ಜಗತ್ತಿನ 10 ಅಗ್ರಗಣ್ಯ ಕಾರು ಸಂಗ್ರಹಗಾರರು
ಹಳೆಯ ಸಾಂಪ್ರದಾಯಿಕ ಕಾರುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಶ್ರೀಮಂತರ ಹವ್ಯಾಸವಾಗಿರುತ್ತದೆ. ಇದು ಸಾಮಾಜದಲ್ಲಿ ಇಂತವರ ಘನತೆಯನ್ನು ಎತ್ತಿ ಹಿಡಿಯಲು ನೆರವಾಗುತ್ತದೆ. ಎಷ್ಟೇ ದುಡ್ಡು ತೆತ್ತಾದರೂ ಹಳೆಯ ವರ್ಣಮಯ ಕ್ಲಾಸಿಕ್ ಕಾರುಗಳನ್ನು ತಮ್ಮದಾಗಿಸಿಕೊಳ್ಳಲು ಬಯಸುತ್ತಾರೆ.
ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?
ಇನ್ನು ಕೆಲವರು ಐಷಾರಾಮಿ ಕಾರುಗಳತ್ತ ಮಾರು ಹೋಗಿರುತ್ತಾರೆ. ಹೀಗೆ ಪಟ್ಟಿ ಮಾಡುತ್ತಾ ತೆರಳಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು, ಏಷ್ಯಾ, ಅಮೆರಿಕ, ಯುರೋಪ್ ಸೇರಿದಂತೆ ಜಗತ್ತಿನದ್ಯಾಂತ 10 ಅಗ್ರಗಣ್ಯ ಕಾರು ಸಂಗ್ರಹಗಾರರನ್ನು ಪಟ್ಟಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ಬಗ್ಗೆ ಇಂದಿನ ಲೇಖನದಲ್ಲಿ ಚರ್ಚೆ ಮಾಡಲಿದ್ದೇವೆ. ಇದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ..
ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

10. ವೈಕ್ಲೆಫ್ ಜೀನ್ ಆಂಡ್ ನಿಕ್ ಮಾಸನ್
ಜಗತ್ತಿನ ಅಗ್ರಗಣ್ಯ ವ್ಯಕ್ತಿಗಳಲ್ಲಿ ಗುರುತಿಸಿಕೊಂಡಿರುವ ವೈಕ್ಲೆಫ್ ಜೀನ್ ಮತ್ತು ಖ್ಯಾತ ಡ್ರಮರ್ ಜೀನ್ ಮಾಸನ್ ಬಳಿ 40ಕ್ಕೂ ಹೆಚ್ಚು ಕಾರುಗಳಿವೆ. ಈ ಪೈಕಿ ವೈಕ್ಲೆಫ್ ಬಳಿ ಮೆಕ್‌ಲ್ಯಾರೆನ್ ಎಫ್1, ಫೆರಾರಿ, ಇಟಲಿಯ ಪಗಾನಿ ಜೋಂಡಾ, ಕ್ಯಾಡಿಲಿಕ್, ಹಮ್ವಿ ಮತ್ತು ಕಸ್ಟಮೈಸ್ಡ್ ಹಮ್ಮರ್‌ಗಳಂತಹ ಕಾರುಗಳಿವೆ. ಇನ್ನೊಂದೆಡೆ ನಿಕ್ ಮಾಸನ್, ಇಟಲಿಯ ಸೂಪರ್ ಸ್ಪೋರ್ಟ್ಸ್ ಕಾರುಗಳತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಅಲ್ಲದೆ ಬುಗಾಟಿ ಟಿ35, ಆಸ್ಟನ್ ಮಾರ್ಟಿನ್ ಎಲ್‌ಎಂ18, ಫೆರಾರಿ 213 ಟಿ3, ಮೆಕ್‌ಲ್ಯಾರೆನ್ ಎಫ್1, ಪೋರ್ಷೆ 962 ಮತ್ತು ಜನಪ್ರಿಯ 23ಎಂ ಪೌಂಡ್ ಫೆರಾರಿ 250 ಜಿಟಿಒ ಕಾರುಗಳನ್ನು ಹೊಂದಿದ್ದಾರೆ.

9. ರಾಲ್ಫ್ ಲೌರೆನ್
ಫ್ಯಾಷನ್ ದೊರೆ ಹಾಗೂ ಸ್ಟೈಲಿಷ್ ವ್ಯಕಿ ರಾಲ್ಫ್ ಲೌರೆಡ್, ಪೊಲೊ ಡಿಸೈನ್‌ಗಳಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಕೆಂಪು ಬಣ್ಣದ ಕಾರುಗಳನ್ನು ಖರೀದಿಸುವುದು ಇವರ ಹವ್ಯಾಸ. ಫೆರಾರಿ, ಆಲ್ಫಾ ರೊಮಿಯೊ ರೊಡ್‌ಸ್ಟರ್, ಬುಗಾಟಿ, ಮರ್ಸಿಡಿಸ್, ಬೆಂಟ್ಲಿ, ಜಾಗ್ವಾರ್, ಮೆಕ್‌ಲ್ಯಾರೆನ್ ಎಫ್1 ಸೇರಿದಂತೆ 60ಕ್ಕೂ ಹೆಚ್ಚು ಕಾರುಗಳಿವೆ. ಈ ಪೈಕಿ ಶೇಕಡಾ 98ರಷ್ಟು ಕಾರುಗಳು ಕೆಂಪು ಬಣ್ಣದ್ದಾಗಿದೆ.

8. ಜೇ ಕೇ
ಜೇ ಕೇ ಎಂಬ ಹೆಸರಿನಿಂದಲೇ ಚಿರಪರಿಚಿತವಾಗಿರುವ ಜಾಸನ್ ಲೂವಿಸ್ ಚೀಥಂ ಕಾರುಗಳತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಇವರ ಬಳಿ ಪೋರ್ಷೆ, ಫೆರಾರಿ, ರೋಲ್ಸ್ ರಾಯ್ಸ್, ಲಂಬೊರ್ಗಿನಿ, ಮರ್ಸಿಡಿಸ್ ಬುಗಾಟಿ, ಮಸೆರಿಟಿ, ಷೆವರ್ಷೆ, ಆಸ್ಟನ್ ಮಾರ್ಟಿನ್ ಸೇರಿದಂತೆ 68ಕ್ಕೂ ಹೆಚ್ಚು ಕಾರುಗಳಿವೆ.

7. ಡಿಮಿಟ್ರಿ ಲೋಮಕೋವ್
ರಷ್ಯಾದತ್ತ ತೆರಳಿದರೆ ಡಿಮಿಟ್ರಿ ಕಾರು ಸಂಗ್ರಹಾಲಯವೊಂದನ್ನೇ ತಮ್ಮ ಬಳಿ ಹೊಂದಿದ್ದಾರೆ. ಇವರ ಬಳಿಕ 120ಕ್ಕೂ ಹೆಚ್ಚು ಹಳೆಯ ಕಾರುಗಳಿವೆ. ಇದರಲ್ಲಿ 1914ನೇ ಸಾಲಿನ ಪ್ಯೂಜೆಟ್ ಮೋಟಾರುಸೈಕಲ್, 1977 ಚಾಕ್ಯ ಜಿಎಝಡ್13ಗಳಂತಹ ಕಾರುಗಳಿವೆ.

6. ಗೇರಾಲ್ಡ್ ಲೊಪೆಜ್
ಲೋಟಸ್ ಎಫ್1 ತಂಡದ ಮುಖ್ಯಸ್ಥ ಹಾಗೂ ಉದ್ಯಮಿ ಅತ್ಯಾಕರ್ಷಕ ಕಾರು ಕಲೆಕ್ಷನ್ ಹೊಂದಿದ್ದಾರೆ. ಅವರ ಬಳಿ ಪೋರ್ಷೆ, ಬುಗಾಟಿಗಳಂತಹ ದುಬಾರಿ ಕಾರುಗಳಿವೆ.

5. ಮುಖೇಶ್ ದಿರುಭಾಯ್ ಅಂಬಾನಿ
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಆಲಂಕರಿಸಿಕೊಂಡಿರುವ ಮುಂಬೈ ಮೂಲದ ಉದ್ಯಮಿ ಮುಖೇಶ್ ದಿರುಭಾಯ್ ಅಂಬಾನಿ ಬಳಿ ಬೆಂಟ್ಲಿ, ಮೇಬ್ಯಾಕ್, ಬುಗಾಟಿ, ಪೋರ್ಷೆ ಹಾಗೂ ಮರ್ಸಿಡಿಸ್‌ಗಳಂತಹ ದುಬಾರಿ ಕಾರು ಸಂಗ್ರಹಗಳಿವೆ.

4. ಕೆನ್ ಲಿಂಗನ್‌ಫೆಲ್ಟರ್
ಅಮೆರಿಕ ಮೂಲದ ಲಿಂಗನ್‌ಫೆಲ್ಟರ್ ನಿರ್ವಹಣೆ ಎಂಜಿನಿಯರ್ ಮಾಲಿಕರೂ ಆಗಿರುವ ಕೆನ್ ಬಳಿ 20 ಲಂಬೋರ್ಗಿನಿ ರೆವೆಂಟನ್ ಕಾರುಗಳಿವೆ. ಅಷ್ಟೇ ಅಲ್ಲದೆ 150ಕ್ಕೂ ಹೆಚ್ಚು ಅಮೆರಿಕನ್ ಮಸಲರ್ ಕಾರುಗಳಿವೆ. ಇವುಗಳಲ್ಲಿ ಕೋವರ್ಟೆ, ಮಸ್ತಾಂಗ್, ಬುಗಾಟಿ, ಪೋರ್ಷೆ ಪ್ರಮುಖವಾಗಿದೆ. ಹಾಗೆಯೇ ಇವುಗಳನ್ನೆಲ್ಲ ಮಿಚಿಗನ್‌ನಲ್ಲಿರುವ ಗ್ಯಾರೇಜ್‌ನಲ್ಲಿ ಸಂಗ್ರಹಿಸಿಟ್ಟಿದ್ದಾರೆ.

