ಟೆರ್ರಾದಿಂದ ಭಾರತಕ್ಕೆ ಎಲೆಕ್ಟ್ರಿಕ್ ಆಟೋ ರಿಕ್ಷಾ

By Nagaraja

ಜಪಾನ್ ಮೂಲದ ಪ್ರಖ್ಯಾತ ವಿದ್ಯುತ್ ಚಾಲಿತ ತಯಾರಿಕ ಸಂಸ್ಥೆಯಾಗಿರುವ ಟೆರ್ರಾ ಮೋಟಾರ್ಸ್, ಹೊಸತಾದ ಆರ್6 ತ್ರಿಚಕ್ರ ವಾಹನವನ್ನು ಅನಾವರಣಗೊಳಿಸಿದೆ. ಪ್ರಸ್ತುತ ಆಟೋ ರಿಕ್ಷಾ ಈಗಾಗಲೇ ಭಾರತದಲ್ಲಿ ಯಶಸ್ವಿ ಪರೀಕ್ಷೆಯನ್ನು ನಡೆಸಿದೆ.

ದೇಶದಲ್ಲಿ ಆಟೋ ರಿಕ್ಷಾಗಳು ಪ್ರಮುಖ ಸಂಪರ್ಕ ಮಾದರಿಯಾಗಿದ್ದು, ಇದರಿಂದಲೇ ಬಹುತೇಕರು ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಹಾಗಿರುವಾಗ ಪರಿಸರ ಸ್ನೇಹಿ ಟೆರ್ರಾ ಆಟೋ ರಿಕ್ಷಾಗಳು ದೇಶದ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅರ್ಥವತ್ತಾಗಿಸಲಿದೆ.

ಟೆರ್ರಾ ಆರ್6 ಎಲೆಕ್ಟ್ರಿಕ್ ಆಟೋ ರಿಕ್ಷಾ ಅನಾವರಣ

ನೀವು ನೋಡುತ್ತಿರುವ ವಾಹನಗಳಿಂದ ಹೊರ ಬೀಳುವ ಹಬೆಗಳು ಹೆಚ್ಚು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಜನರ ಆರೋಗ್ಯವು ಹದೆಗೆಡುತ್ತದೆ. ಆದರೆ ಟೆರ್ರಾ ವಿದ್ಯುತ್ ಚಾಲಿತ ರಿಕ್ಷಾಗಳು ಇದಕ್ಕೊಂದು ಪರಿಹಾರವಾಗಲಿದೆ. ಈಗ ಅನಾವರಣಗೊಂಡಿರುವ ಟೆರ್ರಾ ಎಲೆಕ್ಟ್ರಿಕ್ ವಾಹನ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿಸಿದ್ದಲ್ಲಿ ಗರಿಷ್ಠ 100 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿರಲಿದೆ.

ಟೆರ್ರಾ ಆರ್6 ಎಲೆಕ್ಟ್ರಿಕ್ ಆಟೋ ರಿಕ್ಷಾ ಅನಾವರಣ

ದೇಶದ ನಗರ ಸಾರಿಗೆಯನ್ನು ಗಮನದಲ್ಲಿಟ್ಟುಕೊಂಡಾಗ ಟೆರ್ರಾ ಆಟೋ ರಿಕ್ಷಾಗಳು ಹೆಚ್ಚು ಸೂಕ್ತವೆನಿಸಲಿದೆ. ಅಲ್ಲದೆ ಮುಂದಿನ ವರ್ಷ ಅಂದರೆ 2015ನೇ ಸಾಲಿನಲ್ಲಿ 10,000 ಯುನಿಟ್‌ಗಳನ್ನು ಮಾರಾಟ ಮಾಡುವುದು ಟೆರ್ರಾ ಇರಾದೆಯಾಗಿದೆ.

ಟೆರ್ರಾ ಆರ್6 ಎಲೆಕ್ಟ್ರಿಕ್ ಆಟೋ ರಿಕ್ಷಾ ಅನಾವರಣ

ಸ್ಮರ್ದಾತ್ಮಕ ಬೆಲೆಗಳಲ್ಲಿ ಎರಡರಿಂದ ಮೂರು ವೆರಿಯಂಟ್ ಪರಿಚಯಿಸುವುದು ಸಂಸ್ಥೆಯ ಗುರಿಯಾಗಿದೆ. ಇದರಂತೆ ಆರ್6 ಅನಾವರಣಗೊಳಿಸಲಾಗಿದೆ. ಇದು 2950 ಎಂಎಂ ಉದ್ದ, 1090 ಎಂಎಂ ಅಗಲ ಮತ್ತು 1800 ಎಂಎಂ ಎತ್ತರವನ್ನು ಹೊಂದಿದೆ.

