ನಾಣ್ಯ ಹಾಕಿದಾಗ ಹೊರ ಬರುವ ವಿಶ್ವದ ಮೊತ್ತ ಮೊದಲ ಕಾರು ವೆಂಡಿಂಗ್ ಮೆಷಿನ್
ನಾಣ್ಯ ಹಾಕಿದಾಗ ಪಾನೀಯ ಅಥವಾ ಚಾಕೊಲೇಟ್ ಹೊರ ಬರುವ ಕಾಯಿನ್ ವೆಂಡಿಂಗ್ ಮೆಷಿನ್ ಗಳ (ನಾಣ್ಯ ವಿತರಣಾ ಯಂತ್ರ) ಬಗ್ಗೆ ನೀವು ತಿಳಿದುಕೊಂಡಿರಬಹುದು. ಆದರೆ ನಾಣ್ಯ ಹಾಕಿದಾಗ ಕಾರು ಹೊರಬರುವ ವೆಂಡಿಂಗ್ ಮೆಷಿನ್ ಗಳನ್ನು ಯಾವತ್ತಾದರೂ ನೋಡಿರುವೀರಾ ? [ಕೊನೆಯಲ್ಲಿ ಕೊಟ್ಟಿರುವ ವಿಡಿಯೋ ನೋಡಲು ಮರೆಯದಿರಿ.]
Also Read: ಪ್ರಪಂಚದ ಅತಿದೊಡ್ಡ ರೊಬೊಟಿಕ್ ಪಾರ್ಕಿಂಗ್ ಟವರ್
ಇದುವೇ ಜಗತ್ತಿನ ಮೊತ್ತ ಮೊದಲ ಕಾರು ವೆಂಡಿಂಗ್ ಮೆಷಿನ್. ಕಾರ್ವಾನಾ (Carvana) ಇದನ್ನು ತಯಾರಿಸಿದ್ದು, ಸಂಪೂರ್ಣ ಆಟೋಮ್ಯಾಟಿಕ್ ಆಗಿ ಕೆಲಸ ಮಾಡುತ್ತದೆ. ಪ್ರಸ್ತುತ ವೆಂಡಿಂಗ್ ಮೆಷಿನ್ ವಿಶ್ವದ ಮೊತ್ತ ಮೊದಲ ಕಾರು ವೆಂಡಿಂಗ್ ಮೆಷಿನ್ ಎಂಬ ಖ್ಯಾತಿಗೂ ಪಾತ್ರವಾಗಿದೆ. ಆದರೆ ಇದರಿಂದ ಸಂಸ್ಥೆಗಾಗುವ ಲಾಭವಾದರೂ ಏನು ? ಉತ್ತರಕ್ಕಾಗಿ ಚಿತ್ರ ಪುಟದತ್ತ ಮುಂದುವರಿಯಿರಿ.

ಕಾರ್ವಾನಾ ಎಂಬ ಶೋ ರೂಂ ಇಂತಹದೊಂದು ವಿನೂತನ ಅನುಭವವನ್ನು ಹೊಸತಾಗಿ ಕಾರು ಖರೀದಿಸುವ ಗ್ರಾಹಕರಿಗಾಗಿ ಮುಂದಿಟ್ಟಿದೆ. ಹಾಗೊಂದು ವೇಳೆ ನೀವು ಕಾರು ಖರೀದಿಸಲು ಬಯಸುವುದಾದ್ದಲ್ಲಿ ಮೊದಲು ಎಲ್ಲ ದುಡ್ಡನ್ನು ಪಾವತಿಸಬೇಕಾಗುತ್ತದೆ.

ಬಳಿಕ ಅಲ್ಲಿನ ಶೋ ರೂಂ ಅಧಿಕೃತರು ವಿಶೇಷವಾದ ನಾಣ್ಯವೊಂದನ್ನು ನೀಡಲಿದ್ದಾರೆ. ಇದನ್ನು ವೆಂಡಿಂಗ್ ಮೆಷಿನ್ ನಲ್ಲಿ ಹಾಕಿದಾಗ ಹೊಚ್ಚ ಹೊಸ ಕಾರು ಹೊರ ಬರಲಿದೆ.

ಐದು ಮಹಡಿಯ ಇಲ್ಲಿನ ಕಾರು ವೆಂಡಿಂಗ್ ಶೋ ರೂಂನಲ್ಲಿ 20ರಷ್ಟು ಕಾರುಗಳ ಸಂಗ್ರಹವಿದೆ.

ಅಂದ ಹಾಗೆ ಅಮೆರಿಕದ Nashville Tennessee ಎಂಬ ನಗರದಲ್ಲಿ ಈ ಶೋ ರೂಂ ಸ್ಥಿತಗೊಂಡಿದೆ. ಇದರೊಂದಿಗೆ ವಿನೂತನ ಮಾರಾಟ ನೀತಿಯನ್ನು ಕಾರ್ವನಾ ಶೋ ರೂಂ ಅನುಸರಿಸುತ್ತಿದೆ.

ಈ ವಿಶಿಷ್ಟ ಅನುಭವವವನ್ನು ನಿಮ್ಮ ಸ್ನೇಹಿತರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದಾಗಿದ್ದು, ಇದಕ್ಕಾಗಿ ವೈಯಕ್ತಿಕಗೊಳಿಸಿದ ವಿಡಿಯೋವನ್ನು ನಿಮಗೆ ನೀಡಲಾಗುತ್ತಿದೆ.
ರೋಚಕ ವಿಡಿಯೋ ವೀಕ್ಷಿಸಿ


Click it and Unblock the Notifications








