ವಿಚಿತ್ರ ರೀತಿಯಲ್ಲಿ ಕರೋನಾ ವೈರಸ್ ಪರೀಕ್ಷೆಗೊಳಪಟ್ಟ ಯುವಕ

ಭಾರತದಲ್ಲಿ ಕರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕರೋನಾ ವೈರಸ್‌ನ ಆರ್ಭಟ ತೀವ್ರವಾಗಿದೆ. ಸೋಂಕಿತರು ಹೆಚ್ಚಾದಂತೆಲ್ಲಾ ಸಾವಿನ ಪ್ರಮಾಣವು ಸಹ ಹೆಚ್ಚಾಗುತ್ತಿದೆ.

ವಿಚಿತ್ರ ರೀತಿಯಲ್ಲಿ ಕರೋನಾ ವೈರಸ್ ಪರೀಕ್ಷೆಗೊಳಪಟ್ಟ ಯುವಕ

ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಅನ್ನು ಮತ್ತೆ ಜಾರಿಗೊಳಿಸಲಾಗುತ್ತಿದೆ. ತಮಿಳಿನಲ್ಲಿಯೂ ಸಹ ಮತ್ತೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆದರೆ ಈ ಬಾರಿ ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಹಾಗೂ ತಿರುವಳ್ಳೂರು ಜಿಲ್ಲೆಗಳಲ್ಲಿ ಮಾತ್ರ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ವಿಚಿತ್ರ ರೀತಿಯಲ್ಲಿ ಕರೋನಾ ವೈರಸ್ ಪರೀಕ್ಷೆಗೊಳಪಟ್ಟ ಯುವಕ

ಇತರ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ವಿನಾಯಿತಿ ನೀಡಲಾಗಿದೆ. ಕರೋನಾ ವೈರಸ್ ಟೆಸ್ಟ್‌ಗಳನ್ನು ಸರಿಯಾಗಿ ನಡೆಸುತ್ತಿಲ್ಲವೆಂಬುದು ಸಾರ್ವಜನಿಕರ ಹಾಗೂ ಪ್ರತಿಪಕ್ಷಗಳ ಆರೋಪ. ಟೆಸ್ಟ್‌ಗಳನ್ನು ಕಡಿಮೆ ಸಂಖ್ಯೆಯಲ್ಲಿ ನಡೆಸಲಾಗುತ್ತಿದೆ ಎಂದು ಸಹ ಆರೋಪಿಸಲಾಗುತ್ತಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ವಿಚಿತ್ರ ರೀತಿಯಲ್ಲಿ ಕರೋನಾ ವೈರಸ್ ಪರೀಕ್ಷೆಗೊಳಪಟ್ಟ ಯುವಕ

ವೈದ್ಯಕೀಯ ಉಪಕರಣಗಳ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುತ್ತಿಲ್ಲ. ಜನರು ತಾವಾಗಿಯೇ ಮುಂದೆ ಬಂದರೂ ಪರೀಕ್ಷೆಗೊಳಪಡಿಸುತ್ತಿಲ್ಲ. ಆದರೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಯುವಕನೊಬ್ಬ ತಾನಾಗಿಯೇ ಮುಂದೆ ಬಂದು ಕರೋನಾ ವೈರಸ್ ಪರೀಕ್ಷೆ ನಡೆಸುವಂತೆ ಕೇಳಿಕೊಂಡಿದ್ದಾನೆ.

