ಯ್ಯೂಟ್ಯೂಬರ್‌ನ ಲ್ಯಾಂಬೋರ್ಗಿನಿ ಸೀಜ್ ಮಾಡಿ 3.5 ಕೋಟಿ ದಂಡ: ಪೊಲೀಸರ ನಡೆಗೆ ದಿಗ್ಭ್ರಮೆಗೊಂಡ ಪ್ರಜೆ!
ಇತ್ತೀಚಿನ ದಿನಗಳಲ್ಲಿ ದುಬಾರಿ ಕಾರು ಬೈಕ್‌ಗಳನ್ನು ಕೊಂಡುಕೊಳ್ಳಲು ಶ್ರೀಮಂತರೇ ಬೇಕೆಂದಿಲ್ಲ. ಕೆಲವು ದಶಕಗಳ ಹಿಂದಿನವರೆಗೂ ಕೋಟ್ಯಾದಿಪತಿಗಳಷ್ಟೇ ಲ್ಯಾಂಬೋರ್ಗಿನಿ ಅಂತಹ ದುಬಾರಿ ಕಾರುಗಳನ್ನು ಓಡಿಸುತ್ತಿದ್ದರು, ಇದೀಗ ಕಾಲ ಬದಲಾಗಿದ್ದು, ಟ್ಯಾಲೆಂಟ್ ಇದ್ದರೆ ನಿಮಗೂ ಇದನ್ನು ಕೊಳ್ಳುವಷ್ಟು ಸುಲಭವಾಗಿದೆ. ಆದರೆ ಕೆಲವೊಮ್ಮ ಕೊಂಚ ಗಮನಿಸದಿದ್ದರೂ, ಭಾರೀ ದಂಡ ತೆರಬೇಕಾಗುತ್ತದೆ.
ಇಲ್ಲೊಬ್ಬ ಯ್ಯೂಟ್ಯೂಬರ್ ಅನುರಾಗ್ ದೋಬಲ್ ಹೆಸರು ಕೇಳಿರದ ಆಟೋಮೊಬೈಲ್ ಪ್ರೀಯರು ಕಮ್ಮಿಯೇ. ಈತನ ಹೆಸರು ಗೊತ್ತಿಲ್ಲದೇ ಇದ್ದರೂ, ಈತನ ಯ್ಯೂಟ್ಯೂಬ್ ಚಾನಲ್ ಯುಕೆ 07 ರೈಡರ್ ಎಂಬ ಹೆಸರು ಕೇಳದೇ ಇರುವವರು ವಿರಳವೇ ಎನ್ನಬಹುದು. ಇದೀಗ ಈತನ ಲ್ಯಾಂಬೋರ್ಗಿನಿ ಹುರಾಕಾನ್ ಅನ್ನು ಇದೀಗ ಪೊಲೀಸರು ಸೀಜ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ.

ಮಾಹಿತಿಗಳ ಪ್ರಕಾರ, ಅನುರಾಗ್ ದೋಬಲ್‌ನ ಕಾರು ಹೊತ್ತು ತರುತ್ತಿದ್ದ ಟ್ರಕ್‌ನ ಕೆಲವೊಂದು ಡಾಕ್ಯುಮೆಂಟ್‌ಗಳು ಸರಿಯಾಗಿರದ ಕಾರಣ ಆ ಟ್ರಕ್ ಅನ್ನು ಎಸ್‌ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಸಂಧರ್ಭದಲ್ಲಿ ಈತನ ಲ್ಯಾಂಬೋರ್ಗಿನಿ ಹುರಾಕಾನ್ ಅದರಲ್ಲಿದ್ದು, ಅದನ್ನು ಸಹ ಲಾರೀ ಸಮೇತ ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅನುರಾಗ್ ತನ್ನ ಲ್ಯಾಂಬೋರ್ಗಿನಿಯನ್ನು ಒಂದು ಸ್ಪೆಷಲ್ ಐಪಿಎಲ್ ಶೂಟ್‌ಗಾಗಿ ಚೆನ್ನೈಗೆ ಟ್ರಕ್ ಮೂಲಕ ತಂದಿದ್ದರು. ಈ ಶೂಟ್‌ನಲ್ಲಿ ಪ್ರಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸಹ ಭಾಗವಹಿಸಿದ್ದರು. ಆದರೆ ಇದೀಗ ಈ ರೀತಿ ಸಂಭವಿಸಿದ್ದು, ಯ್ಯೂಟ್ಯೂಬರ್ ತನ್ನದೇನು ತಪ್ಪಿಲ್ಲದಿದ್ದರು ಹೀಗಾಗಿದೆ ಎಂದು ವಿಷಾದ ತೋಡಿಕೊಂಡಿದ್ದಾರೆ.

