ವೈ+ ಭದ್ರತೆ.. 6 ಕೋಟಿಯ ಸೇಫ್ಟಿ 'ರೋಲ್ಸ್ ರಾಯ್ಸ್' ಕಾರಿನಲ್ಲಿ ಬಂದ ಶಾರುಖ್ ಖಾನ್: ವಿಶೇಷತೆಗಳೇನು?

ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಜವಾನ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಕಳೆದ ಭಾನುವಾರ ಅವರು, ನಟಿಸಿರುವ ಸೂಪರ್ ಹಿಟ್ ಚಿತ್ರ 'ಕುಚ್ ಕುಚ್ ಹೋತಾ ಹೈ' ಭರ್ತಿ 25 ವರ್ಷಗಳನ್ನು ಪೂರೈಸಿದೆ.

ಈ ಹಿನ್ನೆಲೆ, ಸಿನಿಮಾ ನಿರ್ದೇಶಕ ಕರಣ್ ಜೋಹರ್ ಮುಂಬೈನಲ್ಲಿ 3 ವಿಶೇಷ ಶೋ ಏರ್ಪಡಿಸಿದ್ದರು. ಚಿತ್ರ ವೀಕ್ಷಿಸಲು ನಟ ಶಾರುಖ್ ಖಾನ್, ರೋಲ್ಸ್ ರಾಯ್ಸ್ ಕಲ್ಲಿನಾನ್‌ (Rolls Royce Cullinan), ನಟಿ ರಾಣಿ ಮುಖರ್ಜಿ (Rani Mukherjee), ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್‌ (Mercedes-Maybach S-Class) ಹಾಗೂ ಕರಣ್ ಜೋಹರ್ ಆಡಿ ಎ8 ( Audi A8) ಕಾರಿನಲ್ಲಿ ಆಗಮಿಸಿದ್ದರು.

ವೈ+ ಭದ್ರತೆ.. 6 ಕೋಟಿಯ ಸೇಫ್ಟಿ ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದ ಶಾರುಖ್ ಖಾನ್: ವಿಶೇಷತೆಗಳೇನು?

ಶಾರುಖ್ ಖಾನ್ ಹಾಗೂ ನಿರ್ದೇಶಕ ಕರಣ್ ಜೋಹರ್ ಕಪ್ಪು ಬಣ್ಣದ ಉಡುಗೆಯನ್ನು ತೊಟ್ಟಿದ್ದರು. ನಟಿ ರಾಣಿ ಮುಖರ್ಜಿ ಬಿಳಿ ಬಣ್ಣದ ಸೀರೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಕೊಲೆ ಬೆದರಿಕೆ ಕಾರಣ ಶಾರುಖ್ ಖಾನ್ ಅವರಿಗೆ ವೈ ಪ್ಲಸ್ ಸೆಕ್ಯೂರಿಟಿ ನೀಡಲಾಗಿದ್ದು, ಇತ್ತೀಚೆಗೆ ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಕೊಂಡಿರಲಿಲ್ಲ. ಚಿತ್ರ ವೀಕ್ಷಣೆಗೆ ಬಂದಿದ್ದ ಅವರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದರು.

ಕಾರ್ಸ್ ಫಾರ್ ಯೂ ಎಂಬ ಯುಟ್ಯೂಬ್ ವಾಹಿನಿಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಶಾರುಖ್ ಖಾನ್ ತಮ್ಮ ರೋಲ್ಸ್ ರಾಯ್ಸ್ ಕಲ್ಲಿನಾನ್‌ ಕಾರಿನಲ್ಲಿ ಸಿನಿಮಾ ವೀಕ್ಷಿಸಿ, ವಾಪಾಸ್ ಹೋಗುತ್ತಿರುವುದನ್ನು ಕಾಣಬಹುದು. ಅದರ ಮುಂದೆ, ಎಂಜಿ ಗ್ಲೋಸ್ಟರ್‌ನಲ್ಲಿ ಭದ್ರತಾ ಸಿಬ್ಬಂದಿ ಸಾಗುತ್ತಿರುವುದನ್ನು ನೋಡಬಹುದು. ಸದ್ಯ, ರೋಲ್ಸ್ ರಾಯ್ಸ್ ಕಲ್ಲಿನಾನ್‌ ದೇಶದಲ್ಲಿಯೇ ದುಬಾರಿ ಬೆಲೆಯ ಎಸ್‌ಯುವಿಯಾಗಿದೆ. ರೂ. 6.5 ಕೋಟಿ ದರವನ್ನು ಹೊಂದಿದೆ.

