ಅನಾಥ ವೃದ್ದ ದಂಪತಿಗೆ ಸ್ಕೂಟರ್‌ ಉಡುಗೊರೆ ಕೊಟ್ಟ ಯ್ಯೂಟ್ಯೂಬರ್‌: ನೀವೇ ದೇವರೆಂದು ಕೈಮುಗಿದ ತಾಯಿ

ದೇವರಿಗೆ ಹೆಚ್ಚು ಇಷ್ಟವಾದವರನ್ನು ಹೆಚ್ಚು ಹೆಚ್ಚು ಪರೀಕ್ಷೆ ಮಾಡುತ್ತಾರೆ ಎಂಬ ಮಾತುಗಳನ್ನು ನಾವು ಹಲವು ಕಡೆಗಳಿಂದ ಕೇಳಿರುತ್ತೇವೆ. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಒಮ್ಮಿಂದೊಮ್ಮೆಲೇ ಒಂದರ ಮೇಲೊಂದರಂತೆ ಕಷ್ಟಗಳು ಬರಲು ಆರಂಭಿಸಿದಾಗ ಹಲವರಿಗೆ ಏನು ಮಾಡಬೇಕು ಎಂದು ದಿಕ್ಕುತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾಗುತ್ತದೆ.

ಇಂತಹ ಸಂಧರ್ಭದಲ್ಲಿ ದೇವರು ಹಲವು ರೂಪದಲ್ಲಿ ಬರುತ್ತಾರೆ ಎಂದು ಹೇಳುತ್ತಾರೆ. ಇದಕ್ಕೆ ಇಲ್ಲೊಂದು ಉತ್ತಮ ನಿದರ್ಶನವಿದೆ. ಮಧುಮೇಹ ಕಾಯಿಲೆಗೆ ಬಳಲಿದ ಕಾರಣ ಹೆತ್ತ ಮಕ್ಕಳೇ ಬಿಟ್ಟು ಹೋದ ವೃದ್ದ ಜೋಡಿಗೆ ಯ್ಯೂಟ್ಯೂಬರ್‌ ಒಬ್ಬ ನೆರವಾಗಿದ್ದಾನೆ. ಹೌದು, ವ್ಯಕ್ತಿಯೊಬ್ಬನಿಗೆ ಶುಗರ್‌ ಖಾಯಿಲೆಯಿಂದ ತನ್ನ ಕಾಲನ್ನು ಕತ್ತರಿಸಿದರೂ ಸ್ವಾಭಿಮಾನಿಯಾಗಿ ಬದುವು ಆಸೆಗೆ ಈ ಯ್ಯೂಟ್ಯೂಬರ್‌ ಬೆಳಕಾಗಿದ್ದಾನೆ.

YouTuber Gifts Scooter to the Old Orphan Couple Video Goes Viral

ಈ ಕರುಣಾಜನಕ ಗಟನೆ ನಡೆದಿರುವುದು ತಮಿಳುನಾಡಿನಲ್ಲಿ. ಅನಾಥ ವೃದ್ದ ಕುಟುಂಬವೊಂದಕ್ಕೆ ಯ್ಯೂಟ್ಯೂಬರ್‌ ತಾಹಿರ್‌ ಎಂಬಾತ ಸಹಾಯ (YouTuber Gifts Scooter) ಮಾಡಿದ್ದು ಅವರಿಗೆ ಬದುಕು ನಡೆಸಲು ಬೇಕಾದ ಎಲ್ಲಾ ಸಹಾಯವನ್ನು ಸಹ ನೀಡಿದ್ದಾನೆ. ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವೈರಲ್‌ ಆಗುತ್ತಿರುವ ವಿಡಿಯೋ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋದಲ್ಲಿ ಕಾಣುವಂತೆ ಆ ಕುಟುಂಬಕ್ಕೆ ತಮ್ಮ ಬದುಕನ್ನು ಮುಂದಕ್ಕೆ ಸಾಗಿಸಲು ಒಂದು ಟೀ ಅಂಗಡಿಯನ್ನು ನಡೆಸುವ ಪ್ಲಾನ್‌ ಇರುತ್ತದೆ ಆದರೆ ಅವರ ಕೈಯಲ್ಲಿ ಅದಕ್ಕೆ ಬೇಲಾದ ಹಣವಿರುವುದಿಲ್ಲ. ಈ ಸಂಧರ್ಭದಲ್ಲಿ ತಾಹಿರ್‌ ಅವರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸುತ್ತಾರೆ. ಈ ಸಂಧರ್ಭದಲ್ಲಿ ಮಕ್ಕಳಿದ್ದರೂ ಅನಾಥವಾಗಿ ಬಿದ್ದಿರುವ ಈ ಕುಟುಂಬದ ಕರುಣಾಜನಕ ಕಥೆ ಅವರಿಗೆ ತಿಳಿದು ಬರುತ್ತದೆ.

ಇದರಿಂದಾಗಿ ಅವರಿಗೆ ಸಹಾಯ ಮಾಡಲು ನಿರ್ಧರಿಸಿದ ತಾಹಿರ್‌, ಅವರಿಗೆ ಬೇಕಾದ ಎಲ್ಲಾ ಸಹಾಯಗಳನ್ನು ಮಾಡುತ್ತಾನೆ. ಟೀ ಅಂಗಡಿ ನಡೆಸಲು ಬೇಕಾದ ವಸ್ತುಗಳು, ದಿನಬಳಕೆಗೆ ಫ್ರಿಡ್ಜ್‌, ಅದರ ಜೊತೆ ಪ್ರಮುಖವಾಗಿ ಒಂದು ಸ್ಕೂಟರ್‌ ಅನ್ನು ಸಹ ಅವರಿಗೆ ಉಡುಗೊರೆಯಾಗಿ ಈತ ನೀಡುತ್ತಾನೆ. ಇವುಗಳನ್ನು ಕಂಡ ವೃದ್ದ ದಂಪತಿ ಭಾವುಕರಾಗಿ ತುಂಬಾ ಹೊತ್ತು ಸಂತೋಷದಿಂದ ಅಳುವುದನ್ನು ನಾವು ಕಾಣಬಹುದು.

ಈ ರೀತಿಯ ಹಲವಾರು ಮಾನವೀಯ ಘಟನೆಗಳು ನಮ್ಮ ಮುಂದೆ ನಡೆಯುತ್ತದೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ವೈರಲ್‌ ಆಗುತ್ತಿದೆ. ಮೊನ್ನೆಯಷ್ಟೇ, ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಕ್ಷಕನಿಗೆ (Teacher)ಕೆಲವು ವಿದ್ಯಾರ್ಥಿಗಳು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಳೆ ವಿದ್ಯಾರ್ಥಿಗಳು (Students) ಶಿಕ್ಷಕನಿಗೆ ಕಾರು ನೀಡಿರುವ ಚಿತ್ರಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳದಿದೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆ ಮಂಡಲದಲ್ಲಿ ಈ ಘಟನೆ ನಡೆದಿದೆ.

YouTuber Gifts Scooter to the Old Orphan Couple Video Goes Viral

ಜೇಮ್ಸ್ ಎಂಬ ಶಿಕ್ಷಕ ಅನಂತಪುರ ಜಿಲ್ಲೆಯ ಲೇಪಾಕ್ಷಿ ನವೋದಯ ಮತ್ತು ನೆಲ್ಲೂರು ಜಿಲ್ಲೆಯ ನವೋದಯದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. 2016 ರಿಂದ ಮದ್ದಿರಾಳ ನವೋದಯದಲ್ಲಿ ಶಿಕ್ಷಕರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕ ಜೇಮ್ಸ್ ಅವರು ಏಪ್ರಿಲ್ 30 ರಂದು (ಇಂದು) ನಿವೃತ್ತರಾಗಲಿದ್ದಾರೆ. ಈ ಸಂದರ್ಭದಲ್ಲಿ ಲೇಪಾಕ್ಷಿ ನವೋದಯ ಮಾಜಿ ವಿದ್ಯಾರ್ಥಿಗಳು ಶಿಕ್ಷಕರನ್ನು ಸನ್ಮಾನಿಸಿ ಗುರುದಕ್ಷಿಣೆ ನೀಡಲು ನಿರ್ಧರಿಸಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 2, 2024, 17:06 [IST]
English summary
Youtuber gifts scooter to the old orphan couple video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+