ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ವಾಹನಗಳನ್ನು ತಮಗೆ ಬೇಕಾದ ರೀತಿಯಲ್ಲಿ ಮಾಡಿಫೈಗೊಳಿಸಿರುವ ಅನೇಕ ವೀಡಿಯೊಗಳು ಇಂಟರ್ ನೆಟ್ ನಲ್ಲಿವೆ. ಆದರೆ ಕೆಲವು ವೀಡಿಯೊಗಳು ಮಾತ್ರ ಜನರ ಗಮನ ಸೆಳೆಯುತ್ತವೆ. ಈಗ ಇದೇ ರೀತಿಯ ವೀಡಿಯೊವೊಂದು ಜನರ ಗಮನವನ್ನು ಸೆಳೆಯುತ್ತಿದೆ.

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಕೆಲವು ಯುವಕರು ಯೂಟ್ಯೂಬ್‌ನಲ್ಲಿ ಜನಪ್ರಿಯರಾಗಲು ಹಾಗೂ ಇದರಿಂದ ಸಾಕಷ್ಟು ಆದಾಯವನ್ನು ಗಳಿಸಲು ಚಿತ್ರ ವಿಚಿತ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ರಾಜಸ್ಥಾನದ ಯೂಟ್ಯೂಬ್ ಚಾನೆಲ್ ಆದ ಕ್ರೇಜಿ ಎಕ್ಸ್‌ವೈಝಡ್‌ನಲ್ಲಿರುವ ಯುವಕ ಬೈಕ್ ವ್ಹೀಲ್ ಗಳಿಗೆ ಬದಲಿಗೆ ಕಬ್ಬಿಣದ ಡ್ರಮ್‌ಗಳನ್ನು ಬಳಸಿ ಬೈಕ್‌ ಚಾಲನೆ ಮಾಡುತ್ತಿದ್ದಾನೆ.

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಇದಕ್ಕಾಗಿ ಆತ ಟಿವಿಎಸ್‌ ವಿಕ್ಟರ್ ಬೈಕ್‌ ಬಳಸಿದ್ದಾನೆ. ಈ ಬೈಕ್‌ನಲ್ಲಿದ್ದ ಫ್ರಂಟ್ ವ್ಹೀಲ್ ತೆಗೆದು ಹಾಕಿ, ಕಬ್ಬಿಣದ ಡ್ರಮ್‌ ಅಳವಡಿಸಲಾಗಿದೆ. ವ್ಹೀಲ್ ಜೊತೆಗೆ ಡಿಸ್ಕ್ ಬ್ರೇಕ್ ಅನ್ನು ಸಹ ತೆಗೆದುಹಾಕಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಆ ಯುವಕನು ಡ್ರಮ್‌ ಬೈಕಿಗೆ ಹೊಂದಿಕೊಳ್ಳುವಂತೆ ಮಾಡಲು ಬೈಕಿನಲ್ಲಿರುವ ಕೆಲವು ಬಿಡಿ ಭಾಗಗಳನ್ನು ತೆಗೆದುಹಾಕಿದ್ದಾನೆ. ಇಷ್ಟು ಮಾತ್ರವಲ್ಲದೇ ಡ್ರಮ್ ಬೈಕಿನ ಮುಂಭಾಗಕ್ಕೆ ಹೊಂದಿಕೊಳ್ಳವಂತಾಗಲು ಡ್ರಮ್‌ನಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿದ್ದಾನೆ.

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಬೈಕ್ ರಸ್ತೆಯಲ್ಲಿ ಸರಾಗವಾಗಿ ಸಾಗಲು ಡ್ರಮ್ ಗೆ ಕಬ್ಬಿಣದ ಪೈಪ್ ಹಾಗೂ ಫ್ರೇಮ್ ಗಳನ್ನು ಸಹ ಅಳವಡಿಸಲಾಗಿದೆ. ಇದರ ಜೊತೆಗೆ ಡ್ರಮ್ ಅನ್ನು ರೋಲ್ ಮಾಡಲು ಬೇರಿಂಗ್ ಸಹ ಅಳವಡಿಸಲಾಗುತ್ತದೆ. ಇದಾದ ನಂತರ ಡ್ರಮ್ ಅನ್ನು ಬೈಕಿನ ಮುಂಭಾಗದ ಫೋರ್ಕ್‌ನಲ್ಲಿ ಜೋಡಿಸಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಈ ಮಾಡಿಫಿಕೇಶನ್ ನಿಂದಾಗಿ ಬೈಕ್ ಮಿನಿ ರೋಡ್ ರೋಲರ್ ನಂತಹ ಲುಕ್ ಪಡೆದಿದೆ. ರಸ್ತೆಯಲ್ಲಿ ಸಾಗುವಾಗ ರೋಲರ್ ನಂತೆ ಶಬ್ದ ಮಾಡಿ ಸಾಗುತ್ತದೆ. ಆರಂಭದಲ್ಲಿ ಡ್ರಮ್‌ ಹೊಂದಿರುವ ಬೈಕ್ ಚಾಲನೆ ಮಾಡಲು ಆ ಯುವಕನು ಕಷ್ಟ ಪಡುತ್ತಾನೆ.

