ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ಕರೋನಾದಿಂದ ಬಳಲುತ್ತಿರುವ ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್‌ನೊಂದಿಗೆ 1,400 ಕಿ.ಮೀ ಪ್ರಯಾಣಿಸಿದ ಯುವಕನೊಬ್ಬನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ನೋಯ್ಡಾದ ನಿವಾಸಿ ರಂಜನ್ ಎಂಬಾತ ಕೆಲವು ದಿನಗಳ ಹಿಂದೆ ಕರೋನಾ ಸೋಂಕಿಗೆ ಒಳಗಾಗಿ, ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಆಕ್ಸಿಜನ್ ಇಲ್ಲದೆ ರಂಜನ್ ಪ್ರಾಣ ಉಳಿಸುವುದು ಕಷ್ಟವೆಂದು ವೈದ್ಯರು ತಿಳಿಸಿದ್ದಾರೆ.

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ರಂಜನ್ ಪ್ರಾಣ ಉಳಿಯಬೇಕಾದರೆ ಆದಷ್ಟು ಬೇಗ ಆಕ್ಸಿಜನ್ ವ್ಯವಸ್ಥೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ರಂಜನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಪರದಾಡುತ್ತಿರುವ ಸುದ್ದಿ ಜಾರ್ಖಂಡ್'ನ ಬೊಕಾರೊದಲ್ಲಿರುವ ಆತನ ಸ್ನೇಹಿತ ದೇವೇಂದ್ರನಿಗೆ ತಲುಪಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ತನ್ನ ಸ್ನೇಹಿತನ ಜೀವವು ತೊಂದರೆಯಲ್ಲಿದೆ ಎಂಬ ಸುದ್ದಿ ದೇವೇಂದ್ರನಿಗೆ ತಿಳಿದ ತಕ್ಷಣ ಆತ ಆಕ್ಸಿಜನ್ ಸಿಲಿಂಡರ್'ಗಾಗಿ ಹುಡುಕಾಟ ನಡೆಸಿದ್ದಾನೆ. ನೋಯ್ಡಾದಲ್ಲಿ ಆಕ್ಸಿಜನ್ ಸಿಲಿಂಡರ್ ಸಿಗುವುದು ಅಸಾಧ್ಯವೆಂದು ತಿಳಿದು ಬಂದಿದೆ.

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ದೇವೇಂದ್ರನಿಗೆ ಬೊಕಾರೊದಲ್ಲಿ ಆಕ್ಸಿಜನ್ ಸಿಲಿಂಡರ್ ದೊರೆತಿದೆ. ಸ್ನೇಹಿತನ ಜೀವ ಉಳಿಸಲು ಮುಂದಾದ ಆತ ತನ್ನ ಕಾರಿನಲ್ಲಿ ಸಿಲಿಂಡರ್ ತೆಗೆದುಕೊಂಡು 1,400 ಕಿ.ಮೀ ಪ್ರಯಾಣಿಸಿ ನೋಯ್ಡಾ ತಲುಪಿದ್ದಾನೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ದೇವೇಂದ್ರನಿಗೆ ಆಕ್ಸಿಜನ್ ಸಿಲಿಂಡರ್ ಸುಲಭವಾಗಿ ದೊರೆತಿಲ್ಲ. ಆತ ಹಲವಾರು ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಹಾಗೂ ಆಕ್ಸಿಜನ್ ಸಿಲಿಂಡರ್ ಪೂರೈಕೆದಾರರನ್ನು ಸಂಪರ್ಕಿಸಿದ್ದಾನೆ.

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ಖಾಲಿ ಸಿಲಿಂಡರ್ ಇಲ್ಲದೆ ಯಾರೊಬ್ಬರು ಆಕ್ಸಿಜನ್ ನೀಡಲು ಸಿದ್ಧರಿರಲಿಲ್ಲ. ಇದರಿಂದ ಧೈರ್ಯ ಕಳೆದುಕೊಳ್ಳದ ದೇವೇಂದ್ರ ತನ್ನ ಪ್ರಯತ್ನವನ್ನು ಮುಂದುವರೆಸಿದ್ದಾನೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ತನ್ನ ಮತ್ತೊಬ್ಬ ಸ್ನೇಹಿತನ ಸಹಾಯದಿಂದ ಬಿಯಾಡಾದ ಜಾರ್ಖಂಡ್ ಸ್ಟೀಲ್ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸಂಪರ್ಕಿಸಿ, ಅವರಿಗೆ ಸಮಸ್ಯೆಯನ್ನು ತಿಳಿಸಿದ್ದಾನೆ. ಆತನ ಸಮಸ್ಯೆ ಆಲಿಸಿದ ಉತ್ಪಾದನಾ ಘಟಕದವರು ಆಕ್ಸಿಜನ್ ಸಿಲಿಂಡರ್ ನೀಡಲು ಒಪ್ಪಿದ್ದಾರೆ.

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ಆದರೆ ಅವರು ಆಕ್ಸಿಜನ್ ಸಿಲಿಂಡರ್‌ ನೀಡಲು ಭದ್ರತಾ ಹಣ ಜಮಾ ಮಾಡುವಂತೆ ಷರತ್ತು ವಿಧಿಸಿದ್ದಾರೆ. ಷರತ್ತಿಗೆ ಒಪ್ಪಿದ ದೇವೇಂದ್ರ ರೂ.10 ಸಾವಿರ ನೀಡಿ ಜಂಬೋ ಸಿಲಿಂಡರ್ ಪಡೆದಿದ್ದಾನೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ಇದರಲ್ಲಿ ಆಕ್ಸಿಜನ್ ಬೆಲೆ ರೂ.400ಗಳಾದರೆ, ಸಿಲಿಂಡರ್ ಭದ್ರತಾ ಹಣ ರೂ.9600ಗಳಾಗಿದೆ. ಆಕ್ಸಿಜನ್ ಸಿಲಿಂಡರ್ ಪಡೆದ ನಂತರ ದೇವೇಂದ್ರ ತನ್ನ ಕಾರಿನ ಮೂಲಕ 24 ಗಂಟೆಗಳಲ್ಲಿ ನೋಯ್ಡಾ ತಲುಪಿದ್ದಾನೆ.

ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ

ಜಾರ್ಖಂಡ್ ರಾಜ್ಯದ ಗಡಿಯಲ್ಲಿ ಪೊಲೀಸರು ಆತನನ್ನು ತಡೆದು ತಪಾಸಣೆ ನಡೆಸಿದ್ದರು. ಸ್ನೇಹಿತನ ಪ್ರಾಣ ಉಳಿಸುವ ವಿಷಯ ತಿಳಿದ ನಂತರ ಆತನಿಗೆ ತೆರಳಲು ಅನುಮತಿ ನೀಡಿದ್ದಾರೆ. ದೇವೇಂದ್ರ ನೀಡಿದ ಆಕ್ಸಿಜನ್ ಅನ್ನು ರಂಜನ್‌ಗೆ ನೀಡಲಾಗಿದ್ದು, ನಂತರ ಆತನ ದೇಹದಲ್ಲಿ ಆಕ್ಸಿಜನ್ ಮಟ್ಟ ಏರಿಕೆಯಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Young man from Bokaro travels 1400 kms with oxygen cylinder to save friend's life. Read in Kannada.
Story first published: Thursday, April 29, 2021, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X