ವಿಂಡೋ ಮೂಲಕ ಚಲಿಸುತ್ತಿದ್ದ ಕಾರಿನೊಳಕ್ಕೆ ಹಾರಿ ಕಾರನ್ನು ನಿಲ್ಲಿಸಿದ ಯುವಕ

ಜನರು ತಮ್ಮ ಸುತ್ತ ಮುತ್ತ ನಡೆಯುವ ಹಲವಾರು ಘಟನೆಗಳನ್ನು ರೆಕಾರ್ಡ್ ಮಾಡಿ ಆ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಾರೆ. ಕೆಲವು ವೀಡಿಯೊಗಳು ಜನರ ಅಚ್ಚರಿಗೆ ಕಾರಣವಾಗುತ್ತವೆ.

ವಿಂಡೋ ಮೂಲಕ ಚಲಿಸುತ್ತಿದ್ದ ಕಾರಿನೊಳಕ್ಕೆ ಹಾರಿ ಕಾರನ್ನು ನಿಲ್ಲಿಸಿದ ಯುವಕ

ಇನ್ನು ಕೆಲವು ವೀಡಿಯೊಗಳು ಜನರಲ್ಲಿ ಭಯ ಹುಟ್ಟಿಸುತ್ತವೆ. ಈಗ ಇದೇ ರೀತಿಯ ವೀಡಿಯೊವೊಂದನ್ನು ಯೂಟ್ಯೂಬ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ವೀಡಿಯೊ ನೋಡಿದರೆ ಒಂದು ಕ್ಷಣ ಭಯವಾಗದೇ ಇರಲಾರದು. ಈ ವೀಡಿಯೊದಲ್ಲಿರುವ ಘಟನೆ ನಡೆದಿರುವುದು ಅಲ್ಬೇನಿಯಾದ ರಾಜಧಾನಿಯಲ್ಲಿ.

ವಿಂಡೋ ಮೂಲಕ ಚಲಿಸುತ್ತಿದ್ದ ಕಾರಿನೊಳಕ್ಕೆ ಹಾರಿ ಕಾರನ್ನು ನಿಲ್ಲಿಸಿದ ಯುವಕ

ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಚಾಲನೆಯಲ್ಲಿರುವ ಕಾರಿನ ವಿಂಡೋ ಮೂಲಕ ಕಾರಿನೊಳಗೆ ಹಾರಿಹೋಗುವುದನ್ನು ಕಾಣಬಹುದು. ಕಂಟ್ರೋಲ್ ಸಿಗದೇ ಚಲಿಸುತ್ತಿದ್ದ ಕಾರ್ ಅನ್ನು ನಿಲ್ಲಿಸಲು ಆ ವ್ಯಕ್ತಿ ಈ ರೀತಿ ಮಾಡಿದ್ದಾನೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ವಿಂಡೋ ಮೂಲಕ ಚಲಿಸುತ್ತಿದ್ದ ಕಾರಿನೊಳಕ್ಕೆ ಹಾರಿ ಕಾರನ್ನು ನಿಲ್ಲಿಸಿದ ಯುವಕ

ಈ ವೀಡಿಯೊದಲ್ಲಿ ಸಿಲ್ವರ್ ಬಣ್ಣದ ಹ್ಯಾಚ್‌ಬ್ಯಾಕ್ ಕಾರು ರಿವರ್ಸ್ ಗೇರಿನಲ್ಲಿ ಹಿಂದಕ್ಕೆ ಸಾಗುತ್ತಿರುತ್ತದೆ. ಈ ಹ್ಯಾಚ್‌ಬ್ಯಾಕ್ ಕಾರು ನಗರದ ಸ್ಕ್ಯಾಂಡೆಬಗ್ ಸ್ಕ್ವೇರ್‌ಗೆ ಬರುತ್ತದೆ. ಅಲ್ಲಿ ದೇಶದ ಸಾರ್ವತ್ರಿಕ ಚುನಾವಣೆಗಳ ಬಗ್ಗೆ ವರದಿ ಮಾಡಲು ಹಲವು ಸುದ್ದಿ ಸಂಸ್ಥೆಗಳು ನೆರೆದಿದ್ದವು.

ವಿಂಡೋ ಮೂಲಕ ಚಲಿಸುತ್ತಿದ್ದ ಕಾರಿನೊಳಕ್ಕೆ ಹಾರಿ ಕಾರನ್ನು ನಿಲ್ಲಿಸಿದ ಯುವಕ

ಈ ಕಾರು ಸ್ಕ್ಯಾಂಡೆಬಗ್ ಸ್ಕ್ವೇರ್‌ನಲ್ಲಿ ರಿವರ್ಸ್ ಗೇರಿನಲ್ಲಿಯೇ ಸುತ್ತು ಹಾಕುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಲ್ಲಿರುವವರು ಕಂಟ್ರೋಲ್ ಸಿಗದೇ ಚಲಿಸುತ್ತಿರುವ ಕಾರನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ವಿಂಡೋ ಮೂಲಕ ಚಲಿಸುತ್ತಿದ್ದ ಕಾರಿನೊಳಕ್ಕೆ ಹಾರಿ ಕಾರನ್ನು ನಿಲ್ಲಿಸಿದ ಯುವಕ

