ಜಗತ್ತಿನ ಪ್ರಪ್ರಥಮ ಹಾರುವ ಸೈಕಲ್
ಸೈಕಲ್‌ನಲ್ಲಿ ಸುಮ್ಮನೆ ಸವಾರಿ ಹೊಡೆಯುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಹಾಗೊಂದು ವೇಳೆ ಹಾರುವ ಸೈಕಲ್‌ನಲ್ಲಿ ಪಯಣಸುವ ಅವಕಾಶ ಸಿಕ್ಕರೇ ನೀವು ಮಿಸ್ ಮಾಡಿಕೊಳ್ಳಲು ಬಯಸುವೀರಾ?
ಖಂಡಿತ ಇಲ್ಲ, ಹೌದು ಆಟೋಮೊಬೈಲ್ ಜಗತ್ತಿನ ಎಂಜಿನಿಯರ್‌ಗಳು ಹೊಸ ಹೊಸ ತಂತ್ರಗಾರಿಕೆಯ ಹುಡುಕಾಟದಲ್ಲಿ ತೊಡಗಿದ್ದು, ಇದರ ಪರಿಣಾಮವೆಂಬಂತೆ ಹಾರುವ ಸೈಕಲನ್ನು ಕಂಡುಹುಡುಕಿದ್ದಾರೆ.
ಪ್ಯಾರಾಚ್ಯೂಟ್ ತಂತ್ರಜ್ಞಾನದಲ್ಲಿ ಈ ಸೈಕಲ್ ಗಾಳಿಯಲ್ಲಿ ಸ್ವಚಂದವಾಗಿ ತೇಲಾಡುತ್ತದೆ. ಸೈಕಲ್ ಹಿಂದುಗಡೆ ಲಗ್ಗತ್ತಿಸಲಾಗಿರುವ ಫ್ಯಾನ್ ಜೋರಾಗಿ ತಿರುಗಲು ಆರಂಭಿಸಿದಂತೆ ಹಿಂದುಗಡೆಯಿರುವ ಪ್ಯಾರಾಚ್ಯೂಟ್ ಗಾಳಿಯಲ್ಲಿ ತೇಲಾಡಲು ಆರಂಭಿಸುತ್ತದೆ. ನೋಡ ನೋಡುತ್ತಿರುವಂತೆಯೇ ಸೈಕಲ್ ಗಗನಕ್ಕೆ ಹಾರಲಾರಂಭಿಸುತ್ತದೆ.
ಲಂಡನ್ ಮೂಲದ ಎಕ್ಸ್‌ಪ್ಲೋರ್ ಏರ್ ಪ್ಯಾರವೆಲೊ ಎಂಬ ಕಂಪನಿಯು ಈ ಫ್ಲೈಯಿಂಗ್ ಸೈಕಲನ್ನು ಕಂಡುಹುಡುಕಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಭೇಟಿ ಕೊಡಿರಿ...

ಇನ್ನು ಈ ಹಾರುವ ಸೈಕಲನ್ನು ಮಡಚಲು ಸಾಧ್ಯವಿದ್ದು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.

4,000 ಅಡಿ ಎತ್ತರಕ್ಕೂ ಚಲಿಸಲು ಸಾಮರ್ಥ್ಯವುಳ್ಳ ಈ ಹಾರುವ ಸೈಕಲ್ ಗಾಳಿಯಲ್ಲಿ ಗಂಟೆಗೆ 25 ಮೈಲ್ ಹಾಗೂ ನೆಲದಲ್ಲಿ 15 ಮೈಲ್ ವೇಗತೆಯಲ್ಲಿ ಚಲಿಸುತ್ತದೆ.

ಇನ್ನು ಹಾರುವ ಸೈಕಲಿನ ದರ ಮಾತ್ರ ಸ್ವಲ್ಪ ದುಬಾರಿಯಾಗಿದ್ದು, 10 ಲಕ್ಷ ರು. ಅಂದಾಜಿಸಲಾಗಿದೆ.

ಬೈಸಿಕಲ್ ಹಾಗೂ ವ್ಯೋಮಯಾನದಲ್ಲಿ ತಂತ್ರಜ್ಞಾನದಲ್ಲಿ ಮಗ್ನರಾಗಿರುವ ಬ್ರಿಟನ್‌ನ ಇಬ್ಬರು ವಿಜ್ಞಾನಿಗಳು ಇದನ್ನು ಆವಿಷ್ಕರಿಸಿದ್ದಾರೆ.

XploreAir Paravelo Flying Bicycle

XploreAir Paravelo Flying Bicycle

XploreAir Paravelo Flying Bicycle

XploreAir Paravelo Flying Bicycle

XploreAir Paravelo Flying Bicycle

XploreAir Paravelo Flying Bicycle
XploreAir Paravelo Flying Bicycle
ವೀಡಿಯೋ ವೀಕ್ಷಿಸಿ


Click it and Unblock the Notifications








