ಯೂಟ್ಯೂಬ್‌ನಿಂದ ಕೋಟಿ ಗಳಿಕೆ! 65 ಲಕ್ಷದ ಐಷಾರಾಮಿ ಬೈಕ್ ಖರೀದಿಸಿದ ಯೂಟ್ಯೂಬರ್

ಹಾಯ್ ಗೈಸ್ ಎಂದು ಹೇಳುವ ಮೂಲಕ ಯೂಟ್ಯೂಬ್‌ನಲ್ಲಿ ಕಾಣಿಸಿಕೊಳ್ಳುವ ಬ್ಲಾಗರ್‌ಗಳು ಇಂದು ದೊಡ್ಡ ಫ್ಯಾನ್ಸ್ ಬಳಗ ಮೂಲಕ ಸೆಲೆಬ್ರಿಟಿಗಳು ಆಗಿದ್ದಾರೆ. . ಕಳೆದ ಕೆಲವು ವರ್ಷಗಳಿಂದ ಯೂಟ್ಯೂಬ್ ಅನೇಕ ಜನರಿಗೆ ಆದಾಯದ ಮೂಲವಾಗಿದೆ. ಕೋವಿಡ್ ಸಮಯದಲ್ಲಿ ಬ್ಲಾಗರ್‌ಗಳು ಹೆಚ್ಚು ಪ್ರಖ್ಯಾತಿಗಳಿಸಿದ್ದರು. ಯುವ ಪೀಳಿಗೆಯು ಸುಲಭವಾಗಿ ಹಣ ಗಳಿಸುವ ಕ್ಷೇತ್ರಗಳಲ್ಲಿ ಒಂದಾಗಿ ಯೂಟ್ಯೂಬ್ ಅನ್ನು ನೋಡಲು ಪ್ರಾರಂಭಿಸಿದಾಗ, ಬ್ಲಾಗರ್‌ಗಳು ಎಲ್ಲೆಡೆ ಕಂಡುಬರುತ್ತಿದ್ದಾರೆ. ಆಸಕ್ತಿದಾಯಕ ಸಂಗತಿಯೆಂದರೆ, ಕೆಲವರು ಮುಖ್ಯವಾಗಿ ಜಾಹೀರಾತು ಆದಾಯವನ್ನು ಅವಲಂಬಿಸಿದ್ದರೆ, ಇತರರು ಮೇಕ್ಅಪ್ ಕಂಪನಿಗಳು ಮತ್ತು ತಮ್ಮದೇ ಬ್ರಾಂಡ್‌ಗಳನ್ನು ಸಹ ಪ್ರಾರಂಭಿಸಿದ್ದಾರೆ.

ಬ್ಲಾಗರ್‌ಗಳು ಏನಾದರೊಂದು ಮಾಡಿ ವೈರಲ್ ಮಾಡಲು ಯತ್ನಿಸುವವರೇ ಹೆಚ್ಚು. ಇನ್ನು ಪಂಜಾಬ್‌ನ ಜಾಟ್ ಪ್ರಭ್ಜೋತ್ ( Jatt Prabhjot) ಅವರು ತಮ್ಮ ಮೋಟಾರ್‌ಸೈಕಲ್ ವ್ಲಾಗ್‌ಗಳಿಗೆ ಪ್ರಸಿದ್ಧರಾಗಿದ್ದಾರೆ ಮತ್ತು ಈಗ ಇಂಟರ್ನೆಟ್‌ನಲ್ಲಿ ಹೆಚ್ಚು ಮಾತನಾಡುವ ವಿಷಯಗಳಲ್ಲಿ ಒಬ್ಬರು. ಈ ಯೂಟ್ಯೂಬರ್ ದೇಶದ ಅತ್ಯಂತ ದುಬಾರಿ ಐಷಾರಾಮಿ ಬೈಕ್‌ಗಳಲ್ಲಿ ಒಂದನ್ನು ಖರೀದಿಸುವ ಮೂಲಕ ಸುದ್ದಿ ಆಗಿದ್ದಾರೆ. ಜಾಟ್ ಪ್ರಭ್ಜೋತ್ ಅವರು 65 ಲಕ್ಷ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು M1000 RR ಆಗಿದೆ.

