World's Expensive Number Plate: ಕೊನೆಗೂ ದರ್ಶನ ಕೊಟ್ಟ 122 ಕೋಟಿ ರೂ.ಗೆ ಹರಾಜಾಗಿದ್ದ ನಂಬರ್ ಪ್ಲೇಟ್
ಭಾರತ ಮಾತ್ರವಲ್ಲ ಇಡೀ ವಿಶ್ವದ ಹಲವು ದೇಶಗಳಲ್ಲಿ ಜನರು ತಮ್ಮ ಜನ್ಮ ದಿನಾಂಕಗಳು, ಅದೃಷ್ಟ ಸಂಖ್ಯೆಗಳು ಮತ್ತು ಜ್ಯೋತಿಷ್ಯ ಚಿಹ್ನೆಗಳನ್ನು ಹೊಂದಿಸುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ದುಬಾರಿ ನೋಂದಣಿ ಸಂಖ್ಯೆಗಳನ್ನು ಖರೀದಿಸುತ್ತಾರೆ. ಕೆಲವರಿಗೆ ಇದು ಪ್ರತಿಷ್ಟೆಯಾದ್ರೆ, ಇನ್ನೂ ಕೆಲವರಿಗೆ ಅದೃಷ್ಟದಂತೆ ಭಾವಿಸಲಾಗುತ್ತದೆ.
ಆದ್ರೆ ಒಂದು ವಾಹನಕ್ಕೆ ಹಾಕುವ ನಂಬರ್ ಪ್ಲೇಟ್ ಅನ್ನು ಬರೋಬ್ಬರಿ $15 ಮಿಲಿಯನ್ (122.59 ಕೋಟಿ ರೂ.)ಗೆ ಖರೀದಿಸುವುದು ಎಂದರೆ ನಂಬಲಸಾಧ್ಯವಾದರೂ ನಿಜ. ಇಂತಹ ನಂಬರ್ ಪ್ಲೇಟ್‌ಗಳನ್ನು ದುಬೈನಲ್ಲಿ ಹರಾಜು ಮಾಡಲಾಗುತ್ತದೆ. ಇತ್ತೀಚೆಗೆ ಈ ನಂಬರ್ ಪ್ಲೇಟ್ ಹರಾಜಾಗಿತ್ತು. ಇಂತಹ ನಂಬರ್ ಪ್ಲೇಟ್‌ಗಳನ್ನು ಕೊಳ್ಳುವ ಮಾಲೀಕರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುತ್ತದೆ.

ನಂಬರ್ ಪ್ಲೇಟ್ ಖರೀದಿಸಿದ ಮಾಲೀಕ ತಿಳಿಯದಿದ್ದರೂ ಆ ನಂಬರ್ ಪ್ಲೇಟ್ ಅನ್ನು ಯಾವ ಕಾರಿಗೆ ಹಾಕಲಾಗಿದೆ ಎಂಬುದು ಈಗ ಬಹಿರಂಗವಾಗಿದೆ. ಹೊಸ "D7" ನೋಂದಣಿ ಸಂಖ್ಯೆಯನ್ನು ಟೆಸ್ಲಾ ಮಾಡೆಲ್ X ನಲ್ಲಿ ಬಳಸುತ್ತಿರುವುದು ತಿಳಿದುಬಂದಿದೆ. ಈ ಕುರಿತ ವಿಡಿಯೋವು ಭಾರತದಲ್ಲಿ ಬ್ಯಾನ್ ಆಗಿರುವ ಟಿಕ್-ಟಾಕ್, ಟ್ವಿಟ್ಟರ್ ಸೇರಿದಂತೆ ಇತರ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
122.59 ಕೋಟಿ ರೂ. ಗೆ ಹರಾಜು: ಕೆಲವು ವಾರಗಳ ಹಿಂದೆ ದುಬೈನಲ್ಲಿ ನಡೆದ ಚಾರಿಟಿ ಕಾರ್ಯಕ್ರಮದಲ್ಲಿ 'P7' ನಂಬರ್ ಪ್ಲೇಟ್ ಅನ್ನು $15 ಮಿಲಿಯನ್ (55 ಮಿಲಿಯನ್ ದಿರ್ಹಮ್ಸ್) ಹರಾಜು ಮಾಡಲಾಗಿತ್ತು. ಈ ನಂಬರ್ ಪ್ಲೇಟ್‌ನ ಮಾಲೀಕರ ಬಗ್ಗೆ ಎಲ್ಲರೂ ಕುತೂಹಲದಿಂದ ಇದ್ದಾಗ, ದುಬೈನ ಬೀದಿಗಳಲ್ಲಿ ಸಂಚರಿಸುತ್ತಿದ್ದ ಕಪ್ಪು ಟೆಸ್ಲಾ ಮಾಡೆಲ್ ಎಕ್ಸ್‌ನಲ್ಲಿ ಇದು ಕಾಣಿಸಿಕೊಂಡಿದೆ.

'P7' ನಂಬರ್ ಪ್ಲೇಟ್ 2008 ರಲ್ಲಿ $14.3 ಮಿಲಿಯನ್‌ಗೆ ಹರಾಜಾಗಿದ್ದ ನಂಬರ್ ಪ್ಲೇಟ್ ಅನ್ನು ಮೀರಿಸಿ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ನೋಂದಣಿ ಫಲಕ ಸ್ಥಾನವನ್ನು ದಕ್ಕಿಸಿಕೊಂಡಿದೆ. ರಿಜಿಸ್ಟ್ರೇಶನ್ ಪ್ಲೇಟ್‌ನಲ್ಲಿ ಖರ್ಚು ಮಾಡಿದ ಹಣದಲ್ಲಿ ಸುಮಾರು 120 ಟೆಸ್ಲಾ ಮಾಡೆಲ್ ಎಕ್ಸ್ ಎಸ್‌ಯುವಿಗಳನ್ನು ಖರೀದಿಸಬಹುದಿತ್ತು. ನಂಬರ್ ಪ್ಲೇಟ್‌ಗೆ ಹೋಲಿಸಿಕೊಂಡರೆ ಈ ಕಾರಿನ ಬೆಲಯು ತುಂಬಾ ಚೀಪ್ ಎಂದೇ ಹೇಳಬಹುದು.
ಪ್ರಸ್ತುತ ಟೆಸ್ಲಾ ಮಾಡಲ್ ಎಕ್ಸ್ ಮಾದರಿ ಸುಮಾರು 2 ಕೋಟಿ ರೂ. ಬೆಲೆಯಿದೆ. ಹಾಗಾಗಿ ಈ ನಂಬರ್ ಪ್ಲೇಟ್ ಅನ್ನು ಈ ಕಾರಿಗೆ ಹಾಕಿರುವುದನ್ನು ಕಂಡು ಹಲವರು ಬೆರಗಾಗಿದ್ದಾರೆ. ವಿಶ್ವದ 'ಅತಿ ಹೆಚ್ಚು ಮೌಲ್ಯದ' ನಂಬರ್ ಪ್ಲೇಟ್ ಇನ್ನೂ ದುಬಾರಿಯದ್ದಾಗಿದೆ. ಅದರ ನೋಂದಣಿ ಫಲಕ "F1" ಆಗಿದ್ದು, ಇದು ಪ್ರಸ್ತುತ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಆಗಿದೆ.
ಇದನ್ನು ಆರಂಭದಲ್ಲಿ ಹರಾಜಿನಲ್ಲಿ 4 ಕೋಟಿ ರೂ.ಗೆ ಮಾರಾಟವಾಗಿ ಈಗ ರೂ. 132 ಕೋಟಿ ಮೌಲ್ಯವನ್ನು ಹೊಂದಿದೆ. ಇದು 1904 ರಿಂದ ಎಸ್ಸೆಕ್ಸ್ ಸಿಟಿ ಕೌನ್ಸಿಲ್ ಒಡೆತನದಲ್ಲಿದೆ, ಇದನ್ನು 2008 ರಲ್ಲಿ ಹರಾಜಿಗೆ ಹಾಕಲಾಯಿತು. ಬ್ರಿಟನ್ ಮೂಲದ ಕಾನ್ ಡಿಸೈನ್ಸ್‌ನ ಮಾಲೀಕರಾದ ಅಫ್ಜಲ್ ಖಾನ್ ಅವರು ತಮ್ಮ ಬುಗಾಟಿ ವೆಯ್ರಾನ್‌ಗಾಗಿ 132 ಕೋಟಿ ರೂ.ಗೆ ಇದನ್ನು ಖರೀದಿಸಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications