ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

ಅದು ವಿಶ್ವದಲ್ಲೇ ಮೊದಲಬಾರಿಗೆ ಆವಿಷ್ಕಾರಗೊಂಡಿದ್ದ ಬೈಕ್ ಮಾದರಿ. ಆದ್ರೆ ಕಾಲಾಂತರದಲ್ಲಿ ಆದ ತಂತ್ರಜ್ಞಾನಗಳ ಅಭಿವೃದ್ಧಿಯಿಂದಾಗಿ ಕೆಲವೇ ದಿನಗಳಲ್ಲಿ ಅದು ಇಲ್ಲವಾಗಿ ಹೋಯ್ತು. ಆದ್ರೆ ಸಿಕ್ಕ ಒಂದೇ ಛಾಯಾಚಿತ್ರದಿಂದ ಇಂದು ಮರುಸೃಷ್ಠಿ ಮಾಡಲಾಗಿದೆ.

By Praveen

ವಿಶ್ವದ ಮೊಟ್ಟ ಮೊದಲ ಬೈಕ್ ಯಾವುದು ಎಂದರೆ ಕೇಳಿದ್ರೆ ನಮಗೇಲ್ಲಾ ಹೇಳಲು ಕಷ್ಟ ಆಗಬಹುದು. ಆದ್ರೆ ಅದು ಸತ್ಯ, ಯಾಕೇಂದ್ರೆ 1885ರಲ್ಲಿ ಮೊದಲ ಬಾರಿಗೆ ಆವಿಷ್ಕಾರಗೊಂಡಿದ್ದ "ಗಾಟ್ಲೀಬ್ ಡೈಮ್ಲರ್" ಎಂಬ ಬೈಕ್, ಕಾಲಾಂತರದಲ್ಲಿ ಆದ ತಂತ್ರಜ್ಞಾನಗಳ ಅಭಿವೃದ್ಧಿಗಳಿಂದಾಗಿ ಮೂಲೆ ಗುಂಪಾಗಿ ಹೋಯ್ತು. ಆದ್ರೆ ಇದು ಇತ್ತು ಎಂಬುವುದಕ್ಕೆ ಸಿಕ್ಕ ಒಂದೇ ಛಾಯಾಚಿತ್ರದ ಮೇಲೆ ಇದೀಗ ಆ ಬೈಕ್ ಅನ್ನು ಮರುಸೃಷ್ಠಿ ಮಾಡಲಾಗಿದೆ.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

1885ರಲ್ಲಿ ಮೊಟ್ಟಮೊದಲ ಬಾರಿಗೆ ಆವಿಷ್ಕಾರಗೊಂಡಿದ್ದ "ಗಾಟ್ಲೀಬ್ ಡೈಮ್ಲರ್" ಮೋಟಾರ್‌ ಸೈಕಲ್, ರೇಯ್ತ್ವಜೆನ್ ಎಂಬಾತನಿಂದ ನಿರ್ಮಾಣಗೊಂಡಿತ್ತು. ಆದ್ರೆ ಜನಪ್ರಿಯತೆ ಪಡೆಯದ ಹಿನ್ನೆಲೆ ಅದು ಕೆಲವೇ ದಿನಗಳಲ್ಲಿ ಮೂಲೆಗುಂಪಾಗಿ ಹೋಯ್ತು.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

ಆದ್ರೆ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಅಮೆರಿಕ ರಾಯ್ ಮತ್ತು ರೇ ಎಂಬ ಸಹೋದರರು ತಮ್ಮ ಸ್ನೇಹಿತರ ಜೊಡೆಗೂಡಿ "ಗಾಟ್ಲೀಬ್ ಡೈಮ್ಲರ್" ಬೈಕ್ ಮಾದರಿಗೆ ಹೊಸ ರೂಪ ನೀಡಿದ್ದಾರೆ. ಕೇವಲ ಛಾಯಾಚಿತ್ರದ ಅಂಶಗಳನ್ನೇ ಪರಿಗಣಿಸಿ ಅಪರೂಪದ ಬೈಕ್ ಮಾದರಿಯನ್ನು ಪುನರ್‌ ಸೃಷ್ಠಿಸಿದ್ದಾರೆ.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

ಇನ್ನು "ಗಾಟ್ಲೀಬ್ ಡೈಮ್ಲರ್" ಮಾದರಿ ಕುರಿತು ಈ ಮೊದಲ ಸಾಕಷ್ಟು ಸಂಶೋಧನೆ ಮಾಡಿದ್ದ ರಾಯ್ ಮತ್ತು ರೇ ಸಹೋದರರು, ಅಮೆರಿಕ ಮೋಟಾರ್ ಸೈಕಲಿಸ್ಟ್ ಅಸೋಸಿಯೆಷನ್‌‌ ಜೊತೆಗೂಡಿ ಇನ್ನಷ್ಟು ಮಾಹಿತಿ ಸಂಗ್ರಹಿಸಿದ್ದರು. ತದನಂತರ ಸಿಕ್ಕ ಸಣ್ಣಪುಟ್ಟ ಕುರುಹುಗಳಿಂದಲೇ ಒಂದು ನಿಖರವಾದ ಛಾಯಾಚಿತ್ರ ರೂಪಿಸಿ ಬೈಕ್ ತಯಾರಿ ಮಾಡಿದ್ದಾರೆ.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

ಸುಮಾರು 8 ತಿಂಗಳ ಕಾಲ ಇದಕ್ಕಾಗಿಯೇ ಹಗಲು-ರಾತ್ರಿ ಶ್ರಮವಹಿಸಿರುವ ರಾಯ್ ಮತ್ತು ರೇ, ತಮ್ಮ ಸ್ವಂತ ಗ್ಯಾರೇಜ್‌ನಲ್ಲಿ ಈ ಬೈಕ್ ಮಾದರಿಯನ್ನು ನಿರ್ಮಿಸಿದ್ದಾರೆ. ಸಿಕ್ಕಿದ್ದ ಕೇವಲ 2 ಇಂಚಿನ ಫೋಟೋ ಬಳಸಿಕೊಂಡು ಇಂತದೊಂದು ಅಪರೂಪದ ಸಾಧನೆ ಮಾಡಿದ್ದಾರೆ.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

ವಿಶ್ವದ ಮೊದಲ ಬೈಕ್ ವಿನ್ಯಾಸವನ್ನು ನೋಡಿದರೇ ಎಂತರಿಗೂ ಅಚ್ಚರಿ ಆಗದೇ ಇರಲಾರದು. ಹತ್ತಾರು ವಿಶೇಷ ವಿನ್ಯಾಸಗಳನ್ನು ಹೊಂದಿದ್ದು, ಅಂದಿನ ಕಾಲದಲ್ಲೇ ನಡೆದ ಇಂತಹ ಆವಿಷ್ಕಾರಗಳು ಮುಂದೊಂದು ದಿನ ಹೊಸ ಹೊಸ ಆವಿಷ್ಕಾರಗಳಿಗೆ ಕಾರಣವಾಯ್ತು.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

ಸದ್ಯ ರಾಯ್ ಮತ್ತು ರೇ ಸಹೋದರರು ನಿರ್ಮಿಸಿರುವ ಮರುಸೃಷ್ಠಿ ಬೈಕ್ ಅನ್ನು ಓಹಿಯೋದ ರಾಷ್ಛ್ರೀಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಜೊತೆಗೆ ಬೈಕ್ ನಿರ್ಮಾಣದ ಮಹತ್ತರ ಅಂಶಗಳ ಬಗೆಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

ಮರುಸೃಷ್ಠಿಗೊಂಡಿರುವ "ಗಾಟ್ಲೀಬ್ ಡೈಮ್ಲರ್" ಮೋಟಾರ್ ಸೈಕಲ್ ಸಂಪೂರ್ಣ ಕಟ್ಟಿಗೆಯಿಂದಲೇ ನಿರ್ಮಾಣಗೊಂಡದೆ. ಜೊತೆಗೆ ಹಿಂಬದಿಯ ಚಕ್ರಗಳಿಗಾಗಿ ಮೆಟಾಲಿಕ್ ಬಳಕೆ ಮಾಡಲಾಗಿದೆ. ಜೊತೆಗೆ ವಿಶೇಷ ರೀತಿಯ ಲೆದರ್ ಸೀಟ್ ಹೊದಿಸಲಾಗಿದ್ದು, ನೋಡಲು ಅತ್ಯಾರ್ಷಕವಾಗಿದೆ.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

ಇಂತಹ ಅಪರೂಪದ ಬೈಕ್ ಮರುವಿನ್ಯಾಸ ಹಿಂದೆ ರಾಯ್ ಮತ್ತು ರೇ ಜೊತೆ ಹತ್ತಾರು ಬೈಕ್ ವಿನ್ಯಾಸಕರು ಕೈಜೊಡಿಸಿದ್ದಾರೆ. ಇದರಿಂದಾಗಿಯೇ ಅಂದುಕೊಂಡ ಅವಧಿಯಲ್ಲಿ ಬೈಕ್ ಮರುಸೃಷ್ಠಿಯಾಗಿದ್ದು, ಇದರಲ್ಲಿ ಜಿಮ್ ಕಾರ್ಲಟನ್ ಅವರ ಪಾತ್ರ ಕೂಡಾ ದೊಡ್ಡದು.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

"ಗಾಟ್ಲೀಬ್ ಡೈಮ್ಲರ್" ಬೈಕ್ ಮರುಸೃಷ್ಠಿ ಕುರಿತು ಮಾಹಿತಿ ಹಂಚಿಕೊಂಡಿರುವ ರಾಯ್ ಮತ್ತು ರೇ ಸಹೋದರರು, "ಇಂತಹ ಅಪರೂಪದ ಬೈಕ್ ಮರುಸೃಷ್ಠಿ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ, ಇದಕ್ಕಾಗಿ ನಮ್ಮ ಸ್ನೇಹಿತರ ಜೊತೆಗೂಡಿ ಈ ಅಪರೂಪ ಬೈಕ್ ಮಾದರಿಗೆ ಮರಜೀವ ಕೊಟ್ಟಿದ್ದೇವೆ" ಎನ್ನುತ್ತಾರೆ.

ಮರುಸೃಷ್ಠಿಗೊಂಡ ವಿಶ್ವದ ಮೊಟ್ಟಮೊದಲ ಬೈಕ್ ಮಾದರಿ- ಈ ಸ್ಪೆಷಲ್ ವರದಿ ನಿಮಗಾಗಿ..!!

ಒಟ್ಟಿನಲ್ಲಿ ತಂತ್ರಜ್ಞಾನದ ನಾಗಲೋಟದಲ್ಲಿ ಮೂಲೆಗುಂಪಾಗಿದ್ದ "ಗಾಟ್ಲೀಬ್ ಡೈಮ್ಲರ್" ಬೈಕಿಗೆ ರಾಯ್ ಮತ್ತು ರೇ ಸಹೋದರರು ಮರುಜೀವ ನೀಡಿದ್ದು, ವಿಶ್ವದ ಮೊದಲ ಬೈಕ್ ಹೀಗೆ ಇತ್ತು ಎಂಬುದನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ. ಹೀಗಾಗಿ ಅವರ ಈ ಅಪರೂಪದ ಸಾಧನೆ ಶ್ಲಾಘನೀಯವಾದದು.

ಸೂಪರ್ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಒಂದಾಗಿರುವ ಕವಾಸಕಿ ನಿಂಜಾ H2 ಕಾರ್ಬನ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
Two brothers, along with their friends, recreated the world’s first motorcycle 30 years ago, using only a photograph.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X