ಮಾರುವೇಷದಲ್ಲಿ ಬಂದವರು ಯಾರೆಂದು ತಿಳಿಯದೆ ಅವಮಾನಿಸಿದ ಸಿಬ್ಬಂದಿ! ಚೆಕ್ ಇಡಲಿದ್ದಾರೆ CEO?

ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಾಗೆಯೇ ತಮ್ಮ ಸಂಸ್ಥೆಯ ಬಗ್ಗೆ ಜನರ ಅನಿಸಿಕೆಗಳೇನು ಎಂಬುದನ್ನು ಆಗಾಗ್ಗೆ ತಿಳಿದುಕೊಳ್ಳುವ ಇವರು, ಇತ್ತೀಚೆಗೆ ಜೊಮ್ಯಾಟೋ ಡೆಲಿವರಿ ಬಾಯ್ಸ್ ಎದುರಿಸುವ ಸವಾಲುಗಳನ್ನು ತಿಳಿಯಲು ಸ್ವತಃ ಅವರೇ ರಂಗಕ್ಕೆ ಇಳಿದಿದ್ದರು. ಗ್ರಾಹಕರಿಗೆ ಡೆಲಿವರಿ ನೀಡಲು ಖುದ್ದು ಅವರೇ ಡೆಲಿವರಿ ಬಾಯ್ ಆಗಿದ್ದರು. ಆದರೆ ಇಲ್ಲಿ ಟ್ವಿಸ್ಟ್ ಏನೆಂದರೆ ಗ್ರಾಹಕರಿಗೆ ಡೆಲಿವರಿ ನೀಡಲೆಂದು ಆರ್ಡರ್ ಮಾಡಿದ್ದ ಮಾಲ್‌ನಿಂದ ಆಹಾರವನ್ನು ಸ್ವೀಕರಿಸಲು ತೆರಳಿದ್ದಾಗ ಮಾಲ್ ಸಿಬ್ಬಂದಿ ಅವಮಾನಿಸಿದ್ದಾರೆ.

ಮಾಲ್‌ನಲ್ಲಿ ಎದುರಿಸಿದ ಸವಾಲುಗಳನ್ನು ಸಿಇಒ ದೀಪಿಂದರ್ ಗೋಯಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಲ್‌ನಲ್ಲಿ ಆರ್ಡರ್ ತೆಗೆದುಕೊಳ್ಳುವಾಗ ಅಲ್ಲಿನ ಸಿಬ್ಬಂದಿ ತಮ್ಮನ್ನು ಹೇಗೆ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೇ ತಮ್ಮ ಡೆಲಿವರಿ ಬಾಯ್ಸ್ ಎದುರಿಸುತ್ತಿರುವ ಕಷ್ಟಗಳನ್ನು ಸ್ವತಃ ಅವರೇ ಕಂಡುಕೊಂಡಿದ್ದಾರೆ.

zomato-ceo-mistreated-by-mall-security-while-picking-delivery-in-triumph-bike

ಗುರುಗ್ರಾಮದ ಆಂಬಿಯನ್ಸ್ ಮಾಲ್‌ನಲ್ಲಿರುವ ಹಲ್ದಿರಾಮ್‌ನಿಂದ ಆರ್ಡರ್ ಬಂದಿದೆ. ಗೋಯಲ್ ಅವರು ತಮ್ಮ ಪತ್ನಿ ಗ್ರೇಸಿಯಾ ಮುನೋಜ್ ಅವರೊಂದಿಗೆ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್ ಬೈಕ್‌ನಲ್ಲಿ ಸವಾರಿ ಮಾಡಿ ಮಾಲ್ ತಲುಪಿದ್ದರು. ಮಾಲ್‌ನ ಪ್ರವೇಶದ್ವಾರದಲ್ಲಿ, ಭದ್ರತಾ ಸಿಬ್ಬಂದಿ ಅವರನ್ನು ನಿಲ್ಲಿಸಿ ಸಾಮಾನ್ಯರಂತೆ ಹೋಗಲು ನಿಮಗೆ ಅವಕಾಶವಿಲ್ಲ, ಹಿಂಬದಿಯ ಮೆಟ್ಟಿಲುಗಳ ಮೂಲಕ ಹೋಗಿ ಎಂದಿದ್ದಾರೆ.

