ತಾಯಿಗೆ ಸೂಪರ್ ಕಾರು ಚಾಲನೆ ಮಾಡಲು ಕಲಿಸಿದ ಯೂಟ್ಯೂಬರ್

ಸೂಪರ್ ಕಾರುಗಳನ್ನು ಚಾಲನೆ ಮಾಡುವುದು ಸುಲಭದ ಕೆಲಸವಲ್ಲ. ಸಾಮಾನ್ಯ ಕಾರುಗಳನ್ನು ಸಲೀಸಾಗಿ ಚಾಲನೆ ಮಾಡುವವರು ಸಹ ಮೊದಲ ಬಾರಿಗೆ ಸೂಪರ್ ಕಾರುಗಳನ್ನು ಚಾಲನೆ ಮಾಡುವಾಗ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಾರೆ.

ತಾಯಿಗೆ ಸೂಪರ್ ಕಾರು ಚಾಲನೆ ಮಾಡಲು ಕಲಿಸಿದ ಯೂಟ್ಯೂಬರ್

ಅದಕ್ಕಾಗಿಯೇ ಮೊದಲ ಬಾರಿಗೆ ಸೂಪರ್ ಕಾರುಗಳನ್ನು ಚಾಲನೆ ಮಾಡುವಾಗ ಪರಿಣಿತರನ್ನು ಜೊತೆಯಲ್ಲಿ ಕರೆದೊಯ್ಯಿರಿ ಎಂದು ಆಟೋ ಮೋಟಿವ್ ತಜ್ಞರು ಸಲಹೆ ನೀಡುತ್ತಾರೆ. ಯೂಟ್ಯೂಬರ್ (ಯೂಟ್ಯೂಬ್ ಚಾನೆಲ್ ಮಾಲೀಕರು) ಒಬ್ಬರು ತಮ್ಮ ತಾಯಿಗೆ ಮೊದಲ ಬಾರಿ ಸೂಪರ್ ಕಾರ್ ಚಾಲನೆ ಮಾಡಲು ನೆರವಾಗಿದ್ದಾರೆ.

ತಾಯಿಗೆ ಸೂಪರ್ ಕಾರು ಚಾಲನೆ ಮಾಡಲು ಕಲಿಸಿದ ಯೂಟ್ಯೂಬರ್

ವೈಪಿಎಂ ವಿ ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್‌ ಮಾಲೀಕ ಸೂಪರ್ ಕಾರ್ ಅನ್ನು ಹೇಗೆ ಚಾಲನೆ ಮಾಡಬೇಕು ಎಂದು ತಮ್ಮ ತಾಯಿಗೆ ಕಲಿಸಿದ್ದಾರೆ. ಅದರ ಬಗೆಗಿನ ವೀಡಿಯೊವನ್ನು ಸಹ ಅಪ್ ಲೋಡ್ ಮಾಡಿದ್ದಾರೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ತಾಯಿಗೆ ಸೂಪರ್ ಕಾರು ಚಾಲನೆ ಮಾಡಲು ಕಲಿಸಿದ ಯೂಟ್ಯೂಬರ್

ಅವರು ಆಡಿ ಆರ್ 8 ಸೂಪರ್ ಕಾರನ್ನು ಚಾಲನೆ ಮಾಡಲು ತಮ್ಮ ತಾಯಿಗೆ ನೆರವಾಗಿದ್ದಾರೆ. ದುಬಾರಿ ಎಂಬ ಕಾರಣಕ್ಕೆ ಭಾರತದಲ್ಲಿ ಕೆಲವೇ ಕೆಲವು ಜನರು ಮಾತ್ರ ಈ ಕಾರ್ ಅನ್ನು ಹೊಂದಿದ್ದಾರೆ.

ತಾಯಿಗೆ ಸೂಪರ್ ಕಾರು ಚಾಲನೆ ಮಾಡಲು ಕಲಿಸಿದ ಯೂಟ್ಯೂಬರ್

ಕಾರ್ ಅನ್ನು ಚಾಲನೆ ಮಾಡುವ ಮುನ್ನ ಯೂಟ್ಯೂಬರ್ ತಾಯಿ ಉದ್ವೇಗಕ್ಕೆ ಒಳಗಾಗಿದ್ದರು. ಆದರೆ ಕೆಲ ಸಮಯದ ನಂತರ ಅವರು ಆತ್ಮ ವಿಶ್ವಾಸದಿಂದ ಕಾರನ್ನು ಚಾಲನೆ ಮಾಡುವುದನ್ನು ಕಾಣಬಹುದು.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ತಾಯಿಗೆ ಸೂಪರ್ ಕಾರು ಚಾಲನೆ ಮಾಡಲು ಕಲಿಸಿದ ಯೂಟ್ಯೂಬರ್

ಈ ಕಾರನ್ನು ಚಾಲನೆ ಮಾಡುವುದು ಸ್ವಲ್ಪ ಕಷ್ಟವೆಂದು ಹಲವರು ಹೇಳುತ್ತಾರೆ. ಆಡಿ ಆರ್ 8 ಹೆಚ್ಚು ಪರ್ಫಾಮೆನ್ಸ್ ನೀಡುವ ಕಾರು ಎಂಬುದು ಇದಕ್ಕೆ ಪ್ರಮುಖ ಕಾರಣ. ಈ ಕಾರಿನಲ್ಲಿ 5.2 ಲೀಟರ್ ವಿ 10 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ತಾಯಿಗೆ ಸೂಪರ್ ಕಾರು ಚಾಲನೆ ಮಾಡಲು ಕಲಿಸಿದ ಯೂಟ್ಯೂಬರ್

ಈ ಕಾರು 525 ಬಿಹೆಚ್‌ಪಿ ಪವರ್ ಹಾಗೂ 530 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಕೇವಲ 4 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಸೂಪರ್ ಫಾಸ್ಟ್ ಸಾಮರ್ಥ್ಯವನ್ನು ಹೊಂದಿರುವುದರಿಂದ ಈ ಕಾರ್ ಅನ್ನು ನಿಯಂತ್ರಿಸುವುದು ಸವಾಲಿನ ಕೆಲಸ ಎಂದು ಹೇಳಲಾಗುತ್ತದೆ. ಆಡಿ ಆರ್ 8 ಸೂಪರ್ ಕಾರು ಗರಿಷ್ಠ 300 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ತಾಯಿಗೆ ಸೂಪರ್ ಕಾರು ಚಾಲನೆ ಮಾಡಲು ಕಲಿಸಿದ ಯೂಟ್ಯೂಬರ್

ಸದ್ಯಕ್ಕೆ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿಲ್ಲ ಎಂಬುದು ಗಮನಾರ್ಹ. ಆದರೆ ಆಡಿ ಆರ್ 8 ಸೂಪರ್ ಕಾರು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ.

ಚಿತ್ರಕೃಪೆ: ವೈಪಿಎಂ ವಿ ವ್ಲಾಗ್ಸ್

Most Read Articles

Kannada
English summary
Youtuber teaches his mom how to drive supercar. Read in Kannada.
Story first published: Friday, June 4, 2021, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X