ವಿಶ್ವದ ಅತಿ ದೊಡ್ಡ ಬೈಕ್ - 'ಗನ್ ಬಸ್ 410'
ಬಹುಶ: ಆಕಾರದ ವಿಚಾರಕ್ಕೆ ಬಂದಾಗ ಇದು ವಿಶ್ವದ ಅತಿದೊಡ್ಡ ಬೈಕ್ ಎನಿಸಿಕೊಳ್ಳಲಾರದು. ಆದರೆ 'ಲೀಗಲ್' (ಕಾನೂನಾತ್ಮಕ) ಬೈಕ್ ವಿಚಾರಕ್ಕೆ ಬಂದಾಗ ಇದುವೇ ವಿಶ್ವದ ಅತಿ ದೊಡ್ಡ ಬೈಕೆಂಬ ಕೀರ್ತಿಗೆ ಪಾತ್ರವಾಗಿದೆ.
ಉತ್ಪಾದನಾ ವರ್ಷನ್ ಪಡೆದುಕೊಳ್ಳುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಬೈಕೆಂಬ ಹೆಮ್ಮೆಗೂ ಗನ್ ಬಸ್ 410 ಪಾತ್ರವಾಗುತ್ತಿದೆ. ಜರ್ಮನಿಯ ಲಿಯೋನಾರ್ಡ್ ಎಂಬ ಕಂಪನಿಯೊಂದು ಇದನ್ನು ತಯಾರಿಸಿದೆ.
ಹಾಗಿದ್ದರೆ ಆಕಾರದಲ್ಲಿ ಜಗತ್ತಿನ ಅತಿದೊಡ್ಡ ಬೈಕ್ ಯಾವುದು ಎಂಬುದನ್ನು ತಿಳಿಯಬೇಕೇ? ಇಲ್ಲೊಮ್ಮೆ ಕ್ಲಿಕ್ಕಿಸಿ ನೋಡಿ

ಅಧಿಕೃತವಾಗಿ ವಿಶ್ವದ ಅತ್ಯಂತ ದೊಡ್ಡ ಬೈಕೆಂಬ ಪಟ್ಟ ಮುಡಿಗೇರಿಸಿಕೊಂಡಿರುವ ಗನ್‌ಬಸ್ 410 ಮೋಟಾರು ಸೈಕಲನ್ನು ಕ್ಲೆಮನ್ಸ್ ಎಫ್ ಲಿಯೊನಾರ್ಡ್ ಎಂಬವರು ತಯಾರಿಸಿದ್ದಾರೆ.

ನಾವು ಹಿಂದೆ ನೋಡುತ್ತಿದ್ದಂತೆಯೇ ಕೇವಲ ದಾಖಲೆಗಳಿಗಾಗಿ ಮಾತ್ರ ಆಕಾರದಲ್ಲಿ ದೊಡ್ಡದಾದ ಬೈಕ್‌ಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಇವೆಲ್ಲದಕ್ಕಿಂತ ಹೊರತಾಗಿರುವ ಗನ್‌ಬಸ್ 410 ಬೈಕನ್ನು ಹಣವಿದ್ದಲ್ಲಿ ಯಾರಿಗೂ ಬೇಕಾದರೂ ಖರೀದಿಸಬಹುದು. ಅಷ್ಟೇ ಯಾಕೆ ರಸ್ತೆಗಳಲ್ಲಿ ಜಾಲಿ ರೈಡ್ ಕೂಡಾ ಹೊಡೆಯಬಹುದು.

ಆದರೆ ಗನ್‌ಬಸ್ 410 ಉತ್ಪನ್ನ ಮಾತ್ರ ಸೀಮಿತವಾಗಿರಲಿದೆ. ಇದು 11 ಫೀಟ್ ಉತ್ತ, 30 ಇಂಚು ಎತ್ತರದ ಸೀಟು ಹೊಂದಿದೆ. ಇನ್ನು ವಿನ್ಯಾಸದ ಬಗ್ಗೆಯಂತೂ ಎರಡು ಮಾತಿಲ್ಲ.

ತೂಕದ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ಬರೋಬ್ಬರಿ 650 ಕೆ.ಜಿ ತೂಕವಿದೆ. ತಯಾರಕರ ಪ್ರಕಾರ ಅತಿ ಹೆಚ್ಚು ನಿರ್ವಹಣಾ ಸಾಮರ್ಥ್ಯವುಳ್ಳ ಈ ಬೈಕಿಗೆ ಹೆಚ್ಚು ಸಂತುಲಿತವಾದ ವಿನ್ಯಾಸ ಕಲ್ಪಿಸಿಕೊಡಲಾಗಿದೆ.

ಗನ್‌ಬಸ್ 410 ಬೈಕಲ್ಲಿ ಫ್ಯೂಯಲ್ ಇಂಜೆಕ್ಟಡ್ 45 ಡಿಗ್ರಿ 410 ಕ್ಯೂಬಿಕ್ ಇಂಚು (ಹೆಸರಲ್ಲಿ ಸೂಚಿಸಿರುವಂತೆಯೇ) ಅಥವಾ 6728 ಸಿಸಿ ಯುನಿಟ್ ಎಂಜಿನ್ ಆಳವಡಿಸಲಾಗಿದ್ದು 350 ಅಶ್ವಶಕ್ತಿ (691 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ ಮೂರು ಸ್ಪೀಡ್ ಟ್ರಾನ್ಸ್‌ಮಿಷನ್ ಆಳವಡಿಸಿದೆ. ಜತೆಗೆ ರಿವರ್ಸ್ ಗೇರ್ ಕೂಡಾ ಲಗತ್ತಿಸಲಾಗಿದೆ.

ಸಹಜವಾಗಿಯೇ ಗನ್‌ಬಸ್ ಚಕ್ರಗಳು ಆಕ್ರಮಣಕಾರಿ ಎನಿಸಿಕೊಂಡಿದೆ. ಇದು ಮುಂಭಾಗದಲ್ಲಿ 38 ಇಂಚು ಹಾಗೂ ಹಿಂಭಾಗದಲ್ಲಿ 42 ಇಂಚು ಉದ್ದದ ಚಕ್ರಗಳನ್ನು ಹೊಂದಿರುತ್ತದೆ.

ಹಾಗಿದ್ದರೆ ಇನ್ಯಾಕೆ ತಡ ನೀವು ಜಗತ್ತಿನ ಅತಿದೊಡ್ಡ ಬೈಕ್ ಖರೀದಿಸುವ ಇರಾದೆಯಿದ್ದರೆ ಜಸ್ಟ್ 2.2 ಕೋಟಿ ರುಪಾಯಿ ಪಾವತಿಸಿ ಗನ್‌ಬಸ್ 410 ನಿಮ್ಮದಾಗಿಸಿ.


Click it and Unblock the Notifications








