ಯುವ ನಟಿಯಿಂದ ನೂತನ ಹ್ಯುಂಡೈ ಐ20 ಕಾರು ಖರೀದಿ.. ಸಂಭ್ರಮದಲ್ಲಿ ತೇಲಾಡಿದ ಕುಟುಂಬ!

ಮಲಯಾಳಂ ನಟಿ ಮಾಳವಿಕಾ ಕೃಷ್ಣದಾಸ್ (Malavika Krishnadas) ಜನಪ್ರಿಯ ಧಾರವಾಹಿ 'ಇಂದುಲೇಖಾ'ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಮನೆಮಾತಾಗಿದ್ದು, ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 2018ರಲ್ಲಿ ಮಲಯಾಳಂ ಟ್ಯಾಲೆಂಟ್ ಹಂಟ್ ರಿಯಾಲಿಟಿ ಶೋ ನಾಯ್ಕಾ ನಾಯಕನ್‌ನಲ್ಲಿ 2ನೇ ರನ್ನರ್-ಅಪ್ ಆದ ನಂತರ, ದೊಡ್ಡಮಟ್ಟದಲ್ಲಿ ಖ್ಯಾತಿ ಗಳಿಸಿದರು. ನಟಿ ಮಾತ್ರವಲ್ಲದೆ, ಟಿವಿ ನಿರೂಪಕಿ ಹಾಗೂ ಶಾಸ್ತ್ರೀಯ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಮಾಳವಿಕಾ, 2023ರಲ್ಲಿ ತೇಜಸ್ ಜ್ಯೋತಿ ಎಂಬುವವರನ್ನು ವಿವಾಹವಾಗಿದ್ದು, ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.

ಇತ್ತೀಚಿಗೆ ನಟಿ ಮಾಳವಿಕಾ ಕೃಷ್ಣದಾಸ್ 25ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ಸವಿನೆನಪಿಗಾಗಿ ಹೊಚ್ಚ ಹೊಸ ಹ್ಯುಂಡೈ ಐ20 ಎನ್-ಲೈನ್ (Hyundai i20 N-Line) ಕಾರನ್ನು ಖರೀದಿಸಿದ್ದಾರೆ. ಈ ಕುರಿತಂತೆ ಮಾಳವಿಕಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, 'ನಮ್ಮ ಕುಟುಂಬಕ್ಕೆ ನೂತನ ಅತಿಥಿಯನ್ನು ಸ್ವಾಗತಿಸಲು ಸಂತೋಷವಾಗಿದೆ' ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ. ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Young Actress Malavika Krishnadas Buys Hyundai I20 N-Line Car Family Very Happy

ನಟಿ ಮಾಳವಿಕಾ ಕೃಷ್ಣದಾಸ್ ಹ್ಯುಂಡೈ ಐ20 ಎನ್-ಲೈನ್ ಕಾರಿನ ಯಾವ ರೂಪಾಂತರ (ವೇರಿಯೆಂಟ್)ವನ್ನು ತೆಗೆದುಕೊಂಡಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ವಿವರಗಳು ಲಭ್ಯವಿಲ್ಲ. ದೇಶೀಯವಾಗಿ ಖರೀದಿಗೆ ಸಿಗುವ ಈ ಹ್ಯಾಚ್‌ಬ್ಯಾಕ್, ರೂ.9.99 ಲಕ್ಷದಿಂದ ರೂ.12.52 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎನ್6 ಹಾಗೂ ಎನ್8 ರೂಪಾಂತರಗಳ ಆಯ್ಕೆಯಲ್ಲಿಯೂ ದೊರೆಯಲಿದ್ದು, ಟೈಟಾನ್ ಗ್ರೇ, ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳನ್ನು ಕೂಡ ಪಡೆದಿದೆ.

ಈ ಕಾರು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 120 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 172 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Young Actress Malavika Krishnadas Buys Hyundai I20 N-Line Car Family Very Happy

ಹ್ಯುಂಡೈ ಐ20 ಎನ್-ಲೈನ್ ಹ್ಯಾಚ್‌ಬ್ಯಾಕ್‌ನಲ್ಲಿ 5 ಮಂದಿ ಆರಾಮದಾಯಕವಾಗಿ ದೂರದ ಊರುಗಳಿಗೆ ಪ್ರಯಾಣಿಸಬಹುದು. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಏರ್ ಪ್ಯೂರಿಫೈಯರ್, ಕನೆಕ್ಟ್ದ್ ಕಾರ್ ಟೆಕ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆಗೂ ಈ ಕಾರು ಹೆಸರುವಾಸಿಯಾಗಿದ್ದು, 6 ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್), ESC (ಹಿಲ್ ಅಸಿಸ್ಟ್ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ. ಹ್ಯುಂಡೈ ಐ20 ಎನ್-ಲೈನ್ ಹ್ಯಾಚ್‌ಬ್ಯಾಕ್‌ಗೆ ಟಾಟಾ ಪಂಚ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಕಾರುಗಳು ಪ್ರಬಲ ಎದುರಾಳಿಯಾಗಿವೆ.

ಸಾಮಾನ್ಯ ಹ್ಯುಂಡೈ ಐ20 (Hyundai i20) ಕಾರು ಖರೀದಿಗೆ ಲಭ್ಯವಿದ್ದು, ರೂ.7.04 ಲಕ್ಷದಿಂದ ರೂ.11.21 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 18, 2024, 13:06 [IST]
English summary
Young actress malavika krishnadas buys hyundai i20 n line car family very happy
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+