ಗಿನ್ನೆಸ್ ದಾಖಲೆ; ಜಗತ್ತಿನ ಅತಿದೊಡ್ಡ ಬೈಕ್, ಅತಿ ಚಿಕ್ಕ ಕಾರು

'ಗಿನ್ನೆಸ್ ಬುಕ್' ಎಂಬುದು ಜಗತ್ತಿನ ಅತ್ಯಂತ ಜನಪ್ರಿಯ ದಾಖಲೆ ಪುಸ್ತಕ. ಅಷ್ಟಕ್ಕೂ ಈ ಪುಟ ಸೇರಿಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ ಸಾಧನೆಯ ಛಲವಿದ್ದರೆ ಎಂತದ್ದೇ ಗಿನ್ನೆಸ್ ದಾಖಲೆಯನ್ನು ಸಹ ಮುರಿಯಬಹುದು. ಇದಕ್ಕೊಂದು ಉದಾಹರಣೆಯೆಂಬಂತೆ ವಾಹನ ಜಗತ್ತು ಕೂಡಾ ಈ ಪಟ್ಟಿಗೆ ಸೇರ್ಪಡೆಯಾಗಿದೆ.

ನೂತನ ದಾಖಲೆ ಸ್ಥಾಪನೆಗೊಳ್ಳುವಂತೆಯೇ ಹಳೆ ದಾಖಲೆ ಅಳಿಸಿ ಹೋಗುವುದು ಸಾಮಾನ್ಯ. ಅಂದ ಹಾಗೆ 2014ನೇ ಸಾಲಿನ ವಿಶ್ವ ಗಿನ್ನೆಸ್ ದಾಖಲೆ ಪುಸ್ತಕ ಹೊರಬಂದಿದ್ದು ಇದರಲ್ಲಿ ಹಲವಾರು ನೂತನ ದಾಖಲೆಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಇದರಂತೆ ನಮ್ಮ ಈ ಲೇಖನದಲ್ಲಿ ಗಿನ್ನೆಸ್ ಪುಟ ಸೇರ್ಪಡೆಯಾಗಿರುವ ಜಗತ್ತಿನ ಅತಿದೊಡ್ಡ ಬೈಕ್ ಹಾಗೂ ಅತಿ ಚಿಕ್ಕ ಕಾರಿನ ಬಗ್ಗೆ ವಿವರಣೆ ನೀಡಲಿದ್ದೇವೆ. ಪ್ರಸ್ತುತ ಲೇಖನ ಕನ್ನಡ ನಾಡಿನ ವಾಹನ ಪ್ರಿಯರ ಗಮನ ಸೆಳೆಯುವ ವಿಶ್ವಾಸ ನಮ್ಮದು.

ದೈತ್ಯಾಕಾರ

ದೈತ್ಯಾಕಾರ

ಮೊದಲ ನೋಟದಲ್ಲೇ ಕ್ರೂಸರ್ ಬೈಕ್ ವಿನ್ಯಾಸ ಹೊಂದಿರುವ ಈ ಜಗತ್ತಿನ ಅತಿದೊಡ್ಡ ಬೈಕ್ ಹೆಸರಲ್ಲೇ ಸೂಚಿಸಿರುವಂತೆಯೇ ಬೃಹತ್ತಾದ ಆಕಾರ ಪಡೆದಿದೆ.

Fabio Reggiani

Fabio Reggiani

ಇಟಲಿ ವಿನ್ಯಾಸಗಾರ ಫ್ಯಾಬಿಯೊ ರೆಗಿಯಾನ್ (Fabio Reggiani) ಎಂಬವರು ಇದನ್ನು ತಯಾರಿಸಿದ್ದಾರೆ. ಅಷ್ಟಕ್ಕೂ ಫ್ಯಾಬಿಯೊ ಹಾಗೂ ಆತನ ಸಹಚರರು ಈ ದೈತ್ಯಾಕಾರಾದ (monoster) ಬೈಕ್ ತಯಾರಿಸುವುದಾಗಿ ಏಳು ತಿಂಗಳುಗಳ ಕಾಲ ಕಠಿಣ ಪರಿಶ್ರಮ ವಹಿಸಿದ್ದಾರಂತೆ.

ಶಕ್ತಿಶಾಲಿ ಎಂಜಿನ್

ಶಕ್ತಿಶಾಲಿ ಎಂಜಿನ್

ಅಂದ ಹಾಗೆ ಜಗತ್ತಿನ ಅತಿದೊಡ್ಡ ಬೈಕ್‌ನಲ್ಲಿ 5.7 ಲೀಟರ್ ವಿ8 ಎಂಜಿನ್ ಆಳವಡಿಸಲಾಗಿದ್ದು, ಇದು 280 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಸರ್ರನೆ ಚಲಿಸಲಿದೆ