Youtuber Jatt Prabhjot

ಜಾಟ್ ಪ್ರಭ್ಜೋತ್ ಅವರು ನೇಪಾಳಕ್ಕೆ ಇತ್ತೀಚೆಗೆ ವ್ಲೋಗಿಂಗ್ ಭೇಟಿಯ ಸಂದರ್ಭದಲ್ಲಿ ತಮ್ಮ ಕವಾಸಕಿ H2 ಸೂಪರ್ ಬೈಕ್ ಅನ್ನು ದೊಡ್ಡ ಅಪಘಾತದಲ್ಲಿ ಕಳೆದುಕೊಂಡರು. ಅಪಘಾತದಲ್ಲಿ 79 ವರ್ಷದ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಇದಾದ ಬಳಿಕವಷ್ಟೇ ಪ್ರಭ್ಜೋತ್ ಎರಡನೇ ಬಾರಿಗೆ ದುಬಾರಿ ಬೆಲೆಯ ಐಷಾರಾಮಿ ಬೈಕ್ ಖರೀದಿಸಿದ್ದಾರೆ. ಯೂಟ್ಯೂಬರ್ ತನ್ನ ಇತ್ತೀಚಿನ M1000 RR ಸೂಪರ್‌ಬೈಕ್ ಅನ್ನು ಅನ್‌ಬಾಕ್ಸಿಂಗ್ ಮಾಡುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಬಿಎಂಡಬ್ಲ್ಯು ಸೂಪರ್‌ಬೈಕ್‌ನ ವಿತರಣೆಗಾಗಿ Motorrad ಡೀಲರ್‌ಶಿಪ್‌ಗೆ ಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಟೊಯೋಟಾ ಇನ್ನೋವಾ ಕ್ರಿಸ್ಟಾದಲ್ಲಿ ಪ್ರಯಾಣಿಸುತ್ತಿರುವುದನ್ನು ಸಹ ಅವರು ತೋರಿಸಿದ್ದಾರೆ. ಡೀಲರ್‌ಶಿಪ್ ತಲುಪಿದ ಜಾಟ್ ಪ್ರಭ್ಜೋತ್ ತನ್ನ ಬೈಕ್ ಬಂದ ಪೆಟ್ಟಿಗೆಯನ್ನು ಓಪನ್ ಮಾಡುವುದನ್ನು ಕಾಣಬಹುದು. ವ್ಲಾಗರ್‌ನ ಕೆಲವು ಸ್ನೇಹಿತರು ಸಹ ಇದಕ್ಕೆ ಸಹಾಯ ಮಾಡುತ್ತಿದ್ದಾರೆ. BMW M1000 RR ವಿದೇಶದಿಂದ ಸಂಪೂರ್ಣ ಆಮದು ಆಗಿ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ.

Youtuber Jatt Prabhjot

ಡೀಲರ್‌ಶಿಪ್‌ನೊಳಗೆ ಬೈಕ್ ತೆಗೆದುಕೊಂಡು ಹೋಗಿದ್ದರೂ, ಬೈಕ್‌ನ ಪ್ರೀ ಡೆಲಿವರಿ ತಪಾಸಣೆ ಇನ್ನೂ ಬಾಕಿಯಿರುವುದರಿಂದ ಇಂದು ಡೆಲಿವರಿ ತೆಗೆದುಕೊಳ್ಳುವುದಿಲ್ಲ ಎಂದು ವ್ಲಾಗರ್ ವಿಡಿಯೋದಲ್ಲಿ ಹೇಳಿದ್ದಾನೆ. M1000 RR ಕಾಂಪಿಟಿಶನ್ ಭಾರತದಲ್ಲಿ BMW ಮೊಟೊರಾಡ್ ಮಾರಾಟ ಮಾಡುವ ಅತ್ಯಂತ ದುಬಾರಿ ಬೈಕ್‌ಗಳಲ್ಲಿ ಒಂದಾಗಿದೆ. ಇದು ಪ್ರತಿಷ್ಠಿತ 'ಎಂ' ಬ್ಯಾಡ್ಜ್ ಅನ್ನು ಹೊತ್ತಿರುವ ಮೊದಲ ನಿರ್ಮಾಣ BMW ಸೂಪರ್‌ಬೈಕ್ ಆಗಿದೆ.

ಮೋಟಾರ್‌ಸೈಕಲ್ ಅನ್ನು ಸ್ಟ್ಯಾಂಡರ್ಡ್ ಮತ್ತು ಕಾಂಪಿಟಿಶನ್ ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಸೀಮಿತ ಸಂಖ್ಯೆಯ ಮಾದರಿಗಳನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗುವುದು ಏಕೆಂದರೆ ಅವುಗಳನ್ನು ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಾಗಿ (CBU) ತರಲಾಗುತ್ತದೆ. ಬಿಎಂಡಬ್ಲ್ಯು M 1000 RR ಮೋಟಾರ್‌ಸೈಕಲ್‌ನಲ್ಲಿ ಲಿಕ್ವಿಡ್-ಕೂಲ್ಡ್ 999 cc ಇನ್‌ಲೈನ್-ಫೋರ್ ಎಂಜಿನ್ ಆಗಿದ್ದು, ಇದು 212 bhp ಪವರ್ ಮತ್ತು 113 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Youtuber Jatt Prabhjot

ಬಿಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಯುನಿಟ್ ಅನ್ನು ಜೋಡಿಸಲಾಗಿದ್ದು, ಇದು ಸ್ಲಿಪ್-ಅಸಿಸ್ಟ್ ಕ್ಲಚ್ ಮತ್ತು ಕ್ಲಚ್ ಅನ್ನು ಬಳಸದೆ ತ್ವರಿತವಾಗಿ ಅಪ್ ಮತ್ತು ಡೌನ್‌ಶಿಫ್ಟ್‌ಗಳಿಗಾಗಿ ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ನೀಡಲಾಗಿದೆ. ಈ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಕೇವಲ 3.1 ಸೆಕೆಂಡುಗಳಲ್ಲಿ 0 - 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಈ ಬೈಕಿನ ಟಾಪ್ ಸ್ಪೀಡ್ 306 ಕಿ,ಮೀ ಆಗಿದೆ.

ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 45 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಹೊಂದಿದೆ. ಈ ಎರಡು ಸಸ್ಪೆಂಕ್ಷನ್ ಯುನಿಟ್ ಗಳು ಪ್ರೀ ಲೋಡ್ ಮತ್ತು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಇದು ಬ್ರ್ಯಾಂಡ್‌ನ ಫುಲ್ ಫ್ಲೋಟರ್ ಪ್ರೊ ಕೈನೆಮ್ಯಾಟಿಕ್ಸ್ ತಂತ್ರಜ್ಞಾನವನ್ನು ಹೊಂದಿದೆ.

ಇನ್ನು ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನ ಎರಡು ಕಡೆಗಳಲ್ಲಿ ನಿಸ್ಸಿನ್‌ನಿಂದ ಎಂ-ಸ್ಪೆಕ್ ಯುನಿಟ್ ಗಳ ಬ್ರೇಕಿಂಗ್ ಸಿಸ್ಟಂ ಹೊಂದಿದೆ. ಮುಂಭಾಗದಲ್ಲಿ ಸೆಟಪ್ ರೇಡಿಯಲ್ ಮೌಂಟೆಡ್ ಫೋರ್-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಟ್ವಿನ್ 320 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ, ಇನ್ನು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಒಂದೇ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

Article Published On: Tuesday, June 18, 2024, 11:05 [IST]
English summary
Youtuber jatt prabhjot buys new bmw m1000 rr superbike details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+