ವಿಶ್ವ ಮೋಟಾರ್‌ಸೈಕಲ್ ದಿನ: ಯೆಲ್ಲೊಹ್ಯಾಟ್, ರೆಡಿಅಸಿಸ್ಟ್‌ನಿಂದ ಪ್ರಶಸ್ತಿ ಪ್ರದಾನ ಸಮಾರಂಭ

ಜೂನ್ 21 ದ್ವಿಚಕ್ರ ವಾಹನ ಪ್ರಿಯರಿಗೆ ಮರೆಯಲಾಗದ ದಿನ. ಅಂದು ಪ್ರಪಂಚದಾದ್ಯಂತ 'ವಿಶ್ವ ಮೋಟಾರ್‌ಸೈಕಲ್ ದಿನ'ವನ್ನು (World Motorcycle Day) ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ಯೆಲ್ಲೊಹ್ಯಾಟ್ ರೈಡರ್ ಕ್ಲಬ್ ಹಾಗೂ ರೆಡಿಅಸಿಸ್ಟ್ ಕಂಪನಿ ಜಂಟಿಯಾಗಿ ಬೆಂಗಳೂರಿನಲ್ಲಿ ಬೃಹತ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸುತ್ತಿವೆ.

ಸುರಕ್ಷತೆಯಿಂದ ದ್ವಿಚಕ್ರ ವಾಹನ ಚಲಾಯಿಸುವಂತೆ ಸವಾರರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ಯೆಲ್ಲೊಹ್ಯಾಟ್ ಹಾಗೂ ರೆಡಿಅಸಿಸ್ಟ್ ನಿರತವಾಗಿವೆ. ಅದರ ಭಾಗವಾಗಿ ದೇಶದಲ್ಲಿ ಗಮನಾರ್ಹ ಸಾಧನೆ ಮಾಡಿದ ಮೋಟಾರ್‌ಸೈಕಲ್ ರೈಡರ್ ಗಳಿಗೆ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತದೆ. ಅದ್ದೂರಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ನೂರಾರು ಮೋಟಾರ್‌ಸೈಕಲ್ ಪ್ರಿಯರು ಭಾಗವಹಿಸರುವುದು ವಿಶೇಷವಾಗಿದೆ.

ವಿಶ್ವ ಮೋಟಾರ್‌ಸೈಕಲ್ ದಿನ: ಯೆಲ್ಲೊಹ್ಯಾಟ್, ರೆಡಿಅಸಿಸ್ಟ್‌ನಿಂದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ

ಈ ಸಮಾರಂಭಕ್ಕೆ ವಿವಿಧ ರಾಜ್ಯಗಳಿಂದ ಸರಿ ಸುಮಾರು 700ಕ್ಕೂ ಹೆಚ್ಚು ಬೈಕರ್‌ಗಳು ಈಗಾಗಲೇ ಹಾಜರಾಗಿದ್ದಾರೆ. ಕಾರ್ಯಕ್ರಮದ ದೊಡ್ಡ ಆಕರ್ಷಣೆ ಅಂದರೆ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಮುಖ್ಯ ಅತಿಥಿಯಾಗಿ ಭಾಗವಹಿಸಿರುವುದು. ಬೆಂಗಳೂರಿನಲ್ಲಿ ಆದ್ದೂರಿಯಾಗಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮತ್ತಷ್ಟು ಸ್ಮರಣೀಯವಾಗಿಸಲು, ಹಲವು ಮನರಂಜನಾ ಕಾರ್ಯಕ್ರಮಗಳು ಜರುಗುತ್ತಿವೆ.

ಅದ್ದೂರಿ ಸಮಾರಂಭದಲ್ಲಿ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ಇದ್ದು, ಡಿಜೆ ನೈಟ್ ಪ್ರಮುಖ ಆಕರ್ಷಣೆಯಾಗಲಿದೆ. ಜೊತೆಗೆ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ವಿವಿಧ ಪರಿಕರಗಳ ಪ್ರದರ್ಶನವು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ. ಮುಖ್ಯವಾಗಿ ಮೋಟಾರ್‌ಸೈಕಲ್ ಚಲಾಯಿಸುವಾಗ ಸುರಕ್ಷತೆ ಮೊದಲ ಆದ್ಯತೆಯಾಗಿರುತ್ತದೆ. ಆ ಬಗ್ಗೆ ಈಗಿನ ಯುವ ಪೀಳಿಗೆಗೆ ಜಾಗೃತಿ ಮಾಡಿಸಲು ಬೈಕ್ ಗಳ ಮೂಲಕ ಸಾಹಸ ಪ್ರದರ್ಶನ ನಡೆಸಲಾಗಿದ್ದು, ಅದು ಮುಗಿದಿದೆ.

ವಿಶ್ವ ಮೋಟಾರ್‌ಸೈಕಲ್ ದಿನ: ಯೆಲ್ಲೊಹ್ಯಾಟ್, ರೆಡಿಅಸಿಸ್ಟ್‌ನಿಂದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ

ಯೆಲ್ಲೊಹ್ಯಾಟ್ ಹಾಗೂ ರೆಡಿಅಸಿಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಆಟೋಮೊಬೈಲ್ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಗೌರವಿಸಲಾಗಿದೆ. ಅದರಲ್ಲೂ ಅತ್ಯುತ್ತಮ ರೈಡರ್‌ಗಳು, ಉತ್ತಮ ಕ್ಲಬ್‌ಗಳು ಹಾಗೂ ಅತ್ಯುತ್ತಮ ಮೆಕ್ಯಾನಿಕ್ಸ್ ಇದರ ಭಾಗವಾಗಲಿದ್ದಾರೆ. ವಿಶೇಷವೆಂದರೆ, ಮೆಕ್ಯಾನಿಕ್ ವೃತ್ತಿನಿರತರ 36 ಮಕ್ಕಳಿಗೆ ಒಂದು ವರ್ಷ ಶಿಕ್ಷಣದ ವೆಚ್ಚವನ್ನು ಭರಿಸಲು ಯೆಲ್ಲೊಹ್ಯಾಟ್ ಮತ್ತು ರೆಡಿಅಸಿಸ್ಟ್ ತೀರ್ಮಾನಿಸಿವೆ.

ಯೆಲ್ಲೊಹ್ಯಾಟ್ ಹಾಗೂ ರೆಡಿಅಸಿಸ್ಟ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ವಿವರವನ್ನು ನೋಡುವುದಾದರೆ, ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ BLR Brewing Coನಲ್ಲಿ ಈ ಸಮಾರಂಭ ಇಂದು (ಜೂನ್ 21) ನಡೆಯುತ್ತಿದ್ದು, ಬೆಳಗ್ಗೆ 11.00ರ ಸುಮಾರಿಗೆ ಕಾರ್ಯಕ್ರಮ ಆರಂಭವಾಗಿದೆ. ಹಲವು ಚಟುವಟಿಕೆಗಳು ಜರುಗಿದ್ದು, ರಾತ್ರಿ 9.05ಕ್ಕೆ ಸಮಾರೋಪ ಭಾಷಣ ನಡೆಯಲಿದೆ. 9.30ರ ನಂತರವು ವಿವಿಧ ಕಾರ್ಯಕ್ರಮಗಳು ಇರಲಿವೆ.

ಸಮಾರಂಭದ ವೇಳಾಪಟ್ಟಿಗೆ ಅನುಗುಣವಾಗಿ ಗಣ್ಯರ ದಂಡೇ ಹಾಜರಿರಲಿದೆ. ಎಫ್‌ಎಡಿಎ ಮಾಜಿ ಅಧ್ಯಕ್ಷ ನಿಕುಂಜ್ ಪಾಟೀಲ್, ಟಾಟಾ ಗ್ರೀನ್ ಬ್ಯಾಟರಿಸ್ ಸಿಇಒ ರಾಮಶಂಕರ್ ಪಾಂಡೆ, ಮೊಬಿಲಿಟಿ ಔಟ್‌ಲುಕ್ ಮುಖ್ಯ ಸಂಪಾದಕ ದೀಪಂಗ್ಶು ದೇವ್ ಸರ್ಮಾ, ಸಿಂಪಲ್ ಎನರ್ಜಿ ಸಹ ಸಂಸ್ಥಾಪಕ ಶ್ರೇಷ್ಠ್ ಮಿಶ್ರಾ, ಹೀರೋ ಎಲೆಕ್ಟ್ರಿಕ್ ಸಿಇಒ ಸೋಹಿಂದರ್ ಸಿಂಗ್ ಗಿಲ್ ಭಾಗವಹಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, June 21, 2023, 19:01 [IST]
English summary
Yellowhat riders club readyassist hosts prestigious awards event
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+