ಸರ್ರನೆ ಚಲಿಸಲಿದೆ

ಹಾಗಿದ್ದರೂ ಈ ಬೈಕ್ ಚಲಿಸಬಹುದೇ ಎಂಬ ಗೊಂದಲವಿದ್ದರೇ ಅಂತಹ ಅನುಮಾನಗಳಿಗೆ ಯಾವುದೇ ಸ್ಥಾನ ಇಲ್ಲಿಲ್ಲ. ಯಾಕೆಂದರೆ ಇದು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಸುತ್ತಳತೆ

ಸುತ್ತಳತೆ

ಪ್ರಸ್ತುತ ಬೈಕ್ 16 ಫೀಟ್ 8.76 ಇಂಚು ಎತ್ತರ, 394.88 ಇಂಚು ಉದ್ದ ಹಾಗೂ 98 ಇಂಚು ಅಗಲವನ್ನು ಹೊಂದಿದೆ. ಅಂದ ಹಾಗೆ ಹಿಂದಿನ ದಾಖಲೆಯು ಹೊಂದಿದ್ದ ದೈತ್ಯಕಾರದ ಬೈಕ್ 11 ಫೀಟ್ 3 ಇಂಚು ಎತ್ತರ, 243.6 ಇಂಚು ಉದ್ದ ಹೊಂದಿತ್ತಲ್ಲದೆ ಪವರ್‌ಫುಲ್ 8.2 ಲೀಟರ್ ವಿ8 ಎಂಜಿನ್ ಕೂಡಾ ಲಗತ್ತಿಸಲಾಗಿತ್ತು.

ವಿಶ್ವದ ಅತಿದೊಡ್ಡ ಬೈಕಿನ ಆಕರ್ಷಕ ವೀಡಿಯೊ. ಮುಂದಿನ ಸ್ಲೈಡರ್ ಮುಖಾಂತರ ಜಗತ್ತಿನ ಅತಿ ಚಿಕ್ಕ ಕಾರಿನ ಮಾಹಿತಿ ಪಡೆಯಿರಿ...

Austin Coulson

Austin Coulson

ಮತ್ತೊಂದೆಡೆ ವೃತ್ತಿಯಲ್ಲಿ ಕಸ್ಟಮೈಸ್ಡ್ ಕಾರು ತಯಾರಕರಾಗಿರುವ ಆಸ್ಟನ್ ಕೌಲ್ಸನ್ (Austin Coulson) ಜಗತ್ತಿನ ಅತಿ ಚಿಕ್ಕ ಕಾರು ತಯಾರಿಸಿದ್ದಾರೆ.

ಸ್ಫೂರ್ತಿ

ಸ್ಫೂರ್ತಿ

ಅಮೆರಿಕದ ಪಿ-51 ಯುದ್ಧ ವಿಮಾನದಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿರುವ ಈ ಚೊಕ್ಕದಾದ ಕಾರು 'IM BIG' ಎಂಬ ನಂಬರ್ ಪ್ಲೇಟ್ ಕೂಡಾ ಹೊಂದಿದೆ.

ಲೀಗಲ್ ಕಾರು

ಲೀಗಲ್ ಕಾರು

ಕಾರಿಗೆ ಪರವಾನಗಿ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸುರಕ್ಷಾ ಗಾಜು, ಸಮರ್ಪಕವಾದ ವಿಂಡ್ ಶಿಲ್ಡ್, ಸೀಟು ಬೆಲ್ಟ್, ಇಂಡಿಕೇಟರ್ ಲ್ಯಾಂಪ್ ಮತ್ತು ಹಾರ್ನ್‌ಗಳಂತಹ ಅಗತ್ಯ ಸಾಮಾಗ್ರಿಗಳನ್ನು ಆಳವಡಿಸಿಕೊಳ್ಳಲಾಗಿದೆ.

ವೇಗತೆ

ವೇಗತೆ

ಏತನ್ಮಧ್ಯೆ ಜಗತ್ತಿನ ಅತಿ ಚಿಕ್ಕ ಕಾರು 63.5 ಸೆಂಟಿಮೀಟರ್ ಎತ್ತರ, 65.41 ಸೆಂ.ಮೀ. ಅಗಲ ಮತ್ತು 126.47 ಸೆಂ.ಮೀ. ಉದ್ದವನ್ನು ಹೊಂದಿದೆ. ಪ್ರಸ್ತುತ ಕಾರು ಪ್ರತಿ ಗಂಟೆಗೆ 40 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಪ್ರತಿ ಸಲವೂ ಗಿನ್ನೆಸ್ ದಾಖಲೆಯು ವಾಹನ ಪ್ರಿಯರ ಪಾಲಿಗೆ ತುಂಬಾ ತಮಾಷೆಯ ಜತೆಗೆ ಏನಾದರೊಂದು ಸಾಧಿಸಬೇಕೆಂಬ ಛಲ ಮೂಡಿಸುತ್ತದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Saturday, September 14, 2013, 6:03 [IST]
English summary
Guinness has come out with the 2014 edition of its world records book. Among the thousand of strange and fascinating records mentioned in the book are these two. One is the world's largest functional motorcycle and the other is the world's smallest road legal car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+