ಟೆರ್ರಾ ಆರ್6 ಎಲೆಕ್ಟ್ರಿಕ್ ಆಟೋ ರಿಕ್ಷಾ ಅನಾವರಣ

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಸಾಮಾನ್ಯ ಆಟೋ ರಿಕ್ಷಾಗಿಂತಲೂ ವಿಭಿನ್ನವಾಗಿ ಟೆರ್ರಾ ತ್ರಿಚಕ್ರ ವಾಹನವು ಏಳು ಮಂದಿಯ ಆಸನ ವ್ಯವಸ್ಥೆ (6 ಪ್ರಯಾಣಿಕರು ಜೊತೆಗೆ ಚಾಲಕ) ಹೊಂದಿರಲಿದೆ.

ಟೆರ್ರಾ ಆರ್6 ಎಲೆಕ್ಟ್ರಿಕ್ ಆಟೋ ರಿಕ್ಷಾ ಅನಾವರಣ

ಸಂಸ್ಥೆಯ ಪ್ರಕಾರ ಟೆರ್ರಾ ಆರ್6 ತ್ರಿಚಕ್ರ ವಾಹನವನ್ನು ಏಳು ತಾಸಿನಲ್ಲಿ ಸಂಪೂರ್ಣ ಚಾರ್ಜ್ ಮಾಡಿಸಬಹುದಾಗಿದೆ. ಇದನ್ನು ಶೇ. 80ರಷ್ಟು ಚಾರ್ಜ್ ಅನ್ನು ಕೇವಲ ಎರಡರಿಂದ ಮೂರು ತಾಸಿನಲ್ಲೇ ಪಡೆಯಬಹುದಾಗಿದೆ.

ಟೆರ್ರಾ ಆರ್6 ಎಲೆಕ್ಟ್ರಿಕ್ ಆಟೋ ರಿಕ್ಷಾ ಅನಾವರಣ

ಇನ್ನು ಪರಿಣಾಮಕಾರಿ 3.2 ಮೀಟರ್ ಟರ್ನಿಂಗ್ ರೇಡಿಯಸ್, ರೈನ್ ಕವರ್ ಮತ್ತು ರಿವರ್ಸ್ ಗೇರ್ ಸೌಲಭ್ಯವನ್ನು ಪಡೆಯಲಿದೆ.

ಟೆರ್ರಾ ಆರ್6 ಎಲೆಕ್ಟ್ರಿಕ್ ಆಟೋ ರಿಕ್ಷಾ ಅನಾವರಣ

ದೇಶದಲ್ಲಿನ ಸಾರ್ವಜನಿಕ ಸಂಚಾರ ವ್ಯವಸ್ಥೆಯು ಗಣನೀಯವಾಗಿ ಸುಧಾರಣೆ ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಟೆರ್ರಾ ಮೋಟಾರ್ಸ್ ಆರ್6 ತ್ರಿಚಕ್ರ ವಾಹನ ಮಹತ್ವದ ಪಾತ್ರ ವಹಿಸಲಿದೆ.

ಟೆರ್ರಾ ಆರ್6 ಎಲೆಕ್ಟ್ರಿಕ್ ಆಟೋ ರಿಕ್ಷಾ ಅನಾವರಣ

ಟೆರ್ರಾ ಆರ್6 ತ್ರಿಚಕ್ರ ವಾಹನವು 48 ವಾಟ್ 100ಎಎಚ್ ಬ್ಯಾಟರಿ ಪಡೆದುಕೊಂಡಿದ್ದು, 150 ಕೆ.ಜಿ ಭಾರವನ್ನು ಹೊಂದಿರುತ್ತದೆ. ಹಾಗೆಯೇ ಡ್ರಮ್ ಬ್ರೇಕ್ ಸೌಲಭ್ಯ ಹೊಂದಿರುತ್ತದೆ.

Most Read Articles

Kannada
English summary
Japanese electric vehicle maker Terra Motors has unveiled new R6 electric auto rickshaw in India. 
Story first published: Monday, December 22, 2014, 12:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X