3. ಜೇ ಲೆನೊ
ಟಾಕ್ ಶೋ ಸೆಲೆಬ್ರಿಟಿ ಟುನೈಟ್ ಶೋ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು. ಇವರ ಬಳಿ 200ಕ್ಕೂ ಹೆಚ್ಚು ಕಾರುಗಳಿವೆ. ಇದರಲ್ಲಿ 1909ರ ಎಲೆಕ್ಟ್ರಿಕ್, 1931ರ 9 ಲೀಟರ್ ಬೆಂಟ್ಲಿ, 1909ರ ಸ್ಟಾನ್‌ಲೇ ಸ್ಟೀಮರ್, 1934ರ ಫಾಟಂ II, ರೋಲ್ಸ್ ರಾಯ್ಸ್, 1927ರ ಡ್ಯುಸೆನ್‌ಬರ್ಗ್ ಮಾದರಿ ಎಕ್ಸ್ ಮತ್ತು 1925ರ ಹಿಸ್ಪಾನೊ ಸುಜಾಗಳಂತಹ 25ಕ್ಕೂ ಹೆಚ್ಚು ಕ್ಲಾಸಿಕ್ ಕಾರುಗಳಿವೆ.

2. ಶೇಖ್ ಹಮಾದ್ ಬಿನ್ ಹಮ್ದಾನ್ ಅಲ್ ನಹ್ಯಾನ್
ಅಬುದಾಬಿ ರಾಜಮನೆತನಕ್ಕೆ ಸೇರಿರುವ ಕೋಟ್ಯಧಿಪತಿ, ರೈನ್‌ಬೋ ಶೇಕ್ ಎಂದೇ ಜನಪ್ರಿಯವಾಗಿದ್ದಾರೆ. ಯಾಕೆಂದರೆ ಅವರ ಬಳಿ ಕಾಮನಬಿಲ್ಲು ಪ್ರತಿಬಿಂಬಿಸುವ ಏಳು ವಿಭಿನ್ನ ಬಣ್ಣಗಳ ಮರ್ಸಿಡಿಸ್ ಎಸ್ ಕ್ಲಾಸ್ ಕಾರುಗಳಿವೆ. ಅಷ್ಟೇ ಅಲ್ಲದೆ ಕಸ್ಟಮೈಸ್ಡ್ ಮರ್ಸಿಡಿಸ್ ಮೊನಸ್ಟರ್ ಟ್ರಕ್, ಜೀಪ್, ಡೊಡ್ಜಿ ಪವರ್ ವ್ಯಾಗನ್‌ಗಳಂತಹ ವಾಹನಗಳಿವೆ.

1. ಸುಲ್ತಾನ್ ಹಸ್ಸನಲ್ ಬೊಲ್ಕೈ
ಜಗತ್ತಿನ ಅತ್ಯಂತ ದುಬಾರಿ ರಾಜಮನೆತನವನ್ನು ಹೊಂದಿರುವ ಸುಲ್ತಾನ್ ಬಳಿ ಅಬ್ಬಬ್ಬಾ ಅಂದ್ರೆ ಎಷ್ಟು ಕಾರುಗಳಿರಬಹುದು? ಅಚ್ಚರಿ ಪಡಬೇಕಾಗಿಲ್ಲ ಒಟ್ಟು 7000ಕ್ಕೂ ಹೆಚ್ಚು ಕಾರುಗಳನ್ನು ತಮ್ಮ ಸಂಗ್ರಹದಲ್ಲಿ ಹೊಂದಿದ್ದಾರೆ. ಈ ಪೈಕಿ 209 ಬಿಎಂಡಬ್ಲ್ಯು, 574 ಬೆಂಝ್, 452 ಫೆರಾರಿ, 179 ಜಾಗ್ವಾರ್, 382 ಬೆಂಟ್ಲಿ ಹಾಗೂ ಆಸ್ಟನ್ ಮಾರ್ಟಿನ್ ಹಾಗೂ ಲಂಬೋರ್ಗಿನಿಗಳಂತಹ ದುಬಾರಿ ಕಾರುಗಳು ಸೇರಿವೆ.


Click it and Unblock the Notifications