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಕೆಲವೇ ಕ್ಷಣಗಳಲ್ಲಿ ಗೇರ್ ಬದಲಿಸಿ ಬೈಕು ಸರಾಗವಾಗಿ ಚಲಾಯಿಸುತ್ತಾನೆ. ಯುವಕನು ತನ್ನ ಬೈಕ್ ಅನ್ನು ರಸ್ತೆಯಲ್ಲಿ ಮಾತ್ರವಲ್ಲದೇ ಖಾಲಿ ಮೈದಾನದಲ್ಲಿಯೂ ಚಾಲನೆ ಮಾಡುತ್ತಾನೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಬೈಕ್ ಸಾಗುವ ದಾರಿಯಲ್ಲಿ ಮಣ್ಣಿರುವ ಕಾರಣಕ್ಕೆ ಆ ಯುವಕನಿಗೆ ಬೈಕ್‌ ಸರಾಗವಾಗಿ ಚಾಲನೆ ಮಾಡಲು ಸಾಧ್ಯವಾಗಿಲ್ಲ. ಬೈಕಿಗೆ ದೊಡ್ಡ ಗಾತ್ರದ ಡ್ರಮ್ ಅಳವಡಿಸುವುದರಿಂದ ಅದು ಮುಂದೆ ಚಲಿಸಲು ಸಾಧ್ಯವಾಗುವುದಿಲ್ಲ.

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಬೈಕಿನಲ್ಲಿರುವ ಅಳವಡಿಸಿರುವ ಡ್ರಮ್ ಬೈಕಿನ ರೂಪವನ್ನು ವಿರೂಪಗೊಳಿಸುವುದಲ್ಲದೆ ವಾಹನದ ಟ್ರಾಕ್ಷನ್ ಕಂಟ್ರೋಲ್ ಮೇಲೆಯೂ ಪರಿಣಾಮ ಬೀರಿದೆ. ಉದ್ದವಾದ ಡ್ರಮ್ ಇರುವ ಕಾರಣಕ್ಕೆ ಈ ಬೈಕ್ ಅನ್ನು ಪಾರ್ಕ್ ಮಾಡುವಾಗ ಸೈಡ್ ಸ್ಟ್ಯಾಂಡ್ ಅಥವಾ ಸೆಂಟರ್ ಸ್ಟ್ಯಾಂಡ್ ಹಾಕುವ ಅಗತ್ಯವಿಲ್ಲ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಯುವಕನ ಈ ಪ್ರಯತ್ನವು ಅಪಾಯಕಾರಿ. ಮುಂಭಾಗದ ವ್ಹೀಲ್ ಗಳ ಬ್ರೇಕ್‌ಗಳನ್ನು ತೆಗೆದುಹಾಕಲಾಗಿದ್ದು, ಯುವಕನು ಹಿಂಭಾಗದಲ್ಲಿರುವ ಬ್ರೇಕ್ ಮೇಲೆ ಮಾತ್ರ ಅವಲಂಬಿತನಾಗಿದ್ದಾನೆ.

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಇದು ಆತನಿಗೆ ಮಾತ್ರವಲ್ಲದೇ ಈ ರೀತಿಯ ಹುಚ್ಚು ಸಾಹಸಕ್ಕೆ ಕೈಹಾಕುವ ಯಾರಿಗೆ ಆದರೂ ಸಂಕಷ್ಟವನ್ನು ತರಬಲ್ಲದು. ಈ ರೀತಿಯ ಹುಚ್ಚು ಸಾಹಸಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಹಲವು ಬಾರಿ ಹೇಳಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆದರೂ ಜನಪ್ರಿಯತೆಯ ಮೂಲಕ ಆದಾಯ ಗಳಿಸುವ ಸಲುವಾಗಿ ಕೆಲ ಯುವಕರು ತಮ್ಮ ವಾಹನಗಳನ್ನು ವಿಲಕ್ಷಣವಾಗಿ ಹಾಗೂ ಅಪಾಯಕಾರಿಯಾಗಿ ಮಾಡಿಫೈಗೊಳಿಸಿ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

ರೋಡ್ ರೋಲರ್ ನಂತೆ ಮಾಡಿಫೈಗೊಂಡ ಟಿವಿಎಸ್‌ ವಿಕ್ಟರ್ ಬೈಕ್

ಬೈಕ್ ಅನ್ನು ರೋಡ್ ರೋಲರ್ ನಂತೆ ಲೋಡ್ ಮಾಡುವ, ಅನ್ ಲೋಡ್ ಮಾಡುವ, ಕ್ರೇನ್ ಮೂಲಕ ಕಾರನ್ನು ನಾಶಪಡಿಸುವ ಅನೇಕ ವೀಡಿಯೊಗಳನ್ನು ಯೂಟ್ಯೂಬ್ ನಲ್ಲಿ ವೀಡಿಯೊಗಳನ್ನು ತಯಾರಿಸಿ ಅಪ್ ಲೋಡ್ ಮಾಡಲಾಗಿದೆ.

Most Read Articles

Kannada
English summary
Youth modifies TVS victor bike like road roller. Read in Kannada.
Story first published: Monday, September 21, 2020, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X