ಇನ್ನೊಂದು ಪ್ರಮುಖ ವಿಷಯವೇನೆಂದರೆ ಪೊಲೀಸರು ಕೇವಲ ಟ್ರಕ್ ಮತ್ತು ಅದರಲ್ಲಿದ್ದ ಲ್ಯಾಂಬೋರ್ಗಿನಿಯನ್ನ ಸೀಜ್ ಮಾಡಿದ್ದು ಮಾತ್ರವಲ್ಲದೇ, ಸುಮಾರು 3.5 ಕೋಟಿ ರೂಗಳ ಫೈನ್ ಅನ್ನು ಸಹ ಪೊಲೀಸರು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ. ಅನುರಾಗ್ ಪ್ರಕಾರ ಆತನ ಲ್ಯಾಂಬೋರ್ಗಿನಿ ಹುರಾಕಾನ್ ಕಾರಿನ ಡಾಕ್ಯುಮೆಂಟ್‌ಗಳೆಲ್ಲಾ ಸರಿಯಾಗಿದ್ದು, ಪೊಲೀಸರ ಈ ನಡೆ ತೀರಾ ವಿಷಾದನೀಯ ಎಂದಿದ್ದಾರೆ.
ಇನ್ನು ಅನುರಾಗ್ ಅವರು ಲ್ಯಾಂಬೋರ್ಗಿನಿ ಹುರಾಕಾನ್ ಬಗ್ಗೆ ನೋಡುವುದಾದರೆ, ಕಳೆದ 9 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಬೋರ್ಗಿನಿ ಹುರಾಕಾನ್ ಯಾಶಸ್ವಿಯಾಗಿ ಮುನ್ನುಗ್ಗುತ್ತಿದೆ. ಭಾರತದ ವೇಗ ಪ್ರೀಯರಿಗೆ ಹುರಾಕಾನ್ ಕಾರು ಒಂದು ವರದಾನವಾಗಿ ಗೋಚರವಾಗುತ್ತಿದೆ. ಕಳೆದ ೯ ವರ್ಷಗಳಲ್ಲಿ ಲ್ಯಾಂಬೋರ್ಗಿನಿ ಹುರಾಕಾನ್‌ನ ಹಲವಾರು ವೇರಿಯಂಟ್‌ಗಳು ಬಂದಿದ್ದು, ಭಾರತೀಯರ ಅಚ್ಚುಮೆಚ್ಚಿನ ಸೂಪರ್ ಕಾರುಗಳಲ್ಲಿ ಒಂದಾಗಿದೆ.

ಲ್ಯಾಂಬೋರ್ಗಿನಿ ಹುರಾಕಾನ್‌ನಲ್ಲಿ ಹಲವಾರು ವೇರಿಯೆಂಟ್ ಗಳು ಇದ್ದು ಇದರ ಏರೋಡೈನಾಮಿಕ್ ಡಿಸೈನ್ ಶೈಲಿಯಿಂದಲೇ ಹೆಚ್ಚು ಆಕರ್ಷಕವಾಗಿದೆ. 5.2 ಲೀಟರ್ 10 ಸಿಲಿಂಡರ್ ಎಂಜಿನ್ ನೊಂದಿಗೆ ಬರುವ ಈ ಕಾರು 572 ಬಿಹೆಚ್‌ಪಿ ಪವರ್ ಮತ್ತು 540 ಎನ್‌ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇತ್ತೀಚೆಗಷ್ಟೇ ಲ್ಯಾಂಬೋರ್ಗಿನಿಯು ೧೫೦ ನೇ ಹುರಾಕಾನ್ ಕಾರಿನ ಡೆಲಿವರಿಯನ್ನು ಪೂರ್ಣಗೊಳಿಸಿ ಈ ಸಂತಸದ ವಿಚಾರವನ್ನು ಹಂಚಿಕೊಂಡಿದೆ. 2014 ರಲ್ಲಿ ಲ್ಯಾಂಬೋರ್ಗಿನಿ ಹುರಾಕಾನ್ ಜಾಗತಿಕವಾಗಿ ಲಾಂಚ್ ಆದ ಬಳಿಕ ಭಾರತದಲ್ಲಿ ತನ್ನ ಮಾರಾಟವನ್ನು ಆರಭಿಸಿತ್ತು. ಆರಂಭದಲ್ಲಿ ಭಾರತಕ್ಕೆ ಹುರಾಕಾನ್ ಕೂಪೆ ಮಾಡೆಲ್ ಕಾಲಿಟ್ಟಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications