖ್ಯವಾಗಿ ಅಮೇರಿಕನ್ ಡ್ರೀಮ್ ತನ್ನ ಉದ್ದನೆಯ ಬಾಡಿ ಹೊಂದಿರುವುದರಿಂದಲೇ ಗಿನ್ನೆಸ್ ವಿಶ್ವದಾಖಲೆ ಮಾಡಿದೆ. ಕಾರು 30.54 ಮೀಟರ್ (100 ಅಡಿ, 1.50 ಇಂಚುಗಳು) ಇದೆ. ಇಷ್ಟು ದೊಡ್ಡ ಕಾರನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ ವಾಹನವನ್ನು ಈಗ ಮಾಲೀಕರು ಮತ್ತೆ ಸಂಗ್ರಹಿಸಿ ಅಭಿವೃದ್ಧಿಪಡಿಸಿದ್ದಾರೆ.

ವಿಶ್ವ ದಾಖಲೆ ಮಾಡಿದ ಅಮೆರಿಕನ್ ಡ್ರೀಮ್ ಕಾರು: 30ಮೀ. ಉದ್ದ, ಹೆಲಿಪ್ಯಾಡ್ ಇದರ ವಿಶೇಷತೆ

ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಟ್ವಿಟ್ಟರ್‌ ಪೇಜ್‌ನಲ್ಲಿ ವಿಶ್ವದ ಅತಿ ಉದ್ದದ ಕಾರಿನ ಚಿತ್ರಗಳನ್ನು ಪೋಸ್ಟ್‌ ಮಾಡಿದೆ. ಕಾರು ಈಜುಕೊಳ, ಹೆಲಿ ಪ್ಯಾಡ್ (ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ಲಾಟ್ ಫಾರ್ಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದೆ. ಕ್ಯಾಲಿಫೋರ್ನಿಯಾದ ಶ್ರೀಮಂತ ವ್ಯಕ್ತಿಯೊಬ್ಬರು ಕಾರಿನ ಮೊದಲ ಮಾಲೀಕರಾಗಿದ್ದರು.

ವಿಶ್ವ ದಾಖಲೆ ಮಾಡಿದ ಅಮೆರಿಕನ್ ಡ್ರೀಮ್ ಕಾರು: 30ಮೀ. ಉದ್ದ, ಹೆಲಿಪ್ಯಾಡ್ ಇದರ ವಿಶೇಷತೆ

ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಲು ಈ ಕಾರನ್ನು 1986ರಲ್ಲಿ ವಿನ್ಯಾಸಗೊಳಿಸಲಾಯಿತು. ಆ ಸಮಯದಲ್ಲಿ, ಅದು ಕೇವಲ 60 ಅಡಿ ಉದ್ದ, 26 ಚಕ್ರಗಳು, ಕಾರಿನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳಿಗೆ ಓಡುವ ಸಾಮರ್ಥ್ಯವನ್ನು ಒದಗಿಸಲು ವಿ8 ಎಂಜಿನ್ ಅನ್ನು ಬಳಸಲಾಗತ್ತು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಸೈಟ್‌ನ ಈ ಕಾರನ್ನು ಸಿನಿಮೀಯ ಪ್ರದರ್ಶನಕ್ಕಾಗಿ ಬಾಡಿಗೆಗೆ ನೀಡಲಾಗುತ್ತಿತ್ತು ಮತ್ತು ವಿವಿಧ ಚಲನಚಿತ್ರಗಳಲ್ಲಿ ಇದು ಕಾಣಿಸಿಕೊಂಡಿದೆ.

ವಿಶ್ವ ದಾಖಲೆ ಮಾಡಿದ ಅಮೆರಿಕನ್ ಡ್ರೀಮ್ ಕಾರು: 30ಮೀ. ಉದ್ದ, ಹೆಲಿಪ್ಯಾಡ್ ಇದರ ವಿಶೇಷತೆ

ಕಾರು ಬಹಳ ಜನಪ್ರಿಯವಾಗಿದ್ದರೂ, ಕ್ರಮೇಣ ಮಹತ್ವವನ್ನು ಕಳೆದುಕೊಂಡಿತು. ಅಷ್ಟು ಉದ್ದದ ವಾಹನವನ್ನು ಎಲ್ಲಿ ನಿಲ್ಲಿಸಬೇಕು ಎಂಬಂತಹ ಅಡೆತಡೆಗಳು ಮತ್ತು ಚಲನಚಿತ್ರಗಳಲ್ಲಿ ವಿಶಿಷ್ಟವಾದ ಕಾರಿಗೆ ಬೇಡಿಕೆ ಕಡಿಮೆಯಾಗುವುದು ಅದರ ಖ್ಯಾತಿ ಅಂತಿಮವಾಗಿ ಸಂಪೂರ್ಣವಾಗಿ ಕಡಿಮೆಯಾಗಲು ಕಾರಣವಾಯಿತು.

ವಿಶ್ವ ದಾಖಲೆ ಮಾಡಿದ ಅಮೆರಿಕನ್ ಡ್ರೀಮ್ ಕಾರು: 30ಮೀ. ಉದ್ದ, ಹೆಲಿಪ್ಯಾಡ್ ಇದರ ವಿಶೇಷತೆ

ನಂತರ, ನ್ಯೂಯಾರ್ಕ್‌ನ ನಸ್ಸೌ ಕೌಂಟಿಯಲ್ಲಿ ಮೈಕೆಲ್ ಮ್ಯಾನಿಂಗ್ ಮಾಲೀಕತ್ವದ ತಾಂತ್ರಿಕ ಬೋಧನಾ ವಸ್ತುಸಂಗ್ರಹಾಲಯವಾದ ಆಟೋಸಿಯಮ್ ಅದನ್ನು ಪುನಃ ಸ್ಥಾಪಿಸಲು ಮರಳಿ ಪಡೆಯಿತು. ಆ ನಂತರ ಮಾಡಿದ ಕೆಲವು ಕಸ್ಟಮೈಸೇಶನ್‌ಗಳಿಂದ ದಿ ಅಮೇರಿಕನ್ ಡ್ರೀಮ್‌ನ ಕಾರಿನ ಉದ್ದ 30.5 ಮೀಟರ್ ಆಯಿತು. ಇದು ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಆರು ಹೋಂಡಾ ಸಿಟಿ ಸೆಡಾನ್‌ಗಳ ಉದ್ದಕ್ಕೆ ಸಮನಾಗಿದೆ.

ವಿಶ್ವ ದಾಖಲೆ ಮಾಡಿದ ಅಮೆರಿಕನ್ ಡ್ರೀಮ್ ಕಾರು: 30ಮೀ. ಉದ್ದ, ಹೆಲಿಪ್ಯಾಡ್ ಇದರ ವಿಶೇಷತೆ

ಇನ್ನು ಈ ಕಾರಿನಲ್ಲಿ ಈಜುಕೊಳ ಮಾತ್ರವಲ್ಲದೆ ಮಿನಿ ಗಾಲ್ಟ್‌ ಕೋರ್ಟ್‌, ಜಗುಸಿ ಮತ್ತು ಬಾತ್ ಟಬ್ ಕೂಡ ಇದೆ. ಇದರ ಜೊತೆಗೆ 75ಕ್ಕೂ ಹೆಚ್ಚು ಮಂದಿ ಒಂದೇ ಸಮಯದಲ್ಲಿ ಅಮೆರಿಕದ ಡ್ರೀಮ್‌ನಲ್ಲಿ ಕುಳಿತು ಪ್ರಯಾಣಿಸಬಹುದು. ಆದ್ದರಿಂದ, ಇದನ್ನು ಮಿನಿ ಪಾರ್ಟಿ ಹಾಲ್ ಆಗಿಯೂ ಬಳಸಬಹುದು. ಈ ಕಾರಿನಲ್ಲಿ ಟಿವಿಗಳು, ರೆಫ್ರಿಜರೇಟರ್ ಮತ್ತು ದೂರವಾಣಿಗಳನ್ನು ಸಹ ಒಳಗೊಂಡಿದೆ.

ವಿಶ್ವ ದಾಖಲೆ ಮಾಡಿದ ಅಮೆರಿಕನ್ ಡ್ರೀಮ್ ಕಾರು: 30ಮೀ. ಉದ್ದ, ಹೆಲಿಪ್ಯಾಡ್ ಇದರ ವಿಶೇಷತೆ

ಇಷ್ಟು ವಿಶೇಷತೆಗಳನ್ನು ಹೊಂದಿರುವ ದಿ ಅಮೆರಿಕ್ ಡ್ರೀಮ್‌ ಕಾರನ್ನು ಹಾಲಿವುಡ್ ಸಿನಿಮಾ ನಿರ್ದೇಶಕರು ತಮ್ಮ ಚಿತ್ರಗಳಲ್ಲೂ ಬಳಸಿಕೊಂಡಿದ್ದಾರೆ. ಪ್ರಸ್ತುತ, ಕಾರನ್ನು 2,50,000 ಅಮೆರಿಕನ್ ಡಾಲರ್‌ ವೆಚ್ಚದಲ್ಲಿ ಮರು ಸಂಗ್ರಹಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ಕಾರಿನ ಮರುವಿನ್ಯಾಸ ಮಾಡಲಾಗಿತ್ತು. ಅಮರಿಕನ್ ಡ್ರೀಮ್‌ನ ಮಾಜಿ ಮಾಲೀಕ ಕಾರಿನ ಪುನಃಸ್ಥಾಪನೆಗೆ ಸಹಾಯ ಮಾಡಲು ಒಪ್ಪಿಕೊಂಡರು. ಮೂರು ವರ್ಷಗಳ ಶ್ರಮ ಮತ್ತು ಹಣವನ್ನು ಸುರಿದು ದಿ ಅಮೇರಿಕನ್ ಡ್ರೀಮ್ ಅನ್ನು ಅಭಿವೃದ್ಧಿಪಡಿಸಿದರು. ಇದೀಗ ಈ ಕಾರ್‌ ವಿಶ್ವದ ಮತ್ತೆಲ್ಲೂ ಇಲ್ಲದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡು ವಿಶ್ವದಾಖಲೆ ಮಾಡಿದೆ.

Most Read Articles

Kannada
English summary
World s longest car the american dream restored here is full
Story first published: Saturday, March 12, 2022, 18:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X