ಯೋಗಿ ನಾಡಲ್ಲಿ ರಸ್ತೆ ಅಡ್ಡಗಟ್ಟಿ ಯುವಕರ ಬಿಟ್ಟಿ ಶೋಕಿ... ಊಹಿಸದ ಶಾಕ್ ಕೊಟ್ಟ ಪೊಲೀಸರು

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಯುವಜನತೆ ಮಾಡುವ ಕೃತ್ಯಗಳಿಗೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅದರಲ್ಲೂ ಉತ್ತರ ಭಾರತದಲ್ಲಿ ರೀಲ್ಸ್ ಮಾಡೋದನ್ನೇ ನಿತ್ಯ ಕೆಲಸದಂತೆ ಭಾವಿಸಿದ್ದಾರೆ. ಇದೀಗ ಅಂಡರ್‌ಪಾಸ್‌ ರಸ್ತೆ ಅಡ್ಡಗಟ್ಟಿ ರೀಲ್ಸ್ ಮಾಡಿದ ಯವಕರಿಗೆ ಪೊಲೀಸರು ಸರಿಯಾಗಿ ಪಾಠ ಕಲಿಸಿದ್ದಾರೆ.

ನೋಯ್ಡಾದ ಯುವಕರ ಗುಂಪೊಂದು ರೀಲ್ಸ್ ಮಾಡಲು ಅಲ್ಲಿನ ಸೆಕ್ಟರ್ 52 ಪ್ರದೇಶದ ಅಂಡರ್‌ಪಾಸ್‌ನಲ್ಲಿ ರಸ್ತೆ ಅಡ್ಡಗಟ್ಟಿ ಜಾಮ್ ಮಾಡಿದ್ದರು. ಇಲ್ಲಿ ಅವರಿಗೆ ತಿಳಿಯದ ವಿಷಯವೇನೆಂದರೆ ಅದೇ ಸೋಷಿಯಲ್ ಮೀಡಿಯಾದಲ್ಲಿ ಜವಾಬ್ದಾರಿಯುತ ನಾಗರಿಕರು ಕೂಡ ಇರುತ್ತಾರೆ. ಸಮಾಜಕ್ಕೆ ತೊಂದರೆ ನೀಡಿದ್ರೆ ಪೊಲೀಸರ ಗಮನಕ್ಕೆ ತರುತ್ತಾರೆ ಎಂಬುದನ್ನು ಮರೆಯಬಾರದು.

youth-stunts-public-road-fined-12500-noida

ಈ ವಿಡಿಯೋದಲ್ಲಿ ನಾಗರಿಕರಿಗೆ ಹಿಡಿಸದ ವಿಷಯ ಹಾಗೂ ಪೊಲೀಸರ ಗಮನಕ್ಕೆ ತರಲು ಮುಖ್ಯ ಕಾರಣವೆದರೆ ಟೊಯೊಟಾ ಫಾರ್ಚುನರ್, ಮಾರುತಿ ಸುಜುಕಿ ಬಲೆನೊ, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಕ್ರೆಟಾದಂತಹ ವಾಹನಗಳನ್ನು ಬಳಸಿ ಬಿಟ್ಟಿ ಶೊಕಿ ಮಾಡಿದ್ದಾರೆ. ಅದು ಕೂಡ ರಸ್ತೆಯನ್ನು ಅಡ್ಡಗಟ್ಟಿ ಇತರ ವಾಹನ ಸವಾರರಿಗೆ ಸಂಚರಿಸಲು ಅಡ್ಡಿಪಡಿಸಿದ್ದಾರೆ.

ತಮ್ಮ ಸಂಪತ್ತು ಮತ್ತು ಶಕ್ತಿಯನ್ನು ರೀಲ್‌ಗಳಲ್ಲಿ ಪ್ರದರ್ಶಿಸುವ ಈ ಕೃತ್ಯಗಳಿಂದಾಗಿ ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡಿದ ಟ್ವಿಟರ್ ಬಳಕೆದಾರರು, ಯುವಕರಿಗೆ ಊಹಿಸದ ಶಾಕ್ ನೀಡಿದ್ದಾರೆ. ಟ್ವೀಟ್‌ಗೆ ತಕ್ಷಣ ಪ್ರತಿಕ್ರಿಯಿಸಿದ ನೋಯ್ಡಾ ಪೊಲೀಸರು ಯುವಕರ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಯುವಕರಿಗೆ ಬರೋಬ್ಬರಿ 12,500 ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

youth-stunts-public-road-fined-12500-noida

ದಂಡದ ಬಳಿಕ ನೋಯ್ಡಾ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದು, ಮೇಲಿನ ದೂರಿನ ಆಧಾರದ ಮೆಲೆ ನಿಯಮಗಳ ಪ್ರಕಾರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಬಂಧಪಟ್ಟ ವಾಹನಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇಂತಹ ವಿಡಿಯೋಗಳು ಕಂಡುಬಂದಲ್ಲಿ ತಮ್ಮ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ ಕಾರುಗಳೊಂದಿಗೆ ಅಪಾಯಕಾರಿ ಸಾಹಸಗಳನ್ನು ಮಾಡುವವರ ಸಂಖ್ಯೆ ಏರಿಕೆಯಾಗಿದೆ. ಇವು ಕೆಲವರಿಗೆ ರೋಮಾಂಚನಕಾರಿಯಾಗಿ ಕಂಡರೂ, ಸಾರ್ವಜನಿಕರಿಗೆ ಅಪಾಯಗಳನ್ನು ತಂದೊಡ್ಡಬಹುದು. ಅತಿವೇಗದ ಡ್ರಿಫ್ಟಿಂಗ್ ಅಥವಾ ಹಠಾತ್ ಬ್ರೇಕ್‌ ಹಾಕುವ ಮೂಲಕ ವಾಹನಗಳೊಂದಿಗೆ ಮಜಾ ಸಿಕ್ಕರು ಅವರ ಜೀವಕ್ಕೂ ಅಪಾಯ ಕಟ್ಟಿಟ್ಟಬುತ್ತಿ.

ವಾಹನಗಳಲ್ಲಿ ಸ್ಟಂಟ್ ಮಾಡುವುದು ತಪ್ಪೆಂದು ಹೇಳುತ್ತಿಲ್ಲ. ಇದು ಕೂಡ ಒಂದು ಕಲೆ, ಆದ್ರೆ ಇಂತಹ ಸಾಹಸಗಳನ್ನು ಮಾಡಲು ಕೆಲ ಖಾಸಗಿ ಸ್ಥಳಗಳಿವೆ. ಸಾರ್ವಜನಿಕರಿಗೆ ತೊಂದರೆ ನೀಡಿ ಇಂತಹ ಸ್ಟಂಟ್‌ಗಳನ್ನು ಮಾಡುವುದು ತಪ್ಪು. ಹಾಗಾಗಿ ಸಿಟಿ ಹೊರಗೆ ಯಾರಿಗೂ ತೊಂದರೆಯಾಗದಂತಹ ತಮ್ಮ ಖಾಸಗಿ ಪ್ರದೇಶಗಳಲ್ಲಿ ಸ್ಟಂಟ್‌ಗಳನ್ನು ಮಾಡಿದ್ರೆ ಅವರನ್ನು ಯಾರೂ ಪ್ರಶ್ನಿಸುವುದಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

Article Published On: Saturday, July 8, 2023, 11:30 [IST]
English summary
Youth stunts public road fined 12500 noida
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+