ಫುಡ್ ಡೆಲಿವರಿ ಕಂಪನಿಯಿಂದ ಎಣಿಸಲಾಗದಷ್ಟು ಹಣ ಸಂಪಾದನೆ.. 8 ಕೋಟಿ ಮೌಲ್ಯದ ಬೆಂಟ್ಲಿ ಕಾರು ಖರೀದಿಸಿದ ಕುಬೇರ!

ಭಾರತದ ಜನಪ್ರಿಯ ಫುಡ್ ಡೆಲಿವರಿ ಕಂಪನಿಯಾಗಿ ಝೊಮ್ಯಾಟೊ (Zomato) ಗುರುತಿಸಿಕೊಂಡಿದ್ದು, ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದೆ. ಸಿಇಒ ದೀಪಿಂದರ್ ಗೋಯಲ್ (Deepinder Goyal) ನೇತೃತ್ವದಲ್ಲಿ ಯಶಸ್ವಿ ಉದ್ಯಮ ಸಂಸ್ಥೆಯಾಗಿ ಬೆಳದುನಿಂತಿದೆ. ಅವರು, ರೂ.8,300 ಕೋಟಿಗೂ ಹೆಚ್ಚು ನಿವ್ವಳ ಸಂಪತ್ತನ್ನು ಹೊಂದಿದ್ದಾರೆ. ದೀಪಿಂದರ್ ಗೋಯಲ್ ಅವರಿಗೆ ಕಾರುಗಳ ಮೇಲೆ ವಿಶೇಷವಾದ ಪ್ರೀತಿಯಿದ್ದು, ವಿವಿಧ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರು ಆಗಿದ್ದಾರೆ. ಸದ್ಯ, ಅವರು ಹೊಚ್ಚ ಹೊಸ 'ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮುಲಿನರ್ ಡಬ್ಲ್ಯೂ12' ಕಾರನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.

ಈ ಕುರಿತಂತೆ 'ಕಾರ್ ಕ್ರೇಜಿ ಇಂಡಿಯಾ' ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿಲಾಗಿದೆ. ಗುರುಗ್ರಾಮದ ರಸ್ತೆಯೊಂದರಲ್ಲಿ ನೂತನ ಸ್ಯಾಟಿನ್ ರೆಡ್ ಬಣ್ಣದ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮುಲಿನರ್ ಡಬ್ಲ್ಯೂ12 (Bentley Continental GT Mulliner W12) ಕಾರು ನಿಂತಿರುವುದನ್ನು ಕಾಣಬಹುದು. ಇದೇ ಕಾರನ್ನು ಝೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಖರೀದಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

Zomato Ceo Deepinder Goyal Buy New Bentley Continental GT Mulliner W12 Car

ನೂತನ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮುಲಿನರ್ ಡಬ್ಲ್ಯೂ12 ಕಾರು ರೂ.7.95 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು ಬ್ಲ್ಯಾಕ್ ಕ್ರಿಸ್ಟಲ್, ಕ್ಯಾಂಬ್ರಿಯನ್ ಗ್ರೇ, ಬ್ರೀಜ್ ಬೈ ಮುಲ್ಲಿನರ್ ಹಾಗೂ ಬ್ಲೂ ಕ್ರಿಸ್ಟಲ್ ಸೇರಿದಂತೆ 18 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದರಲ್ಲಿ 4 ಮಂದಿ ಸುಲಭವಾಗಿ ಪ್ರಯಾಣಿಸಬಹುದು.

ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮುಲಿನರ್ ಡಬ್ಲ್ಯೂ12 ಕಾರು 5950 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದ್ದು, 650 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 900 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. 12.9 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 336 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

Zomato Ceo Deepinder Goyal Buy New Bentley Continental GT Mulliner W12 Car

ಈ ಕಾರು ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ಟೆಕ್ನಾಲಜಿಯನ್ನು ಹೊಂದಿದೆ. ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ಎಕ್ಸ್‌ಟೀರಿಯರ್ ರೇರ್ ವ್ಯೂ ಮಿರರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಅಲಾಯ್ ವೀಲ್‌ಗಳು ಮತ್ತು ಫಾಗ್ ಲೈಟ್‌ಗಳು ಸೇರಿದಂತೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

ದೀಪಿಂದರ್ ಗೋಯಲ್ ನೂತನ ಬೆಂಟ್ಲಿ ಕಾಂಟಿನೆಂಟಲ್ ಮಾತ್ರವಲ್ಲದೆ, ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರು ಆಗಿದ್ದಾರೆ. ಅವರ ಬಳಿ, ಮತ್ತೊಂದು ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಡಬ್ಲ್ಯೂ12 ಕಾರು ಸಹ ಇದೆ. ಇದರೊಟ್ಟಿಗೆ ಆಸ್ಟನ್ ಮಾರ್ಟಿನ್ ಡಿಬಿ12 (Aston Martin DB12) ಕಾರನ್ನು ಹೊಂದಿದ್ದಾರೆ. ಇದು ರೂ.4.59 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 3982 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದೆ.

ಪೋರ್ಷೆ 911 ಟರ್ಬೊ ಎಸ್ (Porsche 911 Turbo S) ಕಾರು ಸಹ ದೀಪಿಂದರ್ ಗೋಯಲ್ ಅವರ ಬಳಿಯಿದೆ. ಇದು ರೂ.3.35 ಎಕ್ಸ್ ಶೋರೂಂ ದರವನ್ನು ಪಡೆದಿದೆ. 2981 ಸಿಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಈ ಕಾರಿನಲ್ಲಿ 4 ಜನರು ಓಡಾಟ ನಡೆಸಬಹುದು. ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಫೆರಾರಿ ರೋಮಾ (Ferrari Roma) ಕಾರಿಗೂ ದೀಪಿಂದರ್ ಗೋಯಲ್ ಅವರು ಮಾಲೀಕರಾಗಿದ್ದಾರೆ. ಈ ಕಾರು 3.76 ಕೋಟಿ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. 3855 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 6 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿಯೂ 2 ಜನರು ಪ್ರಯಾಣ ಮಾಡಬಹುದು.

ಲಂಬೋರ್ಗಿನಿ ಉರುಸ್ (Lamborghini Urus) ಕಾರನ್ನು ದೀಪಿಂದರ್ ಗೋಯಲ್ ಅವರು ಹೊಂದಿದ್ದಾರೆ. ಇದು ರೂ.4.18 ಕೋಟಿಯಿಂದ ರೂ.4.57 ಕೋಟಿ ಎಕ್ಸ್ ಶೋರೂಂ ದರವನ್ನು ಹೊಂದಿದೆ. 4-ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ.

Article Published On: Monday, November 25, 2024, 20:12 [IST]
English summary
Zomato ceo deepinder goyal buy new bentley continental gt mulliner w12 car
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+