ಎಲಿಯೊ ತ್ರಿಚಕ್ರ ಕಾರು ನಿಮ್ಮ ಫೇವರಿಟ್?
ನಮ್ಮ ದೈನಂದಿನ ಜೀವನದಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚುತ್ತಲೇ ಇವೆ. ದಿನದಿಂದ ದಿನಕ್ಕೆ ರಸ್ತೆಗಳಿಯುವ ವಾಹನಗಳ ಸಂಖ್ಯೆಯಲ್ಲೂ ಭಾರಿ ವರ್ಧನೆಯುಂಟಾಗಿದೆ. ಇದರಿಂದಾಗಿ ಸ್ಥಳಾವಕಾಶದ ಹಾಗೂ ಸೂಕ್ತ ಪಾರ್ಕಿಂಗ್ ಕೊರತೆಯನ್ನು ಅನುಭವಿಸುತ್ತಿದ್ದೇವೆ.
ಸದ್ಯ ಕಾರು ಖರೀದಿಸಬೇಕೆಂದರೆ ಸರಾಸರಿ ಮನೆ ಕಟ್ಟುವುದಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಹಾಗಿರುವಾಗ ಇಂದಿನ ಆಧುನಿಕ ಜಗತ್ತಿಗೆ ಹೊಂದಿಕೆಯಾಗುವ ರೀತಿಯ ಕಾರು ನಿರ್ಮಾಣದ ಕುರಿತು ಯೋಚನೆ ಬೆಳೆದಿದೆ. ಇದು ಸಾಂಪ್ರಾದಾಯಿಕ ಸಾರಿಗೆ ವ್ಯವಸ್ಥೆಯೊಂದಿಗೆ ಎಲ್ಲ ಸಂಚಾರ ಅಗತ್ಯಗಳನ್ನು ಪೂರೈಸುತ್ತಿದೆ.
ಕಾರು ಉತ್ಸಾಹಿ ಪಾಲ್ ಎಲಿಯೊ ಮನದಲ್ಲಿ ಹೊಳೆದಿರುವ ಕಲ್ಪನಾ ವಾಹನವೇ ಎಲಿಯೊ ಮೂರು ಚಕ್ರದ ಕಾರು. ಭವಿಷ್ಯದ ಎಲ್ಲ ಸಂಚಾರ ಅಗತ್ಯಗಳನ್ನು ಎಲಿಯೊ ನಿಭಾಯಿಸುವ ಭರವೆಯನ್ನು ಎಲಿಯೊ ಮೋಟಾರ್ಸ್ ಹೊಂದಿದೆ.

ಎರಡು ಸೀಟಿನ ಮೂರು ಚಕ್ರದ ಎಲಿಯೊ ಕಾರು ಪ್ರತಿ ಲೀಟರ್‌ಗೆ ಸರಾಸರಿ 36 ಕೀ.ಮೀ. (84mpg) ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಎಲಿಯೊ ಭವಿಷ್ಯದ ಕಾರು 8 ಗ್ಯಾಲನ್ ಟ್ಯಾಂಕ್ ಹೊಂದಿದ್ದು, 672 ಮೈಲ್ (1081 ಕೀ.ಮೀ) ದೂರ ಸಾಗುವ ಸಾಮರ್ಥ್ಯ ಹೊಂದಿದೆ. ಪ್ರತಿ ಗ್ಯಾಲನ್ ಟ್ಯಾಂಕ್‌ನಲ್ಲಿ 84 ಕೀ.ಮೀ ಸಂಚರಿಸಬಹುದಾಗಿದೆ.

ನೀವು ಅಂದುಕೊಂಡ ಹಾಗೇ ಎಲಿಯೊ ಕಾರು ಅಷ್ಟೊಂದು ದುಬಾರಿಯಲ್ಲ. ಇದು ನಾಲ್ಕು ಲಕ್ಷ ಅಸುಪಾಸಿನಲ್ಲಿ ($6,800) ಆಗಮನವಾಗುವ ನಿರೀಕ್ಷೆಯಿದೆ.

ಸುರಕ್ಷತೆ
ಈ ಕಾರಿನಲ್ಲಿ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗಿದ್ದು, ಮೂರು ಏರ್ ಬ್ಯಾಗ್ಸ್, ಆಟಿ ಲಾಕ್ ಬ್ರೇಕಿಂಗ್ ಸಿಸ್ಟಂಗಳಂತಹ ಫೈವ್ ಸ್ಟಾರ್ ಸುರಕ್ಷತೆಯನ್ನು ಹೊಂದಿದೆ.

ಪ್ರಸ್ತುತ ಕಾರು ಅಮೆರಿಕದಲ್ಲಿ ತಯಾರಾಗುತ್ತಿದ್ದು, ಅಲ್ಲಿನ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಸದ್ಯ ಭಾರತಕ್ಕೆ ಆಗಮನವಾಗುವ ಸಾಧ್ಯತೆಗಳಿಲ್ಲ.

ತಾಜಾ ಲುಕ್ ಹೊಂದಿರುವ ಎಲಿಯೊ ಮೂರು ಚಕ್ರದ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿದೆ. ಇದು ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿದೆ.

ಎಲಿಯೊ ಕಾರು 3 ಸಿಲಿಂಡರ್, 1 ಲೀಟರ್, 70 ಅಶ್ವಶಕ್ತಿ, ಪ್ಯೂಯಲ್ ಇಂಜೆಕ್ಟಡ್, ಎಸ್‌ಒಎಚ್‌ಸಿ ಗ್ಯಾಸ್ ನಿಯಂತ್ರಿತ, ಲಿಕ್ವಿಡ್ ಕೂಲ್ಡ್ ಆಟೋಮೋಟಿವ್ ಎಂಜಿನ್ ಹೊಂದಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರಲಿದೆ.

ಎಲಿಯೊ ಸ್ಫೋರ್ಟ್ಸ್ ಕಾರುಗಳಷ್ಟೇ ವೇಗತೆ ಹೊಂದಿಲ್ಲವಾದರೂ ಪ್ರತಿ ಗಂಟೆಗೆ 160 ಕೀ.ಮೀ. ವೇಗತೆಯಲ್ಲಿ ಚಲಿಸಲಿದೆ. ಹಾಗೆಯೇ 9.6 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಎಂಜಿನ್ ಕಾರಿನ ಎದುರುಗಡೆ ಇರುವುದರಿಂದಲೂ ಹಾಗೂ ಫ್ರಂಟ್ ವೀಲ್ ಡ್ರೈವ್ ವಾಹನವಾಗಿರುವುದರಿಂದ ಮಧ್ಯದಲ್ಲಿ ತೀವ್ರತೆ ಕಡಿಮೆಯಾಗಲಿದ್ದು ಧ್ರುವ ಪ್ರದೇಶದಲ್ಲೂ ಚಲಿಸಬಹುದಾಗಿದೆ.

ಎಲಿಯೊ

ಎಲಿಯೊ

ಎಲಿಯೊ

ಎಲಿಯೊ

ಎಲಿಯೊ ತ್ರಿಚಕ್ರ ಕಾರು



Click it and Unblock the Notifications








