ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಮಧ್ಯದಲ್ಲಿ ಎಲ್ಲೂ ನಿಲ್ಲಿಸದೇ ಅತಿ ದೂರದವರೆಗೆ ಪ್ರಯಾಣ ಮಾಡಿದ ಪ್ಯಾಸೆಂಜರ್ ವಿಮಾನವು ಭಾನುವಾರ ಬೆಳಿಗ್ಗೆ ಆಸ್ಟ್ರೇಲಿಯಾದ ಸಿಡ್ನಿ ನಗರಕ್ಕೆ ಬಂದಿಳಿದಿದೆ. 19 ಗಂಟೆಗಳಿಗಿಂತ ಹೆಚ್ಚು ಕಾಲ ಆಕಾಶದಲ್ಲಿದ್ದ ಈ ವಿಮಾನವು ಅಮೇರಿಕಾದ ನ್ಯೂಯಾರ್ಕ್‍‍ನಿಂದ ಸಿಡ್ನಿ ನಗರಕ್ಕೆ ಬಂದಿಳಿದಿದೆ.

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಈ ಹಾರಾಟವು ಒಂದು ಮೈಲಿಗಲ್ಲಾಗಿದ್ದು, ಈ ಯಶಸ್ಸಿಗೆ ಕ್ವಾಂಟಾಸ್ ಸಂಸ್ಥೆಯು ಹರ್ಷ ವ್ಯಕ್ತಪಡಿಸಿದೆ. ಕ್ವಾಂಟಾಸ್ ವಿಮಾನವಾದ ಕ್ಯೂ‍ಎಫ್7879 ನ್ಯೂಯಾರ್ಕ್‍‍ನಿಂದ ಸಿಡ್ನಿಗೆ ನೇರವಾಗಿ ಹಾರಲು 19 ಗಂಟೆ 16 ನಿಮಿಷಗಳನ್ನು ತೆಗೆದುಕೊಂಡಿದೆ.

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ನ್ಯಾಶನಲ್ ಫ್ಲಾಗ್ ಕ್ಯಾರಿಯರ್ ಕೆಲವು ವಿಮಾನಗಳನ್ನು ಪರೀಕ್ಷಿಸುತ್ತಿದ್ದು, ಅದರಲ್ಲಿ ಲಂಡನ್‍‍ನಿಂದ ಸಿಡ್ನಿವರೆಗಿನ ಮಾರ್ಗವು ಸೇರಿದೆ. ಈ ವಿಮಾನವು ದೂರ ಪ್ರಯಾಣದ ಅಮೇರಿಕಾ-ಬ್ರಿಟನ್ ಹಾಗೂ ಆಸ್ಟ್ರೇಲಿಯಾದ ನಡುವೆ ರೆಗ್ಯುಲರ್ ಸೇವೆಗಳನ್ನು ನೀಡುತ್ತಿದೆ.

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಈ ದೂರ ಪ್ರಯಾಣದಲ್ಲಿ ಕೇವಲ 49 ಜನರು ಪ್ರಯಾಣಿಸಿದ್ದರು. ಇದರಿಂದಾಗಿ ಈ ಬೋಯಿಂಗ್ 7879 ವಿಮಾನದ ತೂಕವು ಕಡಿಮೆಯಾಗಿ, ವಿಮಾನವು ಮಧ್ಯದಲ್ಲಿ ಇಂಧನವನ್ನು ತುಂಬಿಸಿಕೊಳ್ಳದೇ 16,000 ಕಿ.ಮೀ(9,500 ಮೈಲಿ) ಚಲಿಸಲು ಸಾಧ್ಯವಾಯಿತು.

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಕ್ವಾಂಟಾಸ್ ಸಿ‍ಇ‍ಒ ಅಲಾನ್ ಜಾಯ್ಸ್ ಈ ಪ್ರಯಾಣವು ಏರ್‍‍ಲೈನ್ ಸಂಸ್ಥೆಗೆ ಹಾಗೂ ಜಗತ್ತಿಗೆ ಐತಿಹಾಸಿಕವೆಂದು ಕರೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಮೊದಲ ಮೂರು ವಿಮಾನ ಪರೀಕ್ಷೆಗಳ ಪೈಕಿ ಇದು ಮೊದಲ ಪರೀಕ್ಷೆಯಾಗಿದೆ.19 ಗಂಟೆಗಳ ಸುದೀರ್ಘ ಪ್ರಯಾಣದ ನಂತರ ನಾವು ಯಶಸ್ಸನ್ನು ಸಾಧಿಸಿದ್ದೇವೆ ಎಂದು ಹೇಳಿದ್ದಾರೆ.

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಕ್ವಾಂಟಾಸ್ ಕಂಪನಿಯು ಬಹು ವಿಧದ ಟೈಂ ಜೋನ್‍‍ಗಳನ್ನು ದಾಟಿದ ಪ್ರಯಾಣಿಕರ ಆರೋಗ್ಯ ತಪಾಸಣೆಗಾಗಿ ಆಸ್ಟ್ರೇಲಿಯಾದ ಎರಡು ಯುನಿವರ್ಸಿಟಿಗಳ ಜೊತೆಗೆ ಸಹಭಾಗಿತ್ವವನ್ನು ಮಾಡಿಕೊಂಡಿತ್ತು. ಪ್ರಯಾಣಿಕರು ವಿಮಾನವನ್ನು ಹತ್ತಿದ್ದ ನಂತರ ಅವರ ಬಳಿಯಿದ್ದ ವಾಚ್‍‍ಗಳಲ್ಲಿನ ಸಮಯವನ್ನು ಸಿಡ್ನಿ ಟೈಂ ಜೋನಿಗೆ ತಕ್ಕಂತೆ ಬದಲಿಸಲಾಯಿತು.

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಪ್ರಯಾಣಿಕರನ್ನು ಎಚ್ಚರದಿಂದಿರುವಂತೆ ಮಾಡಲು ವಿಮಾನದ ಒಳಗೆ ಬೆಳಕಿನ ವ್ಯವಸ್ಥೆ ಮಾಡಿ, ಪ್ರಯಾಣಿಕರಿಗೆ ವ್ಯಾಯಾಮ ಮಾಡಿಸಲಾಯಿತು. ಜೊತೆಗೆ ಕಾಫಿ ಹಾಗೂ ಮಸಾಲೆ ಭರಿತ ಊಟವನ್ನು ನೀಡಲಾಯಿತು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಇದಾದ ಆರು ಗಂಟೆಗಳ ನಂತರ, ಪ್ರಯಾಣಿಕರಿಗೆ ಹೆಚ್ಚಿನ ಕಾರ್ಬೊ ಹೈಡ್ರೆಟ್ ಊಟವನ್ನು ನೀಡಿ, ಬೆಳಕನ್ನು ಕಡಿಮೆ ಮಾಡಿ, ರಾತ್ರಿಯಿಡಿ ನಿದ್ರಿಸುವಂತೆ ಮಾಡಲಾಯಿತು. ಈ ಪ್ರಯೋಗವನ್ನು ನಡೆಸಿದ ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕ ಪ್ರೊಫೆಸರ್ ಮೇರಿ ಕ್ಯಾರೊಲ್ ಎಎಫ್‌ಪಿಯೊಂದಿಗೆ ಮಾತನಾಡಿ, ಈ ಹೊಸ ವಿಧಾನದಿಂದ ಪ್ರಯಾಣಿಕರು ಸಂಪೂರ್ಣವಾಗಿ ಆಯಾಸಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಪ್ರಯಾಣಿಕರು ಇಂದು ಸಾಮಾನ್ಯ ದಿನ ಹಾಗೂ ಸಾಮಾನ್ಯ ರಾತ್ರಿಯನ್ನು ನೋಡಿದ್ದಾರೆಂದು ಭಾವಿಸುತ್ತೇನೆ ಎಂದು ಕ್ಯಾರೊಲ್‍‍ರವರು ಹೇಳಿದರು. ಜೊತೆಗೆ ಈ ಸುದೀರ್ಘ ಅವಧಿಯ ಪ್ರಯಾಣದ ಬಗೆಗೆ ಆಶ್ಚರ್ಯವನ್ನು ವ್ಯಕ್ತಪಡಿಸಿದರು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ವಿಮಾನಯಾನ ಸಂಸ್ಥೆಗಳು ತಾವು ನೀಡುವ ಆಹಾರ, ಪಾನೀಯ, ವ್ಯಾಯಾಮ ಹಾಗೂ ಬೆಳಕನ್ನು ತಾವು ತಲುಪುವ ಸ್ಥಳದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಇದೊಂದು ಪ್ರಯೋಗವಾಗಿದೆ ಎಂದೂ ಸಹ ಕ್ಯಾರೊಲ್‍‍ರವರು ಹೇಳಿದರು.