ವಿಚಿತ್ರ ರೀತಿಯಲ್ಲಿ ಕರೋನಾ ವೈರಸ್ ಪರೀಕ್ಷೆಗೊಳಪಟ್ಟ ಯುವಕ

ಮೀರತ್‌ನ ಸರ್ಕಾರಿ ಆಸ್ಪತ್ರೆಗೆ ಬಂದ ಆತ ಅಲ್ಲಿದ್ದವರ ಬಳಿ ತನಗೆ ಕರೋನಾ ವೈರಸ್ ಇದ್ದು, ಪರೀಕ್ಷೆಗೊಳಪಡಿಸುವಂತೆ ಮನವಿ ಮಾಡಿದ್ದಾನೆ. ಆತನನ್ನು ಪರೀಕ್ಷೆಗೊಳಪಡಿಸುವ ಬದಲು ಅಲ್ಲಿಂದಓಡಿಸಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಿಚಿತ್ರ ರೀತಿಯಲ್ಲಿ ಕರೋನಾ ವೈರಸ್ ಪರೀಕ್ಷೆಗೊಳಪಟ್ಟ ಯುವಕ

ಯುವಕನು ಸರ್ಕಾರಿ ಅಧಿಕಾರಿಯ ಕಾರಿಗೆ ಅಡ್ಡ ನಿಂತು ತನಗೆ ಕರೋನಾ ವೈರಸ್ ಇದೆ ಎಂದು ಹೇಳಿದ್ದಾನೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಅಲ್ಲಿಂದ ತೆರಳುವಂತೆ ಆತನ ಮನವೊಲಿಸಲು ಯತ್ನಿಸಿದ್ದಾರೆ. ತನ್ನ ಪಟ್ಟು ಸಡಿಲಿಸದ ಯುವಕ ತನ್ನನ್ನು ಪರೀಕ್ಷಿಸಲೇ ಬೇಕೆಂದು ಹಠ ಹಿಡಿದಿದ್ದಾನೆ.

ವಿಚಿತ್ರ ರೀತಿಯಲ್ಲಿ ಕರೋನಾ ವೈರಸ್ ಪರೀಕ್ಷೆಗೊಳಪಟ್ಟ ಯುವಕ

ಅಲ್ಲಿದ್ದವರು ಸ್ಥಳಕ್ಕೆ ಆಂಬ್ಯುಲೆನ್ಸ್ ಕರೆಸಿ ಯುವಕನನ್ನು ಪರೀಕ್ಷೆಗೊಳಪಡಿಸಿದ್ದು, ಆತನಿಗೆ ನಿಜವಾಗಿಯೂ ಕರೋನಾ ವೈರಸ್ ಸೋಂಕು, ತಗುಲಿದೆಯೇ ಇಲ್ಲವೇ ಎಂಬುದರ ಫಲಿತಾಂಶಕ್ಕಾಗಿಕಾಯಲಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಿಚಿತ್ರ ರೀತಿಯಲ್ಲಿ ಕರೋನಾ ವೈರಸ್ ಪರೀಕ್ಷೆಗೊಳಪಟ್ಟ ಯುವಕ

ಯುವಕನ ಮೊಂಡುತನದ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಕರೋನಾ ವೈರಸ್ ಪರೀಕ್ಷೆಯ ಫಲಿತಾಂಶ ಬಂದ ನಂತರ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ. ಕರೋನಾ ಸೋಂಕು ಇದ್ದರೂ ಸಹ ಯಾರೂ ಇಂತಹ ಪ್ರಯತ್ನಕ್ಕೆ ಮುಂದಾಗುವುದು ಸರಿಯಲ್ಲ.

ವಿಚಿತ್ರ ರೀತಿಯಲ್ಲಿ ಕರೋನಾ ವೈರಸ್ ಪರೀಕ್ಷೆಗೊಳಪಟ್ಟ ಯುವಕ

ಸದ್ಯಕ್ಕೆ ತೀವ್ರ ರೋಗಲಕ್ಷಣಗಳನ್ನು ಹೊಂದಿರುವವರು ಹಾಗೂ ಸೋಂಕಿತರ ಸಂಪರ್ಕದಲ್ಲಿರುವವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಇದರ ಜೊತೆಗೆ ಕಡಿಮೆ ರೋಗಲಕ್ಷಣ ಹೊಂದಿರುವವರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗುತ್ತಿದೆ.

Most Read Articles

Kannada
English summary
Young man from Meerut gets corona test in different way. Read in Kannada.
Story first published: Saturday, June 20, 2020, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X