ಮದುವೆ ಉಡುಪು ಧರಿಸಿ ಕೆಟಿಎಂ ಬೈಕ್‌ನಲ್ಲಿ ಯುವತಿ ಸವಾರಿ... ವಿಡಿಯೋ ವೈರಲ್
ವಧುವಿನ ವೇಷ ಧರಿಸಿದ ಹುಡುತಿಯೊಬ್ಬರು ಕೆಟಿಎಂ ಆರ್‌ಸಿ ಬೈಕ್ ಸವಾರಿ ಮಾಡುತ್ತಿರುವ ವೀಡಿಯೊ ಸದ್ಯ ವೈರಲ್ ಆಗಿದೆ. ಈ ವಿಡಿಯೋವನ್ನು ಕಾಜಲ್ ದತ್ತಾ ಎಂಬುವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಕೆಯ ಪ್ರೊಫೈಲ್ ಪರಿಶೀಲಿಸಿದರೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಪುಗಳು ಹಾಗೂ ಬೈಕ್‌ಗಳೊಂದಿಗಿನ ವಿಡಿಯೋಗಳೇ ಹೆಚ್ಚಾಗಿ ಇವೆ.
ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, ಆಕೆ ವಧುವಿನಂತೆ ವೇಷ ಧರಿಸಿದ್ದು, ನಿಜವಾಗಿಯೂ ಮದುವೆಯಾಗುತ್ತಿದ್ದಾರೆಯೇ ಅಥವಾ ಕೇವಲ ವೀಡಿಯೊಗಾಗಿ ಹೀಗೆ ಉಡುಪು ಧರಿಸಿದ್ದರೇ ಎಂಬುದು ಖಚಿತವಾಗಿಲ್ಲ. ಯುವತಿಯು ಇದನ್ನು ಬಹಳ ಹಿಂದಿನಿಂದಲೂ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ. ಏಕೆಂದರೆ ಆಕೆ ಅನುಭವಿ ಬೈಕ್ ಸವಾರರಂತೆ ಬೈಕ್ ಅನ್ನು ತುಂಬಾ ಆರಾಮದಾಯಕವಾಗಿ ಓಡಿಸುತ್ತಿರುವುದನ್ನು ಕಾಣಬಹುದು. ವಿಶೇಷವಾಗಿ ಸೀರೆಯಲ್ಲಿ ಯಾವುದೇ ಭಯವಿಲ್ಲದೇ ಓಡಿಸುತ್ತಿದ್ದಾರೆ. ಎಲ್ಲವೂ ಸರಿಯೇ, ಆದ್ರೆ ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಾರೆ. ಇದರ ಬಗ್ಗೆ ಆಕೆಯ ಫಾಲೊವರ್ಸ್ ಕೂಡ ಸ್ವಲ್ಪವೂ ಕಾಳಜಿ ವಹಿಸದಿರುವುದನ್ನು ಕಮೆಂಟ್ ಬಾಕ್ಸ್‌ನಲ್ಲಿ ನೋಡಬಹುದು.

ಯುವತಿ ತನ್ನ ಮುಖ ಮುಚ್ಚಿಕೊಳ್ಳದಿರಲು ಆಕೆಯ ಮೇಕಪ್ ಹಾಳಾಗುವ ಕಾರಣದಿಂದಿರಬಹುದು. ಹಾಗಾಗಿ ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ನಿಮ್ಮ ಜೀವವನ್ನು ಅಪಾಯಕ್ಕೆ ತಳ್ಳಲು ಇದು ತಮಾಷೆಯ ಕಾರಣ ಎಂದು ನಮಗೆನಿಸುತ್ತಿದೆ. ಯುವತಿ ಇದನ್ನು ಕೇವಲ ವೀಡಿಯೊಗಾಗಿ ಮಾಡಿದ್ದಾರಾದರೂ ಆಕಸ್ಮಿಕ ಅನಾಹುತಗಳು ಹೇಳಿ ಬರುವುದಿಲ್ಲ.
ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಕಾನೂನುಬಾಹಿರ, ಇದಕ್ಕೆ ನಿಮಗೆ ದಂಡ ವಿಧಿಸಬಹುದು. ಯುವತಿಗೆ ಈ ಬಗ್ಗೆ ತಿಳಿದರೂ ಪತ್ತೆಹಚ್ಚಲು ಸಾಧ್ಯವಾಗದಂತೆ ತನ್ನ ಎರಡೂ ಬೈಕುಗಳ ನೋಂದಣಿ ಸಂಖ್ಯೆಗಳನ್ನು ಜಾಣತನದಿಂದ ತೆಗೆದುಹಾಕಿದ್ದಾರೆ. ವೀಡಿಯೊದ ಅಡಿಯಲ್ಲಿ ಹೆಚ್ಚಿನ ಕಾಮೆಂಟ್‌ಗಳು ಯುವತಿಯ ಸವಾರಿ ಕೌಶಲ್ಯವನ್ನು ಶ್ಲಾಘಿಸುತ್ತಿವೆ. ಆದರೆ ಹೆಲ್ಮೆಟ್ ಬಗ್ಗೆ ಯಾರೂ ಪ್ರಶ್ನಿಸಿಲ್ಲ.
ಇಂತಹ ವಿಡಿಯೋಗಳು ಅವರ ಇನ್‌ಸ್ಟಾ ಖಾತೆಯಲ್ಲಿ ಬಹಳಷ್ಟಿವೆ. ಇದೇ ರೀತಿಯ ಉಡುಪನ್ನು ಧರಿಸಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಮೋಟಾರ್‌ಸೈಕಲ್ ಸವಾರಿ ಮಾಡುತ್ತಿರುವ ವೀಡಿಯೊವನ್ನು ಸಹ ನಾವು ನೋಡಬಹುದು. ಈ ವಿಡಿಯೋಗಳನ್ನು ನೋಡಿದ ಪ್ರತಿ ಬಾರಿಯೂ ಇದು ಪ್ರಚಾರದ ಸ್ಟಂಟ್ ಆಗಿದೆಯೇ ಅಥವಾ ನಿಜವಾಗಿಯೂ ಮದುವೆಯಾಗುತ್ತಿದ್ದಾರೆಯೇ ಎಂಬ ಬಗ್ಗೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತದೆ. ಎರಡನೇ ವೀಡಿಯೊದಲ್ಲಿ ಕೂಡ ಆಕೆ ಹೆಲ್ಮೆಟ್ ಧರಿಸದೆ ಸಾರ್ವಜನಿಕ ರಸ್ತೆಯಲ್ಲಿ ಸವಾರಿ ಮಾಡುತ್ತಿರುವುದನ್ನು ನಾವು ನೋಡಬಹುದು. ಈ ಎರಡೂ ವೀಡಿಯೊಗಳು 50,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿವೆ.
ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಅತ್ಯಂತ ಅಪಾಯಕಾರಿ. ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ನಿಮ್ಮನ್ನು ತಲೆಗೆ ಆಗುವ ಗಾಯಗಳಿಂದ ರಕ್ಷಿಸುತ್ತದೆ. ನೀವು ನಿಜವಾಗಿಯೂ ಇಂತಹ ಸ್ಟಂಟ್ ಮಾಡಲು ಬಯಸಿದರೆ, ಇತರ ರಸ್ತೆ ಬಳಕೆದಾರರಿಗೆ ತೊಂದರೆ ಕೊಡದೆ, ನಿಮ್ಮ ಖಾಸಗಿ ಟ್ರ್ಯಾಕ್‌ಗಳು ಅಥವಾ ಮುಚ್ಚಿದ ರಸ್ತೆಗಳನ್ನು ನೋಡಿಕೊಳ್ಳುವುದು ಉತ್ತಮ.
ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ವಿಡಿಯೋಗಳನ್ನು ನೋಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ, ಭಾರತೀಯ ಮಹಿಳೆಯೊಬ್ಬರು ಸೀರೆ ಉಟ್ಟು ಕ್ಲಾಸಿಕ್ 350 ಸವಾರಿ ಮಾಡುವುದನ್ನು ನಾವು ನೋಡಿದ್ದೇವೆ. ಇಬ್ಬರು ಯುವತಿಯರು ಹೀಲ್ಸ್ ಧರಿಸಿ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಸವಾರಿ ಮಾಡುತ್ತಿರುವ ವೀಡಿಯೊ ಕೂಡ ವೈರಲ್ ಆಗಿ, ಕೊನೆಗೆ ಪೊಲೀಸರಿಂದ ದಂಡ ಹಾಕಿಸಿಕೊಂಡಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications