Flying Car: ಎಲ್ಲವೂ ಓಕೆ ಆಯ್ತು! ಹಾರುವ ಕಾರು ಬಿಡುಗಡೆಗೆ ಸಜ್ಜು, ವಿಶೇಷತೆಗಳೇನು?

ಕಳೆದ ಎರಡು ದಶಕಗಳಿಂದ ವಿಶ್ವದಾದ್ಯಂತ ಹಾರುವ ಕಾರುಗಳ (Flying Car)ನಿರ್ಮಾಣದಲ್ಲಿ ದೈತ್ಯ ಕಂಪನಿಗಳು ಕೆಲಸ ಮಾಡುತ್ತಿವೆ. ಆದ್ರೆ ಸರಿಯಾದ ಫ್ಲೈಯಿಂಗ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಾಧ್ಯವಾಗಿಲ್ಲ. ಇದೀಗ ಆ ಸಮಯ ಹತ್ತಿರವಾಗಿದ್ದು, ಚೀನಾದ ಪ್ರಮುಖ ಕಂಪನಿಯೊಂದು ತನ್ನ ಹಾರುವ ಕಾರಿನ ವಿನ್ಯಾಸ ಪ್ರಮಾಣೀಕರಣವನ್ನು ಸ್ವೀಕರಿಸಿರುವುದಾಗಿ ಘೋಷಿಸಿದೆ.

ಹೌದು, ಚೀನಾದ ಪ್ರಮುಖ Flying Car ಕಂಪನಿಗಳಲ್ಲಿ ಒಂದಾದ, ಎಕ್ಸ್‌ಪೆಂಗ್ ತನ್ನ ಮುಂಬರುವ ಹಾರುವ ಕಾರಿನ ವಿನ್ಯಾಸ ಪ್ರಮಾಣೀಕರಣವನ್ನು ಸ್ವೀಕರಿಸಿದ್ದು, EVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್)ನ ಅಂಗವಾದ HT ತನ್ನ ಹಾರುವ ಕಾರುಗಳೊಂದಿಗೆ ವಾಣಿಜ್ಯ ಕಾರ್ಯಾಚರಣೆಗಳನ್ನು ಆರಂಭಿಸಲು ಕೇವಲ ಒಂದು ಹೆಜ್ಜೆ ಹತ್ತಿರದಲ್ಲಿರುವುದಾಗಿ ಹೇಳಿಕೊಂಡಿದೆ.

xpeng-flying-car-design-certified-now-ready-to-launch

ಎಕ್ಸ್‌ಪೆಂಗ್ ಕಂಪನಿಯು ಕಳೆದ ವರ್ಷ ಈವೆಂಟ್ ಒಂದರಲ್ಲಿ ಎರಡು ಹೊಸ ಹಾರುವ ಕಾರು ವಿನ್ಯಾಸಗಳನ್ನು ಪ್ರದರ್ಶಿಸಿತ್ತು. ಇದರಲ್ಲಿ ಒಂದು ಕಂಪನಿಯು ಅಭಿವೃದ್ಧಿಪಡಿಸಿದ ಹಳೆಯ ಎಕ್ಸ್ - 2 "ಫ್ಲೈಯಿಂಗ್ ಕಾರ್" ಆಗಿದ್ದರೇ, ಇನ್ನೊಂದು ಎಕ್ಸ್ - 2 ನಿಂದ ಸ್ಪೂರ್ತಿ ಪಡೆದ ಎಕ್ಸ್ - 3 ಆಗಿದೆ. ಈ ಎಕ್ಸ್‌ 3 ತನ್ನದೇ ಆದ ಡ್ರೈವ್ ಮಾಡಬಹುದಾದ, ಪಾರ್ಕ್ ಮಾಡಬಹುದಾದ ಮತ್ತು ಟೇಕ್ ಆಫ್ ಮಾಡಬಹುದಾದ ಅಪ್ಡೇಟೆಡ್ ಆವೃತ್ತಿಯಾಗಿದೆ.

ಈ ಎಕ್ಸ್ - 3 ನಲ್ಲಿ ಇನ್ನೊಂದು ಪ್ರಮುಖ ವಿಶೇಷತೆಯೆಂದರೆ, ಇದರಲ್ಲಿ ಪ್ರತ್ಯೇಕ EVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್) ಅನ್ನು ಸಾಗಿಸಬಲ್ಲ ಮಾಡ್ಯುಲರ್ ಇವಿ ಕೂಡ ಇದೆ. ಎಲ್ಲವೂ ಅಂದುಕೊಂಡಂತಾದರೆ ಚೀನಾದಲ್ಲಿ ಗ್ರಾಹಕರ ವಿತರಣೆಗೆ ಮುಂಚಿತವಾಗಿ 2025 ರಲ್ಲಿ ಉತ್ಪಾದನೆಗೆ ತರುವ ಪ್ಲಾನ್ ಇರುವ ಕಾರಣ ವೇಗವಾಗಿ ಮಾಡ್ಯುಲರ್ ಇವಿಯನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ.

xpeng-flying-car-design-certified-now-ready-to-launch

ಏರೋ ಎಚ್‌ಟಿಯ ಈ ಹೊಸ ಮಾಡ್ಯುಲರ್ EVTOL ಏಕಕಾಲದಲ್ಲಿ ರಸ್ತೆ ಮತ್ತು ಆಕಾಶದಲ್ಲಿ ಹಾರಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಪರಿಚಯಿಸಿ ವಿಶ್ವ ಹಾರುವ ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಕೇವಲ ಒಂದು ಹೆಜ್ಜೆ ಅಂತರದಲ್ಲಿದೆ. ಎಕ್ಸ್- 3 - ಎಫ್ ಇವಿ / EVTOL ಸಂಯೋಜನೆಯು ತನ್ನ ಟೈಪ್ ಸರ್ಟಿಫಿಕೇಟ್ ಅರ್ಜಿಯನ್ನು ಮಧ್ಯ ಮತ್ತು ದಕ್ಷಿಣ ಚೀನಾದ ನಾಗರಿಕ ವಿಮಾನಯಾನ ಆಡಳಿತ (ಸಿಎಎಸಿ) ಸ್ವೀಕರಿಸಿದೆ.

ಈ ಪ್ರಮಾಣೀಕರಣವು ಮುಂಬರುವ ಕೊಡುಗೆಯ EVTOL ಏರ್ ಮಾಡ್ಯೂಲ್ ಭಾಗಕ್ಕೆ ನಿರ್ದಿಷ್ಟವಾಗಿ ಅನ್ವಯಿಸುತ್ತದೆ, ಇದು ಇವಿಗಾಗಿ 6x6 ಆಲ್ - ವ್ಹೀಲ್ - ಡ್ರೈವ್ (AWD) ಗ್ರೌಂಡ್ ಮಾಡ್ಯುಲರ್ ಅನ್ನು ಒಳಗೊಂಡಿದೆ. ಸಿಎಎಸಿಯಿಂದ ವಿನ್ಯಾಸ ಪ್ರಮಾಣೀಕರಣವನ್ನು ಪಡೆದ ನಂತರ, ಕಂಪನಿಯು ಈಗ ವಾಯು ಯೋಗ್ಯತೆ ಪ್ರಮಾಣೀಕರಣವನ್ನು ಪಡೆಯಲು ಎದುರು ನೋಡುತ್ತಿದೆ ಎಂದು ಎಕ್ಸ್ ಪೆಂಗ್ ಏರೋ ಎಚ್‌ಟಿ ಹೇಳಿಕೊಂಡಿದೆ.

xpeng-flying-car-design-certified-now-ready-to-launch

ಮಾಡ್ಯುಲರ್ ಫ್ಲೈಯಿಂಗ್ ಕಾರ್ ಸಾಮರ್ಥ್ಯ: ಎಕ್ಸ್ ಪೆಂಗ್ ಏರೋಎಚ್‌ಟಿ ಪ್ರಕಾರ, ಮಾಡ್ಯುಲರ್ ಫ್ಲೈಯಿಂಗ್ ಕಾರು ಪ್ರಸ್ತುತ ಸಾಮೂಹಿಕ ಉತ್ಪಾದನೆಗೆ ತಯಾರಿಯ ಹಂತದಲ್ಲಿದೆ. ಲ್ಯಾಂಡ್ ಮಾಡ್ಯೂಲ್ 4-5 ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ, ಇದು ಕುಟುಂಬದ ಅಗತ್ಯಗಳಿಗೆ ಸೂಕ್ತವಾಗಿರುತ್ತದೆ. ಇದು 6×6 ಆಲ್-ವೀಲ್ ಡ್ರೈವ್ ಮತ್ತು ರಿಯರ್ ವೀಲ್ ಸ್ಟೀರಿಂಗ್ ನೊಂದಿಗೆ ಗಮನಾರ್ಹ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.

ಅಂದಾಜು ಬೆಲೆ: ಎಕ್ಸ್ ಪೆಂಗ್ 1 ಮಿಲಿಯನ್ ಯುವಾನ್ (ಅಂದಾಜು 1.15 ಕೋಟಿ ರೂ.) ಬೆಲೆಯನ್ನು ಹೊಂದಿದೆ. ಈ ಬೆಲೆಯಲ್ಲಿ, ಹಾರುವ ಕಾರು ನಿರ್ದಿಷ್ಟ ಪ್ರೇಕ್ಷಕರಿಗೆ ಮಾತ್ರ ಸಿಗಲಿದೆ. ಹಾರುವ ಕಾರುಗಳಿಗೆ ವಾಯುಪ್ರದೇಶದ ನಿಯಮಗಳು ಮತ್ತೊಂದು ಸವಾಲಾಗಬಹುದು. ಅಲ್ಲದೆ, ಹಾರುವ ಯಂತ್ರದೊಂದಿಗೆ ವ್ಯವಹರಿಸಲು ವಿಶೇಷ ಕೌಶಲ್ಯಗಳು ಬೇಕಾಗುತ್ತವೆ. ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಸಹ, ಹಾರುವ ಕಾರು ಮೊದಲ ಬಾರಿಗೆ ಬಳಕೆದಾರರಿಗೆ ಸವಾಲುಗಳನ್ನು ಒಡ್ಡಬಹುದು.

xpeng-flying-car-design-certified-now-ready-to-launch

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 27, 2024, 12:02 [IST]
English summary
Xpeng flying car design certified now ready to launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+