ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಪತಂಜಲಿ ಕಂಪನಿ ಮೂಲಕ ವಿದೇಶಿ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ಬಾಬಾ ರಾಮ್ ದೇವ್ ಅವರು ಭಾರತೀಯ ಮಾರುಕಟ್ಟೆಯ ಹಲವಾರು ಕ್ಷೇತ್ರಗಳಲ್ಲಿ ಈಗಾಗಲೇ ಪ್ರಭುತ್ವ ಸಾಧಿಸಿದ್ದಾರೆ. ಸ್ವದೇಶೀ ಉತ್ಪನ್ನದ ಮೂಲಕ ದೇಶದ ಮನೆ ಮಾತಾಗಿರುವ ಪತಾಂಜಲಿ ಜನಪ್ರಿಯತೆಗೆ ಅನುಗುಣವಾಗಿ ಬಹುತೇಕ ನಗರಗಳಲ್ಲಿ ಸ್ಟೋರ್​ಗಳನ್ನು ಹೊಂದಿದ್ದಾರೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಯೋಗ ಗುರು ಬಾಬಾ ರಾಮ್‌ದೇವ್ ಸಾವಿರಾರು ಕೋಟಿ ಮೌಲ್ಯದ ಸಂಘಟಿತ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇವರು ಇತ್ತೀಚೆಗೆ ಹೊಚ್ಚಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯನ್ನು ಖರೀದಿಸಿದ್ದಾರೆ. ರಾಮ್‌ದೇವ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಹೊಸ ಕಾರಿನಲ್ಲಿ ಓಡಾಡುತ್ತಿರುವುದನ್ನು ವೀಡಿಯೊ ವೈರಲ್ ಆಗಿದೆ. ಈ ಹಿಂದೆ ಬಾಬಾ ರಾಮ್‌ದೇವ್ ಮೋಟಾರು ಸೈಕಲ್‌ಗಳನ್ನು ಓಡಿಸುವುದನ್ನು ನಾವು ನೋಡಿದ್ದೇವೆ ಆದರೆ ಅವರು ಕಾರು ಚಾಲನೆ ಮಾಡುತ್ತಿರುವುದು ಇದೇ ಮೊದಲು. ರಾಮ್‌ದೇವ್ ಎಕ್ಸ್‌ಯುವಿ700 ಅನ್ನು ಕಟ್ಟಡದ ಕಾಂಪೌಂಡ್‌ನೊಳಗೆ ಪರೀಕ್ಷಿಸಿದಂತೆ ತೋರುತ್ತಿದೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಬಾಬಾ ರಾಮ್‌ದೇವ್ ಚಾಲನೆ ಮಾಡುವ ಎಕ್ಸ್‌ಯುವಿ700 ನಿಖರವಾದ ರೂಪಾಂತರದ ವಿವರಗಳು ತಿಳಿದಿಲ್ಲ ಆದರೆ ಇದು ಪನರೊಮಿಕ್ ಸನ್‌ರೂಫ್‌ನೊಂದಿಗೆ ಟಾಪ್-ಎಂಡ್ ಟ್ರಿಮ್‌ನಂತೆ ಕಾಣುತ್ತದೆ. ಬಾಬಾ ರಾಮ್‌ದೇವ್ ಯಾವುದೇ ಐಷಾರಾಮಿ ಕಾರುಗಳನ್ನು ಹೊಂದಿಲ್ಲವಾದರೂ, ಅವರು ಜಾಗ್ವಾರ್ ಎಕ್ಸ್‌ಜೆ ಎಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಆಪ್ತ ಸಹಾಯಕ ಬಾಲಕೃಷ್ಣ ಅವರು ಲ್ಯಾಂಡ್ ರೋವರ್ ರೇಂಜ್ ರೋವರ್ ಹೊಂದಿದ್ದಾರೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಬಾಬಾ ರಾಮದೇವ್ ನೆಚ್ಚಿನ ಬೈಕರ್. ಅವರು ಹೀರೋ ಇಂಪಲ್ಸ್ ಸವಾರಿ ಮಾಡುವುದನ್ನು ಗುರುತಿಸಿದ್ದಾರೆ ಮತ್ತು ನಂತರ ಡುಕಾಟಿ ಸ್ಕ್ರ್ಯಾಂಬ್ಲರ್‌ನ ಪಿಲಿಯನ್ ಸೀಟಿನಲ್ಲಿ ಸದ್ಗುರುಗಳೊಂದಿಗೆ ಗುರುತಿಸಲ್ಪಟ್ಟರು. ಇನ್ನು ಅಗಾಧ ಬೇಡಿಕೆಯನ್ನು ಉತ್ತಮವಾಗಿ ಪೂರೈಸುವ ಸಲುವಾಗಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಉತ್ಪಾದನೆಯನ್ನು ಹೆಚ್ಚಿಸಿದೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯು ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಈ ಎಸ್‌ಯುವಿಯಲ್ಲಿ ಪವರ್ ಫುಲ್ ಎಂಜಿನ್ ಆಯ್ಕೆ ಹೊಂದಿದ್ದು, ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ಮೊತ್ತ ಸಾವಿರ ಪಾವತಿ ಮಾಡಬೇಕಾಗುತ್ತದೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಈ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್ ಮತ್ತು 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಈ ಎಕ್ಸ್‌ಯುವಿ700 ಎಸ್‍ಯುವಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಅನ್ನು ಹೊದಿದೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಇದರೊಂದಿಗೆ ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್ ಮತ್ತು ಲೆನ್ ಕಿಪ್ ಅಸಿಸ್ಟ್ ಅನ್ನು ಹೊಂದಿದೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಈ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ, ಇದರಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ 198 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 183 ಬಿಹೆಚ್‌ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಈ ಹೊಸ ಎಕ್ಸ್‌ಯುವಿ700 ಮಾದರಿಗಳು ಮಹೀಂದ್ರಾ ಎಸ್‌ಯುವಿ ಪ್ರೂವಿಂಗ್ ಟ್ರ್ಯಾಕ್ ನಲ್ಲಿ ದಿನದ 24 ಗಂಟೆಗಳ ತಡೆರಹಿತ ಚಾಲನೆ ನಡೆಸಿ ಹೊಸ ದಾಖಲೆಗೆ ಕಾರಣವಾಗಿದೆ. ಟ್ರ್ಯಾಕ್ ಡ್ರೈವ್ ಮೂಲಕವೇ ಹೊಸ ಎಸ್‌ಯುವಿ ಸರಾಸರಿಯಾಗಿ 4 ಸಾವಿರ ಕಿ.ಮೀ ಚಲಿಸಿ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡಿದೆ.ಸ್ಪೀಡ್ ಎಂಡ್ಯೂರೆನ್ಸ್ ಚಾಲೆಂಜ್‌ನಲ್ಲಿ ಈ ಹಿಂದೆ ದಿನದ 24 ಗಂಟೆಗಳ ಚಲಿಸುವ ಮೂಲಕ 3,161 ಕಿ.ಮೀ ದಾಖಲೆ ಹೊಂದಿದ್ದ ಎಕ್ಸ್‌ಯುವಿ500 ದಾಖಲೆಯನ್ನು ಇದೀಗ ಎಕ್ಸ್‌ಯುವಿ700 ಮಾದರಿಯು ಹೊಸ ದಾಖಲೆ ನಿರ್ಮಿಸಿತು.

ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಡ್ರೈವ್ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಮೂಲಕ ಎಸ್‌ಯುವಿ ಮಾರಾಟದಲ್ಲಿ ಹಲವು ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಈ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯನ್ನು ಯೋಗ ಗುರು ಬಾಬಾ ರಾಮ್‌ದೇವ್ ಅವರು ಖರೀದಿಸಿದ್ದಾರೆ.

Most Read Articles

Kannada
English summary
Yoga guru baba ramdev buys new mahindra xuv700 suv driving video viral details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X