ವಿಶ್ವದ ಕೆಟ್ಟ ಟ್ರಾಫಿಕ್ ನಗರಗಳ ಪಟ್ಟಿ ಬಿಡುಗಡೆ... ಟಾಪ್ 10 ನಲ್ಲಿ ಭಾರತದ 3 ಸಿಟಿಗಳು, ಬೆಂಗಳೂರಿಗಿಲ್ಲ ಸ್ಥಾನ
ಭಾರತದಲ್ಲಿ ವಾಹನ ಉದ್ಯಮ ಹೆಮ್ಮರವಾಗಿ ಬೆಳೆದು ನಿಂತಿದೆ. ಮನೆಗೆ ಎರಡು, ಮೂರು ವಾಹನಗಳನ್ನು ಹೊಂದಿರುವವರು ದೇಶದಲ್ಲಿ ಹಲವರಿದ್ದಾರೆ. ನಿತ್ಯ ಟ್ರಾಫಿಕ್ ಜಾಮ್ ನಮ್ಮ ನಗರಗಳಲ್ಲಿಯೇ ಅತಿ ಹೆಚ್ಚು ಎಂದುಕೊಳ್ಳುವವರು ಈ ವರದಿಯನ್ನು ಒಮ್ಮೆ ನೋಡಿ. ಟಾಪ್ 10 ನಲ್ಲಿ ಭಾರತದ 3 ಸಿಟಿಗಳು ದರ್ಶನ ಕೊಟ್ಟಿವೆ.
ನಮ್ಮ ಬೆಂಗಳೂರಿನ ನಿವಾಸಿಗಳು ಇಲ್ಲಿನ ಟ್ರಾಫಿಕ್ ಅನ್ನು ನಿತ್ಯ ನೋಡಿ ಕಂಡಿತ ಇದೇ ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಹೇಳುಬಿಡುತ್ತೀರಿ. ಆದ್ರೆ ಅದು ತಪ್ಪು, ನೈಜೀರಿಯಾದ ನಗರವೊಂದು ಅತಿ ಹೆಚ್ಚು ಟ್ರಾಫಿಕ್ ಅನ್ನು ಹೊಂದಿರುವ ಸಿಟಿಯಾಗಿ ಹೊರಹೊಮ್ಮಿದೆ. ವರದಿಯ ಪ್ರಕಾರ, ಲಾಗೋಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ನಮ್ಮಲ್ಲಿನ ಹಲವರಿಗೆ ತಿಳಿಯದ ಸಂಗತಿಯೆಂದರೆ ದೇಶದಲ್ಲಿ ಬೆಂಗಳುರನ್ನು ಮೀರಿಸುವ ಟ್ರಾಫಿಕ್ ಸಿಟಿಗಳು ತುಂಬಾ ಇವೆ. ಅವುಗಳಲ್ಲಿ ಮೊದಲನೆಯದು ದೆಹಲಿ, ಇಲ್ಲಿನ ಟ್ರಾಫಿಕ್ ಜಾಮ್ ಅನ್ನು ಒಮ್ಮೆ ನೋಡಿದ್ರೆ ಎಂಥವರೂ ಬೆಂಗಳೂರೇ ಪರವಾಗಿಲ್ಲ ಎನ್ನುತ್ತೀರ. ಹಾಗೆಯೇ ಕೊಲ್ಕತ್ತಾ ಹಾಗೂ ಮುಂಬೈ ನಗರಗಳು ಕೂಡ ಟ್ರಾಫಿಕ್ ವಿಷಯದಲ್ಲಿ ವಿಶ್ವ ಮಟ್ಟದಲ್ಲಿ ಈಗ ಗುರ್ತಿಸಿಕೊಂಡಿವೆ.
ಇತ್ತೀಚೆಗೆ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಟ್ವಿಟರ್‌ನಲ್ಲಿ ವಿಶ್ವದಾದ್ಯಂತದ ಕೆಟ್ಟ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕೆಟ್ಟ ಸಂಚಾರ ವ್ಯವಸ್ಥೆಯಿಂದ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ನಗರಗಳಲ್ಲಿ ಲಾಸ್ ಏಂಜಲೀಸ್, ಸ್ಯಾನ್ ಜೋಸ್, ಕೊಲಂಬೊ, ಢಾಕಾ, ದೆಹಲಿ, ಶಾರ್ಜಾ, ಕೋಲ್ಕತ್ತಾ, ಗ್ವಾಟೆಮಾಲಾ ಸಿಟಿ ಮತ್ತು ಮುಂಬೈನಂತಹ ನಗರಗಳು ಸೇರಿವೆ.

ಮೊದಲೇ ಹೇಳಿದಂತೆ ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ನ ವರದಿಯ ಪ್ರಕಾರ, ಲಾಗೋಸ್ ವಿಶ್ವದ ಅತ್ಯಂತ ಕೆಟ್ಟ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೇ, ಕ್ಯಾಲಿಫೋರ್ನಿಯಾ ರಾಜ್ಯದ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್ ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ಎರಡನೇ ಸಿಟಿಯಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಶ್ರೀಲಂಕಾ ರಾಜಧಾನಿ ಕೊಲಂಬೊ ನಾಲ್ಕನೇ ಸ್ಥಾನದಲ್ಲಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾ ಐದನೇ ಸ್ಥಾನ ಹಾಗೂ ಭಾರತದ ರಾಜಧಾನಿ ದೆಹಲಿ ಆರನೇ ಸ್ಥಾನದಲ್ಲಿದೆ. ಕೋಲ್ಕತ್ತಾ ಎಂಟನೇ ಸ್ಥಾನ ಮತ್ತು ಮುಂಬೈ ಹತ್ತನೇ ಸ್ಥಾನದಲ್ಲಿದೆ. ಸುದೀರ್ಘ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿರುವ ಬೆಂಗಳೂರು ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದೆ.
ಪ್ರಪಂಚದಾದ್ಯಂತದ ನಗರಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗುತ್ತಿದೆ, ಪ್ರಾಥಮಿಕವಾಗಿ ನಡೆಯುತ್ತಿರುವ ನಗರೀಕರಣ ಮತ್ತು ಜನಸಂಖ್ಯೆಯ ಬೆಳವಣಿಗೆಯ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಹಲವು ಪಟ್ಟು ಹೆಚ್ಚಾಗಲಿದೆ ಎಂದು ವರದಿಗಳು ಹೇಳುತ್ತಿವೆ. ಇತ್ತೀಚಿನ ವರದಿಯ ಪ್ರಕಾರ, ಹಳೆಯ ಮತ್ತು ವೇಗವಾಗಿ ಬೆಳೆಯುತ್ತಿರುವ ನಗರಗಳು ಅತ್ಯಧಿಕ ಮಟ್ಟದ ಸಂಚಾರ ದಟ್ಟಣೆಯನ್ನು ಹೊಂದಿವೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications