Just In
Don't Miss!
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Sports
ಐಪಿಎಲ್ 2021: ತಂಡದಿಂದ ಸ್ಟೀವ್ ಸ್ಮಿತ್ ಕೈಬಿಟ್ಟ ರಾಜಸ್ಥಾನ್ ರಾಯಲ್ಸ್
- News
ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾ
- Lifestyle
ಜನವರಿ 23 ಪರಾಕ್ರಮ ದಿವಸ್: ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು
- Movies
ಕೆಜಿಎಫ್ 2 ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸುರಿದಿರುವುದು ಕೆಲವು ಕೋಟಿಗಳಲ್ಲ!
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಮ ಸ್ವರೂಪಿ ಟ್ರಕ್'ನಿಂದ ಪಾರಾದ ಯುವಕರು
ಭಾರತದ ರಸ್ತೆಗಳಲ್ಲಿ ಪ್ರತಿದಿನ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಈ ಅಪಘಾತಗಳು ಹಲವರ ಪ್ರಾಣವನ್ನೂ ತೆಗೆಯುತ್ತವೆ. ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ.

ಆದರೆ ಕೆಲವೊಮ್ಮೆ ಅಪಘಾತಗಳು ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಮಾತ್ರವಲ್ಲದೇ ವಾಹನಗಳಲ್ಲಿ ಉಂಟಾಗುವ ತಾಂತ್ರಿಕ ದೋಷದಿಂದಲೂ ಉಂಟಾಗುತ್ತವೆ. ಈ ಟಿವಿ ಆಂಧ್ರಪ್ರದೇಶ್ ತನ್ನ ಯೂಟ್ಯೂಬ್ ಚಾನೆಲ್'ನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾದ ಟ್ರಕ್'ನ ವೀಡಿಯೊವನ್ನು ಪೋಸ್ಟ್ ಮಾಡಿದೆ.

ಈ ವೀಡಿಯೊದಲ್ಲಿ ರಸ್ತೆಯಲ್ಲಿರುವ ಫುಟ್ ಪಾತ್ ಕಡೆಗೆ ಟ್ರಕ್ ಬರುವುದನ್ನು ಕಾಣಬಹುದು. ನಂತರ ಟ್ರಕ್ ಅಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಫುಟ್ ಪಾತ್ ಮೇಲೆ ಬರುತ್ತದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟ್ರಕ್ ನಿಯಂತ್ರಣ ಕಳೆದುಕೊಂಡಾಗ ಇಬ್ಬರು ದ್ವಿಚಕ್ರ ವಾಹನದ ಬಳಿ ಫುಟ್ ಪಾತ್ ಮೇಲೆ ನಿಂತಿದ್ದರು. ಟ್ರಕ್ ಅವರತ್ತ ಬರುತ್ತಿರುವುದನ್ನು ಗಮನಿಸಿದ ತಕ್ಷಣ ಅಲ್ಲಿಂದ ಓಡಿದ್ದಾರೆ. ಇದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ರಕ್ ಬ್ರೇಕ್ ಇದ್ದಕ್ಕಿದ್ದಂತೆ ವಿಫಲವಾಗಿದೆ. ಇದರಿಂದಾಗಿ ಟ್ರಕ್ ಚಾಲಕನು ಟ್ರಕ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಅಪಘಾತವು ತಮಿಳುನಾಡಿನ ವಯಲೂರು ಪ್ರದೇಶದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ. ಬ್ರೇಕ್‌ಗಳು ವಾಹನದ ಪ್ರಮುಖ ಭಾಗಗಳಲ್ಲಿ ಒಂದಾಗಿವೆ. ಬ್ರೇಕ್ ಸರಿಯಾಗಿ ಕೆಲಸ ನಿರ್ವಹಿಸುತ್ತಿವೆ ಎಂಬ ಧೈರ್ಯದಿಂದ ಚಾಲಕರು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ.

ಬ್ರೇಕ್ ಇಲ್ಲದ್ದಿದ್ದರೆ ತುರ್ತು ಸಂದರ್ಭಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುವುದಿಲ್ಲ. ಈ ಕಾರಣಕ್ಕೆ ವಾಹನಗಳನ್ನು ಹೊರ ತೆಗೆಯುವ ಮುನ್ನ ಬ್ರೇಕ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರೀಕ್ಷಿಸುವುದು ಒಳ್ಳೆಯದು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾಲ ಕಾಲಕ್ಕೆ ವಾಹನದ ಬ್ರೇಕ್ ಹಾಗೂ ಬ್ರೇಕ್ ಪ್ಯಾಡ್‌ಗಳನ್ನು ಪರಿಶೀಲಿಸುವುದು ಮುಖ್ಯ. ಒಂದು ವೇಳೆ ಅವು ಕೆಟ್ಟಿದ್ದರೆ ಅವುಗಳನ್ನು ಬದಲಿಸುವುದು ಉತ್ತಮ. ಬೆಲೆ ಹೆಚ್ಚಾದರೂ ಸರಿಯೇ ಗುಣಮಟ್ಟದ ಬ್ರೇಕ್‌ಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.
ಹೊಸದಾಗಿ ಬ್ರೇಕ್ ಹಾಗೂ ಬ್ರೇಕ್ ಪ್ಯಾಡ್'ಗಳನ್ನು ಅಳವಡಿಸಿದಾಗ ಕಡಿಮೆ ವೇಗದಲ್ಲಿ ಹೋಗುವುದು ಒಳ್ಳೆಯದು. ಹಠಾತ್ತನೇ ಬ್ರೇಕ್ ಹಾಕುವುದನ್ನು ತಪ್ಪಿಸುವುದು ಅವಶ್ಯಕ. ವಾಹನದಲ್ಲಿರುವ ಅನಗತ್ಯ ವಸ್ತುಗಳನ್ನು ತೆಗೆದುಹಾಕಿ, ವಾಹನಗಳ ತೂಕ ಇಳಿಸುವುದು ಒಳ್ಳೆಯದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬ್ರೇಕ್ ಪೆಡಲ್‌ಗಳನ್ನು ಅನಗತ್ಯವಾಗಿ ತುಂಬಾ ಗಟ್ಟಿಯಾಗಿ ಒತ್ತುವುದನ್ನು ನಿಲ್ಲಿಸಿ. ವಾಹನದ ಬ್ರೇಕ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ವಾಹನದಲ್ಲಿರುವವರಿಗೆ ಹಾಗೂ ಬೇರೆ ವಾಹನಗಳಲ್ಲಿರುವವರಿಗೂ ಅಪಾಯ ತಪ್ಪಿದ್ದಲ್ಲ.