ಈ ಸಮಯಗಳಲ್ಲಿ ವಿಮಾನದ ಶೌಚಾಲಯ ಉಪಯೋಗಿಸುವಂತಿಲ್ಲ: ವಿಚಿತ್ರ ನಿಯಮದ ಹಿಂದಿನ ರಹಸ್ಯವೇನು?
ಪ್ರತಿ ಬಾರಿ ವಿಮಾನ ಹತ್ತುವ ಮೊದಲು ನೀವು ಶೌಚಾಲಯಕ್ಕೆ ಹೋಗಿ ಆನಂತರ ವಿಮಾನದ ಒಳ ಹೋಗುವುದು ಉತ್ತಮ. ಈ ಮಾತು ಕೇಳಿದಾಗ ಇದಕ್ಕೆ ಕಾರನ ಏನು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಇದಕ್ಕೆ ಕಾರಣವೇನೆಂಬ ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಈ ಲೇಖನದಲ್ಲಿ ನೋಡೋಣ.
ಇದು ಕೇವಲ ಒಂದು ಸಲಹೆ ಮಾತ್ರವಲ್ಲ. ಇದರ ಹಿಂದೆ ಅಂತರಾಷ್ಟ್ರೀಯ ಏವಿಯೇಷನ್ ನಿಯಮದ ಆಧಾರವೂ ಇದೆ. ಕಳೆದ ವರ್ಷ ವ್ಯಕ್ತಿಯೊಬ್ಬ ವಿಮಾನ (Airoplane) ಟೇಕಾಫ್ ಆಗುವುದಕ್ಕೂ ಮೊದಲು ವಿಮಾನದ ಶೌಚಾಲಯವನ್ನು ಉಪಯೋಗಿಸಲು ಪ್ರಯತ್ನಿಸಿದ ಎಂಬ ಕಾರಣಕ್ಕೆ ಆತನನ್ನು ವಿಮಾನದಿಂದ ಇಳಿಸಲಾಗಿತ್ತು. ಇದಕ್ಕೆ ಕಾರಣ ಏನು ಎಂದರೆ ವಿಮಾನ ಟೇಕಾಫ್ ಆಗುವುದಕ್ಕೂ ಮೊದಲು ಆತ ಅಂತರಾಷ್ಟ್ರೀಯ ಏವಿಯೇಷನ್ ನಿಯಮವನ್ನು ಉಲ್ಲಂಘಿಸಿದ್ದು.

ಇನ್ನು ಹಲವು ಜನರು ಶೌಚಾಲಯಕ್ಕೆ ತೆರಳಿದ್ದ ವ್ಯಕ್ತಿಯ ಪರವಾಗಿ ವಾದ ಮಾಡುತ್ತಿದ್ದರೂ, ಸರಿಯಾದ ನಿಯಮ ಗೊತ್ತಿಲ್ಲದಿರುವ ಕಾರಣ ಅವರ ವಾದಕ್ಕೆ ಮಣೆ ಹಾಕಲಿಲ್ಲ. ವಿಮಾನ ಚಲಿಸಲು ಪ್ರಾರಂಭವಾಗುವುದಕ್ಕೂ ಮೊದಲೇ ಈ ಕೆಲಸ ಮಾಡಿದರೂ ಸಹ ಅದು ಈ ಅಂತರಾಷ್ಟ್ರೀಯ ಏವಿಯೇಷನ್ ನಿಯಮದ ಉಲ್ಲಂಘನೆ ಆಗುತ್ತದೆ. ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಶೌಚಾಲಯದಲ್ಲಿ ಇರುವ ಸಂಧರ್ಭದಲ್ಲಿ ವಿಮಾನದ ಪೈಲಟ್ ತನ್ನ ವಿಮಾನವನ್ನು ಟೇಕಾಫ್ ಮಾಡುವಂತಿಲ್ಲ.
ಮಾಹಿತಿಗಳ ಪ್ರಕಾರ ವಿಮಾನ ಟೇಕಾಫ್ ಆಗುವುದು ಮತ್ತು ಲ್ಯಾಂಡ್ ಆಗುವುದು. ಈ ಎರಡು ಸಮಯ ವಿಮಾನದ ಅತಿ ದೊಡ್ಡ ಅಪಾಯಕಾರಿಯಾದಂತಹ ಸಮಯವಾಗಿದ್ದು, ಈ ಸಂಧರ್ಭದಲ್ಲಿ ವಿಮಾನದ ಪ್ಯಾಸೆಂಜರ್‌ಗಳು ಮತ್ತು ಸಿಬ್ಬಂದಿಗಳು ವಿಮಾನದಲ್ಲಿ ಓಡಾಡುವಂತಿಲ್ಲ. ಸೀಟ್ ಬೆಲ್ಟ್ ಧರಿಸಿ ತಮ್ಮ ಆಸನದಲ್ಲಿ ಕುಳಿತುಕೊಂಡು ಇರಬೇಕಾಗುತ್ತದೆ.

ಪೈಲಟ್ ವಿಮಾನವನ್ನು ಲ್ಯಾಂಡ್ ಮಾಡುವ ಸಂಧರ್ಭದಲ್ಲಿ ಅಲ್ಲಿ ಶೌಚಾಲಯದಲ್ಲಿ ಯಾರೂ ಸಹ ಇರಬಾರದು. ಹಾಗೇನಾದರು ವ್ಯಕ್ತಿಗಳಿದ್ದರೆ ಅವರು ಅಪಾಯಕ್ಕೆ ಒಳಗಾಗುವುದಂತೂ ಖಂಡಿತ. ಯಾಕೆಂದರೆ ವಿಮಾನದ ಬಾತ್‌ರೂಮ್‌ನಲ್ಲಿ ಯಾವುದೇ ರೀತಿಯ ಸುರಕ್ಷತಾ ವಿಧಾನಗಳು ಸಹ ಇಲ್ಲ. ಈ ಕಾರಣದಿಂದ ಲ್ಯಾಂಡಿಂಗ್ ಮತ್ತು ಟೇಕಾಫ್ ಸಮಯದಲ್ಲಿ ವಿಮಾನದ ಶೌಚಾಲಯದಲ್ಲಿ ಇರುವುದು ಅಪಾಯಕಾರಿಯಾದ ವಿಷಯ ಎಂದು ಹೇಳುವುದು.
ಇನ್ನು ಕೆಲವೊಂದು ಮಾಹಿತಿಗಳ ಪ್ರಕಾರ ವಿಮಾನವೇನಾದರೂ ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೆ ಓಳಗಾಗಿ ಸಂಪೂರ್ಣವಾಗಿ ಸುಟ್ಟು ನಾಶವಾಗಿ ಹೋದರೆ, ಮೃತದೇಹಗಳು ಯಾವ ಸೀಟ್ ನಂಬರ್‌ನಲ್ಲಿವೆ ಎಂದು ನೊಡಿ ಚಾರ್ಟ್‌ಗೆ ಅನುಸಾರವಾಗಿ ಶವಗಳನ್ನು ಗುರುತಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಸಂಧರ್ಭದಲ್ಲಿ ಶೌಚಾಲಯದಲ್ಲಿ ಅದು ಯಾರು ಎಂದು ಗುರುತು ಹಿಡಿಯುವುದು ಸಹ ಕಷ್ಟವಾಗುತ್ತದೆ ಎಂಬುದು ವಾಸ್ತವ.
ಇನ್ನು ವಿಮಾನದಲ್ಲಿ ಕುಳಿತುಕೊಂಡ ನಂತರ ಅದೇನಾದರೂ ಟೇಕಾಫ್ ಆಗಲು ತಡವಾಗುವ ಸಂಧರ್ಭದಲ್ಲಿ ಯಾರಿಗಾದರೂ ಶೌಚಾಲಯಕ್ಕೆ ಹೋಗಬೇಕಾದ ಅಗತ್ಯ ಬಂದರೆ ಆ ವಿಮಾನದಲ್ಲಿರುವ ಸಿಬ್ಬಂದಿ ಅಂತಹ ವ್ಯಕ್ತಿಗಳನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಬೇಕಾಗುತ್ತದೆ, ಮತ್ತು ವಿಮಾನವೇನಾದರೂ ಟೇಕಾಫ್ ಆಗುವ ಸೂಚನೆ ಸಿಕ್ಕಿದರೆ ಅವರನ್ನು ಕೂಡಲೇ ವಾಪಸ್ ಕಳಿಸಬೇಕಾಗುತ್ತದೆ. ಒಂದೊಮ್ಮೆ ಟೇಕಾಫ್ ಆದ ನಂತರ ಪ್ರಯಾಣಿಕರು ಶೌಚಾಲಯದ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications