ಝೂಮ್ 'ಸೆಲ್ಪ್ ಡ್ರೈವಿಂಗ್ ಕಾರು' ಅಪಾಯಕಾರಿಯೇ?
ನೀವೇ ಕಾರು ತೆಗೆದುಕೊಂಡು ಹೋಗಿ ನೀವೇ ಡ್ರೈವ್ ಮಾಡುವ ವಿನೂತನ ಸೇವೆಯನ್ನು ಒದಗಿಸುವ ಮೂಲಕ ಬೆಂಗಳೂರು ನಗರದ್ಯಾಂತ ಝೂಮ್ ಕಾರು ಭಾರಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿತ್ತು. ಆದರೆ ಝೂಮ್ ಅವಿಷ್ಕರಿಸಿರುವ ಈ ನೂತನ ಸೆಲ್ಪೆ ಡ್ರೈವಿಂಗ್ ಮಾರಾಟ ತಂತ್ರವು ಅಪಾಯಕಾರಿಯೇ ಎಂಬ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಇದಕ್ಕೊಂದು ತಾಜಾ ನಿದರ್ಶನವೆಂಬಂತೆ ಅಪಘಾತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ...

ಪ್ರಸ್ತುತ ಅಪಘಾತದಲ್ಲಿ ಝೂಮ್ ಸೆಲ್ಪ್ ಸರ್ವಿಸ್ ಫೋರ್ಡ್ ಫಿಗೊ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವುದ ದೃಶ್ಯಗಳನ್ನು ನೀವೇ ಕಾಣಬಹುದಾಗಿದೆ.

ಆದರೆ ಘಟನೆಯು ಎಲ್ಲಿ ನಡೆದಿದೆ? ಪ್ರಯಾಣಿಕರಿಗೆ ಗಾಯಗಳಾಗಿವೇ ? ಎಂಬಿತ್ಯಾದಿ ಬಗೆಗಿನ ವಿವರಗಳು ಇನ್ನು ಅಲಭ್ಯ.

ಅನನುಭವಿ ಚಾಲಕರು ಅಥವಾ ಹೊಸತಾಗಿ ಡ್ರೈವಿಂಗ್ ಕರಗತ ಮಾಡಿಕೊಳ್ಳಲು ಬಯಸುವ ಉತ್ಸಾಹಿ ಚಾಲಕರು ಹೆಚ್ಚಾಗಿ ಝೂಮ್ ಕಾರನ್ನು ಆಯ್ಕೆ ಮಾಡುತ್ತಾರೆ ಎಂಬ ಬಗ್ಗೆ ಆರೋಪಗಳು ಕೇಳಿ ಬಂದಿವೆ.

ಏನೇ ಆದರೂ ಬಾಡಿಗೆಗೆ ಸಿಗುವ ಇಂತಹ ಕಾರುಗಳನ್ನು ಮೋಜಿನ ಪ್ರವಾಸಕ್ಕಾಗಿ ಜಾಸ್ತಿ ಬಳಕೆ ಮಾಡಲಾಗುತ್ತಿದ್ದು, ಕೇರ್ ಲೆಸ್ ಚಾಲನೆಯೇ ಅಪಘಾತ ಹಿಂದಿರುವ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಇಂತಹ ಘಟನೆಗಳು ಝೂಮ್ ಸೆಲ್ಪ್ ಡ್ರೈವಿಂಗ್ ಕಾರಿಗೆ ಹಿನ್ನಡೆಯಾಗಿ ಪರಿಣಮಿಸಲಿದೆ ಎಂಬುದಂತೂ ಸ್ಪಷ್ಟ.


Click it and Unblock the Notifications








