Zomato: ಮಗುವಿಗಾಗಿ ಸರ್ವಸ್ವ ತ್ಯಜಿಸಿದ ತಾಯಿ: ದೊಡ್ಡ ವಿಧ್ಯಾಭ್ಯಾಸವಿದೆ, ಮಹಿಳೆಯ ಉತ್ತರೆಕ್ಕೆ ದು:ಖಿಸಿದ ನೆಟ್ಟಿಗರು!

ಝೊಮ್ಯಾಟೋ (Zomato) ಡೆಲಿವರಿ ಮಾಡುವವರ ಕುರಿತು ನಿತ್ಯ ಯಾವುದೋ ಒಂದು ಕಥೆ ವೈರಲ್ ಆಗುತ್ತಲೇ ಇರುತ್ತೆ. ನಾವು ಕೂಡ ಹಲವರು ಝೊಮ್ಯಾಟೋ ಡೆಲಿವರಿ ಬಾಯ್ಸ್ ಕುರಿತ ಲೇಖನಗಳನ್ನು ಡ್ರೈವ್‌ಸ್ಪಾರ್ಕ್‌ನಲ್ಲಿ ಪ್ರಕಟಿಸಿದ್ದೇವೆ. ಆದ್ರೆ ಈವೆರೆಗಿನ ಎಲ್ಲಾ ಕಥೆಗಳಿಗೆ ಭಿನ್ನವಾದ ಕಥೆಯನ್ನು ಈ ಬಾರಿ ಪ್ರಕಟಿಸಲು ನಮಗೂ ಖುಷಿಯಿದೆ. ತಾಯ್ತನವನ್ನು ಬಿಡದ ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ಸುಡು ಬಿಸಿಲಿನಲ್ಲಿ ಝೊಮ್ಯಾಟೋ ಡೆಲಿವರಿ ಕೆಲಸವನ್ನು ಮಾಡುತ್ತಿದ್ದಾರೆ. ಇದು ಹಲವರಿಗೆ ಸ್ಪೂರ್ತಿದಾಯಕವಾಗಿದ್ದು, ತಮ್ಮ ಕಷ್ಟಗಳನ್ನು ಮೆಟ್ಟಿನಿಂತು ಮತ್ತೊಬ್ಬರ ಬಳಿ ಕೈಚಾಚದೆ ದುಡಿಯುತ್ತಿರುವುದು ನನಗೆ ಹೆಮ್ಮೆಯಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಝೊಮ್ಯಾಟೋ ಡೆಲಿವರಿ ಮಾಡುವ ಮಹಿಳೆಯು ತಮ್ಮ ಮಗುವಿನೊಂದಿಗೆ ಬೈಕ್ ಸವಾರಿ ಮಾಡುತ್ತಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಕುರಿತ ವಿಡಿಯೋವನ್ನು ವಿಶಾಲ್ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಲಕ್ಷಾಂತರ ವೀಕ್ಷಣೆಗಳು ಬಂದಿದ್ದು, ಮಹಿಳೆಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

zomato-delivery-woman-rides-hero-splendor-bike-with-her-child-viral-video

ಈ ವಿಡಿಯೋದಲ್ಲಿ ಮಹಿಳೆಯು ಆಹಾರವನ್ನು ಡೆಲಿವರಿ ನೀಡುವ ಜೊತೆಗೆ ತಮ್ಮ ತಾಯ್ತನವನ್ನು ಸಮತೋಲನಗೊಳಿಸುವ ಸ್ಪೂರ್ತಿದಾಯಕ ಕಥೆಯನ್ನು ಎತ್ತಿ ತೋರಿಸುತ್ತದೆ. ತಮ್ಮ ಮಗುವನ್ನು ಸ್ಪ್ಲೆಂಡರ್ ಬೈಕ್‌ನಲ್ಲಿ ಮುಂದೆ ಕೂರಿಸಿಕೊಂಡು ಹಿಂಬದಿಯಲ್ಲಿ ಡೆಲಿವರಿ ಬಾಕ್ಸ್‌ಗಳನ್ನು ಹೊತ್ತೊಯುವ ದೃಶ್ಯಗಳನ್ನು ನೋಡಬಹುದು. ವಿಡಿಯೋವನ್ನು ಹಂಚಿಕೊಂಡಿರುವ ವ್ಯಕ್ತಿಯು, ಮಹಿಳೆಯ ಜೊತೆಗೆ ಸಂವಾದ ಕೂಡ ನಡೆಸಿದ್ದಾರೆ.