ಆ ವೇಳೆ ಡೆಲಿವರಿ ಬಾಯ್ಸ್‌ಗೆ ಮೀಸಲಾದ ಲಿಫ್ಟ್ ಏನಾದರೂ ಇದೆಯೇ ಎಂದು ದೀಪಿಂದರ್ ಪರಿಶೀಲಿಸಿದ್ದಾರೆ, ಆದರೆ ಇರಲಿಲ್ಲ. ಸ್ವತಃ ಅವರೇ ಮೂರನೇ ಮಹಡಿಗೆ ಮೆಟ್ಟಿಲುಗಳನ್ನು ಹತ್ತಿ ಹೋಗಿದ್ದಾರೆ. ಬಳಿಕ ಇನ್ನೊಂದು ಟ್ವಿಸ್ಟ್ ಇತ್ತು, ಮಾಲ್‌ನ ಮಾರ್ಗಸೂಚಿಗಳ ಪ್ರಕಾರ, ಕೊಟ್ಟಿರುವ ಆರ್ಡರ್ ಸಿದ್ಧವಾಗುವವರೆಗೆ ಮೆಟ್ಟಿಲುಗಳಲ್ಲಿ ಡೆಲಿವರಿ ಬಾಯ್ಸ್ ಕಾಯಬೇಕು ಎಂಬುದನ್ನು ಅರಿತು ಅವರಿಗೆ ದುಖ:ವಾಗಿದೆ.

zomato-ceo-mistreated-by-mall-security-while-picking-delivery-in-triumph-bike

ವೀಡಿಯೊದಲ್ಲಿ ಅವರು ಮೆಟ್ಟಿಲುಗಳ ಬಳಿ ಕುಳಿತು ಕಾಯುವ ದೃಷ್ಯಗಳನ್ನು ಕಾಣಬಹುದು. ಅಂತಿಮವಾಗಿ ಆರ್ಡರ್ ಕೈಸೇರಿದ ಬಳಿಕ ಅಲ್ಲಿಂದ ಹೊರಟಿದ್ದಾರೆ. ಡೆಲಿವರಿ ಬಾಯ್ಸ್‌ ಎದುರಿಸುತ್ತಿರುವ ಸವಾಲುಗಳನ್ನು ತಗ್ಗಿಸಲು ಮಾಲ್‌ಗಳೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡುವ ಅಗತ್ಯವನ್ನು ಅವರು ಅರಿತುಕೊಂಡಿರುವುದಾಗಿ ಹೇಳಿದ್ದಾರೆ.

ಡೆಲಿವರಿ ಬಾಯ್ಸ್‌ಗೆ ಅನೇಕ ವಸತಿ ಸಮಾಜಗಳಲ್ಲಿ ಲಿಫ್ಟ್‌ಗಳನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಅವರು ಹಂಚಿಕೊಂಡಿರುವ ವಿಡಿಯೋಗೆ ಹಲವು ಕಮೆಂಟ್ಸ್ ಕೂಡ ಬಂದಿವೆ. ಡೆಲಿವರಿ ಬಾಯ್ಸ್‌ನ ಮಾನವೀಯವಾಗಿ ನಡೆಸಿಕೊಳ್ಳಬೇಕು, ನಿಮಗೆ ಬೇಕಾದ ಸಮಯಕ್ಕೆ ಆಹಾರವನ್ನು ತಲುಪಿಸುವ ಯುವಕರಿಗೆ ನೋಯಿಸಬೇಡಿ ಎಂದು ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಕೇಳಿಕೊಂಡಿದ್ದಾರೆ.

ದೀಪಿಂದರ್ ಗೋಯಲ್ ಅವರು ಕಟ್ಟಾ ಕಾರು ಪ್ರೇಮಿಯಾಗಿದ್ದು, ಆಸ್ಟನ್ ಮಾರ್ಟಿನ್ ಡಿಬಿ 12, ಫೆರಾರಿ ರೋಮಾ, ಪೋರ್ಷೆ 911 ಟರ್ಬೊ ಎಸ್ ಮತ್ತು ಲ್ಯಾಂಬೊರ್ಗಿನಿ ಉರುಸ್‌ನಂತಹ ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅವರು ಇತ್ತೀಚಿನ ಈ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿರುವುದು ತಮ್ಮ ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್ ಬೈಕ್ ಮೂಲಕ..

ಈ ಬೈಕಿನ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ರೂ.2.64 ಲಕ್ಷಗಳಾಗಿದೆ. ಇದು ಎಕ್ಸ್ ಶೋರೂಂ ಬೆಲೆಯಾಗಿದೆ. ಇದು 398.15 ಸಿಸಿ ಎಂಜಿನ್ ಹೊಂದಿದ್ದು, 40 ಬಿಹೆಚ್‌ಪಿ ಪವರ್ ಮತ್ತು 37.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

Article Published On: Tuesday, October 8, 2024, 16:38 [IST]
English summary
Zomato ceo mistreated by mall security while picking delivery in triumph bike
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+