ಯುವತಿಯ ರೀಲ್ ಗೀಳು: ಸರ್ಕಾರಿ ಮಹೀಂದ್ರಾ ಸ್ಕಾರ್ಪಿಯೋ ಬಳಕೆ, ಪೊಲೀಸ್ ಅಧಿಕಾರಿ ಸಸ್ಪೆಂಡ್.. ವಿಡಿಯೋ

ಇವತ್ತಿನ ದಿನದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬೇಗನೇ ಖ್ಯಾತಿಗಳಿಸಲು ಹಲವು ಯುವಕ, ಯುವತಿಯರು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಚಿತ್ರ-ವಿಚಿತ್ರವಾದ ರೀಲ್ ಮಾಡಿ, ಇತರ ಗಮನ ಸೆಳೆಯುತ್ತಿರುತ್ತಾರೆ. ಕೆಲವೊಮ್ಮೆ ಈ ರೀತಿ ಮಾಡಲು ಹೋಗಿ, ತಾವು ಮಾತ್ರವಲ್ಲದೆ, ಬೇರೆಯವರನ್ನು ತೊಂದರೆಗೆ ತಳ್ಳುತ್ತಾರೆ. ಅಂತಹದ್ದೇ ಘಟನೆಯೊಂದು ನಡೆದಿದೆ.

ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿದ ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಕಾರಿನ ಬಾನೆಟ್ ಮೇಲೆ ಯುವತಿಯೊಬ್ಬಳು ಕುಳಿತು ರೀಲ್ ಮಾಡಿದ್ದು, ವಿಡಿಯೋ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗಿದೆ. ಆ ಬಳಿಕ, ಹಿರಿಯ ಅಧಿಕಾರಿಗಳು ಸಂಬಂಧಪಟ್ಟ ಠಾಣೆ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ. ಈ ಅಮಾನತ್ತು ಶಿಕ್ಷೆಯನ್ನು ಎಷ್ಟು ದಿನಗಳಿಗೆ ನೀಡಲಾಗಿದೆ ಎಂಬುದರ ಬಗ್ಗೆ ವಿವರಗಳಿಲ್ಲ.

ಯುವತಿಯ ರೀಲ್ ಗೀಳು: ಸರ್ಕಾರಿ ಮಹೀಂದ್ರಾ ಸ್ಕಾರ್ಪಿಯೋ ಬಳಕೆ, ಪೊಲೀಸ್ ಅಧಿಕಾರಿ ಸಸ್ಪೆಂಡ್.. ವಿಡಿಯೋ

ಇನ್‌ಸ್ಟಾಗ್ರಾಮ್ ನಲ್ಲಿ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿರುವ ಯುವತಿಯೂ ಮಹೀಂದ್ರಾ ಸ್ಕಾರ್ಪಿಯೋ ಮೇಲೆ ಕುಳಿತುಕೊಂಡು ಪಂಜಾಬಿ ಹಾಡಿಗೆ ನೃತ್ಯ ಮಾಡಿದ್ದಾರೆ. ಆಕೆ, ಈ ರೀತಿ ಮಾಡುವಾಗ ಸ್ಥಳದಲ್ಲಿ ಇತರೆ ಪೊಲೀಸರು ಇರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಸಖತ್ ವೈರಲ್ ಆಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಕಣ್ಣಿಗೂ ಬಿದ್ದಿದೆ.

ಜಲಂಧರ್ ಪೊಲೀಸ್ ಕಮಿಷನರ್ ಕುಲದೀಪ್ ಚಹಲ್ (Jalandhar Police Commissioner Kuldeep Chahal) ಅವರು, ಸರ್ಕಾರಿ ವಾಹನದಲ್ಲಿ ಯುವತಿಗೆ ರೀಲ್ ಮಾಡಲು ಅನುಮತಿ ನೀಡಿದ್ದ ಸ್ಥಳೀಯ ಠಾಣೆಯ ಪೊಲೀಸ್ ಅಧಿಕಾರಿ ಅಶೋಕ್ ಶರ್ಮಾ ಅವರನ್ನು ಅಮಾನತು (suspended) ಮಾಡಿದ್ದಾರೆ ಎಂಬ ವಿವರಗಳು ಲಭ್ಯವಾಗಿದೆ.

ಪೊಲೀಸ್ ಅಧಿಕಾರಿಯ ಅನುಮತಿ ಮೇರೆಗೆ ವಿಡಿಯೋ ಮಾಡಿದ ಹಿನ್ನೆಲೆ, ಆ ಯುವತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಿ ವಾಹನದಲ್ಲಿ ರೀಲ್ ಮಾಡಲು ಅವಕಾಶ ನೀಡಿದ ತಪ್ಪಿಗೆ ಪೊಲೀಸ್ ಅಧಿಕಾರಿಯೂ ಸಸ್ಪೆಂಡ್ ಶಿಕ್ಷೆಗೆ ಗುರಿಯಾಗಿದ್ದಾರೆ. ಅದೇನೇ ಆದರೂ ಸಾರ್ವಜನಿಕ ಆಸ್ತಿಯನ್ನು ಬಳಕೆ ಮಾಡಿಕೊಂಡು ಈ ರೀತಿಯ ಕೃತ್ಯಗಳನ್ನು ವೆಸಗುವುದು ಕಾನೂನಿನ ಪ್ರಕಾರ, ತಪ್ಪಾಗಿದೆ.

ಇತ್ತೀಚೆಗೆ ಹೈದರಾಬಾದ್‌ ಠಾಣೆಯೊಂದರಲ್ಲಿ ಪೊಲೀಸ್ ಅಧಿಕಾರಿಗಳಾಗಿರುವ ರಾವೂರಿ ಕಿಶೋರ್ ಮತ್ತು ಭಾವನಾ ಅವರು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಎರಡು ನಿಮಿಷಗಳ ಈ ವಿಡಿಯೋದಲ್ಲಿ ಇವರಿಬ್ಬರೂ ಸಮವಸ್ತ್ರವನ್ನು ಧರಿಸಿ, ಠಾಣೆಗೆ ಸರ್ಕಾರಿ ಕಾರಿನಲ್ಲಿ ಬರುತ್ತಿರುವುದನ್ನು ಚಿತ್ರಿಸಲಾಗಿದೆ. ಜೊತೆಗೆ ಐತಿಹಾಸಿಕ ಚಾರ್ಮಿನಾರ್ ಮತ್ತು ಲಾಡ್ ಬಜಾರ್ ಅನ್ನು ಸಹ ವೀಡಿಯೊದಲ್ಲಿ ನೋಡಬಹುದು.

ಈ ಪ್ರೀ ವೆಡ್ಡಿಂಗ್ ಶೂಟ್ ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೊಬ್ಬರು, ವೈಯಕ್ತಿಯ ಉದ್ದೇಶಕ್ಕೆ ಸರ್ಕಾರಿ ವಾಹನ ಬಳಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಮತ್ತಷ್ಟು ಮಂದಿ ಅವರನ್ನು ಮೆಚ್ಚಿದ್ದಾರೆ. ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಅವರು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿಡಿಯೋದಲ್ಲಿ ತಪ್ಪು ಕಾಣಿಸುತ್ತಿಲ್ಲ. ಮೊದಲೇ ತಿಳಿಸಿದ್ದರೆ ಒಪ್ಪಿಗೆ ನೀಡುತ್ತಿದ್ದೆ. ಇನ್ಮುಂದೆ ಯಾರು ಅನುಮತಿಯಿಲ್ಲದೇ ಈ ರೀತಿ ಮಾಡಬೇಡಿ ಎಂದು ಸಲಹೆ ನೀಡುತ್ತೇನೆ' ಎಂದಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 29, 2023, 16:01 [IST]
English summary
Young woman reel use government mahindra scorpio police officer suspended
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+