ಬಾಲಿವುಡ್ ಚಿತ್ರರಂಗದಲ್ಲಿ ನಟ ಅಜಯ್ ದೇವಗನ್, ಟಿ-ಸಿರೀಸ್‌ ಮಾಲೀಕ ಭೂಷಣ್ ಕುಮಾರ್ ಅವರ ಬಳಿಕ, ಐಷಾರಾಮಿ ರೋಲ್ಸ್ ರಾಯ್ಸ್‌ ಕಾರುನ್ನು ಖರೀದಿಸಿದ ಮೂರನೇ ವ್ಯಕ್ತಿ ಶಾರುಖ್ ಖಾನ್. 2018ರಲ್ಲಿ ಬಿಡುಗಡೆಗೊಂಡ ಈ ಕಾರು, ಆಲ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಪಡೆದಿದ್ದು, 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ.

ರೋಲ್ಸ್ ರಾಯ್ಸ್ ಕಲ್ಲಿನಾನ್‌ ಕಾರು, 6.75 - ಲೀಟರ್ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 600 PS ಗರಿಷ್ಠ ಪವರ್ ಹಾಗೂ 900 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, 9.5 kmpl ಇಂಧನ ದಕ್ಷತೆಯನ್ನು ಒಳಗೊಂಡಿದೆ.

ಈ ಕಾರು, ಬೆಲೆಗೆ ತಕ್ಕಂತೆ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, ಹಿಂಭಾಗದ ಪ್ರಯಾಣಿಕರಿಗಾಗಿ ಡ್ಯುಯಲ್ 12 - ಇಂಚಿನ ಡಿಸ್ಪ್ಲೇ, ಜೊತೆಗೆ ಫೋಲ್ಡ್ ಔಟ್ ಆರ್ಮ್ ರೆಸ್ಟ್ ಪಡೆದಿದ್ದು, ಹಿಂಭಾಗದ ಆಸನಗಳು ಹೆಚ್ಚು ಆರಾಮದಾಯಕವಾಗಿದೆ. ವೈಫೈ ಹಾಟ್‌ಸ್ಪಾಟ್ ಮತ್ತು ಹೆಡ್ಸ್ - ಅಪ್ ಡಿಸ್ಪ್ಲೇ ಅನ್ನು ಒಳಗೊಂಡಿದೆ .

ಸುರಕ್ಷತೆಯ ವಿಚಾರದಲ್ಲಿ ರೋಲ್ಸ್ ರಾಯ್ಸ್ ಕಲ್ಲಿನಾನ್‌ ಕಾರಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮಲ್ಟಿಪಲ್ ಏರ್‌ಬ್ಯಾಗ್‌, ಬೆಳಗ್ಗೆ (daytime) ಹಾಗೂ ರಾತ್ರಿ ವೇಳೆಯಲ್ಲಿ (night-time) ವನ್ಯಜೀವಿ (wildlife) & ಪಾದಚಾರಿ ಎಚ್ಚರಿಕೆ (pedestrian warning). ಕ್ರೂಸ್ ಕಂಟ್ರೋಲ್, ಕ್ರಾಸ್ ಟ್ರಾಫಿಕ್ ವಾರ್ನಿಂಗ್, ಲೇನ್ ಡಿಪಾರ್ಚರ್ & ಲೇನ್ ಚೇಂಜ್ ವಾರ್ನಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 18, 2023, 12:56 [IST]
English summary
Y plus security shahrukh khan arrives rs 6 crore safety rolls royce car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+