YouTube

'ಸ್ಟಾರ್' ಗುಟ್ಕಾ ಕಂಪನಿ ಮಾಲೀಕನ ಮಗ 'ಶ್ರೇಣಿಕ್' ಬಳಿ ಬರೋಬ್ಬರಿ 120 ಲಗ್ಷುರಿ ಕಾರುಗಳಿವೆ !!

ಶ್ರೇಣಿಕ್ ಘೋಡವತ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ದುಬಾರಿ ಕಾರುಗಳಿದ್ದು, ತಂದೆಗೆ ತಕ್ಕ ಮಗ ಎಂಬುದನ್ನು ಈ ಮೂಲಕ ಜಗತ್ತಿಗೆ ಹೇಳ ಹೊರಟಿದ್ದಾರೆ.

By Girish

ಮಹಾರಾಷ್ಟ್ರದ ಘೋಡವತ್ ಎನರ್ಜಿ ಎಂಬ ಬೃಹತ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೇಣಿಕ್ ಘೋಡವತ್ ಹೆಚ್ಚು ಕಡಿಮೆ 120 ಲಗ್ಷುರಿ ಕಾರುಗಳಿಗೆ ಒಡೆಯರು ಎಂದರೆ ನೀವು ನಂಬಲೇ ಬೇಕು.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ಶ್ರೇಣಿಕ್ ಘೋಡವತ್ ಪ್ರತಿಷ್ಠಿತ ಘೋಡವತ್ ಕುಟುಂಬದದಿಂದ ಬಂದ ಯುವಕನಾಗಿದ್ದು, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಬರೋಬ್ಬರಿ 120 ಸೂಪರ್ ಕಾರುಗಳ ಒಡೆಯ ಈತ. ಒಂದೊಂದು ಕಾರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ಹೌದು, ಸಾಮಾನ್ಯವಾಗಿ ಒಂದು ಸಣ್ಣ ಕಾರಿನ ಒಡೆಯರಾದರೆ ಸಾಕು ಹೆಚ್ಚುಗಾರಿಕೆ, ಪ್ರತಿಷ್ಠೆ ಮತ್ತು ಸ್ಥಾನಮಾನದ ಬಗ್ಗೆ ಯೋಚಿಸುವ ಹಲವು ಮಂದಿ ಈ ಭೂಮಿ ಮೇಲಿದ್ದಾರೆ, ಆದರೆ ಒಮ್ಮೆ ಯೋಚಿಸಿ ಈ ಹುಡುಗ ಮನಸ್ಥಿತಿ ಹೇಗಿರಬೇಡ ?

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ಈತನಿಗಿರುವ ಕಾರಿನ ಮೇಲಿನ ಪ್ರೀತಿಗೆ ಮುಖ್ಯ ಕಾರಣ ಈತನ ತಂದೆ ಎಂದರೆ ನೀವು ನಂಬಲೇ ಬೇಕು. ಹೌದು, ಈತನ ತಂದೆಯಾದ ಸಂಜಯ್ ಘೋಡವತ್ 1994ರಿಂದಲೇ ಕಾರುಗಳ ಸಂಗ್ರಹ ಮಾಡಲು ಶುರು ಮಾಡಿದ್ದರು.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ಮಗನಿಗೆ ಸೂಪರ್ ಕಾರುಗಳೆಂದರೆ ಪಂಚಪ್ರಾಣ ಆದರೆ ತಂದೆಗೆ ಸೂಪರ್ ಕಾರುಗಳಿಗಿಂತಲೂ ಸೆಡಾನ್ ಮತ್ತು ಕ್ರೀಡಾ ಬಳಕೆಯ ವಾಹನದ ಮೇಲೆ ಹೆಚ್ಚು ಪ್ರೀತಿ, ಒಟ್ಟಿನಲ್ಲಿ ಇಬ್ಬರಿಗೂ ಕಾರಿನ ಮೇಲೆ ಪ್ರೀತಿ ಇರುವುದರಿಂದ "ತಂದೆಗೆ ತಕ್ಕ ಮಗ" ಎನ್ನಬಹುದು.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ತಮಗಿರುವ ಕಾರಿನ ಮೇಲಿನ ಪ್ರೀತಿಯನ್ನು, ಕಾರುಗಳನ್ನು ಕೊಳ್ಳುವ ಮೂಲಕ ಮತ್ತು ಅಷ್ಟೇ ಮುತುವರ್ಜಿಯಿಂದ ಕಾರುಗಳನ್ನು ನೋಡಿಕೊಳ್ಳುವ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಶ್ರೇಣಿಕ್ ಘೋಡವತ್ ಶೇಕಡ 25 ರಷ್ಟು ಕಾರುಗಳನ್ನು ಮಾತ್ರ ಹೊಂದಿದ್ದು ಉಳಿದಂತೆ ಎಲ್ಲಾ ಕಾರುಗಳು ತಂದೆಯಾದ ಸಂಜಯ್ ಘೋಡವತ್ ಅವರ ಬಳಿ ಇದೆ ಎನ್ನಲಾಗಿದೆ.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ತಂದೆ ಮತ್ತು ಮಗ ಇಬ್ಬರು ಸೇರಿ "ಮೂರು ಸೆಡಾನ್ ಕಾರುಗಳಿಗೆ ಒಂದು ಸೂಪರ್ ಕಾರು ಸಮ" ಎಂಬ ನಿಯಮ ಪಾಲಿಸಿಕೊಂಡು ಬರುತ್ತಿದ್ದು, ಮೂರು ಸೆಡಾನ್ ಕಾರುಗಳನ್ನು ಕೊಂಡ ಮೇಲೆ ಯಾವುದೇ ಕಾರಣಕ್ಕೂ ಮತ್ತೊಂದು ಸೆಡಾನ್ ಕೊಳ್ಳದೆ, ಸೂಪರ್ ಕಾರನೇ ಕೊಳ್ಳಬೇಕು ಎಂಬ ನಿಯಮಕ್ಕೆ ಇಬ್ಬರು ಬದ್ಧರಾಗಿದ್ದಾರೆ.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ಕಾರಿನ ಮೇಲಿರುವ ಪ್ರೀತಿ ಈ ಕುಟುಂಬಕ್ಕೆ ನಿನ್ನೆ ಮೊನ್ನೆಯದಲ್ಲ, ಶ್ರೇಣಿಕ್ ಘೋಡವತ್ ಅವರ ತಾತ ಕೂಡ ಹಲವು ಕಾರುಗಳ ಒಡೆಯರಾಗಿದ್ದರು. ಆಗಿನ ಕಾಲದ ಕಾರುಗಳನ್ನು ಕೊಂಡು ತರುವ ಮೂಲಕ ತಮಗಿರುವ ಕಾರಿನ ವ್ಯಾಮೋಹ ತೋರ್ಪಡಿಸಿದ್ದರು.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ಇದೆ ಪದ್ದತಿಯನ್ನು ಈ ಕುಟುಂಬ ಪಾಲಿಸಿಕೊಂಡು ಬರುತಿದ್ದು, ಶ್ರೇಣಿಕ್ ಘೋಡವತ್ ಮತ್ತೊಂದು ಹಂತಕ್ಕೆ ಕುಟುಂಬಕ್ಕಿರುವ ಕಾರ್ ಮೇಲಿನ ಪ್ರೀತಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ಮೊಟ್ಟ ಮೊದಲ ಬಾರಿಗೆ ತನ್ನ ತಂದೆಯವರ ಮಾನ್ಯುಯಲ್ ಸ್ವಿಫ್ಟ್ ಕಾರನ್ನು ಚಾಲನೆ ಮಾಡುವ ಮೂಲಕ ಕಾರ್ ಪಯಣವನ್ನು ಶ್ರೇಣಿಕ್ ಘೋಡವತ್ ಆರಂಭಿಸಿದರು. ಮಗನಿಗೆ ಕಾರ್ ಕೊಡುವ ಮುಂಚೆ ಸಾಮಾನ್ಯವಾಗಿ ಎಲ್ಲಾ ತಂದೆಗೆ ಆಗುವ ಆತಂಕ ಇವರಿಗೂ ಆಗಿತ್ತಂತೆ !!

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ಇವರ ಬಳಿ ದುಬಾರಿ ಬೆಲೆಯ ಬೆಂಟ್ಲಿ ಫ್ಲೈಯಿಂಗ್ ಸ್ಪುರ್, ರೇಂಜ್ ರೋವರ್ ಎವೋಕ್, ನಿಸ್ಸಾನ್ ಜಿಟಿಆರ್, ಷೋರ್ಷೆ, ಲಂಬೋರ್ಗಿನಿ, ಕ್ಯಾಡಿಲಾಕ್, ಜಾಗ್ವಾರ್, ಬಿಎಂಡಬ್ಲ್ಯೂ, ಲಿಂಕಾನ್, ಆಡಿ ಮತ್ತಿತರ ಕಂಪನಿಯ ವಾಹನಗಳು ಇವರ ಗ್ಯಾರೇಜ್ ಸೇರಿವೆ.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ರೋಲ್ಸ್ ರೊಯ್ಸ್ ಫ್ಯಾಂಟಮ್ ಅತಿ ದುಬಾರಿ ಐಷಾರಾಮಿ ಕಾರಾಗಿದ್ದು, ಕುಟುಂಬಕ್ಕೆ ಈ ಕಾರು ಎಲ್ಲಿಲ್ಲದ ಉತ್ಸಾಹ ಉಂಟು ಮಾಡಿತ್ತಂತೆ.

 ಶ್ರೇಣಿಕ್ ಎಂಬ 27 ವರ್ಷದ ತರುಣನ ಬಳಿ ಬರೋಬ್ಬರಿ 120 ಲಗ್ಜುರಿ ಕಾರುಗಳಿವೆ !!

ಕೊನೆ ಮಾತು, 'ಉಳ್ಳವರು ಶಿವಾಲಯ ಕಟ್ಟುವರು, ನಾನೇನ ಮಾಡುವೆ ಬಡವನಯ್ಯಾ' ಎಂಬ ಬಸವಣ್ಣನವರ ವಚನದಂತೆ, ಇರುವರು ರೋಲ್ಸ್ ರೊಯ್ಸ್ ಅಂತಾರೆ ಇಲ್ಲದೇ ಇರುವವರು ರೊಟ್ಟಿ ರೊಟ್ಟಿ ಅಂತಾರೆ, ಇಷ್ಟೇ ಅಲ್ಲವೇ ಜೀವನ.

ಇದೇ ವರ್ಷ ಬಿಡುಗಡೆಗೊಳ್ಳಲಿರುವ ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ 2017 ಕಾರಿನ ಚಿತ್ರಗಳನ್ನು ವೀಕ್ಷಿಸಿ

Most Read Articles

Kannada
English summary
Shrenik Ghodawat is the Managing Director of Ghodawat Energy. 27-year-old managing director Shrenik Ghodawat has a collection of 120 super cars parked in his garage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X