ಈ ಕಾರಿನ ವ್ಹೀಲ್'ಗಳು ಸ್ವಲ್ಪ ಮಟ್ಟಿಗೆ ತಿರುಗಿವೆ. ಇದೇ ವೇಳೆ ಕಾರಿನ ಬಾನೆಟ್ ಸಹ ಮುರಿದು ಹೋಗಿರುವುದನ್ನು ಕಾಣಬಹುದು. ಸ್ಕ್ಯಾಂಡರ್ಬೆಗ್ ಸ್ಕ್ವೇರ್ ತಲುಪುವ ಮುನ್ನವೇ ಈ ಕಾರು ಅಪಘಾತಕ್ಕೀಡಾಗಿದೆ.

ವಿಂಡೋ ಮೂಲಕ ಚಲಿಸುತ್ತಿದ್ದ ಕಾರಿನೊಳಕ್ಕೆ ಹಾರಿ ಕಾರನ್ನು ನಿಲ್ಲಿಸಿದ ಯುವಕ

ಈ ಕಾರಿನ ಚಾಲಕ ಗೊಂದಲದಲ್ಲಿದ್ದಂತೆ ಕಾಣುತ್ತದೆ. ಅಲ್ಲಿದ್ದವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದನ್ನು ಕಾಣಬಹುದು. ಅಲ್ಲಿದ್ದ ಜನರು ಕಾರಿನ ಬಾಗಿಲು ತೆರೆದು ಚಾಲಕನನ್ನು ಕಾರಿನಿಂದ ಹೊರಗೆಳೆಯಲು ಪ್ರಯತ್ನಿಸುತ್ತಾರೆ.

MOST

READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ವಿಂಡೋ ಮೂಲಕ ಚಲಿಸುತ್ತಿದ್ದ ಕಾರಿನೊಳಕ್ಕೆ ಹಾರಿ ಕಾರನ್ನು ನಿಲ್ಲಿಸಿದ ಯುವಕ

ಆದರೆ ಯಾರಿಗೂ ಕಾರ್ ಅನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಕಾರು ಚಾಲಕ ಆಕ್ಸಿಲರೇಟರ್ ಒತ್ತುತ್ತಾ ಹಿಮ್ಮುಖವಾಗಿ ಕಾರು ಚಾಲನೆ ಮಾಡುತ್ತಾನೆ. ಈ ವೇಳೆ ವ್ಯಕ್ತಿಯೊಬ್ಬ ಓಡಿ ಬಂದು ಕಾರಿನ ವಿಂಡೋ ಮೂಲಕ ಕಾರಿನೊಳಕ್ಕೆ ಹಾರುತ್ತಾನೆ.

ನಂತರ ಆತ ಕಾರಿನೊಳಗೆ ಹೋಗಿ ಕಾರನ್ನು ನಿಲ್ಲಿಸಿ, ಕಾರು ಚಾಲಕನನ್ನು ಹೊರ ತರಲು ಯಶಸ್ವಿಯಾಗುತ್ತಾನೆ. ಈ ಕಾರ್ ಅನ್ನು ಚಾಲನೆ ಮಾಡುತ್ತಿದ್ದವನನ್ನುಅಲ್ಬೇನಿಯನ್ ಪೊಲೀಸರು ಬಂಧಿಸಿದ್ದಾರೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ವಿಂಡೋ ಮೂಲಕ ಚಲಿಸುತ್ತಿದ್ದ ಕಾರಿನೊಳಕ್ಕೆ ಹಾರಿ ಕಾರನ್ನು ನಿಲ್ಲಿಸಿದ ಯುವಕ

ಕಾರು ಚಾಲಕ ಡ್ರಗ್ಸ್‌ ಸೇವಿಸಿ ಕಾರು ಅನ್ನು ಚಾಲನೆ ಮಾಡುತ್ತಿದ್ದ. ಸ್ಕ್ಯಾಂಡೆಬಗ್ ಸ್ಕ್ವೇರ್ ಪ್ರವೇಶಿಸುವ ಮುನ್ನ ಚಾಲಕ ನಗರದ ಇತರ ಭಾಗಗಳಲ್ಲಿ ಮೂರು ಅಪಘಾತಗಳಲ್ಲಿ ಭಾಗಿಯಾಗಿದ್ದ ಎಂದು ವರದಿಯಾಗಿದೆ. ಕೆಲವರು ಇದನ್ನು ಜನಸಮೂಹವನ್ನು ಗುರಿಯಾಗಿಸಿಕೊಂಡು ನಡೆಸಿದ ಸಂಭಾವ್ಯ ಭಯೋತ್ಪಾದಕ ದಾಳಿ ಎಂದು ಆರೋಪಿಸಿದ್ದರು.

Most Read Articles

Kannada
English summary
Young man jumps into moving car through window and stops the car. Read in Kannada.
Story first published: Thursday, April 29, 2021, 19:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X