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ವಿಮಾನದಲ್ಲಿದ್ದ ನಾಲ್ವರು ಪೈಲಟ್‌ಗಳು ಎಚ್ಚರದಿಂದಿರುವ ಸಾಧನಗಳನ್ನು ಧರಿಸಿದ್ದರು. ಕ್ವಾಂಟಾಸ್ ಪೈಲಟ್‌ಗಳನ್ನು ಪ್ರತಿನಿಧಿಸುವ ಆಸ್ಟ್ರೇಲಿಯಾ ಮತ್ತು ಅಂತರರಾಷ್ಟ್ರೀಯ ಪೈಲಟ್‌ಗಳ ಸಂಘವು, ಈ ರೀತಿಯಾಗಿ ದೀರ್ಘ ಅವಧಿಯವರೆಗೆ ಕಾರ್ಯ ನಿರ್ವಹಿಸುವ ಪೈಲಟ್‍‍ಗಳಿಗೆ ತಮ್ಮ ಪರ್ಫಾಮೆನ್ಸ್ ಕಾಪಾಡಿಕೊಳ್ಳಲು ವಿಶ್ರಾಂತಿ ಸಿಗುತ್ತದೆಯೇ ಎಂದು ಕಳವಳ ವ್ಯಕ್ತಪಡಿಸಿದೆ.

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಈ ಸಂಘವು ಸಿಬ್ಬಂದಿಗಳ ಮೇಲಿನ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಕರೆ ನೀಡಿದೆ. ವಿಮಾನಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಪರೀಕ್ಷಾ ಪ್ರಯಾಣವು ಮಾಡುತ್ತಿರುವ ಕೆಲಸದ ಒಂದು ಮುಖವಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಇದು ಪ್ರಪಂಚದ ಮೊದಲ ನಾನ್ ಸ್ಟಾಪ್ ವಿಮಾನ..!

ಕ್ವಾಂಟಾಸ್ ಕಳೆದ ವರ್ಷ ಪಶ್ಚಿಮ ಆಸ್ಟ್ರೇಲಿಯಾದಲ್ಲಿರುವ ಪರ್ತ್‍‍ನಿಂದ ಲಂಡನ್‍ ನಗರಕ್ಕೆ 17 ಗಂಟೆಗಳ ಅವಧಿಯ ನೇರವಾದ ಹಾಗೂ ಪ್ರಪಂಚದ ಉದ್ದವಾದ ಪ್ಯಾಸೆಂಜರ್ ವಿಮಾನಯಾಸ ಸೇವೆಯನ್ನು ಆರಂಭಿಸಿತ್ತು.

Most Read Articles

Kannada
English summary
World's Longest Flight Arrives In Sydney From New York - Read in Kannada
Story first published: Monday, October 21, 2019, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more