ವಿಶಾಲ್ ಅವರೊಂದಿಗೆ ಮಾತನಾಡಿದ ಮಹಿಳೆ, ಸುಮಾರು ಒಂದು ತಿಂಗಳಿನಿಂದ ಝೊಮ್ಯಾಟೋದಲ್ಲಿ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿ ಕೆಲಸ ಸವಾಲಿನದ್ದಾಗಿದ್ದರೂ, ಈಗ ದಿನಚರಿಗೆ ಹೊಂದಿಕೊಂಡಿದ್ದೇನೆ. ನಾನು ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ, ಮದುವೆಯ ಬಳಿಕ ಮಗುವಿನ್ನು ಬಿಟ್ಟು ಕೆಲಸ ಮಾಡುವುದು ಕಷ್ಟ. ಹಾಗೆಂದು ಮಗುವನ್ನು ಜೊತೆಗಿಟ್ಟುಕೊಂಡು ಮಾಡುವ ಕೆಲಸಗಳು ಯಾವುದೂ ಇಲ್ಲ.

zomato-delivery-woman-rides-hero-splendor-bike-with-her-child-viral-video

ಹಾಗಾಗಿ ಆರಂಭದಲ್ಲಿ ಕೆಲಸ ಹುಡುಕಲು ಹೆಣಗಾಡಿದ್ದೆ. ನಂತರ ನನ್ನ ಬಳಿ ಹೇಗೂ ಬೈಕ್ ಇದೆ, ಮಗುವನ್ನು ನನ್ನೊಂದಿಗೆ ಕೆಲಸಕ್ಕೆ ಕರೆದೊಯ್ಯಬಹುದು, ಆದ್ದರಿಂದ ನಾನು ಈ ಕೆಲಸವನ್ನು ಆರಿಸಿಕೊಂಡೆ ಎಂದು ಮಹಿಳೆ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಅವರು ಬಳಸುತ್ತಿರುವ ಮೈಲೇಜ್ ಕಿಂಗ್ ಸ್ಪ್ಲೆಂಡರ್ ಬೈಕ್ ಅವರ ನಿತ್ಯ ಕೆಲಸಕ್ಕೆ ಸೂಕ್ತವಾಗಿದ್ದು, ಹಣ ಉಳಿಸಲು ಬೆಸ್ಟ್ ಬೈಕ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ದೃಢನಿಶ್ಚಯ ಮತ್ತು ಆಕೆಯ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶ್ಲಾಘಿಸಿದ್ದಾರೆ. ಆದ್ರೆ ಮಹಿಳೆಯು ಕೆಲವು ಸುರಕ್ಷತಾ ಕಾಳಜಿಗಳನ್ನು ವಹಿಸುವುದು ಕೂಡ ಮುಖ್ಯ, ವಿಡಿಯೋದಲ್ಲಿ ಗಮನಿಸಿದರೆ ಮಗು ಹಾಗೂ ಮಹಿಳೆ ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಇದು ಕಾನೂನು ಬಾಹಿರ ಹಾಗೂ ಇಬ್ಬರ ಜೀವಕ್ಕೂ ಅಪಾಯವೆಂದು ಹಲವರು ಕಮೆಂಟ್‌ಗಳನ್ನು ಮಾಡಿದ್ದಾರೆ.

ಸ್ಪ್ಲೆಂಡರ್ ವಿಶೇಷತೆಗಳು: ನಮಗೆ ಭಾರತದಲ್ಲಿ ಮೈಲೇಜ್ ಬೈಕ್ ಎಂದಾಕ್ಷಣ ಮೊದಲು ನೆನಪಾಗುವ ಬೈಕ್ ಎಂದರೆ ಹೀರೋ ಸ್ಪ್ಲೆಂಡರ್, ಪ್ರಸ್ತುತ ಇದು ದೇಶದಲ್ಲಿ ಅತ್ಯಂತ ಜನಪ್ರಿಯ ಮೋಟಾರ್‌ಸೈಕಲ್. ಹಲವು ವರ್ಷಗಳಿಂದ ಮೈಲೇಜ್ ವಿಷಯದಲ್ಲಿ ಅಗ್ರಸ್ಥಾನ ದಕ್ಕಿಸಿಕೊಂಡಿದ್ದು, ಒಂದು ಲೀಟರ್‌ಗೆ ಬರೋಬ್ಬರಿ 75-80 ಕೀ.ಮೀ ಮೈಲೇಜ್ ನೀಡುತ್ತದೆ. 7.91 bhp ಪವರ್ ಮತ್ತು 8.05 Nm ಗರಿಷ್ಟ ಟಾರ್ಕ್‌ನೊಂದಿಗೆ 97.2cc, ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 18, 2024, 13:14 [IST]
English summary
Zomato delivery woman rides hero splendor bike with her child viral video
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+